ಸುಟ್ಟಗಾಯ ಶೀಘ್ರವಾಗಿ ಸಾಂತ್ವನ ನೀಡುವ ಸರಳ ಮನೆಮದ್ದುಗಳು

By: Arshad
Subscribe to Boldsky

ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಆಗಾಗ ಚಿಕ್ಕ ಪುಟ್ಟ ಸುಟ್ಟಗಾಯಗಳು ಆಗುತ್ತಲೇ ಇರುತ್ತವೆ. ವಿಶೇಷವಾಗಿ ಕುದಿಯುವ ನೀರಿನ ಬಳಕೆಯ ಸಮಯದಲ್ಲಿ ಅನೈಚ್ಛಿಕವಾಗಿ ಕೆಲವು ಬಿಂದುಗಳು ಸಿಡಿಯಬಹುದು ಅಥವಾ ಕೊಂಚ ಪ್ರಮಾಣ ಸುರಿಯಬಹುದು. ಸುಟ್ಟಗಾಯ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸದಿರಿ! 

ಯಾವುದೇ ಸುಟ್ಟ ಗಾಯಕ್ಕೆ ತಕ್ಷಣ ತಣ್ಣೀರಿನ ಕೆಳಗೆ ಸುಟ್ಟಭಾಗವನ್ನು ಕೊಂಚ ಕಾಲ ಹಿಡಿದಿಟ್ಟುಕೊಳ್ಳುವುದು ಅಗತ್ಯವಾಗಿರುವ ಪ್ರಥಮ ಚಿಕಿತ್ಸೆ. ಉಳಿದಂತೆ ಕೆಳಗಿನ ಮಾಹಿತಿ ಮೂಲಕ ವಿವರಿಸಲಾಗಿರುವ ಸೂಕ್ತ ವಿಧಾನ ಬಳಸಿ ಸುಟ್ಟ ಗಾಯವನ್ನು ಶೀಘ್ರವಾಗಿ ಮಾಗಿಸಲು ಮತ್ತು ಕಲೆಯಿಲ್ಲದೇ ಹೊಸ ಚರ್ಮ ಬೆಳೆಯಲು ಸಹಾಯವಾಗುತ್ತದೆ.

ಲೋಳೆಸರ (ಅಲೋವೆರಾ)

ಲೋಳೆಸರ (ಅಲೋವೆರಾ)

ಸುಟ್ಟಗಾಯದ ಉರಿ ಇಲ್ಲವಾಗಿಸಲು ಲೋಳೆಸರಕ್ಕಿಂತ ಉತ್ತಮವಾದ ದ್ರವ ಇನ್ನೊಂದಿಲ್ಲ. ಸುಟ್ಟಗಾಯಕ್ಕೆ ನೇರವಾಗಿ ಲೋಳೆಸರದ ಕೋಡೊಂದನ್ನು ಮುರಿದು ಒಸರುವ ದ್ರವವನ್ನು ಹಚ್ಚಿ. ಇದರ ಉರಿಶಾಮಕ ಮತ್ತು ಪುನರ್ಜೀವನ ನೀಡುವ ಗುಣಗಳು ಚರ್ಮವನ್ನು ತಂಪಗಾಗಿಸಿ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.

ಲೋಳೆಸರ (ಅಲೋವೆರಾ)

ಲೋಳೆಸರ (ಅಲೋವೆರಾ)

ಈ ದ್ರವದಲ್ಲಿರುವ (acemannen) ಎಂಬ ಪೋಷಕಾಂಶ ಸುಲಭವಾಗಿ ಒಡೆದು ಗಾಯದ ತೆರೆದ ಭಾಗಗಳನ್ನೆಲ್ಲಾ ಮುಚ್ಚಿಬಿಡುವ ಮೂಲಕ ಉರಿ ತಣಿಸಲು ಸಾಧ್ಯವಾಗುತ್ತದೆ. ರಸವನ್ನು ಹಚ್ಚಿದ ಬಳಿಕ ಉಳಿದ ಕೋಡಿನ ಭಾಗವನ್ನು ಒಳಭಾಗ ಕಾಣುವಂತೆ ತೆರೆದು ಗಾಯದ ಮೇಲೆ ಬ್ಯಾಂಡೇಜ್ ನಂತೆ ಹಚ್ಚಿಕೊಳ್ಳುವುದು ಇನ್ನೂ ಉತ್ತಮ. ಚಿಕ್ಕಪುಟ್ಟ ಗಾಯಗಳಿಂದ ಪ್ರಾರಂಭಗೊಂಡು ಅತಿಗಹನ ಗಾಯಗಳನ್ನೂ ಲೋಳೆಸರ ಹಚ್ಚುವ ಮೂಲಕ ಶೀಘ್ರವಾಗಿ ಮತ್ತು ಕಲೆಯಿಲ್ಲದಂತೆ ಗುಣಪಡಿಸಬಹುದು.

