For Quick Alerts
ALLOW NOTIFICATIONS  
For Daily Alerts

ವೈದ್ಯಲೋಕಕ್ಕೆ ಸವಾಲೊಡ್ಡುವ 'ಸೀಬೆ ಎಲೆಯ' ಪವರ್

By Arshad
|

ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಸಾಧಾರಣವಾಗಿ ವರ್ಷದ ಬಹುತೇಕ ದಿನಗಳಲ್ಲಿ ಲಭ್ಯವಿದೆ. ಈ ಹಣ್ಣಿನ ಉತ್ತಮ ಗುಣಗಳ ಬಗ್ಗೆಯೂ ನಾವು ಅರಿತಿದ್ದೇವೆ. ಆದರೆ ಈ ಗಿಡದ ಎಲೆಗಳ ಬಗ್ಗೆ ಏನನ್ನೂ ಅರಿಯದದವರಾಗಿದ್ದೇವೆ. ಹೌದು, ಸಾಮಾನ್ಯವಾಗಿ ನಾವೆಲ್ಲರೂ ಹಣ್ಣನ್ನು ತಿಂದು ಜೊತೆಗೆಲ್ಲಾದರೂ ಒಂದು ಎಲೆ ಬಂದಿದ್ದರೆ ಅದನ್ನು ಎಸೆದುಬಿಡುತ್ತೇವೆ. ವಾಸ್ತವವಾಗಿ ಆರೋಗ್ಯದ ಗಣಿಯನ್ನೇ ಎಸೆಯುತ್ತಿದ್ದೇವೆ ಎಂಬ ಅರಿವೇ ನಮಗಿರುವುದಿಲ್ಲ. ನೀಳ ಕೇಶರಾಶಿ ಬಯಸುವ ಚೆಲುವೆಗೆ ಸೀಬೆ ಎಲೆಗಳ ಚಿಕಿತ್ಸೆ!

ಅದರಲ್ಲೂ ಆಯುರ್ವೇದದಲ್ಲಿ ಈ ಗಿಡದ ಎಲೆಗಳಲ್ಲಿರುವ ಅದ್ಭುತ ಗುಣಗಳನ್ನು ಪ್ರಸ್ತಾಪಿಸಲಾಗಿದೆ. ಈ ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು, ಬ್ಯಾಕ್ಟೀರಿಯಾ ನಿವಾರಕಗಳು ಹಾಗೂ ಉರಿಯೂತವನ್ನು ತಣಿಸುವ ಪೋಷಕಾಂಶಗಳಿವೆ. ಮುಖ್ಯವಾಗಿ ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ರಾಸಾಯನಿಕ ನೈಸರ್ಗಿಕವಾದ ನೋವು ನಿವಾರಕವಾಗಿದೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಬನ್ನಿ, ಈ ಎಲೆಗಳು ಯಾವ ರೀತಿಯಲ್ಲಿ ಆರೋಗ್ಯದ ಗಣಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ

ಸಂಶೋಧನೆಗಳ ಮೂಲಕ ಪೇರಳೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ್ನು (LDL=Low density lipoprotiens) ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷವಸ್ತುಗಳನ್ನು ಕಡಿಮೆಗೊಳಿಸುತ್ತದೆ. ವಿಶೇಷವೆಂದರೆ ರಕ್ತದಲ್ಲಿ ಜೊತೆಗೇ ಒಳ್ಳೆಯ ಕೊಲೆಸ್ಟ್ರಾಲ್ ಸಹಾ ಇದ್ದು ಇದರ ಪ್ರಮಾಣ ಕಡಿಮೆಯಾಗುವುದಿಲ್ಲ. ಅಲ್ಲದೆ ಯಕೃತ್ತಿಗೂ ಈ ಮಿಶ್ರಣ ಟಾನಿಕ್ ನಂತೆ ಸಹಕರಿ

