For Quick Alerts
ALLOW NOTIFICATIONS  
For Daily Alerts

ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಬಹುದಾದ ಕೆಮ್ಮಿನ ಸಿರಪ್‌ಗಳು (ಕೆಮ್ಮಿನ ಕಷಾಯ) ಅನೇಕವಿದ್ದು ಅವುಗಳ ಬಳಕೆಯು ಸುರಕ್ಷಿತವಾಗಿರುತ್ತವೆ.....

By Manohar Shetty
|

ನಿಮಗೆ ಕೆಮ್ಮು ಸತತವಾಗಿ ಕಾಡುತ್ತಿದೆಯೇ? ಹಲವಾರು ಔಷಧಿ, ಕೆಮ್ಮಿನ ಸಿರಪ್‌ಗಳನ್ನು ಕುಡಿದ ಬಳಿಕವೂ ಕೆಮ್ಮು ಪೂರ್ಣವಾಗಿ ನಿವಾರಣೆಯಾಗುತ್ತಿಲ್ಲವೇ? ಹಾಗಾದರೆ ನೀವು ಕಡೆಯದಾಗಿ ಪ್ರಯತ್ನಿಸಬಹುದಾದ ಒಂದು ಮನೆಮದ್ದಿದೆ. ಕಡೆಯದಾದ ಎಂಬ ಪದವನ್ನು ಬಳಸಲು ಕಾರಣವೇನೆಂದರೆ ಎಂತಹ ಹಳೆಯ ಕೆಮ್ಮಿದ್ದರೂ ಈ ವಿಧಾನದಿಂದ ಕಡಿಮೆಯಾಗುವುದು ಖಂಡಿತ.

ಸಾಮಾನ್ಯವಾದ ಕೆಮ್ಮಿಗೆ ಇದು ತಕ್ಷಣವೇ ಪರಿಹಾರ ನೀಡುತ್ತದೆ. ಇದರ ಧನಾತ್ಮಕ ಅಂಶವೆಂದರೆ ಇದನ್ನು ತಯಾರಿಸಲು ಕೇವಲ ನೈಸರ್ಗಿಕ ಸಾಮಾಗ್ರಿಗಳನ್ನೇ ಬಳಸಲಾಗಿದೆ. ಅಷ್ಟೇ ಅಲ್ಲ, ಇದರ ಸೇವನೆಯಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.

ಕಿರಿಯರಿಂದ ವೃದ್ಧರವರೆಗೆ ಎಲ್ಲರೂ ಸುರಕ್ಷಿತವಾಗಿ ಸೇವಿಸಬಹುದಾದ ಈ ಔಷಧಿ ತಯಾರಿಸಲು ಸುಲಭವೂ ಆಗಿದೆ. ಬನ್ನಿ, ಈ ಅದ್ಭುತ ಸಿರಪ್ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ...

ಹಸಿಶುಂಠಿ

ಹಸಿಶುಂಠಿ

ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ.

MostRead:ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ಲಿಂಬೆಹಣ್ಣುಗಳ ರಸ

ಲಿಂಬೆಹಣ್ಣುಗಳ ರಸ

ಎರಡು ಲಿಂಬೆಹಣ್ಣುಗಳ ರಸವನ್ನು ಹಿಂಡಿ ಒಂದು ಲೋಟದಲ್ಲಿ ಪ್ರತ್ಯೇಕವಾಗಿಡಿ. ಇನ್ನು ಎರಡೂ ಲಿಂಬೆಗಳ ಸಿಪ್ಪೆಗಳನ್ನು ಚಿಕ್ಕದಾಗಿ ತುರಿಯಿರಿ.

ಎರಡು ಲೋಟ ನೀರು

ಎರಡು ಲೋಟ ನೀರು

ಒಂದು ಚಿಕ್ಕ ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಇದರಲ್ಲಿ ಶುಂಠಿ ಮತ್ತು ಲಿಂಬೆಸಿಪ್ಪೆಯ ತುರಿಯನ್ನು ಸೇರಿಸಿ ಕುದಿಸಿ.

