For Quick Alerts
ALLOW NOTIFICATIONS  
For Daily Alerts

ಎಬೋಲಾ, ಡೆಂಗ್ಯೂ ಆಯಿತು, ಇನ್ನೂ 'ಝಿಕಾ ವೈರಸ್' ಸರದಿ!

By Super
|

ಇತ್ತೀಚಿನ ದಿನಗಳಲ್ಲಿ ಝಿಕಾ ವೈರಸ್ ಎಂಬ ಪದ ಪತ್ರಿಕೆಗಳಲ್ಲಿ ಆಗಾಗ ಕೇಳಿಬರುತ್ತಿದೆ. ಹೆಚ್ಚಿನ ಭಾರತೀಯರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಅನ್ನಿಸುತ್ತಿಲ್ಲ. ಆದರೆ ಆಫ್ರಿಕಾ ಮತ್ತು ಏಷಿಯಾದ ಕೆಲವು ಪ್ರದೇಶಗಳಲ್ಲಿ ಮಾರಣಾಂತಿಕವಾದ ಈ ವೈರಸ್ ಈಗಾಗಲೇ ಹರಡಿದ್ದು ಸದ್ಯದಲ್ಲಿಯೇ ಅಮೆರಿಕಕಾಕ್ಕೂ ಬರುವ ಸೂಚನೆಗಳನ್ನು ನೀಡುತ್ತಿದೆ. ಅಮೆರಿಕಕನ್ನರ ದೇಹದಲ್ಲಿ ಈ ವೈರಸ್ಸನ್ನು ಎದುರಿಸಲು ಅವರ ದೇಹದ ರೋಗ ನಿರೋಧಕ ಶಕ್ತಿ ಅಷ್ಟೊಂದು ಸಮರ್ಥವಿಲ್ಲದ ಕಾರಣ ಒಂದು ವೇಳೆ ಇದು ಅಮೇರಿಕಾಕ್ಕೆ ಬಂದರೆ ಭಾರೀ ಅನಾಹುತ ಮಾಡಬಹುದು, ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದು ಈಗಾಗಲೇ ದಕ್ಷಿಣ ಮತ್ತು ಮಧ್ಯ ಅಮೇರಿಕಾ ಮತ್ತು ಮೆಕ್ಸಿಕೋದ ಕೆಲವು ಭಾಗಗಳಿಗೆ ಈಗಾಗಲೇ ಕಂಡುಬಂದಿದೆ. ಡಿಸೆಂಬರ್ ನಲ್ಲಿ ಅನತಿ ದೂರ ಇರುವ ಪ್ಯೂರ್ಟೋ ರಿಕೋ ದಲ್ಲಿಯೇ ಬಂದಿರುವುದು ಖಾತರಿಯಾಗಿದೆ. ಅಷ್ಟೇ ಅಲ್ಲ, ಅಮೇರಿಕಾದಲ್ಲಿಯೂ ಮೇ 2015ರಲ್ಲಿ ಕೆಲವು ಕಡೆ ಕಂಡುಬಂದಿದ್ದು ಆತಂಕ ಎದುರಾಗಿತ್ತು. ಚಿಕುನ್ ಗುನ್ಯಾ ಮತ್ತು ಡೆಂಗ್ಯೂ ಎಂಬ ಜ್ವರಗಳನ್ನು ಹರಡುವ ಏಡಿಸ್ ಈಜಿಪ್ತಿ (Aedes aegypti) ಎಂಬ ಸೊಳ್ಳೆಯೇ ಈ ಝಿಕಾ ವೈರಸ್ಸನ್ನು ಸಹಾ ಹರಡಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ ಮುಂದೆ ಓದಿ...

