For Quick Alerts
ALLOW NOTIFICATIONS  
For Daily Alerts

ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಲು ಸರಳ ಟಿಪ್ಸ್

By Manu
|

ಆಧುನಿಕ ಜೀವನ ಶೈಲಿಯೇ ಹಾಗೆ, ಅದು ತುಂಬಾ ವೇಗ ಹಾಗೂ ಒತ್ತಡದಿಂದ ಕೂಡಿರುತ್ತದೆ. ಹೆಚ್ಚಿನವರಿಗೆ ಇದರ ಪರಿಣಾಮದ ಬಗ್ಗೆ ತಿಳಿಯುವುದಿಲ್ಲ, ಹಲವಾರು ರೀತಿಯ ಅನಾರೋಗ್ಯಕ್ಕೆ ಇದು ಪ್ರಮುಖ ಕಾರಣವೆನ್ನಲಾಗುತ್ತಿದೆ. ನೀವು ಕೆಲಸ ಮಾಡುತ್ತಿರಲಿ, ಓದುತ್ತಿರಲಿ ಅಥವಾ ಏನೇ ಮಾಡದೆ ಹಾಗೆ ಇದ್ದರೂ ಪ್ರತೀ ದಿನ ಒತ್ತಡವೆನ್ನುವುದು ಇದ್ದೇ ಇರುತ್ತದೆ. ಒತ್ತಡವು ನಮ್ಮ ಪ್ರತೀ ದಿನದ ಒಂದು ಭಾಗವಾಗಿಯೇ

ಹೋಗಿದೆ. ಕೆಲವು ಸಲ ಇದನ್ನು ನಿಭಾಯಿಸಲು ನಾವು ಕಷ್ಟಪಡುತ್ತೇವೆ. ಕೆಲವೊಂದು ಆಹಾರಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಆರಾಮವಾಗಿರುವಂತೆ ಮಾಡುತ್ತದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅನಗತ್ಯ ಒತ್ತಡವು ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ನೀವು ತುಂಬಾ ಶಾಂತ ಹಾಗೂ ನಿಯಂತ್ರಣದಿಂದ ಇರಲು ಬಯಸಿದರೂ ಒಳಮನಸ್ಸು ಮಾತ್ರ ಯಾವುದಾದರೂ ವಿಷಯದ ಬಗ್ಗೆ ಚಿಂತಿಸುತ್ತಾ ಇರುವಾಗ ಒತ್ತಡ ಉಂಟಾಗುತ್ತದೆ. ಇದು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವುದೇ ಪರಿಣಾಮ ಬೀರದಿದ್ದರೂ ದೀರ್ಘಾವಧಿಗೆ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡಬಹುದು.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಒತ್ತಡ ಕಡಿಮೆ ಮಾಡುವಂತಹ ಆಹಾರ ತಿಂದು ಒತ್ತಡವನ್ನು ಕಡಿಮೆ ಮಾಡಿ. ಒತ್ತಡವನ್ನು ನಿಭಾಯಿಸುವುದು ಹೇಗೆಂದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ನಮ್ಮ ಒತ್ತಡಕ್ಕೆ ಕಾರಣವೇನೆಂದು ತಿಳಿದಿರುತ್ತದೆ ಮತ್ತು ಶಾಂತವಾಗಿರಲು ದಾರಿಗಳು ತಿಳಿದಿರುತ್ತದೆ. ಆದರೆ ಕೆಲವರು ಒತ್ತಡದ ಪರಿಸ್ಥಿತಿಯಲ್ಲಿ ಜಂಕ್ ಫುಡ್ ಗೆ ಮೊರೆ ಹೋದರೆ ಮತ್ತೆ ಕೆಲವರು ಅತಿಯಾದ ವ್ಯಾಯಾಮ ಅಥವಾ ಇನ್ನೇನಾದರೂ ಮಾಡುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಒತ್ತಡದ ನಿವಾರಣೆಗೆ ಕೆಲವು ಅನುಪಯುಕ್ತ ಲಘು ಉಪಹಾರಗಳನ್ನು ಸೇವಿಸುವ ಬದಲು ನಾವು ತಿಳಿಸುವ ಕೆಲವು ಉಪಯುಕ್ತ ಆಹಾರಗಳನ್ನು ಸೇವಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ...

