For Quick Alerts
ALLOW NOTIFICATIONS  
For Daily Alerts

ಆರೋಗ್ಯ ಹೆಚ್ಚಿಸುವ ಸಂಕ್ರಾಂತಿ ಹಬ್ಬದ ಆಹಾರ

By Su.Ra
|

ಸಂಕ್ರಾಂತಿ ಬಂತು ರಕ್ಕೋ ರಕ್ಕೋ.. ಮನಸ್ಸಲ್ಲಿ ಮನಸ್ಸು ಬಿತ್ತೋ ಬಿತ್ತು ಹಾಡು ಮತ್ತೆ ಎಲ್ಲೆಲ್ಲೂ ಗುನುಗೋ ಸಮಯ ಮತ್ತೆ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮತ್ತೆ ಸಂಕ್ರಾಂತಿ ಹಬ್ಬ ರಂಗೇರಿದೆ. ಹಬ್ಬ ಅಂದ್ರೆ ಕೇಳ್ಬೇಕಾ, ಮಹಿಳೆಯರಿಗಂತೂ ಕೈ ತುಂಬಾ ಕೆಲಸ. ರುಚಿ ರುಚಿ ಅಡುಗೆ ಮಾಡುವುದು.. ಹಬ್ಬದ ತಯಾರಿ ಒಂದು ವಾರದ ಮುಂಚೆಯೇ ಆರಂಭಗೊಳ್ಳುತ್ತೆ.

ಸಂಕ್ರಾಂತಿ ಅಂದ್ರೆ ಎಳ್ಳು, ಬೆಲ್ಲ, ಕಬ್ಬು,ನೆಲಗಡಲೆ. ಸಂಕ್ರಾಂತಿ ಕಾಳುಗಳನ್ನು ತಯಾರಿಸೋ ಕೆಲಸಕ್ಕೆ ಮಹಿಳೆಯರು ಅಣಿಯಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜುಗೊಂಡಿರ್ತಾರೆ.ಹೀಗಿರುವಾಗ ಯಾವತ್ತಾದ್ರೂ ಒಮ್ಮೆ ಯೋಚಿಸಿದ್ದೀರಾ? ಯಾಕೆ ಪ್ರತಿ ಹಬ್ಬಕ್ಕೂ ಒಂದು ಸಂಪ್ರದಾಯ, ಆಚರಣೆ ಅನ್ನೋದು ರೂಢಿಯಲ್ಲಿದೆ ಅನ್ನುವುದರ ಬಗ್ಗೆ. ಒಮ್ಮೆ ಯೋಚಿಸಿ. ಸಿರಿ ಸಂಕ್ರಾಂತಿಯ ವಿಶೇಷ: ಸಿಹಿ ಕಬ್ಬಿನ ಮಹತ್ವವೇನು?

ಸಂಕ್ರಾಂತಿ ದಿನ ಎಳ್ಳು ಬೆಲ್ಲ ಬೀರಿ ಒಳ್ಳೆ ಮಾತಾಡಿ ಅನ್ನೋ ಗಾದೆ ಮಾತೇ ಇದೆ. ಯುಗಾದಿ ಅಂದ್ರೆ ಬೇವುಬೆಲ್ಲ, ದೀಪಾವಳಿ ಅಂದ್ರೆ ಒಬ್ಬಟ್ಟು,.. ಹೀಗೆ ಪ್ರತಿ ಹಬ್ಬದಲ್ಲೂ ಇಂತಹದ್ದೇ ಅಡುಗೆಗಳಿರಬೇಕು. ಹೀಗೆ ಆಚರಿಸಬೇಕು ಅನ್ನೋ ಕಟ್ಟಳೆಗಳನ್ನು ಹಿಂದಿನ ತಲೆಮಾರಿನವರು ಸುಮ್ಮನೆ ಮಾಡಿ ಇಟ್ಟಿಲ್ಲ. ಅದಕ್ಕೂ ಒಂದು ಕಾರಣವಿದೆ. ಈಗ ಸಂಕ್ರಾಂತಿ ಬಗ್ಗೆ ಮಾತನಾಡುವುದಾದ್ರೆ ಸಂಕ್ರಾಂತಿ ದಿನ ಕೆಲವು ಆಹಾರಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆ ವಿಶೇಷ ಆಹಾರಗಳಿದ್ರೇನೇ ಸಂಕ್ರಾಂತಿ ಹಬ್ಬ ಪರಿಪೂರ್ಣ ಅನ್ನಿಸಿಕೊಳ್ಳೋದು.