ಲೈಂಗಿಕ ಸಂಪರ್ಕದಿಂದಲೂ ಹರಡಬಹುದು

ಲೈಂಗಿಕ ಸಂಪರ್ಕದಿಂದಲೂ ಹರಡಬಹುದು

ಈ ವೈರಸ್ಸಿನ ಬಗ್ಗೆ ಸಂಶೋಧನೆಗಳು ಇತ್ತೀಚೆಗಷ್ಟೇ ಪ್ರಾರಂಭವಾದುದರಿಂದ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಇದುವರೆಗೆ ಲಭಿಸಿರುವ ಮಾಹಿತಿಗಳ ಪ್ರಕಾರ ಈ ವೈರಸ್ ಸೋಂಕಿರುವ ವ್ಯಕ್ತಿಯಿಂದ ಇನ್ನೊಬ್ಬರಿಗೆ ಲೈಂಗಿಕವಾಗಿ ಹರಡುವ ಸಾಧ್ಯತೆಗಳಿವೆ, ಆದರೆ ದೃಢೀಕರಿಸಲ್ಪಟ್ಟಿಲ್ಲ.

PAHO ಪ್ರಕಾರ

PAHO ಪ್ರಕಾರ

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕಚೇರಿ ಹೊಂದಿರುವ The Pan American Health Organisation (PAHO) ಸಂಸ್ಥೆಯ ಪ್ರಕಾರ ಇದು ರಕ್ತದ ಮೂಲಕ ಪ್ರಮುಖವಾಗಿ ಹರಡುತ್ತದೆ. ಆದರೆ ರಕ್ತವನ್ನು ಶುದ್ಧೀಕರಿಸಿ ಅಗತ್ಯವಿರುವ ರೋಗಿಗೆ ನೀಡುವ ಮೂಲಕ ಇದನ್ನು ಹರಡುವ ಸಂಭವವನ್ನು ತಡೆಯಬಹುದು.

ತಾಯಿಯಿಂದ ಮಗುವಿಗೂ ಹರಡಬಹುದು

ತಾಯಿಯಿಂದ ಮಗುವಿಗೂ ಹರಡಬಹುದು

ಒಂದು ವೇಳೆ ಗರ್ಭಿಣಿಗೆ ಸೋಂಕು ತಗುಲಿದರೆ ಗರ್ಭದಲ್ಲಿರುವ ಮಗುವಿಗೂ ಈ ತೊಂದರೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಸೋಂಕಿಗೆ ಒಳಗಾದ ಮಗುವಿನ ಇನ್ನೂ ಬೆಳೆಯುತ್ತಿರುವ ಮೆದುಳಿನ ಮೇಲೆ ಪ್ರಭಾವ ಬೀರಿ ಅತಿ ಚಿಕ್ಕ ಮೆದುಳನ್ನು ಹೊಂದಿರುವ ಮಗು ಹುಟ್ಟುತ್ತದೆ.

ತಾಯಿಯಿಂದ ಮಗುವಿಗೂ ಹರಡಬಹುದು

ತಾಯಿಯಿಂದ ಮಗುವಿಗೂ ಹರಡಬಹುದು

ಇದುವರೆಗೆ, ಅಂದರೆ ಅಕ್ಟೋಬರ್ 2015ರಿಂದ ಈ ತೊಂದರೆ (microcephaly) ಇರುವ ನಾಲ್ಕು ಸಾವಿರ ಮಕ್ಕಳನ್ನು ಬ್ರೆಜಿಲ್ ದೇಶದಲ್ಲಿ ಗುರುತಿಸಲಾಗಿದೆ. ವೈದ್ಯರ ಪ್ರಕಾರ ಸೋಂಕು ತಗುಲಿರುವ ತಾಯಿಯಿಂದ ಮೊದಲ ಮೂರು ತಿಂಗಳ ಒಳಗಿನ ಗರ್ಭಕ್ಕೆ ಸೋಂಕು ತಗುಲಿದರೆ ಈ ತೊಂದರೆಗೆ ಒಳಗಾಗುವ ಸಾಧ್ಯತೆ ಬಹಳ ಹೆಚ್ಚು.

