For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‍‌ಗೆ ಸಡ್ಡು ಹೊಡೆದು ನಿಲ್ಲುವ ಪುಟ್ಟ ಬೆಳ್ಳುಳ್ಳಿ

By Arshad
|

ನಮ್ಮ ಆರೋಗ್ಯವನ್ನು ವೃದ್ಧಿಸಲು ಅಜ್ಜಿಯ ಮನೆಮದ್ದುಗಳು ಹಲವು ರೀತಿಯಲ್ಲಿ ಪೂರಕವಾಗಿವೆ. ಆದರೆ ಹೆಚ್ಚಿನವರು ಸುಲಭದಲ್ಲಿ ಇದನ್ನು ನಂಬುವುದಿಲ್ಲ. ಇವು ನೈಸರ್ಗಿಕವಾಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಶೀಘ್ರವಾಗಿ ಹಲವು ಕಾಯಿಲೆಗಳನ್ನು ಗುಣಪಡಿಸುತ್ತವೆ. ಆದರೆ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ಈ ಮನೆಮದ್ದುಗಳು ಸಾಟಿಯಲ್ಲ ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ.

ಇದಕ್ಕೆ ಆಸ್ಪತ್ರೆಯ ಚಿಕಿತ್ಸೆಯೇ ಅನಿವಾರ್ಯ ಎಂಬ ಭಾವನೆ ಇದೆ. ಆದರೆ ವೈದ್ಯರೇ ಹೇಳುವಂತೆ ಯಾವುದೇ ಕಾಯಿಲೆ ಬರದಂತೆ ತಡೆಯುವುದು ಕಾಯಿಲೆ ಬಂದ ಮೇಲೆ ಗುಣಪಡಿಸುವುದಕ್ಕಿಂತ ಉತ್ತಮ. ಕಾಯಿಲೆ ಬರದಂತೆ ತಡೆಯಲು ಹಲವು ಆಹಾರಗಳಿದ್ದು ಇವುಗಳ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಅತ್ಯುತ್ತಮವಾದ ಆಹಾರ ಎಂದರೆ ಬೆಳ್ಳುಳ್ಳಿ. ಒಂದು ವೇಳೆ ಶ್ವಾಸಕೋಶದ ಕ್ಯಾನ್ಸರ್ ಈಗಾಗಲೇ ವ್ಯಾಪಿಸಿದ್ದು ಉಲ್ಬಣಗೊಂಡಿದ್ದರೆ ಮಾತ್ರ ಇದನ್ನು ಹಿಂದೆ ಪಡೆಯುವುದು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಧೂಮಪಾನ.

How Does Garlic Prevent Lung Cancer?: Find Out The Secret

ಒಂದು ವೇಳೆ ರೋಗಿ ಧೂಮಪಾನ ಮಾಡದವನಾಗಿದ್ದರೂ ಕ್ಯಾನ್ಸರ್ ಬೇರೆ ಕಾರಣದಿಂದ ಆವರಿಸಿದ್ದು ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ಗುಣಪಡಿಸಬಹುದು. ಇದಕ್ಕೆ ದೀರ್ಘಕಾಲದ ಚಿಕಿತ್ಸೆ ಮತ್ತು ಔಷಧಿ ಸೇವನೆ ಅಗತ್ಯ. ಆದರೆ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಿದ್ದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಬೆಳ್ಳುಳ್ಳಿಯ ಕ್ಯಾನ್ಸರ್ ನಿವಾರಕ ಗುಣಗಳು ಕ್ಯಾನ್ಸರ್‌ಗೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುತ್ತದೆ. ಅಲ್ಲದೇ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಮೂಲಕ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಆದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬೆಳ್ಳುಳ್ಳಿ ಹೇಗೆ ನೆರವಾಗುತ್ತದೆ? ಇದಕ್ಕೆ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಅಗತ್ಯ. ಇದರ ರಸದಿಂದ ಹೊಮ್ಮುವ ಆವಿ ಶ್ವಾಸಕೋಶದೊಳಕ್ಕೆ ಹಾದು ಅಲ್ಲಿನ ಕ್ಯಾನ್ಸರ್ ಕಾರಕ ಕಣಗಳನ್ನು ಕೊಲ್ಲುತ್ತದೆ. ಅಚ್ಚರಿಗೆ ತಳ್ಳುವ ಈ ಪುಟ್ಟ ಬೆಳ್ಳುಳ್ಳಿಯ ಕಾರುಬಾರು!

