For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಧೂಮಪಾನದ ಬಿಗಿ ಮುಷ್ಟಿಗೆ ವಿಶ್ವವೇ ನಲುಗುತ್ತಿದೆ!

By Jaya
|

ಧೂಮಪಾನದ ಚಟವು ಮನುಷ್ಯನನ್ನು ಕೊಲ್ಲುವ ಸ್ಲೊ ಪಾಯಿಸನ್ ಎಂದೆನಿಸಿದೆ. ಸಾಮಾನ್ಯ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣವು ಧೂಮಪಾನದಂತಹ ಚಟಕ್ಕೆ ಬಲಿಯಾಗುತ್ತಿದೆ ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ.

ಮೆಲ್ಬೋರ್ನ್‎ನ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ 340 ರೋಗಿಗಳನ್ನು ಬಳಸಿಕೊಂಡು ಅಧ್ಯಯನವನ್ನು ನಡೆಸಿದಾಗ ಸಾಮಾನ್ಯ ಆಸ್ಟ್ರೇಲಿಯನ್ ಜನಸಂಖ್ಯೆಯ 15 ಶೇಕಡಾಕ್ಕೆ ಹೋಲಿಸಿದಾಗ ವಯಸ್ಕರಲ್ಲಿ ಧೂಮಪಾನ ಪ್ರಭುತ್ವವು 23.3 ಶೇಕಡಾ ಎಂಬುದಾಗಿ ಪತ್ತೆಯಾಗಿದೆ. ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ

ಅಂತರಾಷ್ಟ್ರೀಯವಾಗಿ, ಸಂಪೂರ್ಣ ತುರ್ತು ವಿಭಾಗದಲ್ಲಿ ಧೂಮಪಾನ ಪ್ರಭುತ್ವವವು 21 ರಿಂದ 41 ಶೇಕಡಾದ ನಡುವೆಯಿದೆ ಎಂಬುದಾಗಿ ಕ್ಸುನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Smoking Rates High In Patients At Emergency Wards: Study Reveals

ಮೇಲ್ಬೋರ್ನ ಡೇಟಾ ವರದಿ ಮಾಡಿರುವಂತೆ ತುರ್ತು ವಿಭಾಗದಲ್ಲಿರುವ ಭಾಗವಹಿಸಿರುವ 78 ಜನರು ಪ್ರಸ್ತುತ ಧೂಮಪಾನಿ ಗಳಾಗಿದ್ದಾರೆ. ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ

ಧೂಮಪಾನಿಗಳ ಸರಾಸರಿ ವಯಸ್ಸು 42.1 ವರ್ಷಗಳಾಗಿದ್ದು ಇದರಲ್ಲಿ 64 ಶೇಕಡ ಪುರುಷರಾಗಿದ್ದಾರೆ. ಕನಿಷ್ಠ ಪಕ್ಷ 41 ಶೇಕಡಾದಷ್ಟು ಜನರು ಧೂಮಪಾನವನ್ನು ತ್ಯಜಿಸುವುದು ಕಷ್ಟಾಸಾಧ್ಯವಾಗಿದ್ದರೆ, 69.7 ಶೇಕಡಾದಷ್ಟು ಜನರು ತ್ಯಜಿಸುವ ಇರಾದೆಯನ್ನು ಹೊಂದಿದ್ದಾರೆ.

ತಂಬಾಕು ಸೇವನೆಯು ತಡೆಗಟ್ಟಬಹುದಾದ ವಿಶ್ವದಲ್ಲೇ ಸಾವಿಗೆ ಕಾರಣವಾಗಿರುವ ಅತಿದೊಡ್ಡ ಮಾರಕವಾಗಿದ್ದು, 10ರಲ್ಲಿ ಒಂದು ಸಾವು ತಂಬಾಕಿನಿಂದ ಬಂದೊದಗುವಂಥದ್ದಾಗಿದೆ.

ಮೂಲ- ಐಎ‍ಎನ್‍ಎ

English summary

Smoking Rates High In Patients At Emergency Wards: Study Reveals

A new study has found that patients in the emergency department have significantly higher rates of smoking than the general population. A study undertaken using a sample of almost 340 emergency department patients in Melbourne's St. Vincent's Hospital and the Austin Hospital reported a smoking prevalence among the adult emergency department patients to be 23.3 per cent compared to the general Australian population of roughly 15 per cent.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more