ಇದಪ್ಪಾ ಈರುಳ್ಳಿಯ ಜಬರ್ದಸ್ತ್ ಪವರ್! ತಪ್ಪದೇ ಓದಿ...

By: manu
Subscribe to Boldsky

ಭಾರತೀಯ ಅಡುಗೆಗಳಲ್ಲಿ ಈರುಳ್ಳಿ ಇಲ್ಲದೆ ಇದ್ದರೆ ಅದಕ್ಕೊಂದು ರುಚಿಯೇ ಇರುವುದಿಲ್ಲ. ಹೆಚ್ಚಿನವರು ಈರುಳ್ಳಿ ಇಲ್ಲದೆ ಅಡುಗೆ ಮಾಡಲು ಹೋಗುವುದಿಲ್ಲ. ಇಂತಹ ಈರುಳ್ಳಿ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ

ಹಲವಾರು ರೀತಿಯ ರೋಗಗಳನ್ನು ನಿವಾರಿಸುವುದು ಹಾಗೂ ರೋಗ ಬರದಂತೆ ತಡೆಯುವುದು. ಆದರೆ ಹೆಚ್ಚಿನವರಿಗೆ ಇದರ ಘಾಟು ಹಿಡಿಸುವುದಿಲ್ಲ. ಇದರಿಂದ ಈರುಳ್ಳಿಯಿಂದ ದೂರವೇ ಉಳಿಯುತ್ತಾರೆ. ವಿಶ್ವದೆಲ್ಲೆಡೆಯಲ್ಲಿ ನಡೆಸಿರುವಂತಹ ಹಲವಾರು ಸಂಶೋಧನೆಗಳ ಪ್ರಕಾರ ಈರುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದನ್ನು ಬಳಸುವುದರಿಂದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಈರುಳ್ಳಿಯಲ್ಲಿ ಸಲ್ಫರ್ ಅಂಶವು ಸಮೃದ್ಧವಾಗಿದೆ. ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ದೇಹಕ್ಕೆ ಒಳ್ಳೆಯದು. ಹಲವಾರು ರೀತಿಯ ಸೋಂಕನ್ನು ನಿವಾರಣೆ ಮಾಡಲು ಹಿಂದಿನಿಂದಲೂ ಈರುಳ್ಳಿ ಬಳಕೆ ಮಾಡಲಾಗುತ್ತಿದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ

ವೃತ್ತಾಕಾರವಾಗಿ ತುಂಡರಿಸಿದ ಒಂದು ತುಂಡು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಪಾದದ ಕೆಳಗಿನ ಭಾಗಕ್ಕೆ ಕಟ್ಟಿಕೊಂಡು ಕಾಲುಗವಚ ಹಾಕಿಕೊಳ್ಳಿ. ಯಾವುದೇ ಬಟ್ಟೆ ಅಥವಾ ಪ್ಲಾಸ್ಟಿಕ್‌ನಿಂದ ಈರುಳ್ಳಿಯನ್ನು ಕಟ್ಟಿ. ಅಂದು ಪ್ಲೇಗ್ ರೋಗ ಹರಡಿದ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಈ ರೀತಿ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ವಿಷಕಾರಿ ಅಂಶವು ದೇಹದೊಳಗೆ ಪ್ರವೇಶಿಸದಂತೆ ತಡೆಯಬಹುದಾಗಿದೆ. ವೃತ್ತಾಕಾರವಾಗಿ ತುಂಡು ಮಾಡಿದ ಈರುಳ್ಳಿಯ ಲಾಭದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.....  

ಶೀತ ನಿವಾರಿಸುವುದು

ಶೀತ ನಿವಾರಿಸುವುದು

ಶೀತದಿಂದ ಬಳಲುತ್ತಾ ಇದ್ದರೆ ಈ ವಿಧಾನವು ನಿಮಗೆ ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ವೃತ್ತಾಕಾರದ ಈರುಳ್ಳಿ ತುಂಡನ್ನು ಕತ್ತರಿಸಿಕೊಂಡು ಅದನ್ನು ಪಾದದ ಕೆಳಗ್ಗೆ ಕಟ್ಟಿಕೊಂಡು ಕಾಲುಗವಚ ಹಾಕಿಕೊಳ್ಳಿ. ಇದರಿಂದ ಶೀತ ಕಡಿಮೆಯಾಗುವುದು.

