For Quick Alerts
ALLOW NOTIFICATIONS  
For Daily Alerts

ಬೇತಾಳದಂತೆ ಕಾಡುವ ಸಿಡುಬು ರೋಗಕ್ಕೆ ಬೇವಿನ ಚಿಕಿತ್ಸೆ

By Manu
|

ನೀವು ಚಿಕ್ಕ ಮಕ್ಕಳಿದ್ದಾಗ ನಿಮಗೆ ಸಿಡುಬು ರೋಗ ಬಂದಾಗ ನಿಮ್ಮ ಪೋಷಕರು ಬೇವಿನ ಎಲೆಯನ್ನು ತಂದು ನಿಮಗೆ ಸ್ನಾನ ಮಾಡಿಸಿರುವುದು ನಿಮಗೆ ನೆನಪಿಗೆ ಬಂದಿರಬೇಕಲ್ಲವೇ? ಹೌದು, ಅಂದಿಗೂ, ಇಂದಿಗು, ಎಂದೆಂದಿಗೂ ಬೇವು ಸಿಡುಬಿಗೆ ಮೊದಲು ದೊರೆಯುವ ದಿವ್ಯೌಷಧಿಯಾಗಿರುತ್ತದೆ. ಈ ಬೇವನ್ನು ನೀವು ಸಿಡುಬಿಗೆ ಬಳಸಿದಲ್ಲಿ, ಸಿಡುಬು ಹೆಚ್ಚು ವ್ಯಾಪಿಸುವುದನ್ನು ತಡೆಯಬಹುದು. ಜೊತೆಗೆ ಸಿಡುಬು ಸಾಂಕ್ರಮಿಕವಾಗಿ ಹರಡದಂತೆ ತಡೆಯಲು ಬೇವನ್ನು ಬಳಸುತ್ತಾರೆ.

How Is Neem Used On Skin For Chickenpox?

ಬೇವನ್ನು ತ್ವಚೆಯ ಮೇಲೆ ಲೇಪಿಸಿ ತುಂಬಾ ಹೊತ್ತು ಬಿಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ತುರಿಕೆ ಬಂದಾಗ ಬೇವಿನ ಎಲೆಯ ಪೇಸ್ಟ್ ತಯಾರಿಸಿ, ಅದನ್ನು ಲೇಪಿಸಿ, ಒಣಗಲು ಬಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರೋಗಿಯು ಬೇವಿನ ಎಲೆಯ ಸ್ನಾನ ಮಾಡಿದ ಮೇಲೆ ನಂತರ ಲೇಪಿಸಲಾಗುತ್ತದೆ.

ನೀವು ಚಿಕ್ಕ ಮಕ್ಕಳಿದ್ದಾಗ ನಿಮಗೆ ಸಿಡುಬು ರೋಗ ಬಂದಾಗ ನಿಮ್ಮ ಪೋಷಕರು ಬೇವಿನ ಎಲೆಯನ್ನು ತಂದು ನಿಮಗೆ ಸ್ನಾನ ಮಾಡಿಸಿರುವುದು ನಿಮಗೆ ನೆನಪಿಗೆ ಬಂದಿರಬೇಕಲ್ಲವೇ? ಹೌದು, ಅಂದಿಗ, ಇಂದಿಗು, ಎಂದೆಂದಿಗೂ ಬೇವು ಸಿಡುಬಿಗೆ ಮೊದಲು ದೊರೆಯುವ ದಿವ್ಯೌಷಧಿಯಾಗಿರುತ್ತದೆ. ಈ ಬೇವನ್ನು ನೀವು ಸಿಡುಬಿಗೆ ಬಳಸಿದಲ್ಲಿ, ಸಿಡುಬು ಹೆಚ್ಚು ವ್ಯಾಪಿಸುವುದನ್ನು ತಡೆಯಬಹುದು. ಜೊತೆಗೆ ಸಿಡುಬು ಸಾಂಕ್ರಮಿಕವಾಗಿ ಹರಡದಂತೆ ತಡೆಯಲು ಬೇವನ್ನು ಬಳಸುತ್ತಾರೆ.

ಬೇವನ್ನು ತ್ವಚೆಯ ಮೇಲೆ ಲೇಪಿಸಿ ತುಂಬಾ ಹೊತ್ತು ಬಿಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ತುರಿಕೆ ಬಂದಾಗ ಬೇವಿನ ಎಲೆಯ ಪೇಸ್ಟ್ ತಯಾರಿಸಿ, ಅದನ್ನು ಲೇಪಿಸಿ, ಒಣಗಲು ಬಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರೋಗಿಯು ಬೇವಿನ ಎಲೆಯ ಸ್ನಾನ ಮಾಡಿದ ಮೇಲೆ ನಂತರ ಲೇಪಿಸಲಾಗುತ್ತದೆ. ಬನ್ನಿ ಬೇವಿನ ಎಲೆಯನ್ನು ಹೇಗೆ ಬಳಸಲಾಗುತ್ತದೆ ಎಂದು ತಿಳಿಯೋಣ