ತಾಯಿಯಿಂದ ಮಗುವಿಗೂ ಹರಡಬಹುದು

ತಾಯಿಯಿಂದ ಮಗುವಿಗೂ ಹರಡಬಹುದು

ಈ ಅವಧಿಯಲ್ಲಿ ಮಗುವಿನ ಅಂಗಾಂಗಗಳು ಮೂಡುವ ಕಾಲವಾಗಿದ್ದು ಈ ಅವಧಿಯಲ್ಲಿ ಸೋಂಕು ತಗುಲಿದರೆ ಅಂಗವಿಕಲ ಮಗು ಹುಟ್ಟುವ ಅಥವಾ ಸತ್ತ ಮಗು ಹುಟ್ಟುವ ಸಾಧ್ಯತೆ ಹೆಚ್ಚು. ಒಂದು ವೇಳೆ ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಸೋಂಕು ಒಳಗಾದರೆ ಮಗುವಿನ ಬೆಳವಣಿಗೆಯಲ್ಲಿ ಬಾಧತೆ ಉಂಟಾದರೂ ಪ್ರಥಮ ತಿಂಗಳುಗಳಲ್ಲಿ ಆದಷ್ಟು ಆಗಿರುವುದಿಲ್ಲ.

ತಾಯಿಯಿಂದ ಮಗುವಿಗೂ ಹರಡಬಹುದು

ತಾಯಿಯಿಂದ ಮಗುವಿಗೂ ಹರಡಬಹುದು

ಈ ವೈರಸ್ಸಿಗೆ ಇದುವರೆಗೆ ಯಾವುದೇ ಔಷಧಿ ಇಲ್ಲದೇ ಇರುವ ಕಾರಣ ಮುಂದೆ ತಿಳಿಸುವವರೆಗೂ ಗರ್ಭ ಧರಿಸದಂತೆ ಕೊಲಂಬಿಯಾ, ಈಕ್ವಡಾರ್, ಎಲ್ ಸಾಲ್ವಡಾರ್ ಮತ್ತು ಜಮೈಕಾದ ಪ್ರಜೆಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ.

ಈ ಸೋಂಕಿನ ಲಕ್ಷಣಗಳು

ಈ ಸೋಂಕಿನ ಲಕ್ಷಣಗಳು

ಮೊದಲ ನೋಟಕ್ಕೆ ಇದು ಸಾಮಾನ್ಯವಾದ ಫ್ಲೂ ಜ್ವರದಂತೆಯೇ ಕಾಣುತ್ತದೆ. ಸಣ್ಣ ಜ್ವರ, ಕಣ್ಣು ಕೆಂಪಗಾಗುವುದು (ಮದ್ರಾಸ್ ಐ), ತಲೆನೋವು, ಚರ್ಮದಲ್ಲಿ ಉರಿತ, ಸಂಧಿಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು, ವಿಪರೀತ ಸುಸ್ತು ಇದರ ಪ್ರಥಮ ಸಂಕೇತಗಳಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈ ಸೋಂಕಿನ ಲಕ್ಷಣಗಳು

ಈ ಸೋಂಕಿನ ಲಕ್ಷಣಗಳು

ಸೊಳ್ಳೆ ಕಚ್ಚಿದ ಎರಡನೇ ದಿನಕ್ಕೆ ಇವು ಚಿಕ್ಕದಾಗಿ ಪ್ರಾರಂಭವಾಗಿ ಏಳನೆಯ ದಿನಕ್ಕೆ ಉಗ್ರ ರೂಪ ಪಡೆಯುತ್ತವೆ. PAHO ಸಂಸ್ಥೆಯ ಪ್ರಕಾರ ಸೊಳ್ಳೆ ಕಚ್ಚಿನ ನಾಲ್ವರಲ್ಲಿ ಒಬ್ಬರಿಗೆ ಈ ಲಕ್ಷಣಗಳು ಅತಿ ಹೆಚ್ಚಾಗಿರುವುದು ಕಂಡುಬರುತ್ತದೆ ಹಾಗೂ ಎರಡರಿಂದ ಏಳು ದಿನಗಳವರೆಗೆ ಇರುತ್ತದೆ.