ಕಿವಿ ನೋವು

ಕಿವಿ ನೋವು

ಕಿವಿ ನೋವು ಇದ್ದರೆ ಈರುಳ್ಳಿಯ ತುಂಡನ್ನು ಪಾದದ ಕೆಳಕ್ಕೆ ರಾತ್ರಿ ವೇಳೆ ಕಟ್ಟಿಕೊಂಡರೆ ಅದರಿಂದ ನೋವು ಶಮನವಾಗುವುದು.

ಆರೋಗ್ಯದ ಲವಲವಿಕೆಗೆ....

ಆರೋಗ್ಯದ ಲವಲವಿಕೆಗೆ....

ಪಾದದ ಕೆಳಭಾಗದಲ್ಲಿ ಈರುಳ್ಳಿ ತುಂಡನ್ನು ಕಟ್ಟಿಕೊಂಡು ಮಲಗುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ ಮತ್ತು ಹೊಟ್ಟೆಯ ಆಮ್ಲವನ್ನು ತೆಗೆಯುವುದು. ಇದರಿಂದ ದೇಹಕ್ಕೆ ಉಲ್ಲಾಸ ಸಿಗುವುದು.

ಊದಿಕೊಂಡ ಗ್ರಂಥಿಗಳಿಗೆ

ಊದಿಕೊಂಡ ಗ್ರಂಥಿಗಳಿಗೆ

ಗ್ರಂಥಿಗಳು ಊದಿಕೊಂಡಿದ್ದರೆ ಆಗ ಈರುಳ್ಳಿ ಥೆರಪಿಯನ್ನು ಬಳಸಿ. ರಾತ್ರಿ ಪಾದದ ಅಡಿಗೆ ಈರುಳ್ಳಿ ತುಂಡನ್ನು ಕಟ್ಟಿಕೊಂಡರೆ ಮರುದಿನ ಊದಿಕೊಂಡಿರುವ ಗ್ರಂಥಿಯು ಮೊದಲಿನ ಸ್ಥಿತಿಗೆ ಬರುವುದು.

ಕಾಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕಾಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕೆಲವರಿಗೆ ಪಾದದಲ್ಲಿ ವಿಪರೀತವಾದ ಬೆವರು ಹರಿದು ದುರ್ವಾಸನೆ ಶೀಘ್ರವೇ ಉಂಟಾಗುತ್ತದೆ. ಈ ವಿಧಾನದಿಂದ ಪಾದದ ದುರ್ವಾಸನೆ ಶೀಘ್ರವೇ ದೂರವಾಗುತ್ತದೆ.

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

ಹೊಟ್ಟೆಯಲ್ಲಿ ತೊಂದರೆ ಇದ್ದರೆ ಈರುಳ್ಳಿಯ ಭಾಗವನ್ನು ಕಾಲುಚೀಲದ ನಟ್ಟನಡುವೆ ಇಟ್ಟು ಮಲಗುವುದರಿಂದ ಹೊಟ್ಟೇಯ ಸೋಂಕು ನಿವಾರಣೆಯಾಗುತ್ತದೆ. ಅಲ್ಲದೇ ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸಲು ನೆರವಾಗುತ್ತದೆ.

 
English summary

magical cure with sliced onion cold toxins

Onion is one of the must have garnishing ingredients in every Indian kitchen. Well, onions are not just flavour enhancers for your culinary delights, these also help to cure several diseases as well.The pungent smell that onions emit might not be too appealing for all, but once you learn the health benefits that come along with it, probably you will ignore the smell and take it up for its benefits.
Story first published: Friday, December 2, 2016, 8:02 [IST]
Subscribe Newsletter