ಅತಿಸಾರದ ಸಮಸ್ಯೆ

ಅತಿಸಾರದ ಸಮಸ್ಯೆ

ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಪೇರಳೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ. ಇದಕ್ಕಾಗಿ ಸುಮಾರು ಎರಡು ಗ್ಲಾಸ್ ನೀರಿನಲ್ಲಿ ಮೂವತ್ತು ಗ್ರಾಂ ಪೇರಳೆ ಎಲೆಗಳನ್ನು ಒಂದು ಮುಷ್ಟಿ ಅಕ್ಕಿಹಿಟ್ಟಿನೊಂದಿಗೆ ಸುಮಾರು ಹದಿನೈದು ನಿಮಿಷ ಬೇಯಿಸಬೇಕು. ಈ ನೀರು ತಣಿದ ಬಳಿಕ ದಿನಕ್ಕೆರಡು ಬಾರಿ ಕುಡಿಯಲು ನೀಡುವುದರಿಂದ ಆಮಶಂಕೆ ಕಡಿಮೆಯಾಗುತ್ತದೆ. ಅತಿಸಾರ ಅಥವಾ ರಕ್ತಬೇಧಿಗಾಗಿ ಪೇರಳೆ ಮರದ ಬೇರನ್ನು ಹಾಗೂ ಎಲೆಗಳನ್ನು ಅರೆದು ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಬೇಕು. ಆದರೆ ಇದರ ತಾಪಮಾನ ತೊಂಭತ್ತು ಡಿಗ್ರಿಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಈ ತಾಪಮಾನ ಮೀರಿದರೆ ಔಷಧದ ಗುಣಗಳು ಕಡಿಮೆಯಾಗುತ್ತದೆ. ತಣಿದ ಬಳಿಕ ಈ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಾ ಬಂದರೆ ಶೀಘ್ರವೇ ರಕ್ತಬೇಧಿ ಗುಣವಾಗುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸಲು

ಜೀರ್ಣಶಕ್ತಿಯನ್ನು ಹೆಚ್ಚಿಸಲು

ಪೇರಳೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಕೆಲವೊಮ್ಮೆ ಪ್ರಬಲ ಬ್ಯಾಕ್ಟೀರಿಯಾಗಳು ಜಠರರಸದಲ್ಲಿಯೂ ಜೀರ್ಣವಾಗದೇ ಕರುಳುಗಳಿಗೆ ಸಾಗಿಸಲ್ಪಡುತ್ತವೆ. ಇಂತಹ ಸಮಸ್ಯೆಗೆ ಪೇರಳೆ ಎಲೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಮಾಡಬೇಕಾದದು ಇಷ್ಟೇ, ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು. ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

ಮೊಡವೆಯಂತಹ ಸಮಸ್ಯೆಗಳಿಗೆ

ಮೊಡವೆಯಂತಹ ಸಮಸ್ಯೆಗಳಿಗೆ

ಪೇರಳೆ ಎಲೆಗಳನ್ನು ಜಜ್ಜೆ ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿ ಕೆಲಕಾಲ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ಮೃದುವಾದ ಸೋಪು ದ್ರಾವಣ ಬಳಸಿ ತೊಳೆದುಕೊಳ್ಳಿ. ಪ್ರತಿದಿನ ಎರಡರಿಂದ ಮೂರು ಬಾರಿಯಂತೆ ತೊಳೆದುಕೊಳ್ಳುವುದರಿಂದ ಶೀಘ್ರವೇ ಮೊಡವೆ ಮತ್ತು ಕಪ್ಪುಚುಕ್ಕೆಗಳು ಕಡಿಮೆಯಾಗುತ್ತವೆ.

ಉರಿಯೂತ ನಿವಾರಿಸುತ್ತದೆ

ಉರಿಯೂತ ನಿವಾರಿಸುತ್ತದೆ

ಪೇರಳೆಯ ಎಲೆಗಳಲ್ಲಿ ಉರ್ಸೋಲಿಕ್ ಆಮ್ಲ (ursolic acid) ಎಂಬ ಪೋಷಕಾಂಶವಿದ್ದು ಇದು ಅತ್ಯುತ್ತಮವಾದ ಉರಿಯೂತ ನಿವಾರಕ ಗುಣ ಹೊಂದಿದೆ. ಇದು ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಸಂಧಿವಾತ ಕಡಿಮೆಗೊಳಿಸುತ್ತದೆ. ಇನ್ನೊಂದು ಪ್ರಮುಖ ಗುಣವೆಂದರೆ ಜೀವಕೋಶಗಳ ಮೇಲೆ ಆಮ್ಲಜನಕದ ವಿಪರೀತ ಪರಿಣಾಮದಿಂದ ವೃದ್ಧಾಪ್ಯದ ಕುರುಹುಗಳು ಬರದಂತೆ ತಡೆಯುವ ಮೂಲಕ ತಾರುಣ್ಯವನ್ನು ಬಹುಕಾಲ ಕಾಪಾಡುತ್ತದೆ.