ಈ ಸೋಂಕಿನ ಪರಿಣಾಮಗಳು ಮತ್ತು ಜಟಿಲತೆಗಳು

ಈ ಸೋಂಕಿನ ಪರಿಣಾಮಗಳು ಮತ್ತು ಜಟಿಲತೆಗಳು

ವೈದ್ಯರ ಪ್ರಕಾರ ಈ ವೈರಸ್ಸಿನ ಸೋಂಕಿನಿಂದ ಸಾವು ಉಂಟಾಗುವ ಪ್ರಮಾಣ ಕಡಿಮೆ. ಆದರೆ ಇದರ ಪರಿಣಾಮಗಳು ಮಾತ್ರ ಭೀಕರವಾಗಿರುತ್ತವೆ. ಪಾರ್ಶ್ವವಾಯು, ಯಕೃತ್ ವೈಫಲ್ಯಗಳು ಇದುವರೆಗೆ ಕಂಡುಬಂದ ಲಕ್ಷಣಗಳಾಗಿವೆ. ಈ ರೋಗದ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಇವುಗಳ ವರದಿ ಬರುವವರೆಗೆ ಇದರ ಪರಿಣಾಮಗಳ ಭೀಕರತೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಯಾರಿಗೆ ತೊಂದರೆಯಾಗಬಹುದು?

ಯಾರಿಗೆ ತೊಂದರೆಯಾಗಬಹುದು?

ಪೈದ್ಯರ ಪ್ರಕಾರ ಯಾರ ದೇಹದಲ್ಲಿ ಈ ವೈರಸ್ಸನ್ನು ಎದುರಿಸುವ ರೋಗ ನಿರೋಧಕ ಶಕ್ತಿ ಇಲ್ಲ ಅಥವಾ ಕಡಿಮೆ ಇರುತ್ತದೆಯೋ ಅವರಿಗೆಲ್ಲಾ ಈ ಸೋಂಕು ಹರಡುವ ಸಾಧ್ಯತೆಯಿದೆ. ವಿಶೇಷವಾಗಿ ಹೃದ್ರೋಗಿಗಳು, ಮಧುಮೇಹಿಗಳು, ಯಕೃತ್ ತೊಂದರೆ ಇರುವವರು, ವೃದ್ದರು, ಮಕ್ಕಳು ಮತ್ತು ಗರ್ಭಿಣಿಯರಿಗೆ ಇದರ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಇದನ್ನು ತಡೆಯುವುದು ಹೇಗೆ

ಇದನ್ನು ತಡೆಯುವುದು ಹೇಗೆ

PAHO ನೀಡಿರುವ ಮುನ್ನೆಚ್ಚರಿಕೆಗಳ ಪ್ರಕಾರ ಈ ವೈರಸ್ ಕಂಡುಬಂದಿರುವ ಸ್ಥಳಗಳಿಗೆ ಗರ್ಭಿಣಿಯರು ಮತ್ತು ಈ ರೋಗ ಬರಬಹುದಾದ ವ್ಯಕ್ತಿಗಳು ಹೋಗಬಾರದು. ಸೊಳ್ಳೆಗಳ ನಿಗ್ರಹಕ್ಕೆ ಪ್ರತಿ ಮನೆಯೂ ಸಹಕರಿಸಬೇಕು. ಅದರಲ್ಲೂ ಪಟ್ಟೆ ಪಟ್ಟೆ ಇರುವ ಸೊಳ್ಳೆ ಕಂಡುಬಂದರೆ ಇದರ ಮೂಲವನ್ನು ಕಂಡುಹಿಡಿದು ಉಚ್ಛಾಟಿಸಲು ಇಡಿಯ ಗ್ರಾಮ ಒಂದಾಗಬೇಕು.

