For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಅತಿಯಾದ ಧೂಮಪಾನ ನಿದ್ರೆಗೆ ಮಾರಕ!

By Manu
|

ಧೂಮಪಾನ ಆರೋಗ್ಯಕ್ಕೆ ಕೆಟ್ಟದು ಎಂದು ಎಲ್ಲರಿಗೂ ಗೊತ್ತು. ಆದರೂ ಧೂಮಪಾನಿಗಳು ಇದರ ಪರವಾಗಿ ವಕಾಲತ್ತು ವಹಿಸಿ ಮಾತನಾಡಲು ಅವರ ಮೆದುಳಿನಲ್ಲಿ ಉತ್ಪತ್ತಿಯಾಗಿರುವ ರಾಸಾಯನಿಕವೇ ಕಾರಣ. ಧೂಮಪಾನದಿಂದ ಶ್ವಾಸಕೋಶ ಹಾಳಾಗುವುದು ಮಾತ್ರವಲ್ಲ, ಕ್ಯಾನ್ಸರ್ ಎದುರಾಗುವ ಸಂಭವವೂ ಇದೆ. ಅಲ್ಲದೇ ಮಾನಸಿಕ ಉದ್ವೇಗ, ಖಿನ್ನತೆಯನ್ನು ಹುಟ್ಟುಹಾಕುತ್ತದೆ. ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು

ಹಲವು ಸೋಂಕುಗಳು ಸುಲಭವಾಗಿ ತಗಲುತ್ತವೆ. ಹೃದಯ ಸಂಬಂಧಿ ತೊಂದರೆಗಳ ಸಹಿತ ಹಲವು ತೊಂದರೆಗಳು ಎದುರಾಗಬಹುದು. ಅಷ್ಟೇ ಅಲ್ಲ, ಧೂಮಪಾನಿಗಳು ಸುಖನಿದ್ದೆಯನ್ನೂ ಪಡೆಯಲಾರರು ಏಕೆಂದರೆ ಇದರಲ್ಲಿರುವ ತಂಬಾಕು ಶ್ವಾಸನಾಳಗಳನ್ನು ಶಿಥಿಲಗೊಳಿಸಿ ಗೊರಕೆ ಹೆಚ್ಚಿಸಲು ಮತ್ತು ಉಸಿರಾಟ ಕಷ್ಟಕರವಾಗಿಸುತ್ತದೆ.

ಇದರಿಂದ ಪದೇ ಪದೇ ನಿದ್ದೆಯಿಂದ ಎಚ್ಚರವಾಗುತ್ತಾ ಇರುತ್ತದೆ. ಪೂರ್ಣಪ್ರಮಾಣದ ನಿದ್ದೆ ಇಲ್ಲದೇ ಮರುದಿನ ಬೆಳಿಗ್ಗೆದ್ದಾಗ ಕಣ್ಣುಗಳು ಕೆಂಪಗಾಗಿದ್ದು ನಿದ್ದೆಯಿಲ್ಲದ ಇತರ ತೊಂದರೆಗಳೂ ಸುಲಭವಾಗಿ ಅಂಟಿಕೊಳ್ಳುತ್ತವೆ. ಪರಿಣಾಮವಾಗಿ ನಿಧಾನವಾಗಿ ದೇಹ ಶಿಥಿಲಗೊಳ್ಳುತ್ತಾ ಹೋಗುತ್ತದೆ. ಸಿಗರೇಟ್ ಬಿಡಬೇಕೆನ್ನುವವರು ಮಾತ್ರ ಇದನ್ನು ಓದಿ

