For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಕಣಜ, ಸಮೃದ್ಧ ಪೋಷಕಾಂಶ ಭರಿತ ಅಣಬೆ

By Deepak M
|

ಸೂಪರ್‌ ಫುಡ್‌ಗಳು ಎಂದರೆ ಅದಕ್ಕೆ ರಾಸಾಯನಿಕಗಳು ಸೇರ್ಪಡೆಯಾಗಿರಬೇಕು ಎಂಬ ನಿಯಮ ಯಾವುದು ಇಲ್ಲ. ಕೆಲವೊಂದು ಸೂಪರ್ ಫುಡ್‌ಗಳು ತನ್ನಷ್ಟಕ್ಕೆ ತಾನೇ ಪ್ರಕೃತಿಯಲ್ಲಿ ಬೆಳೆಯುತ್ತವೆ. ಅಂತಹ ಆಹಾರಗಳಲ್ಲಿ ಅಣಬೆಗಳು ಸಹ ಒಂದು. ಮೊದಲು ಈ ಅಣಬೆಗಳು ಮಳೆಗಾಲದಲ್ಲಿ ಹುತ್ತ, ಹೊಲ, ಗದ್ದೆಯ ಗಡ್ಡೆಗಳ ಬಳಿ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿದ್ದವು.

ಈಗ ಕೆಲವು ವರ್ಷಗಳಿಂದ ತಂತ್ರಜ್ಞಾನವನ್ನು ಬಳಸಿ, ಕೃತಕವಾಗಿ ಅವುಗಳನ್ನು ಬೆಳೆಯಲಾಗುತ್ತದೆ. ಕೃತಕವಾಗಿ ಬೆಳೆದರು, ಪ್ರಾಕೃತಿಕವಾಗಿ ಬೆಳೆದರು ಅಣಬೆಗಳು ತಮ್ಮೊಳಗೆ ಯಥೇಚ್ಛವಾದ ಪ್ರೋಟಿನ್‌ಗಳನ್ನು, ವಿಟಮಿನ್, ಖನಿಜಾಂಶ, ಅಮೈನೋ ಆಮ್ಲ ಮತ್ತು ಆಂಟಿ ಆಕ್ಸಿಡೆಂಟ್‌ಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತದೆ. ಈ ಸೂಪರ್ ಫುಡ್ ಅನ್ನು ನೀವು ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯದಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ಅಣಬೆಗಳನ್ನು ಪ್ರತಿದಿನ ಸೇವಿಸುವುದರಿಂದಾಗಿ ನಿಮಗೆ ನಿಯಾಸಿನ್, ಸೆಲೆನಿಯಂ ಮತ್ತು ರೈಬೊಫ್ಲಾವಿನ್‍ನಂತಹ ಪೋಷಕಾಂಶಗಳು ದೊರೆಯುತ್ತವೆ. ಜೊತೆಗೆ ಇವು ಪೊಟಾಶಿಯಂ ಮತ್ತು ವಿಟಮಿನ್ ಡಿಗಳ ಅತ್ಯುತ್ತಮ ಮೂಲಗಳು ಸಹ ಆಗಿರುತ್ತವೆ. ಇನ್ನು ಅಣಬೆಗಳಿಂದ ದೊರೆಯುವ ಆರೋಗ್ಯದ ಪ್ರಯೋಜನಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಬಿಡಿ.

ಅಷ್ಟರ ಮಟ್ಟಿಗೆ ಇವು ತಮ್ಮೊಳಗೆ ಆರೋಗ್ಯಕಾರಿ ಅಂಶಗಳನ್ನು ಇವು ಇರಿಸಿಕೊಂಡಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗಾಗಿ ಇದು ದೇಹಕ್ಕೆ ಅನಾರೋಗ್ಯವನ್ನು ತರುವ ಅಂಶಗಳ ಮೇಲೆ ಹೋರಾಡುತ್ತದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ದೇಹವನ್ನು ನೀವು ಹಲವಾರು ಡಿಸಾರ್ಡರ್‌ಗಳು ಮತ್ತು ಕ್ಯಾನ್ಸರಿನಂತಹ ಹಲವಾರು ಮಾರಕ ಕಾಯಿಲೆಗಳಿಂದ ಸಹ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಮಶ್ರೂಮ್ ನಲ್ಲಿದೆ ಮಹತ್ವದ ಉಪಯೋಗ

ಜೊತೆಗೆ ಇದು ನಿಮ್ಮ ಜೀರ್ಣಾಂಗ ವ್ಯೂಹದ ಕಾರ್ಯವೈಖರಿಯನ್ನು ಸಹ ಸುಧಾರಿಸುತ್ತದೆ. ಇದರಲ್ಲಿ ಸಮೃದ್ಧವಾದ ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇರುತ್ತವೆ. ಹೀಗೆ ಅಣಬೆಯನ್ನು ಸೇವಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಆದ್ದರಿಂದ ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮಗೆ ಅಣಬೆ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿಸಿಕೊಡುತ್ತದೆ. ಬನ್ನಿ ಮುಂದೆ ಓದಿ...