ಅಲ್ಲದೇ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವ ಮೂಲಕ ಧೂಮಪಾನಿಗಳಿಗೂ ಉಪಯೋಗವಿದೆ. ಸಿಗರೇಟಿನ ಹೊಗೆ ಶ್ವಾಸಕೋಶಕ್ಕೆ ಧಾವಿಸಿದ ಬಳಿಕ ಇದಕ್ಕೆ ಕೇವಲ ಶೇಖಡಾ ಇಪ್ಪತ್ತರಷ್ಟು ಮಾತ್ರ ಹಾನಿ ಎಸಗಲು ಸಾಧ್ಯವಾಗುತ್ತದೆ. ಅಂದರೆ ಬೆಳ್ಳುಳ್ಳಿ ಈ ಧೂಮಪಾನದ ಹಾನಿಯನ್ನು ಶೇಖಡಾ ಎಂಭತ್ತರಷ್ಟು ಕಡಿಮೆಗೊಳಿಸುತ್ತದೆ ಎಂದಾಯ್ತು. ಆದ್ದರಿಂದ ವಂಶವಾಹಿನಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವ ವ್ಯಕ್ತಿಗಳು ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ತಮಗೆ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಬಹಳಷ್ಟು ಕಡಿಮೆಗೊಳಿಸಬಹುದು

ಬೆಳ್ಳುಳ್ಳಿ ಮತ್ತು ಶ್ವಾಸಕೋಶದ ಕ್ಯಾನ್ಸರ್:

ವಾರಕ್ಕೆ ಕನಿಷ್ಠ ಎರಡು ಬಾರಿ ಹಸಿ ಬೆಳ್ಳುಳ್ಳಿಯನ್ನು ಸೇವಿಸಿದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಆವರಿಸುವ ಪ್ರಮಾಣ ಉಳಿದವರಿಗಿಂತ ಶೇ 44 ರಷ್ಟು ಕಡಿಮೆ ಎಂದು ಒಂದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೇ ಧೂಮಪಾನಿಗಳು ಕ್ಯಾನ್ಸರ್ ಗೆ ಗುರಿಯಾಗುವ ಸಾಧ್ಯತೆಯನ್ನು ಶೇಖಡಾ ಮೂವತ್ತರಷ್ಟು ಕಡಿಮೆಗೊಳಿಸುತ್ತದೆ. ಈ ಸಂಶೋಧನೆಗಳು ಬೆಳ್ಳುಳ್ಳಿಯನ್ನು ಹಸಿಯಾಗಿಯೇ ತಿಂದರೆ ಮಾತ್ರ ಈ ಕ್ಷಮತೆ ಹೆಚ್ಚುವುದನ್ನೂ ಸಾಬೀತುಪಡಿಸಿವೆ. ಇದುವರೆಗೆ ತಿಳಿದಿರುವ ಮದ್ದುಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಬೆಳ್ಳುಳ್ಳಿಯೇ ಅತ್ಯುತ್ತಮ ಎನ್ನುವುದು ನಿರ್ವಿವಾದವಾಗಿದೆ. ಆದರೆ ಬೆಳ್ಳುಳ್ಳಿಯ ಇತರ ರೂಪಗಳಾದ ಒಣ, ಸಂಸ್ಕರಿಸಿದ ಅಥವಾ ಶೈತ್ಯೀಕರಿಸಿದ ಭಾಗಳನ್ನು ಸೇವಿಸಿದರೆ ಯಾವ ರೀತಿಯಲ್ಲಿ ಉತ್ತಮ ಎಂಬ ಬಗ್ಗೆ ಇನ್ನಷ್ಟೇ ವಿವರಗಳು ಬರಬೇಕಾಗಿವೆ.

