For Quick Alerts
ALLOW NOTIFICATIONS  
For Daily Alerts

ನಿದ್ದೆಗೆಟ್ಟರೆ ಆರೋಗ್ಯಕ್ಕೆ ಕೇಡು ನೆನಪಿರಲಿ!

By Hemanth
|

ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ದೇಹವನ್ನು ಸಾಕಷ್ಟು ದುಡಿಸಿ ದಣಿದಿರುತ್ತೇವೆ. ಆಯಾಸ ಹೋಗಲಾಡಿಸಲು ಬೇಕಾಗಿರುವಂತಹ ವಿಶ್ರಾಂತಿ ಸಿಗುವುದು ಸರಿಯಾದ ನಿದ್ರೆಯಿಂದ ಮಾತ್ರ. ರಾತ್ರಿ ಸರಿಯಾಗಿ ನಿದ್ರೆ ಮಾಡಿದರೆ ಮೆದುಳು ಹಾಗೂ ದೇಹದ ಆಯಾಸವು ಕಡಿಮೆಯಾಗುವುದು. ಸರಿಯಾಗಿ ನಿದ್ರೆಯಾಗದೆ ಇದ್ದರೆ ಮರುದಿನ ನಾವು ಉಲ್ಲಾಸದಿಂದ ಇರಲು ಸಾಧ್ಯವಿಲ್ಲ.

ಕೆಲವರು ದೀರ್ಘಕಾಲದ ನಿದ್ರೆಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ನಿದ್ರಿಸುವ ವಿಧಾನ ಸರಿಯಾಗಿಲ್ಲದೆ ಇರುವುದರಿಂದ ಮಾನಸಿಕ, ದೈಹಿಕ ಮತ್ತು ಮನೋವೈಜ್ಞಾನಿಕ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಬಹುದು.

ಆತಂಕ ಮತ್ತು ಖಿನ್ನತೆಯು ನಿದ್ರೆಯ ಸಮಸ್ಯೆಯನ್ನು ಉಂಟುಮಾಡಬಹುದು ಮತ್ತು ಇರುವಂತಹ ಸಮಸ್ಯೆಯನ್ನು ಮತ್ತಷ್ಟು ಕೆಡಿಸಬಹುದು. ನಿದ್ರೆಯ ಕೆಲವೊಂದು ಸಾಮಾನ್ಯ ಸಮಸ್ಯೆಯೆಂದರೆ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ನಡೆದಾಡುವುದು ಮತ್ತು ವಿಚ್ಛಿದ್ರ ನಿದ್ರೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ನಿದ್ರೆಯ ಕೊರತೆಯಿಂದಾಗಿ ಕೆಲಸ ಮತ್ತು ಶಾಲೆಯಲ್ಲಿನ ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಇಷ್ಟು ಮಾತ್ರವಲ್ಲದೆ ಆರೋಗ್ಯದ ಮೇಲೂ ಇದರಿಂದ ತೊಂದರೆಯಾಗಬಹುದು. ಇದರಿಂದ ಹೆದರಿಕೆ ಮತ್ತು ಮನಸ್ಥಿತಿ ಬದಲಾಗುವಂತಹ ಸಮಸ್ಯೆ ಕಾಣಿಸಬಹುದು.

 Sleep Mistakes You Need To Stop Making

ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುವಂತಹವರು ಹೃದಯದ ಸಮಸ್ಯೆ, ಹೃದಯ ವೈಫಲ್ಯ, ಅನಿಯಮಿತವಾಗಿ ಹೃದಯ ಬಡಿತ, ಹೃದಯ ಸ್ನಾಯುವಿನ ಊತಕ, ರಕ್ತದೊತ್ತಡ ಹೆಚ್ಚಾಗುವಿಕೆ, ಪಾರ್ಶ್ವವಾಯು, ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಆರೋಗ್ಯದ ಬಗ್ಗೆ ನಮಗಿರುವ ಕಾಳಜಿ ಅಷ್ಟಕಷ್ಟೇ. ಇದರಿಂದಾಗಿಯೇ ನಾವು ಸಮಸ್ಯೆಯನ್ನು ಎದುರಿಸುತ್ತೇವೆ. ನಿದ್ರಾಹೀನತೆಯ ಸಮಸ್ಯೆಗೆ ಒಳಗಾಗಲು ನಾವು ನಿದ್ರೆಯ ಬಗ್ಗೆ ಅನುಸರಿಸುವಂತಹ ಕೆಲವೊಂದು ವಿಧಾನಗಳೇ ಕಾರಣವಾಗಿದೆ. ನಾವು ಅನುಸರಿಸುವಂತಹ ಕೆಲವೊಂದು ಕ್ರಮಗಳನ್ನು ಕಡೆಗಣಿಸಿದರೆ ರಾತ್ರಿ ಚೆನ್ನಾಗಿ ನಿದ್ರೆ ಬಂದು ಮರುದಿನ ಉಲ್ಲಾಸಿತವಾಗಿರಬಹುದು.

