For Quick Alerts
ALLOW NOTIFICATIONS  
For Daily Alerts

ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು

By Arshad
|

ಮೈಗ್ರೇನ್ ಎಂಬುವುದು ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾಗಿದ್ದು ರೋಗಿಯನ್ನು ಇಡಿಯ ದಿನ, ಕೆಲವೊಮ್ಮೆ ವಾರಗಟ್ಟಲೇ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಕೆಲವೊಮ್ಮೆ ಇದರ ಆಘಾತ ಹೆಚ್ಚಾದಾಗ ಆಸ್ಪತ್ರೆಗೂ ಸೇರಿಸಬೇಕಾಗಿ ಬರಬಹುದು. ಉಗ್ರರೂಪವಿದ್ದಾಗ ಯೋಚನಾ ಶಕ್ತಿಯೇ ಕುಂದುತ್ತದೆ, ಕಣ್ಣುಗಳ ಕೇಂದ್ರ ಭಾಗ ಅದೃಶ್ಯವಾಗುತ್ತದೆ.

ಇದಕ್ಕೆ ಕಾರಣವೇನು ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ವಿವರಿಸಲು ಇದುವರೆಗೆ ವೈದ್ಯವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಸ್ಥೂಲವಾಗಿ ಮಾನಸಿಕ ಒತ್ತಡ, ಹಾರ್ಮೋನುಗಳಲ್ಲಿ ಏರುಪೇರು, ಅಸಮರ್ಪಕ ಆಹಾರ ಕ್ರಮ, ಉದ್ವೇಗ, ರಜೋನಿವೃತ್ತಿ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಮೊದಲಾದವುಗಳ ಮೂಲಕ ಮೈಗ್ರೇನ್ ಎದುರಾಗಬಹುದು.

ಕೆಲವೊಮ್ಮೆ ಇದು ಅನುವಂಶೀಯವೂ ಆಗಿರುತ್ತದೆ. ಕಾರಣವೇನೇ ಇರಲಿ, ಇದರ ಶಮನಕ್ಕೆ ಈ ತಲೆನೋವು ಪ್ರಾರಂಭವಾದ ತಕ್ಷಣ ಮದ್ದು ತೆಗೆದುಕೊಳ್ಳುವುದೇ ಹೆಚ್ಚಿಸದಿರಲು ಜಾಣತನದ ಕ್ರಮವಾಗಿದೆ. ಒಮ್ಮೆ ಮೇಲೇರಿತೋ, ಬಳಿಕ ಇದರ ಪರಿಣಾಮವನ್ನು ಅನುಭವಿಸಿದ ಮೇಲೇ ಇದು ಕಡಿಮೆಯಾಗುತ್ತದೆ.

ಜಾಣರಿಗಾಗಿ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದ್ದು ಇದರಲ್ಲಿ ಸೂಕ್ತವಾದುದನ್ನು ತಲೆನೋವು ಈಗತಾನೇ ಶುರುವಾಗುತ್ತಿದೆ ಎಂದ ತಕ್ಷಣ ಅನುಸರಿಸಿದರೆ ಉತ್ತಮ ಪರಿಹಾರವನ್ನು ಪಡೆಯಬಹುದು.

ಹಸಿಶುಂಠಿ

ಹಸಿಶುಂಠಿ

ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯುವುದು ಅಥವಾ ಹಸಿಶುಂಠಿಯನ್ನು ಜಜ್ಜಿ ಬೆರೆಸಿದ ಟೀ ಕುಡಿಯುಮ ಮೂಲಕ ಉತ್ತಮ ಶಮನ ಪಡೆಯಬಹುದು.