ಜೇನು ಮತ್ತು ಬಾದಾಮಿ ಎಣ್ಣೆಯ ಲೇಪ

ಜೇನು ಮತ್ತು ಬಾದಾಮಿ ಎಣ್ಣೆಯ ಲೇಪ

ಚಿಕ್ಕಪುಟ್ಟ ಮತ್ತು ಹೆಚ್ಚು ಗಂಭೀರವಲ್ಲದ ಗಾಯಗಳಿಗೆ ಜೇನು ಹೆಚ್ಚು ಸೂಕ್ತವಾಗಿದೆ. ಇದರ ಪ್ರತಿಜೀವಕ ಮತ್ತು ಗಾಯಗಳನ್ನು ಮಾಗಿಸುವ ಗುಣಗಳು ಸುಟ್ಟಗಾಯಗಳನ್ನೂ ಸರಿಪಡಿಸಿ ಹೊಸಚರ್ಮ ಬೆಳೆಯಲು ನೆರವಾಗುತ್ತವೆ. ಈ ವಿಧಾನವನ್ನು ಆಯುರ್ವೇದದಲ್ಲಿ ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರಲಾಗಿದೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಏನೂ ಇಲ್ಲದಿದ್ದ ಸಮಯದಲ್ಲಿ ಬಾಳೆಹಣ್ಣಿನ ಸಿಪ್ಪೆಯೂ ಸುಟ್ಟಗಾಯಕ್ಕೆ ಸೂಕ್ತ ಶಮನ ನೀಡಬಲ್ಲದು. ಸುಟ್ಟಗಾಯಕ್ಕೆ ತಕ್ಷಣ ಬಾಳೆಹಣ್ಣಿನ ಸಿಪ್ಪೆಯ ಒಳಭಾಗ ತಾಕುವಂತೆ ಆವರಿಸಿ ಒತ್ತಿ ಹಿಡಿಯಬೇಕು. ಸುಟ್ಟ ಚರ್ಮ ಕಪ್ಪಗಾಗುವವರೆಗೂ ಹಾಗೇ ಇರಲಿ. ಇದರಿಂದ ಉರಿ ಕಡಿಮೆಯಾಗುವುದು ಮತ್ತು ಕೆಲೆಯಿಲ್ಲದ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಮೊಸರು

ಮೊಸರು

ಬಿಸಿನೀರಿನಿಂದ ಎದ್ದ ಬೊಬ್ಬೆಗೆ ಈ ವಿಧಾನ ಸೂಕ್ತವಾಗಿದೆ. ಬಿಸಿನೀರು ಬಿದ್ದ ಬೊಬ್ಬೆ ಎದ್ದ ತಕ್ಷಣ ತಣ್ಣೀರಿನ ಕೆಳಗೆ ಇಡಬೇಕು. ಫ್ರಿಜ್ಜಿನ ತಣ್ಣೀರು ಅಥವಾ ಐಸ್ ನೀರು ಇನ್ನೂ ಉತ್ತಮ ಸುಮಾರು ಅರ್ಧ ಗಂಟೆಯ ಬಳಿಕ ಈ ಭಾಗಕ್ಕೆ ಕೊಂಚ ಮೊಸರನ್ನು ಹಚ್ಚಿಕೊಂಡಾಗ ಉರಿ ಕಡಿಮೆಯಾಗಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ.

ತಿಳಿಯಾಗಿಸಿದ ಶಿರ್ಕಾ

ತಿಳಿಯಾಗಿಸಿದ ಶಿರ್ಕಾ

ಸುಟ್ಟಗಾಯಕ್ಕೆ ಇನ್ನೊಂದು ಸುಲಭ ಪ್ರಥಮ ಚಿಕಿತ್ಸೆ ಎಂದರೆ ಕೊಂಚ ಶಿರ್ಕಾವನ್ನು ಕೊಂಚ ನೀರಿನಲ್ಲಿ ಬೆರೆಸಿ ತಿಳಿಯಾಗಿಸಿ ಬಳಸುವುದು. ಸುಟ್ಟಗಾಯವನ್ನು ತಣ್ಣೀರಿನ ಅಡಿಯಿಂದ ತೆಗೆದ ಬಳಿಕ ತೆಳುವಾದ ಬಟ್ಟೆಯನ್ನು ತಿಳಿಯಾಗಿಸಿದ ಶಿರ್ಕಾದಲ್ಲಿ ಮುಳುಗಿಸಿ ಪಟ್ಟಿಯಂತೆ ಕಟ್ಟಿ.

ತಿಳಿಯಾಗಿಸಿದ ಶಿರ್ಕಾ

ತಿಳಿಯಾಗಿಸಿದ ಶಿರ್ಕಾ

ಆಗಾಗ ಈ ಪಟ್ಟಿಯನ್ನು ಬದಲಿಸುತ್ತಿರಿ. ಶಿರ್ಕಾ ಇದ್ದಷ್ಟೂ ಹೊತ್ತು ಉರಿ ಇರುವುದಿಲ್ಲ. ಇದರ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮತ್ತೆ ಉರಿ ಪ್ರಾರಂಭವಾಗುತ್ತದೆ. ಆದ್ದರಿಂದ ಇದಕ್ಕೂ ಮೊದಲೇ ಬಟ್ಟೆಯನ್ನು ಆಗಾಗ ಬದಲಿಸುತ್ತಿರಬೇಕು.

 
English summary

simple home remedies for burns

People do experience small burns at home, especially in the kitchen due to boiling water or oil. When such things do happen, quick usage of certain home remedies do help. Here are some of them:
Story first published: Sunday, August 28, 2016, 7:02 [IST]
Please Wait while comments are loading...
Subscribe Newsletter