ಗಾಯದಂತಹ ಸಮಸ್ಯೆಗಳಿಗೆ

ಗಾಯದಂತಹ ಸಮಸ್ಯೆಗಳಿಗೆ

ಸಾಮಾನ್ಯವಾದ ಗಾಯ, ಗೀರು, ಮೊದಲಾದವುಗಳ ಮೇಲೆ ಎಲೆಗಳನ್ನು ಜಜ್ಜಿ ಪೇಸ್ಟ್ ನಂತೆ ಹಚ್ಚುವುದರಿಂದ ಹಾಗೂ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ನಂಜು ಆಗದಿರುವಂತೆ ನೋಡಿಕೊಳ್ಳುತ್ತದೆ. ಬಾಣಂತಿಯರಲ್ಲಿ ಗರ್ಭಾಶಯದ ಊತವನ್ನು ಕಡಿಮೆಗೊಳಿಸಲು ಹಾಗೂ ದೇಹದೊಳಗಣ ಸ್ರಾವಗಳನ್ನು ಶೀಘ್ರವಾಗಿ ಒಣಗುವಂತೆ ಮಾಡಲು ಸಹಕರಿಸುತ್ತದೆ.

ಅಲರ್ಜಿಗಳನ್ನು ಕಡಿಮೆಗೊಳಿಸುತ್ತವೆ

ಅಲರ್ಜಿಗಳನ್ನು ಕಡಿಮೆಗೊಳಿಸುತ್ತವೆ

ಕೆಲವರಿಗೆ ಕೆಲವೊಂದು ವಸ್ತುಗಳು ಅಲರ್ಜಿ ತರಿಸುತ್ತವೆ. histamine ಎಂಬ ಅಲರ್ಜಿಕಾರಕ ರಾಸಾಯನಿಕ ರಕ್ತದಲ್ಲಿ ಬಿಡುಗಡೆಯೇ ಈ ಅಲರ್ಜಿಗೆ ಕಾರಣ. ಪೇರಳೆ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವ ಮೂಲಕ ಈ ಅಲರ್ಜಿಯನ್ನು ಕಡಿಮೆಗೊಳಿಸಬಹುದು.

ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸುತ್ತದೆ

journal Immunopharmacology and Immunotoxicology ಎಂಬ ವೈದ್ಯಕೀಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಪೇರಳೆ ಎಲೆಗಳಿಂದ ತೆಗೆದ ರಸದ ಸೇವನೆಯಿಂದ ಜ್ವರ ಕಡಿಮೆಯಾಗಲು ನೆರವಾಗುತ್ತದೆ ಎಂದು ತಿಳಿಸಲಾಗಿದೆ.

ಬಾಯಿಯ ಆರೋಗ್ಯ ಉತ್ತಮಗೊಳ್ಳುತ್ತದೆ

ಬಾಯಿಯ ಆರೋಗ್ಯ ಉತ್ತಮಗೊಳ್ಳುತ್ತದೆ

ಇದರ ಉರಿಯೂತ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯೊಳಗಣ ಸೋಂಕನ್ನು ನಿವಾರಿಸುವ ಗುಣ ಹೊಂದಿದೆ. ಪರಿಣಾಮವಾಗಿ ಜಿಂಜಿವೈಟಿಸ್ (gingivitis) ಅಥವಾ ಒಸಡುಗಳಲ್ಲಿ ಆಗುವ ಸೋಂಕನ್ನು ಅಪಾರವಾಗಿ ಕಡಿಮೆ ಮಾಡಬಹುದು. ಅಲ್ಲದೇ ಹಲ್ಲುನೋವು ಅಥವಾ ಬಾವು ಬಂದಿದ್ದರೆ ಪೇರಳೆ ಎಲೆಗಳ ರಸ ಇದನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

English summary

Reasons you should never throw away guava leaves

Guavas are easily available in India. However, we mostly eat the fruit and discard its leaves. But did you know guava leaves have health benefits too? Scroll through to find out how guava leaves can keep you healthy!
X
Desktop Bottom Promotion