For Quick Alerts
ALLOW NOTIFICATIONS  
For Daily Alerts

ಮೆದುಳು ಸದಾ ಚುರುಕಾಗಿರಲು, ಇಲ್ಲಿದೆ ಸರಳ ಟ್ರಿಕ್ಸ್

By
|

ಭೂಮಿ ಮೇಲಿರುವ ಪ್ರತಿಯೊಬ್ಬರು ತಾನು ತುಂಬಾ ಜಾಣನಾಗಿರಬೇಕೆಂದು ಬಯಸುವುದು ಸಹಜ. ಪ್ರತಿಯೊಬ್ಬರಿಗೂ ತಮ್ಮದೇ ಆದ ಜ್ಞಾಪಕ ಶಕ್ತಿ ಮತ್ತು ಬುದ್ಧಿಶಕ್ತಿ ಇರುತ್ತದೆ. ಇದನ್ನು ಬಳಸಿಕೊಂಡು ಅವರು ತಮ್ಮ ಕ್ಷೇತ್ರದಲ್ಲಿ ಮುಂದೆ ಸಾಗುತ್ತಾ ಇರುತ್ತಾರೆ.

ಹುಟ್ಟುವಾಗಲೇ ಒಬ್ಬೊಬ್ಬರಿಗೆ ಒಂದೊಂದು ಮಟ್ಟದ ಐಕ್ಯೂ ಇರುತ್ತದೆ. ಇದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಮೆದುಳನ್ನು ತೀಕ್ಷ್ಣಗೊಳಿಸಬಹುದಾಗಿದೆ. ಮೆದುಳಿನ ಕೋಶಗಳು ಉದ್ದೀಪನೆಗೊಂಡು ಮೆದುಳು ತೀಕ್ಷ್ಣವಾಗಲು ಯಾವುದಾದರೂ ಹೊಸ ಆಟ, ಹೊಸದಾದ ಹವ್ಯಾಸ ಅಥವಾ ಹೊಸ ಭಾಷೆಯನ್ನು ಕಲಿಯಲು ಆರಂಭಿಸಿ.

Natural Ways To Boost Your Brain Power....

ಏರೋಬಿಕ್ಸ್ ವ್ಯಾಯಾಮ ಮಾಡುವುದರಿಂದ ಮೆದುಳನ್ನು ತೀಕ್ಷ್ಣವಾಗಿಡಬಹುದಾಗಿದೆ. ನಡೆಯುವುದರಿಂದ ಹೆಚ್ಚಿನ ಆಮ್ಲಜನಕದ ಸೇವನೆಯಾಗುತ್ತದೆ. ಮೆದುಳಿಗೆ ಎಷ್ಟು ಆಮ್ಲಜನಕ ಸಿಗುತ್ತದೆಯಾ ಅಷ್ಟು ಒಳ್ಳೆಯದು. ಮೆದುಳು ಎಂಬ ಬ್ರಹ್ಮಾಂಡದಲ್ಲಿ ಅಚ್ಚರಿಯ ಸಂಗತಿ

ನಡೆಯುವಂತಹ ಸರಳ ವ್ಯಾಯಾಮ ಮಾಡುವುದರಿಂದ ನೀವು ಶಕ್ತಿ ಪಡೆದಂತೆ ಆಗುತ್ತೀರಿ ಮತ್ತು ವಿವಿಧ ಕೆಲಸಗಳನ್ನು ಮಾಡಲು ಶಕ್ತರಾಗುತ್ತೀರಿ. ಇದರಿಂದ ಆಯಾಸ ಮತ್ತು ಉದಾಸೀನ ಕಡಿಮೆಯಾಗುವುದು. ಮುಂಜಾನೆ ವೇಳೆ ನಡೆದರೆ ಮೆದುಳು ತುಂಬಾ ಚುರುಕಾಗಿರುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ಪ್ರತಿನಿತ್ಯ ನಿಮ್ಮ ಮೆದುಳಿಗೆ ಸುಮಾರು ಎಂಟು ಗಂಟೆಗಳ ಕಾಲ ವಿಶ್ರಾಂತಿಯನ್ನು ನೀಡಬೇಕು. ಇದರಿಂದ ಮೆದುಳು ಪುನರುಜ್ಜೀನಗೊಳ್ಳುವುದು. ಪ್ರತಿದಿನವೂ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ಮೆದುಳು ಹಾನಿಯಾಗಿರುವ ಕೋಶ ಮತ್ತು ಅಂಗಾಂಶಗಳನ್ನು ಸರಿಪಡಿಸುವುದು. ಇದರಿಂದ ಮೆದುಳಿನ ಸಂಪೂರ್ಣ ಪ್ರದರ್ಶನವು ಉತ್ತಮವಾಗುತ್ತದೆ.