ಧೂಮದಲ್ಲಿರುವ ನಿಕೋಟಿನ್ ರಕ್ತದಲ್ಲಿ ಸೇರಿದ ಬಳಿಕ ಆರೋಗ್ಯದಲ್ಲಿ ಹಲವಾರು ಏರುಪೇರುಗಳಾಗುವುದು ಮಾತ್ರವಲ್ಲ, ನಿದ್ದೆಯ ಲಯವನ್ನೇ ತಪ್ಪಿಸುತ್ತದೆ. ನಂಬಿಕೆ ಬರಲಿಲ್ಲವೇ? ಸಂಪೂರ್ಣ ಕುಸಿಯುವವರೆಗೂ ಧೂಮಪಾನದ ಪರವಾಗಿಯೇ ಮಾತನಾಡುತ್ತಾ ಬಂದಿರುವವರು ಬಳಿಕ ಥಟ್ಟನೇ ಜ್ಞಾನೋದಯಗೊಂಡಿದ್ದಾರೆ. ಇವರ ಜ್ಞಾನೋದಯಕ್ಕೆ ಏನು ಕಾರಣ ಎಂದು ಇವರು ಬಾಯಿ ಬಿಟ್ಟು ಹೇಳುವುದಿಲ್ಲ. ಅವರು ಹೇಳದಿದ್ದರೇನಾಯಿತು? ಇದರ ಕುರಿತು ಇನ್ನಷ್ಟು ಮಾಹಿತಿಯನ್ನು ನಾವು ನೀಡುತ್ತೇವೆ, ಮುಂದೆ ಓದಿ.... ಸಿಗರೇಟ್‌ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...

ಮಾಹಿತಿ #1

ಮಾಹಿತಿ #1

ನಮ್ಮೆಲ್ಲರ ದೇಹದಲ್ಲೊಂದು ಜೈವಿಕ ಗಡಿಯಾರವಿದೆ. ಇದರ ಮೂಲಕವೇ ನಾವು ಅಲಾರಾಂ ಇಲ್ಲದಿದ್ದರೂ ಸರಿಯಾದ ಸಮಯಕ್ಕೇ ನಿದ್ದೆಯಿಂದ ಏಳುತ್ತೇವೆ. ಆದರೆ ಧೂಮಪಾನ ಈ ಗಡಿಯಾರವನ್ನು ಹಾಳುಗೆಡವುತ್ತದೆ. ನಿದ್ದೆ ಬರಬೇಕಾದ ಸಮಯದಲ್ಲಿ ಎಚ್ಚರಿಕೆ, ಎಚ್ಚರಿರಬೇಕಾದ ಸಮಯದಲ್ಲಿ ತೂಕಡಿಕೆ ಎದುರಾಗುತ್ತದೆ. ಇದರಿಂದ ಉದ್ವೇಗ, ಖಿನ್ನತೆ ಮೊದಲಾದವು ಬಾಧಿಸುತ್ತವೆ.

ಮಾಹಿತಿ #2

ಮಾಹಿತಿ #2

ಧೂಮಪಾನಿಗಳು ಸುಖನಿದ್ದೆಯನ್ನು ಪಡೆಯಲು ಅಸಮರ್ಥರಾಗುತ್ತಾರೆ. ಅಂದರೆ ಸತತವಾಗಿ ನಿದ್ದೆಯಿಂದ ಪದೇ ಪದೇ ಎಚ್ಚರಾಗುತ್ತಾ ಇರುತ್ತಾರೆ. ರಾತ್ರಿಯಿಡೀ ಎಚ್ಚರಾಗಿ ಹೊರಗೆ ಹೋಗಿ ಬರುವುದು ಮಾಡುತ್ತಾ ಇರುತ್ತಾರೆ.