ಐದಾರು ನಿಮಿಷ ಕುದಿಸಿದ ನಂತರ

ಐದಾರು ನಿಮಿಷ ಕುದಿಸಿದ ನಂತರ

ಸುಮಾರು ಐದಾರು ನಿಮಿಷ ಮಧ್ಯಮ ಉರಿಯಲ್ಲಿ ಕುದಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ.

ಲೋಟದಲ್ಲಿ ಸಂಗ್ರಹಿಸಿ

ಲೋಟದಲ್ಲಿ ಸಂಗ್ರಹಿಸಿ

ಬಳಿಕ ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ

Most Read:ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ಅರ್ಧ ಕಪ್ ಜೇನು

ಅರ್ಧ ಕಪ್ ಜೇನು

ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎರಡು ಮೂರು ಟೇಬಲ್ ಚಮಚ ಜೇನನ್ನು ಸುರಿದು ಕೊಂಚವೇ ಬಿಸಿಮಾಡಿ.

ಇನ್ನು ಲಿಂಬೆರಸವನ್ನು ಸೇರಿಸಿ

ಇನ್ನು ಲಿಂಬೆರಸವನ್ನು ಸೇರಿಸಿ

ಜೇನು ಬಿಸಿಯಾಗುತ್ತಿದ್ದಂತೆಯೇ ಕುದಿಸಿ ತಣಿಸಿದ್ದ ನೀರನ್ನು ಇದಕ್ಕೆ ಬೆರೆಸಿ. ಈ ನೀರು ಕೊಂಚ ಬಿಸಿಯಾಗುತ್ತಿದ್ದಂತೆಯೇ ಪ್ರತ್ಯೇಕವಾಗಿರಿಸಿದ್ದ ಲಿಂಬೆರಸವನ್ನು ಸೇರಿಸಿ ಚಮಚದಲ್ಲಿ ಕಲಕುತ್ತಾ ಇನ್ನಷ್ಟು ಬಿಸಿಮಾಡಿ.

ಉರಿ ಆರಿಸಿ ತಣಿಯಲು ಬಿಡಿ

ಉರಿ ಆರಿಸಿ ತಣಿಯಲು ಬಿಡಿ

ಇನ್ನೇನು ಕುದಿಯಲಿದೆ ಎನ್ನುವಾಗ ಉರಿ ಆರಿಸಿ ತಣಿಯಲು ಬಿಡಿ.

ಸಿರಪ್ ರೆಡಿ!

ಸಿರಪ್ ರೆಡಿ!

ಈ ಸಿರಪ್ ಅನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ ಮುಚ್ಚಳ ಮುಚ್ಚಿ. ಈ ಸಿರಪ್ ಅನ್ನು ಮಕ್ಕಳು ದಿನಕ್ಕೆ ಒಂದರಿಂದ ಎರಡು ಚಮಚ, ಹಿರಿಯರು ದಿನಕ್ಕೆ ಎರಡರಿಂದ ನಾಲ್ಕು ಚಮಚ ಸೇವಿಸಿದರೆ ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ. ಈ ಸಿರಪ್ ಅನ್ನು ಫ್ರಿಜ್ಜಿನಲ್ಲಿಯೂ ಇಡಬಹುದು ಅಥವಾ ತಣ್ಣನೆಯ ಸ್ಥಳದಲ್ಲಿಯೂ ಸಂಗ್ರಹಿಸಿಡಬಹುದು.

English summary

Homemade Natural Syrup Cures Cough Instantly; Check It Out!

Have you been been suffering from cough for long? You might have tried several medications but failed to get the desired results. If this is the condition then you definitely need to try out this homemade natural cough syrup. It helps in providing instant relief from cough.
X
Desktop Bottom Promotion