For Quick Alerts
ALLOW NOTIFICATIONS  
For Daily Alerts

ಸಂಧಿವಾತದಿಂದ ತ್ವರಿತ ಪರಿಣಾಮ ನೀಡುವ ಮನೆಮದ್ದು

By Manjula Balaraj
|

ಸಂಧಿವಾತ ಮಧ್ಯವಯಸ್ಸು ದಾಟಿದವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧಿವಾತ ಕಂಡು ಬರುವುದು. ಪ್ರೊಟೀನ್ ತುಂಬಾ ಅವಶ್ಯಕವಾದ ಪೋಷಕಾಂಶವಾದರೂ ದೇಹದಲ್ಲಿ ಪ್ರೊಟೀನ್ ಅಂಶ ಅತ್ಯಧಿಕವಾದರೆ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಕಿಡ್ನಿ ಅತ್ಯಧಿಕವಾದ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರಹಾಕಲು ವಿಫಲವಾಗುತ್ತದೆ.

ಇದರಿಂದಾಗಿ ಸಂಧಿವಾತ ಉಂಟಾಗುವುದು. ಅಷ್ಟೇ ಅಲ್ಲದೆ ಸಂಧಿವಾತದ ರೋಗವು ಬೇರೆ ಬೇರೆ ತರಹಗಳಲ್ಲಿ ಅಥವಾ ಕೆಲವು ಔಷಧಿಗಳಿಂದಲೂ ಉಂಟಾಗಬಹುದು. ಈ ತರಹದ ಕಾಯಿಲೆಯು ಮುಖ್ಯವಾಗಿ ಎರಡು ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವು ಹೇಗೆಂದರೆ ಮೊನೊಸೋಡಿಯಂನ ಅತೀ ಹೆಚ್ಚು ಉತ್ಪತ್ತಿ ಮತ್ತು ಮೂತ್ರದಲ್ಲಿ ಯೂರಿಕ್ ಆಮ್ಲದ ಅಸಮರ್ಪಕ ಪೂರೈಕೆಯಿಂದ ಉಂಟಾಗಬಹುದು.

Quick Home Remedies For Gout

ಇದಲ್ಲದೇ, ಸಂಧಿ/ಕೀಲುಗಳಲ್ಲಿ ಇದರ ಲಕ್ಷಣಗಳು ಗೋಚರಿಸುವ ಸಾಧ್ಯತೆ ಹೆಚ್ಚು. ಬಿಳಿ ರಕ್ತ ಕಣಗಳಲ್ಲಿ ಮೋನೊಸೋಡಿಯಂ ಅಥವಾ ಯುರೇಟ್ ಹರಳುಗಳು ಜಾಸ್ತಿ ಪ್ರಮಾಣದಲ್ಲಿ ಉಂಟಾದಾಗ ಕೀಲುಗಳ ಉರಿಯೂತಕ್ಕೆ ಕಾರಣವಾಗುತ್ತದೆ. 40ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಸಾಮಾನ್ಯವಾಗಿ ಈ ತರಹದ ಅಸ್ವಸ್ಥತೆ ಹೆಚ್ಚಾಗಿ ಕಂಡುಬರುತ್ತದೆ. ಇದರ ಪರಿಣಾಮವಾಗಿ ಮೂತ್ರಕೋಶ ಕೆಲಸ ಮಾಡುವುದು ಕಡಿಮೆ ಮಾಡಬಹುದು. ಸಂಧಿವಾತದ ಪರಿಣಾಮವಾಗಿ ಟೊಫಿ, ಯೂರಿಕ್ ಆಮ್ಲದ ಹೆಚ್ಚಿನ ಪ್ರಮಾಣದ ಶೇಖರಣೆಯಿಂದ ಮೂತ್ರಕೋಶದಲ್ಲಿ ಹರಳುಗಳು ಉಂಟಾಗಲು ಕಾರಣವಾಗಬಹುದು. ಸಂಧಿವಾತದಂತಹ ಕಾಯಿಲೆ ದೇಹದ ಒಳಗೆ ಯೂರಿಕ್ ಆಮ್ಲ ಹೆಚ್ಚಾದಂತೆ ಕಾಣಿಸುತ್ತದೆ.

