For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಅವಧಿಯಲ್ಲಿ ಕಾಡುವ ನೋವಿಗೆ ಕಾರಣವೇನು?

By Manjula Balaraj
|

ಮುಟ್ಟು ಅಥವಾ ಖುತುಚಕ್ರದ ಅವಧಿ ಮಹಿಳೆಯರಲ್ಲಿ ಕಾಣುವ ಪ್ರಕೃತಿದತ್ತವಾದ ವಿಧಾನ. ಈ ವೇಳೆ ಮಹಿಳೆಯರು ಅಪಾರ ನೋವು ಅನುಭವಿಸಿದರೂ, ಮುಟ್ಟು ಸಮಯಕ್ಕೆ ಸರಿಯಾಗಿ ಆಗಬೇಕಾಗಿರುವುದು ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಅತ್ಯವಶ್ಯಕ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ನಾನಾ ವಿಧದ ನೋವನ್ನು ಅನುಭವಿಸುತ್ತಾರೆ. ಇಂತಹ ಸಮಯದಲ್ಲಿ ಕೆಳ ಹೊಟ್ಟೆಯಲ್ಲಿ ನೋವುಂಟಾಗುವುದು ಸಾಮಾನ್ಯ. ಸಾಮಾನ್ಯವಾಗಿ ಮಾಸಿಕ ಮುಟ್ಟು ಆಗುವ ಮುಂಚೆ ಅಥವಾ ಮುಟ್ಟಾದ ನಂತರ ನೋವು ಕಂಡುಬರುತ್ತದೆ. ಮುಟ್ಟಿನ ನೋವನ್ನು ಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ಸೂಪರ್ ಫುಡ್

Pain During Periods: What It Means

ನೋವಿನ ತೀವ್ರತೆ ಮತ್ತು ಅದರ ರೀತಿ ಎರಡೂ ಭಿನ್ನವಾಗಿರುತ್ತದೆ, ಈ ನೋವು ಒಬ್ಬೊಬ್ಬರಲ್ಲಿ ಒಂದೊಂದು ತರಹ ಕಾಣಿಸಿಕೊಳ್ಳುತ್ತದೆ.ಕೆಲವರಿಗೆ ಚುಚ್ಚುವಂತಹ ನೋವಾದರೆ ಇನ್ನು ಕೆಲವರಿಗೆ ಎದೆ ಹಿಂಡುವಂತಹ ನೋವು ಅನುಭವಿಸಬೇಕಾಗುತ್ತದೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ನೋವು ಕಂಡು ಬರುತ್ತದೆ.

ಮುಟ್ಟಿನ ಸಮಯದಲ್ಲಿ ಸಣ್ಣಪುಟ್ಟ ನೋವು ಸಾಮಾನ್ಯವಾಗಿರುತ್ತದೆ. ಒಂದು ವೇಳೆ ನೋವಿನ ತೀವ್ರತೆ ಹೆಚ್ಚಿದ್ದ ಪಕ್ಷದಲ್ಲಿ ಔಷಧ ತೆಗೆದುಕೊಳ್ಳುವ ಅವಶ್ಯಕತೆ ಈ ಸಮಯದಲ್ಲಿ ಉಂಟಾಗಬಹುದು ಅಥವಾ ದೈನಂದಿನ ಚಟುವಟಿಕೆಯ ಕೆಲಸಗಳನ್ನು ಮಿತಿಯಾಗಿ ಮಾಡಿದರೆ ಈ ತೊಂದರೆ ಒಂದು ಹಂತಕ್ಕೆ ಕಂಟ್ರೋಲ್ ಆಗಬಹುದು.

ಇಂತಹ ಆರೋಗ್ಯ ಸ್ಥಿತಿಯನ್ನು ಡಿಸ್ಮೆನೇರಿಯಾ (ಮುಟ್ಟಿನ ಸಮಯದ ಒಂದು ತೀವ್ರ ತರಹದ ನೋವು) ಎಂದು ಕರೆಯಲಾಗುತ್ತದೆ. ಈ ತರಹದ ನೋವು ಸಾಧಾರಣವಾಗಿ ಏಳರಲ್ಲಿ ಒಂದು ಮಹಿಳೆಯರಲ್ಲಿ ಕಾಣಸಿಗುತ್ತದೆ.

ಈ ಅವಧಿಯಲ್ಲಿ ಉಂಟಾಗುವ ಮುಟ್ಟು ತೀವ್ರ ನೋವಿನಿಂದ ಕೂಡಿರುತ್ತದೆ ಇದನ್ನು ಎಂಡೊಮೆಟ್ರಿಯೊಸಿಸ್ ಎಂದು ಕರೆಯಲಾಗುತ್ತದೆ. ಇಂತಹ ಮುಟ್ಟಿನ ನೋವು ಪ್ರೋಸ್ಟಗ್ಲಾಂಡಿನ್ ಬಿಡುಗಡೆ ಮಾಡುವ ಸಮಯದಲ್ಲಿ ಉಂಟಾಗುತ್ತದೆ ಇದರಿಂದ ದೇಹದಲ್ಲಿ ಪ್ರಬಲವಾದ ಸಂಯೋಗವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಕೆಲವು ಮುಟ್ಟಿನ ನೋವು ಗರ್ಭಾಶಯದ ಸ್ನಾಯು ಕುಗ್ಗುವಿಕೆಯಿಂದ ಕೂಡ ಆಗುವ ಸಾಧ್ಯತೆಯಿದೆ. ಮುಟ್ಟಿನ ಸಮಯದ ನೋವಿನ ಜೊತೆಗೆ ವಾಂತಿ, ಸುಸ್ತು, ತಲೆನೋವು ಮತ್ತು ಬೇಧಿಯಂತಹ ಇತರ ರೋಗ ಲಕ್ಷಣಗಳು ಕಂಡುಬರಬಹುದು. ಅಷ್ಟೇ ಅಲ್ಲದೆ ಅತೀ ರಕ್ತಸ್ರಾವವಾಗುವುದರಿಂದಲೂ ಮುಟ್ಟಿನ ಸಮಯದಲ್ಲಿ ನೋವುಂಟಾಗಬಹುದು. ವಿಳಂಬವಾಗುತ್ತಿರುವ ಮುಟ್ಟಿನ ಸಮಸ್ಯೆಗೆ ಆಯುರ್ವೇದದ ಪರಿಹಾರ