ಹಾಗಾದ್ರೆ ಯಾಕೆ ಸಂಕ್ರಾಂತಿ ದಿನ ಆ ಪ್ರಮುಖ ಆಹಾರಗಳನ್ನು ಬಳಸಬೇಕು. ಅದ್ರಿಂದ ನಿಮ್ಮ ಆರೋಗ್ಯದ ಮೇಲೆ ಏನಾಗುತ್ತೆ. ಯಾಕೆ ಹಿಂದಿನವ್ರು ಇಂತಹ ಸಂಪ್ರದಾಯಗಳನ್ನು ಆಚರಿಸಿ, ಇಂತಹ ವಸ್ತುಗಳನ್ನೇ ಅಡುಗೆಯಲ್ಲಿ ಬಳಸಬೇಕು ಅಂತ ರೂಢಿಯಲ್ಲಿಟ್ಟುಕೊಂಡರು ಅನ್ನೋದ್ರ ಬಗ್ಗೆ ವೈಜ್ಞಾನಿಕ ಕಾರಣಗಳಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ಮುಂದೆ ಓದಿ..

ಈ ವರ್ಷ 2019 ರಲ್ಲಿ ಮಕರ ಸಂಕ್ರಾಂತಿಯು ಜ.14 ರಂದು ಆರಂಭವಾಗಿ ಜ.15ರ ತನಕ ಇರುವುದು ಎಂದು ಹಿಂದೂ ಪಂಚಾಂಗವು ಹೇಳುತ್ತದೆ. ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ಮಧ್ಯಾಹ್ನ 12.40(ಜ.15) ಅವಧಿ: 5 ಗಂಟೆ 19 ನಿಮಿಷ ಸಂಕ್ರಾಂತಿ ಸಮಯ: ಜ.14ರ ರಾತ್ರಿ 8.05ರಿಂದ ಮಹಾಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ರಾತ್ರಿ 9.07(ಜ.15) ಅವಧಿ: 1 ಗಂಟೆ 46 ನಿಮಿಷ

ಎಳ್ಳು

ಎಳ್ಳು

ಎಳ್ಳು ಪುಟ್ಟ ಕಾಳುಗಳೇ ಆಗಿದ್ರೂ ಅದ್ರಲ್ಲಿ ಕಬ್ಬಿಣ, ಕ್ಯಾಲ್ಸಿಯಂ,ಮ್ಯಾಂಗನೀಸ್, ವಿಟಮಿನ್ ಬಿ1, ಸೆಲೇನಿಯಂ ಅಂಶಗಳು ಸಮೃದ್ಧವಾಗಿದೆ. ಅನೇಕ ಕಾಯಿಲೆಗಳ ನಿವಾರಣೆಯಲ್ಲಿ ಎಳ್ಳು ಪ್ರಮುಖ ಪಾತ್ರ ವಹಿಸುತ್ತೆ. ಅದ್ರಲ್ಲೂ ಡಯಾಬಿಟೀಸ್, ಬ್ಲಡ್ ಪ್ರೆಷರ್, ಕೊಲೆಸ್ಟ್ರಾಲ್ ಸಮಸ್ಯೆ ನಿವಾರಿಸುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಚರ್ಮದ ಆರೋಗ್ಯಕ್ಕೆ ಎಳ್ಳು ತುಂಬಾ ಹಿತ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಳ್ಳು