ದ್ರಾಕ್ಷಿ ಹಣ್ಣಿನ ಜ್ಯೂಸ್

ದ್ರಾಕ್ಷಿ ಹಣ್ಣಿನ ಜ್ಯೂಸ್

ವಿಶೇಷವಾಗಿ ಕಪ್ಪು ದ್ರಾಕ್ಷಿ ಹಣ್ಣಿನ ಜ್ಯೂಸ್‌ನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದರೊಂದಿಗೆ ರೈಬೋಫ್ಲೇವಿನ್ ಎಂಬ ಪೋಷಕಾಂಶವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರಸವನ್ನು ತಲೆನೋವು ಪ್ರಾರಂಭವಾದ ತಕ್ಷಣ ಸೇವಿಸಿದರೆ ಉಲ್ಬಣಗೊಳ್ಳದಂತೆ ತಡೆಯಬಹುದು.

 ಗಿಡಮೂಲಿಕೆಗಳ ಟೀ

ಗಿಡಮೂಲಿಕೆಗಳ ಟೀ

ಪುದೀನಾ ಎಲೆಗಳನ್ನು ಕೊಂಚ ಜಜ್ಜಿ ಕುದಿಸಿದ ನೀರಿನಲ್ಲಿ ಟೀ ಮಾಡಿ ಕುಡಿಯುವ ಮೂಲಕ ಅನ್ನನಾಳದ ಸೋಂಕು, ವಾಕರಿಕೆ, ಕಫದ ಮೂಲಕ ಎದುರಾಗಿದ್ದ ತಲೆನೋವು ಇಲ್ಲವಾಗುತ್ತದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸುವ ಮೂಲಕ ಹೆಚ್ಚಿನ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಪಡೆಯಬಹುದು. ಇದರಿಂದ ಮೆದುಳಿಗೆ ರಕ್ತಸಂಚಾರ ಉತ್ತಮಗೊಂಡು ತಲೆನೋವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಪಡೆಯುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಹಾರ್ಮೋನುಗಳ ಏರುಪೇರನ್ನು ಸರಿಪಡಿಸುವ ಗುಣವಿದೆ. ಈ ಕಾರಣದಿಂದ ಎದುರಾದ ತಲೆನೋವಿನ ಶಮನಕ್ಕೆ ನಿಮ್ಮ ನಿತ್ಯದ ಆಹಾರವನ್ನು ಆಲಿವ್ ಎಣ್ಣೆಯಲ್ಲಿ ತಯಾರಿಸಿ ಅಥವಾ ಊಟದಲ್ಲಿ ಒಂದೆರಡು ಚಮಚ ಬೆರೆಸಿ ಸೇವಿಸುವ ಮೂಲಕ ಈ ನೋವು ಬರದಂತೆ ತಡೆಗಟ್ಟಬಹುದು.

ಕಾಫಿ

ಕಾಫಿ

ಕಾಫಿಯಲ್ಲಿರುವ ಕೆಫೀನ್ ಮೆದುಳಿಗೆ ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಆಗಾಗ ಚಿಕ್ಕ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ತಲೆನೋವು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಸಂಶೋಧನೆಗಳ ಮೂಲಕ ಈ ವಿಷಯ ದೃಢಪಟ್ಟಿದೆ. ಆದರೆ ಈ ಪ್ರಮಾಣ ಅತಿ ಕಡಿಮೆ ಇರಬೇಕು ಎಂದೂ ಸೂಚಿಸಿವೆ. ಒಂದು ಅಂದಾಜಿನ ಪ್ರಕಾರ ತಲೆನೋವು ಪ್ರಾರಂಭವಾದ ತಕ್ಷಣ ಅರ್ಧ ಲೋಟ, ಬಳಿಕ ಪ್ರತಿ ಗಂಟೆಗೊಮ್ಮೆ ಕಾಲು ಲೋಟದ ಸೇವನೆ ಉತ್ತಮ ಪರಿಹಾರ ನೀಡುತ್ತದೆ.

English summary

Simple Tips To Get Rid of Migraine Headache

Migraine headaches are one of the worst health problems one can ever have. For a few the migraine attacks are so bad that they need to get hospitalized too. Some times Migraine can be caused due to various reasons - stress, hormonal imbalances, poor diet, anxiety, menopause, side effects of drugs and it could also be hereditary. Here is a list of a few tips that help in getting rid of migraine headaches. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more