For Quick Alerts
ALLOW NOTIFICATIONS  
For Daily Alerts

ಸಾಮಾಜಿಕ ಜಾಲತಾಣಗಳು ಮತ್ತು ಸ್ತನ ಕ್ಯಾನ್ಸರ್!

By Manorama Hejmadi
|

ಜೀವನದಲಿ ಸಂಕಷ್ಟಗಳು ಬಯಸದೆಯೆ ಬರುತ್ತವೆ. ಬಂದುದನ್ನು ಎದುರಿಸುವುದರಲ್ಲೇ ಅರ್ಧ ಗೆಲುವು ಅಡಗಿದೆ. ಆದರೆ ಇದರ ಕಾರ್ಯರೂಪ ಹೇಳಿದಷ್ಟು ಸರಳವಾಗಿಲ್ಲ! ಸಾಮಾಜಿಕ ಜಾಲತಾಣದಲ್ಲಿ ಚಟುವಟಿಕೆಯಿಂದಿರುವ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರು ಚಿಕಿತ್ಸೆಗೆ ಹೆಚ್ಚು ಗುಣತ್ಮಕವಾಗಿ ಸ್ಪಂದಿಸಿರುವುದು ಕಂಡುಬಂದಿದೆ, ಎಂದು ಅಧ್ಯಯನ ವರದಿ ಮಾಡಿದೆ

ಇಂದು ಬಹಳಷ್ಟು ರೀತಿಯ ಸಾಮಾಜಿಕ ಜಾಲತಾಣಗಳು ಚಾಲ್ತಿಯಲ್ಲಿವೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳು ಸರ್ವೇ ಸಮಾನ್ಯ. ಸುಮಾರು ಶೇ.12 ರಷ್ಟು ಮಹಿಳೆಯರು ನಿತ್ಯವೂ ಫೇಸ್ ಬುಕ್ ಪಾರಾಯಣ ಮಾಡುತ್ತಾರೆಂಬ ದಾಖಲೆ ಇದೆ! ಅಷ್ಟೇ ಅಲ್ಲ, ಶೇ. 41 ರಷ್ಟು ಮಹಿಳೆಯರು ವಾಟ್ಸಪ್‌ನಂತಹ ಸಾಮಾಜಿಕ ತಾಣಗಳಲ್ಲಿ ಹರಟುತ್ತಾರೆಂಬುದು ಕಂಡುಬಂದಿದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

Social Media May Help Breast Cancer Patients With Treatment

ಸ್ತನಕ್ಯಾನ್ಸರ್‌ಗೆ ತುತ್ತಾದ ಹಲವಾರು ಮಹಿಳೆಯರು ಇಂತಹ ಜಾಲತಾಣಗಳಲ್ಲಿರುವ ತಮ್ಮ ಆಪ್ತರೊಂದಿಗೆ ತಮ್ಮ ಸಮಸ್ಯೆಗಳನ್ನು ಬಿತ್ತರಿಸಿ,ಸಲಹೆ ಪಡೆದುಕೊಳ್ಳುತ್ತಾರೆ. ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ, ಮನಸ್ಸನ್ನು ಹಗುರಾಗಿಸಿಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆಗೆ ಒಳಗಾಗಿ ಸ್ತನಕ್ಯಾನ್ಸರ್ ನಂತಹ ಗಂಭೀರವಾದ ಕಾಯಿಲೆಯನ್ನು ಹತೋಟಿಯಲ್ಲಿ ಇಡುವಲ್ಲಿ ಯಶಸ್ವಿಯಾಗಿದ್ದಾರೆಂದು ಅಮೇರಿಕಾದ ಮಿಶಿಗನ್ ವಿದ್ಯಾಲಯದ ಪ್ರೊಫೆಸರ್ ಲಾರೆನ್ ಪಿ. ವಾಲ್ನರ್, ತಮ್ಮ ಸಂಶೋಧನಾ ಸಮೀಕ್ಷೆಯಲ್ಲಿ ಉಲ್ಲೇಖಿಸಿದ್ದಾರೆ. ಸ್ತನ ಕ್ಯಾನ್ಸರ್‌‌‌ನ ಹೆಡೆಮುರಿ ಕಟ್ಟಿ ಹಾಕುವ ಸೂಪರ್ ಫುಡ್! ‌

ಇವರು ತಮ್ಮ ಸಂಶೋಧನೆಗಾಗಿ ಸ್ತನ ಕ್ಯಾನ್ಸರ್ ಪತ್ತೆಯಾದ ಸುಮಾರು 2460 ಮಹಿಳೆಯರನ್ನು ಆಯ್ದುಕೊಂಡರೆನ್ನಲಾಗಿದೆ." ಸಾಮಾಜಿಕ ಜಾಲ ತಾಣಗಳು ಬಿತ್ತರಿಸುವ ಸುದ್ದಿ-ಸಲಹೆಗಳಿಂದ ಗುಣಾತ್ಮಕ ಪರಿಣಾಮ ಇರುವಂತೆಯೇ ಋಣಾತ್ಮಕ( ಭಯಾನಕ..) ಪರಿಣಾಮಗಳೂ ಬಂದಾವು.

ಈ ಮಾಧ್ಯಮಗಳನ್ನು ಸಂಪೂರ್ಣವಾಗಿ ಅವಲಂಬಿಸದೇ, ಪ್ರಜ್ಞಾಪೂರ್ವಕವಾಗಿ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ" ಎನ್ನುತ್ತಾರೆ ಪ್ರೊ/ ವಾಲ್ನರ್. ನಿಜ. ನಮ್ಮ ಅಳಲನ್ನು ಆಪ್ತರೊಂದಿಗೆ ಹಂಚಿಕೊಂಡಾಗ ಹಗುರಾಗುತ್ತೇವೆ. ಸಜ್ಜನರು ಧೈರ್ಯ ತುಂಬಿ, ಸಲಹೆ ನೀಡುತ್ತಾರೆ. ಅಂತೆಯೇ ಮೋಸಗಾರರ ಜಾಲದಲ್ಲಿ ಬೀಳದಂತಹ ಎಚ್ಚರಿಕೆ ನಮಗಿರಬೇಕು, ಅಷ್ಟೆ. ಕ್ಲಪ್ತ ಸಮಯದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆಗೆಳಗಾಗುವುದು ಅಷ್ಟೇ ಮುಖ್ಯ, ಅಲ್ಲವೆ?

(ಐಎಎನ್ಎಸ್ ವರದಿ)

English summary

Social Media May Help Breast Cancer Patients With Treatment

Women who engaged on social media after a breast cancer diagnosis expressed more deliberation and satisfaction about their treatment decision, says a study. The findings showed that online communication was more common in younger women and those with more education. Women who engaged on social media after a breast cancer diagnosis expressed more ...
X
Desktop Bottom Promotion