ವಿಟಮಿನ್ ಡಿ

ವಿಟಮಿನ್ ಡಿ

ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಅಣಬೆಯು ಸೂರ್ಯನ ಬೆಳಕಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದರಿಂದ ಈ ವಿಟಮಿನ್ ಅನ್ನು ತನ್ನೊಳಗೆ ಹೊಂದುತ್ತದೆ. ಇದನ್ನು ಸೇವಿಸುವುದರಿಂದಾಗಿ, ನಿಮಗೆ ಪ್ರತಿದಿನಕ್ಕೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ.

ಆಂಟಿಆಕ್ಸಿಡೆಂಟ್‌ಗಳು

ಆಂಟಿಆಕ್ಸಿಡೆಂಟ್‌ಗಳು

ಅಣಬೆಗಳಲ್ಲಿ ಯಥೇಚ್ಛವಾದ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಅವು ಫ್ರೀ ರ‍್ಯಾಡಿಕಲ್‌ಗಳಿಂದ ನಿಮ್ಮ ದೇಹವು ಹಾಳಾಗುವಿಕೆಯನ್ನು ತಡೆಯುತ್ತದೆ. ಈ ಆಂಟಿಆಕ್ಸಿಡೆಂಟ್‌ಗಳು ಹೃದ್ರೋಗ, ಕ್ಯಾನ್ಸರ್, ಅಲ್ಜೀಮರ್ ಮುಂತಾದ ಗಂಭೀರ ಕಾಯಿಲೆಗಳ ಬೆಳವಣಿಗೆಯನ್ನು ತಡೆಯುತ್ತವೆ.

ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ

ವಿಟಮಿನ್ ಬಿಯು ಅಣಬೆಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್‌ಗಳು ನಮ್ಮ ದೇಹಕ್ಕೆ ತೀರಾ ಅಗತ್ಯವಾಗಿರುತ್ತವೆ. ಇನ್ನು ನಮ್ಮ ದೇಹ ಸುಗಮವಾಗಿ ಕೆಲಸ ಮಾಡಲು ಬೇಕಾದ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸಲು ಅಣಬೆಗಳು ಅಗತ್ಯ ಶಕ್ತಿಯನ್ನು ನೀಡುತ್ತವೆ. ಹಾಗಾಗಿ ಅಣಬೆಗಳನ್ನು ತಪ್ಪದೆ ಸೇವಿಸಿ, ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಿ.

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ಅಣಬೆಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮ ದೇಹಕ್ಕೆ ವೈರಸ್ ನಿರೋಧಕ ರಕ್ಷೆಯನ್ನು ನೀಡುತ್ತದೆ ಮತ್ತು ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹಲವಾರು ಪ್ರೋಟಿನ್‌ಗಳು ದೊರೆಯುತ್ತವೆ. ಜೊತೆಗೆ ದೇಹದ ಕೋಶಗಳಲ್ಲಿನ ರಿಪೇರಿಗಳನ್ನು ಸಹ ದೇಹವೇ ಮಾಡಿಕೊಳ್ಳುವಷ್ಟು ಆರೋಗ್ಯವನ್ನು ಅಣಬೆಗಳು ನಮಗೆ ನೀಡುತ್ತವೆ.

ಕಬ್ಬಿಣಾಂಶದ ಆಗರ

ಕಬ್ಬಿಣಾಂಶದ ಆಗರ

ಅಣಬೆಗಳು ಕಬ್ಬಿಣಾಂಶದ ಪ್ರಮುಖ ಆಗರವಾಗಿರುತ್ತವೆ. ಇವುಗಳ ಸೇವನೆಯಿಂದ ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ಆಕ್ಸಿಜೆನೆಶನ್ ಆಗುತ್ತದೆ. ಜೊತೆಗೆ ಆಮ್ಲಜನಕವು ದೇಹದ ಎಲ್ಲಾ ಭಾಗಗಳಿಗೂ ಪಸರಿಸಲು ಇದು ಕಾರಣವಾಗುತ್ತದೆ.

English summary

Reasons To Include Mushrooms Regularly In The Diet

Mushrooms are one of the superfoods that come with a myriad of health benefits associated with them. Mushrooms come in a range of different varieties and each of them have their own benefits for health. Mushrooms are filled with proteins, vitamins, minerals, amino acids and antioxidants. These superfoods are considered to be excellent protein sources that you've got to include in your meals regularly.
Story first published: Sunday, April 10, 2016, 12:13 [IST]
X
Desktop Bottom Promotion