For Quick Alerts
ALLOW NOTIFICATIONS  
For Daily Alerts

ವಿಶ್ವ ಮೊಟ್ಟೆ ದಿನ 2019: ದಿನಕ್ಕೊಂದು ಮೊಟ್ಟೆ ತಿನ್ನುವವರು ಓದಲೇಬೇಕಾದ ಲೇಖನವಿದು

ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ವೈದ್ಯರು ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳನ್ನು ಕಡಿಮೆಗೊಳಿಸಲು ಸೂಚನೆ ನೀಡುತ್ತಾರೆ. ಈ ಆಹಾರಗಳಲ್ಲಿ ಮೊಟ್ಟೆಯೂ ಒಂದು.

By Manu
|

ಇಂದು ವಿಶ್ವ ಮೊಟ್ಟೆ ದಿನ. ಪ್ರತಿ ವರ್ಷ ಅಕ್ಟೋಬರ್ 2ನೇ ಶುಕ್ರವಾರ ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ. 1996ರಲ್ಲಿ ಅಂತಾರಾಷ್ಟ್ರೀಯ ಮೊಟ್ಟೆ ಆಯೋಗವು ಮೊಟ್ಟೆಯ ಆರೋಗ್ಯಕಾರಿ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕುರಿತು ವಿಶ್ವ ಮೊಟ್ಟೆ ದಿನವನ್ನು ಆಚರಿಸಲು ನಿರ್ಧರಿಸಿತು.
ಪ್ರತಿ ವರ್ಷ ಒಂದೊಂದು ವಿಷಯಧಾರಿಸಿ ಆಚರಿಸುವ ಮೊಟ್ಟೆ ದಿನವನ್ನು 2019ರಲ್ಲಿ "ಇಂದು ಮತ್ತು ನಿತ್ಯ ನಿಮ್ಮ ಮೊಟ್ಟೆಯನ್ನು ಸೇವಿಸಿ'' ಎಂಬ ಥೀಮ್ ನಲ್ಲಿ ಆಚರಿಸಲಾಗುತ್ತಿದೆ.

world egg day

ವಿಶ್ವ ಮೊಟ್ಟೆ ದಿನದ ವಿಶೇಷ ಮೊಟ್ಟೆ ಸೇವನೆ ಕುರಿತು ಇರುವ ತಪ್ಪು ತಿಳಿವಳಿಕೆಗಳು, ಇದರ ನಿಯಮಿತ ಸೇವನೆಯಿಂದಾಗುವ ಲಾಭಗಳ ಬಗ್ಗೆ ಮುಂದೆ ಲೇಖನದಲ್ಲಿ ತಿಳಿಯೋಣ.

ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ವೈದ್ಯರು ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳನ್ನು ಕಡಿಮೆಗೊಳಿಸಲು ಸೂಚನೆ ನೀಡುತ್ತಾರೆ. ಈ ಆಹಾರಗಳಲ್ಲಿ ಮೊಟ್ಟೆಯೂ ಒಂದು. ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ ಎಂಬ ಧ್ಯೇಯವಾಕ್ಯ ಕುಕ್ಕುಟ ನಿಗಮವೇ ಹೊರಡಿಸಿ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದಾದರೂ ಮೊಟ್ಟೆಯನ್ನು ಸೇವಿಸುವಂತೆ ಆಗ್ರಹಿಸಿದೆ. ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

ಆದರೆ ಪ್ರತಿದಿನವೂ ಮೊಟ್ಟೆಯನ್ನು ತಿನ್ನುವವರ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದನ್ನು ನೋಡಿದರೆ ಮಾತ್ರ ಈ ಹೇಳಿಕೆ ಉತ್ಪ್ರೇಕ್ಷೆ ಎನಿಸುತ್ತದೆ. ಆದರೆ ಉತ್ತಮ ಆರೋಗ್ಯ ಮತ್ತು ದಾರ್ಢ್ಯತೆ ಹೊಂದರೆ ದಿನಕ್ಕೆ ಒಂದಾದರೂ ಮೊಟ್ಟೆಯನ್ನು ಸೇವಿಸಲೇಬೇಕು ಎಂದು ವೈದ್ಯರು ಹೇಳುವುದು ವಿಪರ್ಯಾಸಕ್ಕೆ ಎಡೆಮಾಡುತ್ತದೆ. ಹಾಗಾದರೆ ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು? 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