ಎಳ್ಳು

ಜೀರ್ಣಕ್ರಿಯೆ ಸಮಸ್ಯೆಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಕೂದಲಿನ ಆರೋಗ್ಯಕ್ಕೂ ಉತ್ತಮ. ಜನವರಿಯಲ್ಲಿ ಬರುವ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಾತಾವರಣ ನಿಮ್ಮ ಚರ್ಮದಲ್ಲಿ ನೀರಿನ ಅಂಶವನ್ನು ಹೀರಿಕೊಂಡು ಡ್ರೈ ಆಗುವಂತ ಸ್ಥಿತಿಯಲ್ಲಿರುತ್ತೆ. ಈ ಸಂದರ್ಬದಲ್ಲಿ ಎಳ್ಳು ಸೇವಿಸೋದ್ರಿಂದ ಚರ್ಮದ ಈ ಸಮಸ್ಯೆಯಿಂದ ಹೆಚ್ಚು ಮುಕ್ತರಾಗಿರಲು ಸಾಧ್ಯವಾಗುತ್ತೆ. ಅದೇ ಕಾರಣಕ್ಕೆ ಎಳ್ಳೆಣ್ಣೆಯ ಸ್ನಾನ ಮಾಡುವಂತೆಯೂ ಈ ಸಂದರ್ಭದಲ್ಲಿ ಸಲಹೆ ನೀಡಲಾಗುತ್ತೆ.

ಬೆಲ್ಲ

ಬೆಲ್ಲ

ಬೆಲ್ಲ ಸರ್ವಕಾಲಕ್ಕೂ ಶ್ರೇಷ್ಠವೇ.. ಬೆಲ್ಲ ನಿಮ್ಮ ದೇಹದಲ್ಲಿ ಕ್ಲೀನಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತೆ. ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅನೀಮಿಯಾ, ಅಸ್ತಮಾಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಬೆಲ್ಲಕ್ಕಿದೆ. ಅಷ್ಟೇ ಅಲ್ಲ ಸಂಕ್ರಾಂತಿ ಸಂದರ್ಬದ ವಾತಾವರಣ ಜಾಯಿಂಟ್ ಪೆಯಿನ್ ಸಮಸ್ಯೆಗೆ ಕಾರಣವಾಗುತ್ತೆ. ಪ್ರಮುಖವಾಗಿ ಮಹಿಳೆಯರಲ್ಲಿ ಮತ್ತು ವಯಸ್ಕರಲ್ಲಿ ಮುಂಗಾಲು, ಮೊಣಕೈ, ಹೀಗೆ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳೋದು ಸರ್ವೇಸಾಮಾನ್ಯ ಸಮಸ್ಯೆಯಾಗಿರುತ್ತೆ. ಇಂತಹ ಸಂದರ್ಬದಲ್ಲಿ ಬೆಲ್ಲದ ಸೇವನೆ ಅಧಿಕವಾಗಿದ್ದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡಿಬಹುದು ಅನ್ನೋದು ವೈಜ್ಞಾನಿಕ ಕಾರಣ..

ನೆಲಗಡಲೆ

ನೆಲಗಡಲೆ

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನುವಂತ ಗುಣಗಳಿರುವ ನೆಲಗಡಲೆಯನ್ನು ಸಂಕ್ರಾತಿ ಸಮಯದಲ್ಲಿ ತಿನ್ನಲು ಹಲವು ಕಾರಣಗಳಿವೆ. ಹವಾಮಾನದ ವೈಪರೀತ್ಯದಿಂದಾಗಿ ಈ ಸಂದರ್ಬದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತೆ. ಅದ್ರಲ್ಲೂ ಪ್ರಮುಖವಾಗಿ ಹೃದಯ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೆಲಗಡಲೆ ಪ್ರಮುಖ ಪಾತ್ರ ವಹಿಸುತ್ತೆ.ಅಷ್ಟೇ ಅಲ್ಲ ಮೆದುಳಿನ ಕಾರ್ಯಚಟುವಟಿಕೆಗೆ ನೆರವಾಗುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೆಲಗಡಲೆ

ನೆಲಗಡಲೆ

ಅಲ್ಲದೆ ನೆಲಗಡಲೆ ಶುಗರ್ ಲೆವೆಲ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತೆ. ಈ ಸಂದರ್ಭದಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತೆ. ನೆಲಗಡಲೆ ಇದೇ ಸಂದರ್ಭದಲ್ಲಿ ಹೆಚ್ಚಾಗಿ ಬೆಳೆದು ರೈತರ ಕೈಸೇರಿರುತ್ತೆ. ಹಾಗಾಗಿ ಈ ಕಾಲಕ್ಕೆ ಹೇಳಿ ಮಾಡಿದ ಆಹಾರಗಳಲ್ಲಿ ನೆಲಗಡಲೆಯೂ ಒಂದು..