ಬೇವಿನ ಎಲೆಯ ಸ್ನಾನ
ಬೇವಿನ ಎಲೆಯ ಪೇಸ್ಟ್ ಅನ್ನು ಬಳಸುವ ಮುನ್ನ ಮೊದಲು ಬೇವಿನ ಎಲೆಯನ್ನು ಹಾಕಿದ ಬಿಸಿ ನೀರಿನಿಂದ ಸ್ನಾನ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಬಕೆಟಿನಲ್ಲಿ ಬೆಚ್ಚಗಿನ ನೀರು ಹಾಕಿಕೊಳ್ಳಿ, ಅದಕ್ಕೆ ಬೇವಿನ ಎಲೆಗಳನ್ನು ಮಿಶ್ರಣ ಮಾಡಿ. ಈ ಎಲೆಗಳು 10 ನಿಮಿಷ ನೆನೆಯಲು ಬಿಡಿ. ಈ ನೀರಿನಿಂದ ದಿನಕ್ಕೆ ಒಂದು ಬಾರಿ ಸ್ನಾನ ಮಾಡಿ ಸಿಡುಬಿನಿಂದ ಮುಕ್ತರಾಗಿ.

ಬೇವಿನ ಎಲೆಯ ಪೇಸ್ಟ್
ಬೇವಿನ ಎಲೆಯ ಪೇಸ್ಟ್ ಆರೋಗ್ಯಕ್ಕೆ ಮತ್ತು ತ್ವಚೆಗೆ ಒಳ್ಳೆಯದು. ಇದು ತ್ವಚೆಗೆ ತಂಪನ್ನು ನೀಡುತ್ತದೆ. ಸ್ವಲ್ಪ ಬೇವಿನ ಎಲೆಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನೇರವಾಗಿ ಸಿಡುಬಿನ ಗುಳ್ಳೆಗಳು ಅಥವಾ ಭಾದಿತ ತ್ವಚೆಯ ಮೇಲೆ ಲೇಪಿಸಿ. ಈ ಪೇಸ್ಟ್ ಸ್ವಲ್ಪ ತುರಿಕೆಯನ್ನುಂಟು ಮಾಡಬಹುದು. ಆದರೆ ನಿಮ್ಮ ತ್ವಚೆ ಗುಣ ಮುಖವಾಗಲು ಇದು ಅತ್ಯಾವಶ್ಯಕ.

ಬೇವಿನ ರಸ
ಪೇಸ್ಟ್ ಬಳಸಲು ನಿಮಗೆ ಇಷ್ಟವಾಗದಿದ್ದಲ್ಲಿ, ಬೇವಿನ ರಸವನ್ನು ಮಾಡಿಕೊಳ್ಳಿ. ಈ ರಸವನ್ನು ನಿಮ್ಮ ತ್ವಚೆಗೆ ಲೇಪಿಸಿ. ಈ ರಸವನ್ನು ಪೇಸ್ಟ್ ಮಾಡಿದ ನಂತರ ಮಾಡಿಕೊಳ್ಳಬಹುದು. ಈ ರಸದಲ್ಲಿ ತ್ವಚೆಗೆ ಪ್ರಯೋಜನಕಾರಿಯಾದ ಹಲವಾರು ಅಂಶಗಳು ಇರುತ್ತವೆ. ಇವು ಕಲೆಗಳನ್ನು ಸಹ ನಿವಾರಿಸುತ್ತವೆ ಮತ್ತು ಇನ್‌ಫೆಕ್ಷನ್ ಹರಡುವುದನ್ನು ಸಹ ತಡೆಯುತ್ತವೆ.

ಬೇವಿನ ಎಲೆಯ ಮೇಲೆ ಮಲಗಿ
ಕೊನೆಯದಾಗಿ ತಜ್ಞರ ಸಲಹೆ ಏನೆಂದರೆ, ಸಿಡುಬು ಬಂದವರು ಬೇವಿನ ಎಲೆಯ ಮಲಗಿ ಎಂಬುದು. ತೆಳುವಾದ ಬಟ್ಟೆಗಳನ್ನು ಧರಿಸಿ, ಬೇವಿನ ಎಲೆಯ ಮೇಲೆ ಮಲಗುವುದರಿಂದ, ತ್ವಚೆಗೆ ನೈಸರ್ಗಿಕವಾಗಿ ರಸವು ಲೇಪನವಾಗುತ್ತದೆ. ಇದು ನಿಮ್ಮ ತ್ವಚೆಯು ಮತ್ತಷ್ಟು ಸುಧಾರಿಸಲು ನೆರವಾಗುತ್ತದೆ. ಈ ಮೇಲಿನ ಚಿಕಿತ್ಸೆಯ ವಿಧಾನವನ್ನು ಪಾಲಿಸಿದರೆ ನಿಮ್ಮ ತ್ವಚೆಯಿಂದ ಸಿಡುಬಿನ ಕಲೆಗಳು ಮತ್ತು ಸಿಡುಬು ಎರಡು ಹೊರಟು ಹೋಗುತ್ತವೆ.

English summary

How Is Neem Used On Skin For Chickenpox?

Neem leaf is used to cure chickenpox. It is one of the best remedies that can cure the pox and prevent the infection from spreading further. If you use this simple home ingredient as soon as the pox develops, it will prevent the disease from spreading from one person to another. Neem can be applied on the affected skin and left on the skin for a long period of time.
Story first published: Monday, May 16, 2016, 20:18 [IST]
X
Desktop Bottom Promotion