For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್‌ನ್ನು ಹದ್ದು ಬಸ್ತಿನಲ್ಲಿಡುವ ಪುಟ್ಟ 'ನೆಲ್ಲಿಕಾಯಿ'

By manu
|

ಆರೋಗ್ಯ ತಪಾಸಣೆ ಮಾಡಿಸುವಾಗ ರಕ್ತಪರೀಕ್ಷೆಯಲ್ಲಿ ವೈದ್ಯರಿಗೆ ಹಲವಾರು ಮಾಹಿತಿಗಳು ಲಭ್ಯವಾಗುತ್ತವೆ. ಇದರಲ್ಲಿ ಮುಖ್ಯವಾದ ಮಾಹಿತಿ ಎಂದರೆ ರಕ್ತದಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ. ನಮ್ಮ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ (HDL-High density Lipoproteins) ಹೆಚ್ಚಿರಬೇಕು, ಕೆಟ್ಟ ಕೊಲೆಸ್ಟ್ರಾಲ್ (LDL-Low density Lipoproteins) ಕಡಿಮೆ ಇರಬೇಕು. ಇದರೊಂದಿಗೆ ಟ್ರೈಗ್ಲಿಸರೈಡ್ ಎಂಬ ಇನ್ನೊಂದು ಅಂಶ ನಡುವಿನಲ್ಲಿರಬೇಕು.

How to use amla for high cholesterol

ಇವು ಮೂರು ಅಂಶಗಳ ಒಟ್ಟು ಪ್ರಮಾಣ ಆರೋಗ್ಯವನ್ನು ನಿರ್ಧರಿಸುತ್ತದೆ. ಆದರೆ ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕ ಈ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್ ಡಿ ಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುನಿಟ್ಟು ಸಾಧಿಸಲು ಸಲಹೆ ಮಾಡುತ್ತಾರೆ. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಈ ಪ್ರಮಾಣ ಹೆಚ್ಚಿದ್ದಷ್ಟೂ ಹೃದಯಸಂಬಂಧಿರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು ವೇಳೆ ಇದು ಗರಿಷ್ಠ ಮಟ್ಟವನ್ನು ದಾಟಿದರೆ ವೈದ್ಯರು ಅನಿವಾರ್ಯವಾಗಿ ಪ್ರಬಲ ಔಷಧಿಗಳನ್ನೂ ಕಟ್ಟುನಿಟ್ಟಿನ ಅಹಾರ ನಿಯಂತ್ರಣ ಮತ್ತು ಕಡ್ಡಾಯ ವ್ಯಾಯಾಮವನ್ನೂ ಸೂಚಿಸುತ್ತಾರೆ. ಸುಖಮಯ ಜೀವನ ನಡೆಸುತ್ತಾ ಬಂದಿರುವವರಿಗೆ ಇವು ಕಬ್ಬಿಣದ ಕಡಲೆಗಳಾಗಿ ಪರಿಣಮಿಸುತ್ತವೆ. ಈ ಕಬ್ಬಿಣದ ಕಡಲೆ ಜಗಿಯುವ ಬದಲು ನಿಸರ್ಗ ನಮಗೆ ಮೆತ್ತಗಿರುವುದನ್ನು ಜಗಿಯಲು ನೀಡಿದೆ. ಅದೇ ತಿನ್ನಲು ಕೊಂಚ ಒಗರಾಗಿರುವ, ಆದರೆ ಬಳಿಕ ನೀರು ಕುಡಿದರೆ ಸಿಹಿಯಾಗಿರುವ ನೆಲ್ಲಿಕಾಯಿ.

ಚಿಕ್ಕಂದಿನಲ್ಲಿ ಈ ನೆಲ್ಲಿಕಾಯಿಯನ್ನು ಹುಡುಕಿಕೊಂಡು ಕಾಡು ಅಲೆಯುತ್ತಿದ್ದ ದಿನಗಳಲ್ಲಿ ಸಿಗುತ್ತಿದ್ದ ಚಿಕ್ಕಪುಟ್ಟ ನೆಲ್ಲಿಕಾಯಿಗಳೂ ನಮಗೆ ಅಮೋಘವೆನಿಸುತ್ತಿದ್ದವು. ಆದರೆ ಇಂದು ಅಷ್ಟೊಂದು ಕಷ್ಟಪಡಬೇಕಾಗಿಲ್ಲ. ಇದು ಅಂಗಡಿಗಳಲ್ಲಿ ತಾಜಾರೂಪದಲ್ಲಿಯೂ ಗ್ರಂಥಿಗೆ ಅಂಗಡಿಗಳಲ್ಲಿ ಪುಡಿಯ ರೂಪದಲ್ಲಿಯೂ ದೊರಕುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲ, ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಕಡೆಮೆಗೊಳಿಸಲು ಈ ನೆಲ್ಲಿಕಾಯಿಯ ಪೋಷಕಾಂಶಗಳು ಅತ್ಯುತ್ತಮವಾಗಿವೆ. ಇದರ ಆರೋಗ್ಯಕರ ಗುಣಗಳನ್ನು ಕಂಡುಕೊಂಡ ಆಯುರ್ವೇದ ನೂರಾರು ವರ್ಷಗಳಿಂದ ಔಷದಿಯ ರೂಪದಲ್ಲಿ ಬಳಸುತ್ತಾ ಬಂದಿದೆ.