ಮಾಹಿತಿ #3

ಮಾಹಿತಿ #3

sleep apnea ಅಥವಾ ನಿದ್ದೆಯಲ್ಲಿ ಉಸಿರಾಟ ವಿಪರೀತ ತೊಂದರೆಗೆ ಒಳಗಾಗುವ ಸ್ಥಿತಿಯನ್ನು ಹೆಚ್ಚಿನ ಧೂಮಪಾನಿಗಳು ಅನುಭವಿಸುತ್ತಾರೆ. ವಿಶೇಷವಾಗಿ ದಿನವಿಡೀ ಧೂಮಪಾನ ಮಾಡುವ ಚೈನ್ ಸ್ಮೋಕರ್‌ಗಳಿಗೆ ಇದು ಹೆಚ್ಚು ಭಾಧಿಸುತ್ತದೆ. ಇವರ ಗಂಟಲು, ಮೂಗು, ಶ್ವಾಸನಾಳಗಳು ಎಷ್ಟು ಶಿಥಿಲಗೊಂಡಿರುತ್ತವೆ ಎಂದರೆ ಮಲಗಿದ ತಕ್ಷಣ ಇವೆಲ್ಲವೂ ತೀರಾ ಸಡಿಲಗೊಂಡು ವಾಯುವಿನ ಚಲನೆಗೆ ಅಡ್ಡಿಯುಂಟುಮಾಡುತ್ತವೆ. ಆಗ ತಕ್ಷಣ ಎಚ್ಚರಾಗುತ್ತದೆ. ಇದರಿಂದ ಸುಖನಿದ್ದೆ ಪಡೆಯಲು ಇವರು ಅಸಮರ್ಥರಾಗುತ್ತಾರೆ.

ಮಾಹಿತಿ #4

ಮಾಹಿತಿ #4

ನಿಕೋಟಿನ್ ಒಂದು ಪ್ರಚೋದಕವಾಗಿದೆ. ಅಂದರೆ ಇದು ರಕ್ತಕ್ಕೆ ಸೇರಿದ ಬಳಿಕ ಹಲವು ರೀತಿಯ ಪ್ರಚೋದನೆಗಳನ್ನು ನೀಡಿ ಮೆದುಳಿನ ಕ್ಷಮತೆಯನ್ನು ಏರುಪೇರುಗೊಳಿಸುತ್ತದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಧೂಮಪಾನ ಮಾಡಿ ಮಲಗುವವರಿಗೆ ಈ ತೊಂದರೆ ಕಾಡುತ್ತದೆ. ಪರಿಣಾಮವಾಗಿ ನಿದ್ದೆ ಬಹಳ ತಡವಾಗಿ ಆವರಿಸುತ್ತದೆ.

ಮಾಹಿತಿ #5

ಮಾಹಿತಿ #5

ಕೆಲವು ಸಂಶೋಧನೆಗಳಲ್ಲಿ ತಿಳಿದುಬಂದಿರುವ ಪ್ರಕಾರ ನಿದ್ದೆಯಿಲ್ಲದ ತೊಂದರೆ ಅಥವಾ ಇನ್ಸೋಮ್ನಿಯಾ ತೊಂದರೆ ಧೂಮಪಾನಿಗಳಲ್ಲಿಯೇ ಹೆಚ್ಚು.

ಮಾಹಿತಿ #6

ಮಾಹಿತಿ #6

ಧೂಮಪಾನದ ಕಾರಣ ನಿದ್ದೆಯಿಂದ ಎಚ್ಚರವಾದರೂ ದೇಹ ಚೈತನ್ಯವನ್ನು ಪಡೆಯಲು ಅಸಮರ್ಥವಾಗುತ್ತದೆ. ಅಂದರೆ ನಿದ್ದೆಯಲ್ಲಿ ಎಚ್ಚರಾದಾಗ ವಿಪರೀತವಾಗಿ ಸುಸ್ತಾಗಿರುತ್ತದೆ. ಅಷ್ಟೇ ಅಲ್ಲ, ಮಲಗುವ ಮುನ್ನ ಧೂಮಪಾನ ಮಾಡಿದರೆ ಬಹಳ ಹೊತ್ತಿನವರೆಗೆ ನಿದ್ದೆ ಮರೀಚಿಕೆಯಾಗುತ್ತದೆ.

English summary

How Smoking Kills Your Sleep

Smoking kills in many ways. It is linked to several types of cancers, anxiety, depression, infections, heart issues and many other health issues. But seldom do smokers realise that their sleep is radically affected just because of the tobacco stick. And when you don't get enough sleep, other disorders will easily affect you and make you weaker.
X
Desktop Bottom Promotion