ಮೆದುಳಿನ ಶಕ್ತಿಯನ್ನು ಹೆಚ್ಚಿಸಬೇಕೆಂದರೆ ಕಾರ್ಬೋಹೈಡ್ರೆಟ್ಸ್, ಪ್ರೋಟೀನ್, ನಾರಿನಾಂಶ ಮತ್ತು ಕೊಬ್ಬು ಇರುವ ಸಮತೋಲಿನ ಆಹಾರ ಸೇವನೆ ಮಾಡಿ. ಬೆಳಿಗ್ಗಿನ ಉಪಹಾರ ಸೇರಿದಂತೆ ಊಟ ಮಾಡದೆ ಇರಬೇಡಿ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಏಕಪ್ರಕಾರದ ಶಕ್ತಿ ಬೇಕಾಗುತ್ತದೆ. ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?

ಪಥ್ಯ ಮಾಡುವವರು, ಉಪಹಾರ ಮತ್ತು ಊಟ ತ್ಯಜಿಸುವವರ ಮೆದುಳಿನ ಶಕ್ತಿ ಕಡಿಮೆಯಾಗಿ ಗೊಂದಲ ನಿರ್ಮಾಣವಾಗುವುದು. ಮೆದುಳು ತೀಕ್ಷ್ಣವಾಗಿ ಕಾರ್ಯನಿರ್ವಹಿಸಲು ನಿಯಮಿತವಾಗಿ ಆಹಾರ ಸೇವಿಸಿ. ಆಹಾರ ಕ್ರಮದಲ್ಲಿ ಮೀನನ್ನು ಸೇರಿಸಿದರೆ ತುಂಬಾ ಒಳ್ಳೆಯದು. ಮೀನಿನಲ್ಲಿ ಒಮೆಗಾ3 ಕೊಬ್ಬಿನ ಆಮ್ಲವಿದೆ. ಇದು ಮೆದುಳಿನ ಕ್ರಿಯೆಯನ್ನು ಸರಾಗವಾಗಿಸುತ್ತದೆ.

ಖಿನ್ನತೆಯಿಂದ ಬಳಲುವ ಜನರಿಗೆ ಮೀನು ಒಳ್ಳೆಯ ಆಹಾರ. ಧೂಮಪಾನ ಮತ್ತು ಸಕ್ಕರೆಯುಕ್ತ ಆಹಾರಗಳಿಂದ ದೂರವಿರಿ. ಇದು ಮೆದುಳಿಗೆ ಬೇಗನೆ ವಯಸ್ಸಾಗುವಂತೆ ಮಾಡುತ್ತದೆ. ಮೆದುಳನ್ನು ತೀಕ್ಷ್ಣವಾಗಿಸಲು ಸುಡೊಕು, ಪದಬಂಧದಂತಹ ಮೆದುಳಿಗೆ ಕೆಲಸಕೊಡುವ ವ್ಯಾಯಮ ಮಾಡಿ. ಪ್ರತಿದಿನವೂ ಏನಾದರೂ ಹೊಸತನ್ನು ಕಲಿಯಲು ಪ್ರಯತ್ನಿಸಿ. ಮೆದುಳಿಗೆ ವಿಶ್ರಾಂತಿ ನೀಡಿ ಧ್ಯಾನ ಮಾಡಿ ಮತ್ತು ಧನಾತ್ಮಕವಾಗಿ ಯೋಚಿಸಿ.

English summary

Natural Ways To Boost Your Brain Power....

We all want to be more sensible, wiser, smarter, a fast thinker and a great decision maker. But we are all born with a specific degree of IQ. This is something you can do nothing about. However, you can find means and methods to better yourself, optimize your brain power and keep your mind sharp.
X
Desktop Bottom Promotion