ಕಬ್ಬು

ಕಬ್ಬು

ಈ ಸೀಸನ್ ನಲ್ಲಿ ಕಬ್ಬು ಕಟಾವಿಗೆ ಬಂದಿರುತ್ತೆ. ಸಂಕ್ರಾತಿ ಹಬ್ಬದ ಸಂಭ್ರಮ ಅಂದ್ರೆ ಅಲ್ಲಿ ಕಬ್ಬು ಇರಲೇಬೇಕು. ಬೇಸಿಗೆಯ ಆರಂಭ ಮತ್ತು ಚಳಿಗಾಲದ ಅತ್ಯಂತ ಸಮಯ ಇದು. ದೇಹದಲ್ಲಿ ಗ್ಲೂಕೋಸ್ ಅಂಶದ ಅಗತ್ಯತೆ ಹೆಚ್ಚಿರುತ್ತೆ. ಗ್ಲೂಕೋಸ್ ಪೂರೈಕೆ ಮಾಡುವ ಸಾಮರ್ಥ್ಯವಿರೋದು ಕಬ್ಬಿನಲ್ಲಿ.. ದೇಹಕ್ಕೆ ಶಕ್ತಿ ನೀಡಿ ಗ್ಲೂಕೋಸ್ ಲೆವೆಲ್ ನಿಯಂತ್ರಣದಲ್ಲಿಟ್ಟು ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ ಕಬ್ಬು. ಕಬ್ಬಿನಲ್ಲೂ ಕ್ಯಾಲ್ಸಿಯಂ, ಪೋಟಾಶಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣ ಮತ್ತು ಮೆಗ್ನೇಶಿಯಂ ಅಂಶಗಳಿರುತ್ತೆ. ಪ್ಟೋಟೀನ್ ಲೆವೆಲ್ ಸಮತೋಲನದಲ್ಲಿರಲು ಕಬ್ಬು ನೆರವಾಗುತ್ತೆ.

ಕಿಚಡಿ ಅಥವಾ ಪೊಂಗಲ್

ಕಿಚಡಿ ಅಥವಾ ಪೊಂಗಲ್

ಕಿಚಡಿ ಅಥವಾ ಪೊಂಗಲ್ ತಯಾರಿಕೆಯಲ್ಲಿ ಹೊಸದಾಗಿ ಬೆಳೆದ ಅಕ್ಕಿ, ಬೇಳೆ ಬಳಸಲಾಗುತ್ತೆ. ಖಾರ ಪೊಂಗಲ್ ನಲ್ಲಿ ಕಾಳುಮೆಣಸನ್ನೂ ಹಾಕಲಾಗುತ್ತೆ, ಕಾಳುಮೆಳಸು ದೇಹವನ್ನು ಬೆಚ್ಚಗಿಡಲು ನೆರವಾಗುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಿಚಡಿ ಅಥವಾ ಪೊಂಗಲ್

ಕಿಚಡಿ ಅಥವಾ ಪೊಂಗಲ್

ಇನ್ನು ಪೊಂಗಲ್ ಅಂದ ಮೇಲೆ ಅಲ್ಲಿ ತುಪ್ಪ ಇಲ್ಲದೇ ಇದ್ರೆ ಹೇಗೆ. ತುಪ್ಪದ ಗುಣಗಳು ಹಲವಾರು. ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷ ಮಹತ್ವವಿದೆ. ಪ್ರತಿ ಔಷಧಿಯ ತಯಾರಿಕೆಯಲ್ಲೂ, ಲೇಹ್ಯಗಳಲ್ಲೂ ತುಪ್ಪವನ್ನು ಬಳಕೆ ಮಾಡಲಾಗುತ್ತೆ. ಒಟ್ಟಾರೆ ದೇಹದ ಆರೋಗ್ಯ ಕಾಪಾಡುವಲ್ಲಿ ಪೊಂಗಲ್ ನೆರವಾಗುತ್ತೆ.

English summary

Sankranti festival foods, which should boost your health

Makar Sankranti is an auspicious day and is celebrated with much fanfare and festivities across India. It marks the arrival of the spring season, bidding adieu to the chilly winters. In this occasssion we introduce a healthy foods which should boost you energy
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more