ಪ್ರತಿದಿನ ಮೊಟ್ಟೆ ತಿನ್ನುವುದು ಆರೋಗ್ಯಕರವೋ ಅಲ್ಲವೋ? ಅಲ್ಲವೆಂದಾದರೆ ಎಷ್ಟು ದಿನಕ್ಕೊಂದು ಮೊಟ್ಟೆ ಸೇವಿಸಬಹುದು? ಈ ಪ್ರಶ್ನೆಗಳಿಗೆ ತಜ್ಞರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಇಂದು ಚರ್ಚಿಸೋಣ. ವಾಸ್ತವವಾಗಿ ಮೊಟ್ಟೆಯ ಬಗ್ಗೆ ನಿಜವಾದ ತಿಳಿವಳಿಕೆಗಿಂತಲೂ ತಪ್ಪು ತಿಳಿವಳಿಕೆಯೇ ಹೆಚ್ಚು....

ಕೊಲೆಸ್ಟ್ರಾಲ್ ಇದೆ ಎನ್ನುವುದು ಸತ್ಯ

ಕೊಲೆಸ್ಟ್ರಾಲ್ ಇದೆ ಎನ್ನುವುದು ಸತ್ಯ

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ಎನ್ನುವುದು ಸತ್ಯ. ಒಂದು ಮೊಟ್ಟೆಯಲ್ಲಿ ಸುಮಾರು 200 ml ನಷ್ಟು ಕೊಲೆಸ್ಟ್ರಾಲ್ ಇದೆ. ಆದರೆ ನಮಗೆ ಪ್ರತಿದಿನ 350 ml ಕೊಲೆಸ್ಟ್ರಾಲ್ ಬೇಕು. ಆದ್ದರಿಂದ ದಿನಕ್ಕೆ ಎರಡು ಮೊಟ್ಟೆ ಸೇವಿಸಿದರೂ ಅಗತ್ಯ ಪ್ರಮಾಣಕ್ಕಿಂತ ಕೊಂಚ ಹೆಚ್ಚು ಕೊಲೆಸ್ಟ್ರಾಲ್ ಲಭ್ಯವಾಗುತ್ತದೆ.

ಕೊಲೆಸ್ಟ್ರಾಲ್ ಇದೆ ಎನ್ನುವುದು ಸತ್ಯ

ಕೊಲೆಸ್ಟ್ರಾಲ್ ಇದೆ ಎನ್ನುವುದು ಸತ್ಯ

ಆದರೆ ಇದೇ ಕಾರಣಕ್ಕೆ ಮೊಟ್ಟೆಯಿಂದ ಸಿಗುವ ಇತರ ಉತ್ತಮ ಗುಣಗಳನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಈ ಉತ್ತಮ ಗುಣಗಳು ಈ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಸೇವಿಸಿದರೂ ತೊಂದರೆಯಿಲ್ಲ ಎಂಬ ತೀರ್ಮಾನಕ್ಕೆ ಬರಲು ಕಾರಣವಾಗುತ್ತವೆ.

ಸಂಶೋಧನೆಯ ಪ್ರಕಾರ

ಸಂಶೋಧನೆಯ ಪ್ರಕಾರ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಪ್ರತಿದಿನ ಒಂದು ಮೊಟ್ಟೆ ಸೇವಿಸಿದರವ ಹೃದಯ ಮತ್ತು ಹೃದಯದಿಂದ ಹೊರಡುವ ಮುಖ್ಯ ನರಗಳ ತೊಂದರೆಗಳಿಗೂ ಮೊಟ್ಟೆಯ ಸೇವನೆಗೂ ಯಾವುದೇ ಸಂಬಂಧವಿಲ್ಲ. ಕೊಲೆಸ್ಟ್ರಾಲ್ ಅಂದರೆ ಇದರಲ್ಲಿ ಎಲ್ಲವೂ ಕೆಟ್ಟ ಕೊಲೆಸ್ಟ್ರಾಲ್ ಆಗಬೇಕಾಗಿಲ್ಲ.

ಸಂಶೋಧನೆಯ ಪ್ರಕಾರ

ಸಂಶೋಧನೆಯ ಪ್ರಕಾರ

ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಸಹಾ ಇದೆ. ಆದ್ದರಿಂದ ಇತರ ಆಹಾರಗಳ ಮೂಲಕ ಆಗಮಿಸಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಮೊಟ್ಟೆಯ ಕೊಲೆಸ್ಟ್ರಾಲ್‌ನ ಒಟ್ಟು ಪ್ರಮಾಣ ಮಿತಿ ಮೀರದಿದ್ದರೆ ಸರಿ.