ಮುಟ್ಟಿನ ಸಮಯದ ನೋವಿಗೆ ಅನೇಕ ರೀತಿಯ ಚಿಕಿತ್ಸೆ ಇರುತ್ತದೆ. ಮುಟ್ಟಿನ ನೋವು ದೇಹದಲ್ಲಿನ ಸಂಯುಕ್ತಗಳು ಮತ್ತು ಪ್ರೊ-ಇನ್ಫಮೇಟರಿ ಸಂಯುಕ್ತಗಳ ಅಸಮತೋಲನತೆ ಮತ್ತು ಉರಿಯೂತದ ಕಾರಣದಿಂದ ಉಂಟಾಗುತ್ತದೆ ಎಂದು ಸಾಬೀತಾಗಿದೆ. ಈ ವ್ಯತ್ಯಾಸವನ್ನು ಸರಿಪಡಿಸಲು ನೈಸರ್ಗಿಕ ರೀತಿಯ ಚಿಕಿತ್ಸೆಯ ಬಳಕೆ ಅತ್ಯುತ್ತಮ ಮಾರ್ಗವಾಗಿದೆ ಆಗಿದೆ. ಇದರಲ್ಲಿ ಒಮೆಗಾ -3 ಕೊಬ್ಬಿನ ಆಮ್ಲ, ಅತ್ಯುತ್ತಮ ಮೂಲ ಇದು ನಾರಗಸೆಯೆಣ್ಣೆಯಿಂದ ಕೂಡಿದ್ದಾಗಿದೆ.

ಇದಲ್ಲದೇ ನೈಸರ್ಗಿಕ ಪದಾರ್ಥಗಳಲ್ಲಿರುವ ವಸ್ತುಗಳು ಮುಟ್ಟಿನ ಸಮಯದಲ್ಲಾಗುವ ನೋವು ಅಥವಾ ವಿಟಮಿನ್ ಇ ಸಮಸ್ಯೆ ಇಂದಾಗುವ ನೋವನ್ನು ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಯಾಕೆಂದರೆ ಇದರಲ್ಲಿ ಮ್ಯಾಗ್ನೇಷಿಯಂ, ಜಿಂಕ್ ಮತ್ತು ವಿಟಮಿನ್ ಬಿ ಅಂಶಗಳು ಹೆಚ್ಚಾಗಿರುತ್ತದೆ. ಡಿಸ್ಮೆನೇರಿಯಾ ಸಮಸ್ಯೆಯಿಂದ ಬಳಲುವ ಶೇ. ತೊಂಬತ್ತರಷ್ಟು ಜನರಿಗೆ ಈ ನೈಸರ್ಗಿಕ ಪದಾರ್ಥ ಪರಿಹಾರ ನೀಡಿದೆ. ಋತುಚಕ್ರದಲ್ಲಿ ಏರುಪೇರು-ಮರೆಯದೇ ಈ ಟಿಪ್ಸ್ ಪಾಲಿಸಿ

ಉರಿಯೂತ ಸಮಸ್ಯೆ ತರದ ಲಸಿಕೆಗಳು ಕೂಡಾ ಮುಟ್ಟಿನ ಸಮಸ್ಯೆಗೆ ಪರಿಹಾರವಾಗಬಲ್ಲದು. ಇದರ ಜೊತೆಗೆ ಲಸಿಕೆಯಿಂದ ಹೊರತಾದ ಆಯ್ಕೆಯಿಂದ ಕೂಡಾ ಈ ಸಮಸ್ಯೆಯಿಂದ ಹೊರಬರಬಹುದು. ಅದರಲ್ಲಿ ಪ್ರಮುಖವಾಗಿ ಸೂಜಿಮಾಂಜು ಅಥವಾ ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಬಿಸಿಬಿಸಿಯಾಗಿ ಹೊಟ್ಟೆಯ ಭಾಗಕ್ಕೆ ಲೇಪನ ಮಾಡಿದರೆ ಈ ಮುಟ್ಟುನೋವು ಸಮಸ್ಯೆಯಿಂದ ಹೊರಬರಬಹುದು.

English summary

Pain During Periods: What It Means

Menstrual pain is a pain that occurs in the lower abdomen of women, usually either preceding the monthly menstruation period or accompanying menstruation. The pain can differ widely, both in severity and in kind, ranging from a sharp pain to a throbbing pain and sometimes a shooting pain, all typical in their own ways.
X
Desktop Bottom Promotion