For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಜೀವನ ಶೈಲಿಗೆ ಮಾನಸಿಕ ಆರೋಗ್ಯವೂ ಅತ್ಯಗತ್ಯ

By Hemanth
|

ನಾವು ಬದುಕುತ್ತಿರುವ ಸಮಾಜದಲ್ಲಿ ಘನತೆ, ಗೌರವವನ್ನು ಕಾಪಾಡಿಕೊಂಡು ಇರಬೇಕೆಂದರೆ ಆಗ ಮಾನಸಿಕ ಆರೋಗ್ಯವು ತುಂಬಾ ಮುಖ್ಯವಾಗಿರುತ್ತದೆ. ದೈಹಿಕ ಆರೋಗ್ಯವಿದ್ದು, ಮಾನಸಿನ ಆರೋಗ್ಯವಿಲ್ಲದೆ ಇದ್ದರೆ ಅದರಿಂದ ಯಾವುದೇ ಪ್ರಯೋಜವಿಲ್ಲ.

ಮಾನಸಿಕ ಆರೋಗ್ಯವಿಲ್ಲದೆ ಇರುವಂತಹ ವ್ಯಕ್ತಿಯನ್ನು ಸಮಾಜವು ಬೇರೆಯೇ ದೃಷ್ಟಿಯಿಂದ ನೋಡುತ್ತದೆ. ದೇಹದಂತೆ ಮನಸ್ಸು ಕೂಡ ಮುಖ್ಯ. ಮಾನಸಿಕವಾಗಿ ಯಾವುದೇ ಸಮಸ್ಯೆ ಎದುರಾಗುವ ತನಕ ನಾವು ಇದರ ಬಗ್ಗೆ ಗಮನಹರಿಸುವುದೇ ಇಲ್ಲ. ತೀವ್ರ ಮಾನಸಿಕ ಒತ್ತಡವನ್ನು ಹೊರದಬ್ಬುವ 10 ಮಸಾಜ್

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾದಾಗ ತಕ್ಷಣ ನಾವು ಅದರ ಬಗ್ಗೆ ಗಮನಹರಿಸುತ್ತೇವೆ. ನಾವು ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ಸಂದರ್ಭದಲ್ಲಿ ಮಾನಸಿಕ ಆರೋಗ್ಯವನ್ನು ನಾಶ ಮಾಡುತ್ತೇವೆ.

How We Sabotage Our Mental Health

ಮಾನಸಿಕ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವಂತಹ ಸಂದರ್ಭಗಳು ಯಾವುದು ಎಂದು ತಿಳಿದುಕೊಂಡು ಅದನ್ನು ಸರಿಪಡಿಸಿಕೊಂಡರೆ ಮಾನಸಿಕವಾಗಿ ನಾವು ಸದೃಢರಾಗಿರಬಹುದು. ಇದರ ಬಗ್ಗೆ ತಿಳಿಯಿರಿ.

ನಿಯಮಿತವಾಗಿ ವ್ಯಾಯಮ ಮಾಡದೆ ಇರುವಾಗ ನಾವು ಮಾನಸಿಕ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತೇವೆ. ವ್ಯಾಯಾಮ ಮಾಡುವುದರಿಂದ ನಾವು ಫಿಟ್ ಆಗಿರಬಹುದು ಮತ್ತು ವ್ಯಾಯಾಮದಿಂದ ಸಂತಸದ ಹಾರ್ಮೋನು ಸ್ರವಿಸುವುದು. ಇದರಿಂದ ಹೆಚ್ಚು ಸಮಯ ಸಂತಸದಿಂದ ಇರಬಹುದು. ವ್ಯಾಯಾಮದಿಂದ ಆತಂಕ ಮತ್ತು ಖಿನ್ನತೆ ದೂರವಾಗುತ್ತದೆ.

ಯಾವಾಗಲೂ ಗಲಿಬಿಲಿಯಲ್ಲಿ ಜೀವನ ಸಾಗಿಸುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದರಿಂದ ಚಡಪಡಿಕೆ, ಆತಂಕ, ಖಿನ್ನತೆ ಉಂಟಾಗಬಹುದು. ಗಲಿಬಿಲಿ ಉಂಟುಮಾಡುವಂತಹ ಯಾವುದೇ ವಿಷಯದಲ್ಲಿ ಪಾಲ್ಗೊಳ್ಳಬೇಡಿ ಮತ್ತು ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ.

ಅದರಲ್ಲೂ ನಿದ್ರೆ ಕೆಟ್ಟರೆ ಅದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಕೆಡುವುದು. ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಿಕೊಳ್ಳಲು ಸರಿಯಾಗಿ ನಿದ್ರೆ ಮಾಡಿ.

ಮದ್ಯಪಾನ ದೇಹಕ್ಕೆ ಹಾನಿಕಾರ ಎಂದು ತಿಳಿದರೂ ಕುಡಿಯುವವರು ಇದ್ದಾರೆ. ಮದ್ಯಪಾನವು ದೇಹದ ಮಾತ್ರವಲ್ಲದೆ ಮನಸ್ಸಿನ ಆರೋಗ್ಯವನ್ನು ಕೆಡಿಸುವುದು. ಆಲ್ಕೋಹಾಲ್ ನಿಮ್ಮ ನರ ವ್ಯವಸ್ಥೆಯನ್ನು ಕುಗ್ಗಿಸುತ್ತದೆ, ನಿಮ್ಮನ್ನು ನಿಧಾನವಾಗಿಸುತ್ತದೆ ಮತ್ತು ಮನಸ್ಥಿತಿಯನ್ನು ಕುಗ್ಗಿಸುತ್ತದೆ.

ಯಾವಾಗಲೂ ಮನೆಯ ಒಳಗಡೆ ಕುಳಿತಿರುವುದರಿಂದ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ನಿಮ್ಮ ದೇಹಕ್ಕೆ ಸಿಗುವುದಿಲ್ಲ. ಇದರಿಂದ ಖಿನ್ನತೆ ಆವರಿಸುತ್ತದೆ. ಮಾನಸಿಕವಾಗಿ ಸ್ವಸ್ಥರಾಗಿರಲು ಸೂರ್ಯನ ಬೆಳಕಿನಲ್ಲಿ ಒಂದು ಸುತ್ತು ಹಾಕಿ.

ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಅತಿಯಾದ ಕೆಲಸದಿಂದ ಒತ್ತಡ, ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳು ಕಾಣಿಸಬಹುದು. ಯಾವಾಗಲೂ ಇತರರರಿಗೆ ಹೋಲಿಕೆ ಮಾಡಿಕೊಂಡು ನಿರಾಶವಾದಿಯಂತೆ ಯೋಚಿಸಬಾರದು. ಧನಾತ್ಮಕವಾಗಿ ಯೋಚಿಸಿ ಕೋಪವನ್ನು ನಿಯಂತ್ರಣದಲ್ಲಿಡಬೇಕು. ಧನಾತ್ಮಕ ಚಿಂತನೆ ಮಾಡುವುದು ಹೇಗೆ ?

English summary

How We Sabotage Our Mental Health

There are certain ways in which we sabotage our mental health knowingly or unknowingly. If we pay heed to these ways and avoid these ways and take control of our lives, we will definitely live a mentally sound life. Let us discuss them here.
Story first published: Wednesday, August 24, 2016, 19:52 [IST]
X
Desktop Bottom Promotion