ಯಾರೂ ಏನೇ ಹೇಳಿದರೂ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು

ಯಾರೂ ಏನೇ ಹೇಳಿದರೂ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು

ಮೊಟ್ಟೆಯ ಸೇವನೆಯಿಂದ ಉತ್ತಮ ಪ್ರಮಾಣದ ವಿವಿಧ ಪೋಷಕಾಂಶಗಳೂ, ಪ್ರೋಟೀನುಗಳೂ ಸತು ಮತು ಕೊಲೈನ್ ಎಂಬ ಪೋಷಕಾಂಶವೂ ಲಭ್ಯವಾಗುತ್ತದೆ. ಇದು ದಿನದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಮೊಟ್ಟೆಯನ್ನು ಅತಿ ಕಡಿಮೆ ಸಮಯದಲ್ಲಿ ಸಿದ್ಧಪಡಿಸಲು ಸಾಧ್ಯವಿರುವ ಕಾರಣ ಹೆಚ್ಚಿನ ಜನರ ಮೆಚ್ಚಿನ ಆಯ್ಕೆಯೂ ಆಗಿದೆ.

ತಜ್ಞರ ಪ್ರಕಾರ

ತಜ್ಞರ ಪ್ರಕಾರ

ತಜ್ಞರ ಪ್ರಕಾರ ಒಂದು ವಾರದಲ್ಲಿ ಆರರಿಂದ ಏಳು ಮೊಟ್ಟೆಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಂಬಂಧಿತ ತೊಂದರೆ ಎದುರಾಗುವುದಿಲ್ಲ. ಅಂದರೆ ಹೆಚ್ಚೂ ಕಡಿಮೆ ದಿನಕ್ಕೊಂದು ಮೊಟ್ಟೆ ಸಾಕು. ಒಂದು ವೇಳೆ ನಿಮಗೆ ಹೃದಯ ಸಂಬಂಧಿ ತೊಂದರೆ ಇದ್ದರೆ ಈ ಪ್ರಮಾಣವನ್ನು ವಾರಕ್ಕೆ ನಾಲ್ಕಕ್ಕಿಳಿಸಬೇಕು.

ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ

ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ

ಮೊಟ್ಟೆಯನ್ನು ಯಾವ ರೀತಿಯಾಗಿ ಬೇಯಿಸುತ್ತೀರಿ ಎಂಬುದೂ ಮುಖ್ಯ. ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ. ಆದರೆ ಹಳದಿಭಾಗ ಕಪ್ಪಾಗದಷ್ಟು ಮಾತ್ರವೇ ಬೇಯಿಸಿದ ಮೊಟ್ಟೆ ಆರೋಗ್ಯಕರವಾಗಿದ್ದು ದಿನಕ್ಕೊಂದು ಸೇವಿಸಬಹುದಾಗಿದೆ.

ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ

ಹುರಿದ ಮೊಟ್ಟೆ ಹೃದಯಕ್ಕೆ ಉತ್ತಮವಲ್ಲ

ನಿಮ್ಮ ದಿನದ ಇತರ ಆಹಾರಗಳಲ್ಲಿ ಮಾಂಸ ಮತ್ತು ಇತರ ಅಧಿಕ ಪೌಷ್ಟಿಕಾಂಶವುಳ್ಳ ಆಹಾರಗಳು ಇರದ ಹೊರತಾಗಿ ಟ್ರಾನ್ಸ್ ಫ್ಯಾಟ್ ಹಾಗೂ ಕ್ಯಾಲೋರಿಗಳು ಹೆಚ್ಚಿರುವ ಮೊಟ್ಟೆಯನ್ನು ದಿನಕ್ಕೊಂದರಂತೆ ಸುರಕ್ಷಿತವಾಗಿ ಸೇವಿಸಬಹುದು.

ಮೊಟ್ಟೆಯ ಹಳದಿಭಾಗ....

ಮೊಟ್ಟೆಯ ಹಳದಿಭಾಗ....

ಒಂದು ವೇಳೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇದೆ ಎಂದಾದಲ್ಲಿ ಮೊಟ್ಟೆಯ ಹಳದಿಭಾಗವನ್ನು ನಿವಾರಿಸಿ ಕೇವಲ ಬಿಳಿಭಾಗವನ್ನು ಮಾತ್ರ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ.

English summary

Is it OK to eat eggs every day?

You must have heard people tell you that eating too many eggs can lead to a rise in your blood cholesterol level. The reverse point of view that you must eat one egg every day to remain healthy is also equally popular. So what is the reality when it comes to eggs? It is healthy to eat eggs every day or not? Actually, eggs are one of the most misunderstood foods in the world.
X
Desktop Bottom Promotion