ಇದನ್ನು ತಡೆಯುವುದು ಹೇಗೆ

ಇದನ್ನು ತಡೆಯುವುದು ಹೇಗೆ

ನೀರು ಹಿಡಿಯುವ ಯಾವುದೇ ಪಾತ್ರೆ, ಒಂದು ಚಿಕ್ಕ ಚಮಚವಾದರೂ ಸರಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಸೊಳ್ಳೆಗಳನ್ನು ಓಡಿಸಲು ಯಾವ ಕ್ರಮ ಸಾಧ್ಯವಾಗುತ್ತದೆಯೋ ಅವನ್ನು ಅನುಸರಿಸಬೇಕು. ಸದಾ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದು ಸೊಳ್ಳೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕು, ಅಲ್ಲದೆ ಸೊಳ್ಳೆ ಬತ್ತಿಗಳನ್ನು ಮನೆಯಲ್ಲಿ ಪ್ರತಿದಿನ ಉಪಯೋಗಿಸುವುದು ಒಳ್ಳೆಯದು.

ಭಾರತಕ್ಕೆ ಬರುವ ಸಾಧ್ಯತೆ ಇದೆಯೇ?

ಭಾರತಕ್ಕೆ ಬರುವ ಸಾಧ್ಯತೆ ಇದೆಯೇ?

PAHO ನೀಡಿರುವ ವಿವರಗಳ ಪ್ರಕಾರ ಏಡಿಸ್ ಸೊಳ್ಳೆ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಝಿಕಾ ವೈರಸ್ ಸಹಾ ಬರಬಹುದು. ವೈದ್ಯರ ಪ್ರಕಾರ ಈ ಸೋಂಕು ಹರಡಲು ಭಾರತ ಅತಿ ಪ್ರಶಸ್ತವಾದ ಸ್ಥಳವಾಗಿದ್ದು ಅತಿ ಹೆಚ್ಚಿನ ಕಾಳಜಿಯ ಅಗತ್ಯವಿರುವ ಕ್ಷೇತ್ರ ಎಂದು ಗುರುತಿಸಲಾಗಿದೆ. ಒಂದು ವೇಳೆ ವೈರಸ್ ಸೋಂಕು ಕಂಡುಬಂದರೆ ಇಡಿಯ ದೇಶಕ್ಕೆ ಹರಡಲು ಹೆಚ್ಚಿನ ಸಮಯ ಬೇಕಾಗಿಲ್ಲ.

ಭಾರತಕ್ಕೆ ಬರುವ ಸಾಧ್ಯತೆ ಇದೆಯೇ?

ಭಾರತಕ್ಕೆ ಬರುವ ಸಾಧ್ಯತೆ ಇದೆಯೇ?

ವಿಶೇಷವಾಗಿ ಈ ವೈರಸ್ ಇರುವ ದೇಶಗಳನ್ನು ಸಂದರ್ಶಿಸಿದವರು ಭಾರತಕ್ಕೆ ಹಿಂದಿರುಗಿದ ಬಳಿಕ ಈ ಸೋಂಕು ಹರಡಲು ಕಾರಣವಾಗುತ್ತದೆ.

ಇದನ್ನು ತಡೆಯುವುದು ಹೇಗೆ

ಇದನ್ನು ತಡೆಯುವುದು ಹೇಗೆ

ಈ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣದಲ್ಲಿಯೇ ಈ ದೇಶಗಳಿಂದ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿ ಸೋಂಕು ಇಲ್ಲ ಎಂದು ಖಚಿತಪಡಿಸಿದ ಬಳಿಕವೇ ಮನೆಗೆ ಕಳುಹಿಸುವ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸೋಂಕು ಪತ್ತೆಯಾದರೆ ಕೂಡಲೇ ಆ ವ್ಯಕ್ತಿಯನ್ನು ಎಲ್ಲರ ಸಂಪರ್ಕದಿಂದ ದೂರಾಗಿಸಿ ಚಿಕಿತ್ಸೆ ನೀಡಬೇಕು ಹಾಗೂ ತಕ್ಷಣ ಆ ವ್ಯಕ್ತಿ ಬಂದ ದೇಶಕ್ಕೆ ಪ್ರವೇಶವನ್ನು ನಿರಾಕರಿಸಬೇಕು.

English summary

Risk of Zika virus, Symptoms, treatment & prevention

The Zika virus is native to parts of Africa and Asia, and the WHO believes that it might spread to the US too. The lack of natural immunity in the US is supposedly aiding the spread of the virus. The same mosquito that transmits dengue and chikungunya.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more