ಇದರಲ್ಲಿರುವ ವಿಟಮಿನ್ ಸಿ, ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಖನಿಜಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಆದರೆ ಇದರ ನಿಜವಾದ ಶಕ್ತಿ ಇರುವುದು ಕೊಲೆಸ್ಟ್ರಾಲ್ ಸಂಗ್ರಹವಾಗಲು ನೆರವಾಗುವ HMG-CoA reductase ಎಂಬ ಕಿಣ್ವದ ಪ್ರಬಲತೆಯನ್ನು ತಗ್ಗಿಸುವುದರಲ್ಲಿ. ಅಲ್ಲದೇ ಆಹಾರದಿಂದ ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳದೇ ಇರಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದ ಹೊರತಾಗಿ ನೆಲ್ಲಿಕಾಯಿ ಮಧುಮೇಹಿಗಳಿಗೂ ಉತ್ತಮ ಔಷಧೀಯ ಆಹಾರವಾಗಿದೆ. ಇದರಲ್ಲಿರುವ ಮಧುಮೇಹಿವಿರೋಧಿ ಗುಣಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲೂ ನೆರವಾಗುತ್ತವೆ. ನೆಲ್ಲಿಕಾಯಿಯನ್ನು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಳಸುವ ಬಗೆ: ನೆಲ್ಲಿಕಾಯಿಯ ಅತ್ಯುತ್ತಮ ಬಳಕೆ ಎಂದರೆ ಈಗತಾನೇ ಹಿಂಡಿ ತೆಗೆದ ರಸವನ್ನು ಕುಡಿಯುವುದು. ಪ್ರತಿದಿನ ಸುಮಾರು ಅರ್ಧ ಲೋಟದಷ್ಟು ನಲ್ಲಿಕಾಯಿ ಜ್ಯೂಸ್ ಕುಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ಇದರ ರಸವನ್ನು ಹಿಂಡಿ ಈ ವಿಧಾನವನ್ನು ಅನುಸರಿಸಿ

*ಎರಡು ದೊಡ್ಡ ಗಾತ್ರದ ಅಥವಾ ನಾಲ್ಕು ಚಿಕ್ಕಗಾತ್ರದ ನೆಲ್ಲಿಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಬೀಜವನ್ನು ನಿವಾರಿಸಿ.
*ಬ್ಲೆಂಡರ್‌ನಲ್ಲಿ ಕೊಂಚ ನೀರಿನೊಂದಿಗೆ ತಿರುಳನ್ನು ಸೇರಿಸಿ ಅರೆಯಿರಿ.
*ಈ ನೀರನ್ನು ತೆಳ್ಳನೆಯ ಮಸ್ಲಿನ್ ಬಟ್ಟೆ ಅಥವಾ ಸೋಸುಕ ಬಳಸಿ ನೀರು ಸಂಗ್ರಹಿಸಿ.
*ಈ ನೀರಿಗೆ ಕೊಂಚ ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಕುಡಿಯಬಹುದು. ರುಚಿ ಇಷ್ಟವಾಗದಿದ್ದರೆ ಕೊಂಚ ಜೇನನ್ನು ಸೇರಿಸಿ ಕುಡಿಯಬಹುದು. ಮಧುಮೇಹಿಗಳಿಗೆ ಜೇನು ಸಲ್ಲದು. ಆದ್ದರಿಂದ ಮಧುಮೇಹಿಗಳು
*ಉಪ್ಪು, ಜೇನು ಸೇರಿಸದ ರಸ ಕುಡಿಯುವುದು ಉತ್ತಮ.
English summary

How to use amla for high cholesterol

High cholesterol is something most of us have to worry about. We hardly think twice about how our wayward eating habits and a sedentary lifestyle has on our health and then have to pay the price in some or the other form of a lifestyle disease. High cholesterol level invites heart diseases such as atherosclerosis and stroke.
X
Desktop Bottom Promotion