ಮೊಬೈಲ್‌ನಲ್ಲಿ ಬೆಳಗ್ಗೆ ಬೇಗ ಏಳಲು ಅಲರಾಂ ಇಟ್ಟಿರುತ್ತೀರಿ. ಆದರೆ ಅಲಾರಂ ಸದ್ದು ಕೇಳಿಸಿದಾಗ ಮೊಬೈಲ್ ತೆಗೆದು ಸ್ನೂಜ್ ಬಟನ್ ಒತ್ತುತ್ತೇವೆ. ಹತ್ತು ನಿಮಿಷದಲ್ಲಿ ನಿದ್ರೆಗೆ ಯಾವುದೇ ಲಾಭವಾಗುವುದಿಲ್ಲ. ನಿದ್ರೆಗೆ ತೊಂದರೆಯಾದ ಕಾರಣ ಹೆಚ್ಚು ಆಯಾಸವಾಗಲಿದೆ.

ಹಗಲಿನ ವೇಳೆ ಚಿಕ್ಕನಿದ್ರೆಯನ್ನು ದೀರ್ಘ ಸಮಯದವರೆಗೆ ಮಾಡಬೇಡಿ. ಕೇವಲ ಮೂವತ್ತು ನಿಮಿಷ ನಿದ್ರಿಸಿದರೆ ನಿಮ್ಮ ಮನಸ್ಸು ಹಾಗೂ ದೇಹ ಎರಡೂ ಶಕ್ತಿಯನ್ನು ಪಡೆಯುವುದು. ಚಿಕ್ಕನಿದ್ರೆ ಹೆಚ್ಚಾದರೆ ಅದರಿಂದ ನಿದ್ರೆಯ ವಿಧಾನಕ್ಕೆ ತೊಂದರೆಯಾಗುವುದು.

ನಿದ್ರಿಸುವ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋಗಿ. ರಾತ್ರಿ ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಮತ್ತು ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳುವುದರಿಂದ ನೈಸರ್ಗಿಕವಾಗಿ ನಿದ್ರಿಸುವ ಕ್ರಮವು ಸರಿಯಾಗಿರುತ್ತದೆ ಮತ್ತು ದೇಹಕ್ಕೆ ಆಯಾಸವೂ ಆಗುವುದಿಲ್ಲ.

ಮಧ್ಯಾಹ್ನದ ಬಳಿಕ ಕೆಫಿನ್ ಸೇವನೆ ಕಡಿಮೆ ಮಾಡಿದರೆ ಸರಿಯಾಗಿ ನಿದ್ರೆ ಮಾಡಬಹುದಾಗಿದೆ. ನಿದ್ರೆಗೆ ಮೊದಲು ಆಲ್ಕೋಹಾಲ್ ಮತ್ತು ಸಕ್ಕರೆ ಸೇವನೆ ಮಾಡಿದರೆ ಅದು ದೇಹದಲ್ಲಿರುವ ರಾಸಾಯನಿಕದೊಂದಿಗೆ ಸೇರಿಕೊಂಡು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ. ನಿದ್ರಿಸುವ ಕೊಠಡಿಯು ಕತ್ತಲಾಗಿರಲಿ. ಆತಂಕ ಮತ್ತು ಒತ್ತಡವನ್ನು ದೂರವಿರಿಸಿದರೆ ಒಳ್ಳೆಯ ನಿದ್ರೆ ಬರುವುದು.

English summary

Sleep Mistakes You Need To Stop Making

Sleeping recharges the brain and enhances your focus, awareness and mood. However, there are a lot of people who suffer from chronic and long term sleep problems. Sleep disorders are portrayed by irregular sleep patterns that interfere with physical, mental and psychological function.
Story first published: Monday, September 12, 2016, 17:02 [IST]
X
Desktop Bottom Promotion