ಯೂರಿಕ್ ಆಮ್ಲ ಹೆಚ್ಚಾದಂತೆ ಅದು ಕೀಲುಗಳ ಸಂಧಿಗಳಲ್ಲಿ ಅವು ಚಿಕ್ಕ ಚಿಕ್ಕ ಸ್ಪಟಿಕಗಳ ಉಂಡೆಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋನೊಸೋಡಿಯಂ ನ ಅಸಾಮಾನ್ಯ ಚಯಾಪಚಯ ಪ್ರಕ್ರಿಯೆಯಿಂದ ಯೂರಿಕ್ ಆಮ್ಲ ರೂಪುಗೊಳ್ಳುವಿಕೆ ದೇಹದಲ್ಲಿ ಕಾರಣವಾಗಬಹುದು. ಇದರಿಂದ ಕಿಡ್ನಿ ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ವಂಶಪಾರಂಪರ್ಯತೆ, ಹೆಚ್ಚಿನ ತೂಕ, ಮಿತಿ ಮೀರಿದ ಕುಡಿತ, ಮಿತಿ ಮೀರಿದ ಡಯೆಟ್, ಉಪವಾಸ ಮಾಡುವುದು, ಹೆಚ್ಚಿನ ಪ್ರಮಾಣದ ಮಾಂಸಾಹಾರ ಸೇವನೆ, ಮೂಗು ಮತ್ತು ಗಂಟಲಿನ ಅನಾರೋಗ್ಯ, ಶಸ್ತ್ರ ಚಿಕಿತ್ಸೆ, , ಕೀಮೋಥರಪಿ ಮೊದಲಾದ ಕಾರಣಗಳಿಂದಾಗಿ ಸಂಧಿವಾತ ಕಾಯಿಲೆಯು ಉಂಟಾಗಬಹುದು. ಸಂಧಿವಾತ, ಉರಿಯೂತ ನಿವಾರಿಸುವ ಪವರ್ ಫುಲ್ ಜ್ಯೂಸ್

ಆಸ್ಪ್ರಿನ್, ಅಲೋಪ್ಯೂರಿನಾಲ್, ಪ್ರೊಬೇನ್ ಆಸಿಡ್, ನಿಕ್ಟೋನಿಕ್ ಆಸಿ, ಡಿಯೋಟ್ರಿಕ್ ಮತ್ತು ಹೈಪರ್ ಟೆನ್ಸೀವ್ ಮಾತ್ರೆಗಳಿಂದ ಸಂಧಿವಾತ ಶುರುವಾಗಬಹುದು. ಹುಡುಗರಲ್ಲಿ, ಯೂರಿಕ್ ಆಮ್ಲದ ಮಟ್ಟ ಪ್ರೌಢಾವಸ್ಥೆಯಲ್ಲಿ ಮತ್ತು ಹುಡುಗಿಯರಲ್ಲಿ ಋತುಬಂಧ ಸಮಯದಲ್ಲಿ ಹೆಚ್ಚಾಗುತ್ತದೆ. ಹುಡುಗಿಯರಿಗೆ ಹೋಲಿಸಿದರೆ ಈ ರೋಗವು ಹುಡುಗರಲ್ಲಿ ಹೆಚ್ಚಾಗಿ ಗೋಚರಿಸುತ್ತದೆ. ರಾತ್ರಿ ಅಥವಾ ಬೆಳಗಿನ ಸಮಯದಲ್ಲಿ ಮೊಣಕಾಲಿನಲ್ಲಿ ನೋವು, ಹೆಬ್ಬೆರಳು ಅಥವಾ ಪಾದದಲ್ಲಿ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಲ್ಲಿ ಒಂದು. ಹಾಗಾಗಿ, ಸಂಧಿವಾತದ ರೋಗವನ್ನು ಹೋಗಲಾಡಿಸಲು ಕೆಲವು ಮನೆ ಮದ್ದುಗಳ ಕಡೆ ಗಮನ ಹರಿಸಿವುದು ಸೂಕ್ತ.

ಬೆಳ್ಳುಳ್ಳಿ
ಬೆಳ್ಳುಳ್ಳಿಯ 3-4 ಎಸಳುಗಳನ್ನು ತಿನ್ನುವುದು ಈ ಕಾಯಿಲೆ ಹೋಗಲಾಡಿಸಲು ಇರುವ ಒಂದು ಉತ್ತಮವಾದ ಮದ್ದು. ದಿನವೊಂದಕ್ಕೆ ಹತ್ತರಿಂದ ಹನ್ನೆರದು ಚೆರ್ರಿ ಹಣ್ಣುಗಳನ್ನು ತಿನ್ನುವುದರಿಂದಲೂ ಸಂಧಿವಾತಕ್ಕೆ ಸಂಬಂಧಿಸಿದ ನೋವು ಹೋಗಲಾಡಿಸಲು ಸಾಧ್ಯವಾಗುತ್ತದೆ.

