For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಧೂಮಪಾನ ಬಿಟ್ಟರೆ, ಮದ್ಯಪಾನ ನಿಯಂತ್ರಣಕ್ಕೆ!

By Vani nayak
|

ಧೂಮಪಾನವನ್ನು ಬಿಡುವುದರಿಂದ ಮತ್ತೊಂದು ಲಾಭವನ್ನು ಪಡೆಯಬಹುದು. ಅದುವೇ ಕುಡಿತದ ಕಡಿತ. ಸಂಶೋಧನಕಾರರ ಪ್ರಕಾರ ಯಾರು ಧೂಮಪಾನವನ್ನು ತ್ಯಜಿಸಲು ಯತ್ನಿಸುತ್ತಿರುವವರೋ ಅವರು ನಿಯಮಿತವಾಗಿ ಧೂಮಪಾನ ಮಾಡುವವರಿಗಿಂತ, ಮದ್ಯಪಾನದ ಸೇವನೆಯನ್ನು ಬಹುತೇಕ ಕಡಿತಗೊಳಿಸುತ್ತಾರೆ.

ಇಂಗ್ಲೆಡಿನಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕುವುದಕ್ಕೆ ಯಾರು ಪ್ರಯತ್ನ ಪಟ್ಟರೋ, ಒಂದು ವಾರದ ನಂತರ ಅವರ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಕುಡಿತವೂ ಸಹ ಬಹಳಷ್ಟು ಪ್ರಮಾಣ ಕಡಿಮೆಯಾಗಿತ್ತು. ಇದು ಧೂಮಪಾನವನ್ನು ತ್ಯಜಿಸಲು ಪ್ರಯತ್ನಪಡದೇ ಇರುವವರಿಗೆ ಹೋಲಿಸಿದಾಗ ಈ ವಿಷಯ ಹೊರಬಿದ್ದಿತ್ತು. ಅವರನ್ನು "ಲೈಟ್ ಡ್ರಿಂಕರ್ಸ್" ಎಂದು ವರ್ಗೀಕೃತ ಮಾಡಲಾಗಿತ್ತು. ಧೂಮಪಾನ: ಸಂಶೋಧನೆಯ ವರದಿಯಲ್ಲಿ ಬಿಚ್ಚಿಟ್ಟ ಸತ್ಯಾಸತ್ಯತೆ

ಸಾಧಾರಣವಾಗಿ ಜನರು ಧೂಮಪಾನ ಬಿಡುವುದರಿಂದ ಮದ್ಯಪಾನದ ಸೇವನೆ ಹೆಚ್ಚಾಗುತ್ತದೆಂದು ಅಭಿಪ್ರಾಯ ಪಡುತ್ತಾರೆ. ಆದರೆ ಹೊರ ಬಿದ್ದ ಫಲಿತಾಂಶವು ಇದಕ್ಕೆ ವಿರುದ್ಧವಾಗಿದೆ. ಮದ್ಯಪಾನದ ಸೇವನೆಯಿಂದ ಧೂಮಪಾನದ ಚಟವು ಮತ್ತೆ ಮರುಕಳಿಸಬಹುದೆಂಬ ಕೊಟ್ಟ ಸಲಹೆಗೆ ಹೆಚ್ಚು ಗಮನ ಕೊಟ್ಟಿರಬಹುದು ಎಂದು ತಿಳಿದು ಬರುತ್ತದೆ. ಹೀಗೆಂದು ಲಂಡನ್ ವಿಶ್ವವಿದ್ಯಾಲಯದ ಹೆಸರಾಂತ ಲೇಖಕರಾದ ಜ್ಯಾಮಿ ಬ್ರೌನ್ ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಸಂಶೋಧನೆಯ ಫಲಿತಾಂಶದ ಪ್ರಕಾರ ತಂಬಾಕು ಸೇವನೆ ಮತ್ತು ಮದ್ಯ ಸೇವನೆ ಎರಡೂ ಒಂದಕ್ಕೊಂದು ಸಂಬಂಧಪಟ್ಟಿವೆ.

Quitting smoking comes with another bonus: less drinking. According to researchers, people ...