ಸಿಹಿ ಆಲೂಗಡ್ಡೆ ಅಥವಾ ಗೆಣಸು

ಸಿಹಿ ಆಲೂಗಡ್ಡೆ ಅಥವಾ ಗೆಣಸು

ಫ್ರೆಂಚ್ ಫ್ರೈ ಅಥವಾ ಹೆಚ್ಚು ಸಿಹಿಯುಕ್ತ ಜಂಕ್ ಆಹಾರಗಳನ್ನು ಸೇವಿಸುವ ಬದಲು ಸಿಹಿ ಆಲೂಗಡ್ಡೆಯನ್ನು ಸೇವಿಸಿ. ಇದು ನಿಮ್ಮ ದೇಹಕ್ಕೆ ನಿಧಾನವಾಗಿ ಸಾಮರ್ಥ್ಯವನ್ನು ನೀಡುತ್ತದೆ. ಇದು ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಶೇಖರಿಸದಂತೆ ತಡೆಯುತ್ತದೆ.

ಬ್ಲೂಬೆರ್ರಿ ಹಣ್ಣುಗಳು

ಬ್ಲೂಬೆರ್ರಿ ಹಣ್ಣುಗಳು

ಈ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕ ಅಂಶವು ಹೇರಳವಾಗಿದ್ದು, ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ನೀಡಿ ಒತ್ತಡವನ್ನು ಸುಲಭವಾಗಿ ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಹ ಅಡಗಿದ್ದು,ನಿಮ್ಮ ಒತ್ತಡದ ನಿವಾರಣೆಗೆ ಹೆಚ್ಚು ನಿರವಾಗುತ್ತದೆ.

ಕಿತ್ತಳೆ

ಕಿತ್ತಳೆ

ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಎ, ಬಿ ಮತ್ತು ಸಿಯನ್ನು ಹೊಂದಿರುವ ಕಿತ್ತಳೆ ಫ್ರೀ ರಾಡಿಕಲ್ ವಿರುದ್ಧ ಹೋರಾಡಿ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಒತ್ತಡ ಮುಕ್ತರಾಗಿ ಆರಾಮವಾಗಿರಲು ಪ್ರತೀ ದಿನದ ಆಹಾರ ಕ್ರಮದಲ್ಲಿ ಕಿತ್ತಳೆ ಸೇರಿಸಿ.

ಧಾನ್ಯ/ಮುಸುಕಿನ ಜೋಳ

ಧಾನ್ಯ/ಮುಸುಕಿನ ಜೋಳ

ಒಂದು ಪಿಂಗಾಣಿ ಅಕ್ಕಿ ಧಾನ್ಯ ಅಥವಾ ಮುಸುಕಿನ ಜೋಳವನ್ನು ಹಾಲಿನೊಂದಿಗೆ ತಿಂದರೆ ಅದು ಒತ್ತಡ ನಿಭಾಯಿಸಲು ನಿಮ್ಮ ದೇಹಕ್ಕೆ ನೆರವಾಗುತ್ತದೆ. ಫಾಲಿಕ್ ಆಮ್ಲಾ ಮತ್ತು ವಿಟಮಿನ್ ಬಿಯಿಂದ ತುಂಬಿರುವ ಇವು ಒತ್ತಡವನ್ನು ಕಡಿಮೆ ಮಾಡುವ ಆಹಾರಗಳು.

ಒತ್ತಡವನ್ನು ಹಾಲಿನೊಳಗೆ ಹಾಕಿ!

ಒತ್ತಡವನ್ನು ಹಾಲಿನೊಳಗೆ ಹಾಕಿ!

ನೀವು ಹಾಲನ್ನು ಪ್ರೀತಿಸುವವರಾದರೆ ಆಗ ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಇದು ತುಂಬಾ ನೆರವಾಗುತ್ತದೆ. ವಿಟಮಿನ್ ಎ ಮತ್ತು ಡಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಹಾಲು ಒತ್ತಡ ಉಂಟುಮಾಡುವ ಫ್ರೀ ರೆಡಿಕಾಲ್ ವಿರುದ್ಧ ಹೋರಾಡುತ್ತದೆ.

English summary

Quick and Simple Ways to Reduce Your Stress

Gorging on food, when you're stressed or upset, may seem like the natural thing for most, but instead of grabbing an unhealthy snack, why not opt for foods that can relieve stress? Here are some popular ones...
Story first published: Tuesday, February 16, 2016, 20:56 [IST]
X
Desktop Bottom Promotion