ಇದರ ಸೇವನೆಗೆ ಸೂಕ್ತ ಸಮಯ ಯಾವುದು?
ಬೆಳ್ಳುಳ್ಳಿಯ ಅತ್ಯುತ್ತಮ ಪರಿಣಾಮ ಪಡೆಯಬೇಕೆಂದರೆ ಬೆಳಿಗ್ಗೆದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಆಗಲಿಲ್ಲ ಎಂದರೆ ರಾತ್ರಿ ಊಟದ ಒಂದು ಘಂಟೆಯ ಬಳಿಕ ಸೇವಿಸಿ ಮಲಗಬೇಕು. ಬೆಳ್ಳುಳ್ಳಿಯ ಕೆಲವು ಹಸಿ ಎಸಳುಗಳನ್ನು ಹಾಗೇ ತಿಂದು ನುಂಗಿದ ಬಳಿಕ ನೀರು ಕುಡಿಯಬಾರದು ಅಥವಾ ಬೇರೇನನ್ನೂ ತಿನ್ನಬಾರದು. ಇದರಿಂದ ಬೆಳ್ಳುಳ್ಳಿಯ ರಸ ರಕ್ತದ ಮೂಲಕ ಶ್ವಾಸಕೋಶ ಮತ್ತು ಇತರ ಅಗತ್ಯ ಅಂಗಗಳಿಗೆ ಧಾವಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕಾಯಿಲೆ ಬರುವ ಸಂಭವವನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು

ಬೆಳ್ಳುಳ್ಳಿಯ ಇತರ ಪ್ರಯೋಜನಗಳೇನು?
ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಇನ್ನೂ ಹಲವಾರು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಅಧಿಕ ಮತ್ತು ಕಡಿಮೆ ರಕ್ತದ ಒತ್ತಡವನ್ನು ಸಮರ್ಪಕವಾಗಿಸುವುದು, ಮೂಳೆಗಳ ದೃಢತೆ ಹೆಚ್ಚಿಸುವುದು, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವುದು, ಮತ್ತು ಅತಿ ಮುಖ್ಯವಾಗಿ ಮರೆಗುಳಿತನ ಮತ್ತು ಅಲ್ಜೀಮರ್ ಕಾಯಿಲೆಯನ್ನು ತಡೆಯುವ ಗುಣಗಳನ್ನು ಹೊಂದಿದೆ. ಔಷಧೀಯ ಗುಣಗಳ ಆಗರ 'ಬೆಳ್ಳುಳ್ಳಿಯ' ಮಹತ್ವ ಅರಿಯಿರಿ!

ಹಸಿ ಬೆಳ್ಳುಳ್ಳಿಯನ್ನು ಸೇವಿಸಲು ಸೂಕ್ತ ವಿಧಾನ ಯಾವುದು?

ಬೆಳ್ಳುಳ್ಳಿಯಲ್ಲಿ ಕೊಂಚ ಕಮಟು ವಾಸನೆ ಮತ್ತು ಕೊಂಚ ಖಾರವಾದ ರುಚಿ ಇದೆ. ಇದರಲ್ಲಿರುವ ಆಮ್ಲೀಯತೆಯೇ ಇದಕ್ಕೆ ಕಾರಣ. ಆದ್ದರಿಂದ ಹಸಿ ಬೆಳ್ಳುಳ್ಳಿಯನ್ನು ನೇರವಾಗಿ ಜಗಿಯಲು ಹೆಚ್ಚಿನವರಿಗೆ ಕಷ್ಟವಾಗುತ್ತದೆ. ಇದಕ್ಕಾಗಿ ಬೆಳ್ಳುಳ್ಳಿಯ ಎಸಳಿನ ಸಿಪ್ಪೆ ಸುಲಿದು ಜಗಿಯದೇ ಇಡಿಯ ಎಸಳನ್ನು ಮಾತ್ರೆಯಂತೆ ನೇರವಾಗಿ ನುಂಗಿಬಿಡಬೇಕು. ಆದರೆ ಉತ್ತಮ ಪರಿಣಾಮ ಪಡೆಯಬೇಕೆಂದರೆ ಜಗಿದೇ ನುಂಗಬೇಕು. ಕ್ಯಾನ್ಸರ್‌ ಬರಬಾರದು ಎಂದಿದ್ದರೆ ಕೊಂಚ ಖಾರ ಸಹಿಸುವುದು ಅನಿವಾರ್ಯ.
English summary

How Does Garlic Prevent Lung Cancer?: Find Out The Secret

Grandma's remedies, how many of you do religiously follow them? For most of the common ailments, it is wise to follow natural remedies, as the cure for them is faster and has no side effects as well. But, for those ailments like cancer, it is best to get treated in the hospital for faster relief. But, when it comes to prevention, one can still rely on home remedies.
X
Desktop Bottom Promotion