ಕುಟುಂಬಗಳ ಸಮೀಕ್ಷೆಯ ಅಧ್ಯಾಯನದ ಪ್ರಕಾರ ಒಟ್ಟು 31,878 ಜನರಲ್ಲಿ 6,287 ಜನರು 2014 ಮಾರ್ಚ್ ಹಾಗು 2015 ಸೆಪ್ಟೆಂಬರ್ ರ ಅವಧಿಯಲ್ಲಿ ಧೂಮಪಾನ ಮಾಡುವವರೆಂದು ದಾಖಲಾಗಿತ್ತು. ಇಷ್ಟರಲ್ಲಿ 144 ಮಂದಿ ಸಮೀಕ್ಷೆಯ ಒಂದು ವಾರದ ಹಿಂದೆ ಧೂಮಪಾನವನ್ನು ತ್ಯಜಿಸಲು ಪ್ರಯತ್ನಪಟ್ಟಿದ್ದರು. ಸಿಗರೇಟನ್ನು ಸೇದುವವರು, ಅದನ್ನು ತ್ಯಜಿಸಲು ತೀರ್ಮಾನಿಸಿದಾಗ ತಮ್ಮನ್ನು ತಾವೇ ಮದ್ಯ ಸೇವನೆಯಿಂದ ನಿಯಂತ್ರಿಸಿಕೊಳ್ಳುತ್ತಾರೆ. ಇದು ಅಧ್ಯಾಯನದಿಂದ ತಿಳಿದು ಬಂದಿದೆ. ಅಧ್ಯಯನ ವರದಿ: ಧೂಮಪಾನದ ಬಿಗಿ ಮುಷ್ಟಿಗೆ ವಿಶ್ವವೇ ನಲುಗುತ್ತಿದೆ!

ಪರ್ಯಾಯವಾಗಿ ಯಾರು ಕಡಿಮೆ ಮದ್ಯ ಸೇವನೆ ಮಾಡುತ್ತಾರೋ ಅವರು ಧೂಮಪಾನವನ್ನು ತ್ಯಜಿಸುವ ಹೆಚ್ಚು ಸಂಭವವಿರುತ್ತದೆ. ಹೀಗಿದ್ದಲ್ಲಿ ಹೆಚ್ಚು ಮದ್ಯ ಸೇವಿಸೋ ಜನರು ಧೂಮಪಾನವನ್ನೂ ಸಹ ಮಾಡುವವರಿದ್ದರೇ, ಹೆಚ್ಚಿನ ಪ್ರೊತ್ಸಾಹದ ಅಗತ್ಯವಿರುತ್ತದೆ.

ಆದರೂ ನಿರ್ದಿಷ್ಟವಾಗಿ ಇಂತಹದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಧೂಮಪಾನದ ತ್ಯಜಿಸುವಿಕೆ ಮದ್ಯ ಸೇವನೆಯನ್ನು ನಿಯಂತ್ರಿಸುತ್ತದೋ ಅಥವಾ ಕಡಿಮೆ ಮದ್ಯ ಸೇವನೆ ಧೂಮಪಾನದ ತ್ಯಜಿಸುವಿಕೆಗೆ ಪ್ರೇರೇಪಿಸುತ್ತದೆಯೋ ಎಂಬ ನಿಟ್ಟಿನಲ್ಲಿ ಮತ್ತಷ್ಟು ಹೆಚ್ಚು ಸಂಶೋಧನೆ ಅವಶ್ಯಕವಿದೆ. ಹೀಗೆಂದು ಬ್ರೌನ್ ರವರು ಬಿಎಮ್ ಸಿ ಪಬ್ಲಿಕ್ ಹೆಲ್ತ್ ಪ್ರಕಟಿಸಿದ ಪತ್ರಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಇತರ ಅಂಶಗಳಲ್ಲಿ ಒಂದಾದ ಆರೋಗ್ಯ ಸಮಸ್ಯೆ ಇದ್ದಾಗ ಕೂಡ ಮದ್ಯಪಾನ ಹಾಗು ಧೂಮಪಾನವನ್ನು ಬಿಡುವ ಪ್ರಯತ್ನಗಳನ್ನು ಕಾಣುತ್ತೇವೆ. ಹೀಗೆಂದು ಬ್ರೌನ್ ಹೇಳಿದ್ದಾರೆ.

ಐಎಎನ್ಎಸ್ ವರದಿ

English summary

Quitting smoking comes with another bonus: less drinking. According to researchers, people ...

Quitting smoking comes with another bonus: less drinking. According to researchers, people who have recently begun an attempt to quit smoking are more likely to try to drink less alcohol than other smokers.
X
Desktop Bottom Promotion