ಜೇನುತುಪ್ಪ
ಒಂದು ಟೀ ಚಮಚ ಜೇನುತುಪ್ಪವನ್ನು ಸೇಬುಹಣ್ಣನ್ನು ಹುಳಿಯಾಗಿ ಮಾಡಿಸಿದ ರಸದಿಂದ ಮಿಶ್ರಣ ಮಾಡಿ ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ನಂತರ ಸರಿಯಾಗಿ ಕುಲುಕಿ ನಂತರ ಕುಡಿಯಬೇಕು. ಈ ರೀತಿಯ ಮಿಶ್ರಣದ ರಸವನ್ನು ದಿನಪೂರ್ತಿ ಆವಾಗಾವಾಗ ಕುಡಿದರೆ ಸಂಧಿವಾತಕ್ಕೆ ಉತ್ತಮ ಪರಿಹಾರ ಸಿಗುತ್ತದೆ.

ದ್ರಾಕ್ಷಿ ಸೇವನೆ
ಅತಿಹೆಚ್ಚು ದ್ರಾಕ್ಷಿ ಸೇವನೆ ಈ ಕಾಯಿಲೆಯಿಂದ ಬಳಲುವವರಿಗೆ ಇರುವ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಪರಿಹಾರದಲ್ಲೊಂದು. ಯಾಕೆಂದರೆ, ಇದು ಮೂತ್ರದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೇ ದ್ರಾಕ್ಷಿ ಶ್ರೀಮಂತ ವಿಟಮಿನ್ ಸಿ ಅಂಶವನ್ನು ಹೊಂದಿದೆ, ಹಾಗಾಗಿ ಇದು ದೇಹದಲ್ಲಿ ಸಂಧಿವಾತಕ್ಕೆ ವಿರುದ್ದವಾಗಿರುವ ವಸ್ತುಗಳನ್ನು ದೇಹದಿಂದ ಹೊರಹಾಕಲು ಸೂಕ್ತ ಪರಿಹಾರವಾಗಿರುತ್ತದೆ.

ಸಾಸಿವೆ ಮತ್ತು ಟ್ರಿಟಿಕಾಂ ಪೌಡರ್
ಸಾಸಿವೆ ಮತ್ತು ಟ್ರಿಟಿಕಾಂ ಪೌಡರ್ ಮಿಶ್ರಣದೊಂದಿಗೆ ಅತ್ಯಂತ ನೋವಿರುವ ಜಾಗಕ್ಕೆ ಲೇಪಿಸಿಕೊಂಡರೆ ರಾತ್ರಿ ಬೆಳಗಾಗುವುದರೊಳಗೆ ನೋವಿನಿಂದ ಹೊರಬರಬಹುದು. ಹೊಟ್ಟೆಜಾಡಿಸುವ ಉಪ್ಪಿನ ಅಂಶವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿದರೂ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು.

ಬಾಳೆಹಣ್ಣು
ವಿಟಮಿನ್ ಸಿ ಬಾಳೆಹಣ್ಣಿನಲ್ಲಿ ಅಧಿಕವಾಗಿ ದೊರೆಯುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಕೀಲುನೋವುಗಳನ್ನು ನಿವಾರಿಸಲು ಸಹಾಯವಾಗುತ್ತದೆ. ಬಾಳೆಹಾಣ್ಣಿನಲ್ಲಿರುವ ಸಮೃದ್ಧ ಅಂಶಗಳು ದೇಹದಲ್ಲಿರುವ ಯೂರಿಕ್ ಆಮ್ಲದ ಸ್ಫಟಿಕಗಳನ್ನು ದುರ್ಬಲಗೊಳಿಸಿ ದ್ರವರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರಿಂದ ಸಂಧಿವಾತದ ನೋವು ನಿವಾರಣೆಯಾಗಲು ಸಹಾಯಮಾಡುತ್ತದೆ.

English summary

Quick Home Remedies For Gout

Gout is a disorder that occurs when uric acid levels soar inside the body. High levels of uric acid lead to uric acid crystallization or formation of tiny crystals that accumulate as lumps in the lining of the joints. Unusual metabolic process of monosodium urate can lead to the buildup of uric acid in the body. So, have a look at some of the quick home remedies for gout
X
Desktop Bottom Promotion