For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಹೊಟ್ಟೆಯ ಬೊಜ್ಜು ಕರಗಿಸುವ, ಅದ್ಭುತ ಜ್ಯೂಸ್

By Manu
|

ಹೆಚ್ಚಿದ ಸ್ಥೂಲಕಾಯ ಮತ್ತು ಉಬ್ಬಿದ ಹೊಟ್ಟೆ ಇಂದು ಹೆಚ್ಚಿನ ಜನರಲ್ಲಿ ಕಂಡುಬರುತ್ತಿರುವ ಕಳವಳವಾಗಿದೆ. ಏನು ಮಾಡಿದರೂ ಹೊಟ್ಟೆ ಕಡಿಮೆಯಾಗುವುದಿಲ್ಲವಲ್ಲ ಎಂಬುದೇ ಹೆಚ್ಚಿನವರ ಕಾಳಜಿಯಾಗಿದೆ. ಆದರೆ ಹೊಟ್ಟೆಯನ್ನು ಕರಗಿಸುವುದು ಅಷ್ಟು ಸುಲಭವಲ್ಲ, ಕೊಂಚ ವ್ಯಾಯಾಯ, ನಿಯಮಿತವಾದ ದೈಹಿಕ ಶ್ರಮ ಮತ್ತು ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಧಾನವಾಗಿಯಾದರೂ ಹೊಟ್ಟೆಯನ್ನು ಕರಗಿಸಬಹುದು. ಈ ಕಾರ್ಯಕ್ಕೆ ಚುರುಕು ನೀಡಲು ಕೆಲವು ಮನೆಮದ್ದುಗಳು ಲಭ್ಯವಿದ್ದು ಇಂತಹ ಒಂದು ಪ್ರಬಲವಾದ ಮನೆಮದ್ದನ್ನು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.

ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ನಿವಾರಿಸುವಲ್ಲಿ ಈ ಪೇಯ ಅತ್ಯುತ್ತಮವಾಗಿದ್ದು ಇದನ್ನು ತಯಾರಿಸಲು ಅಡುಗೆಮನೆಯಲ್ಲಿರುವ ಹಸಿರು ಟೀ ಮತ್ತು ಹಸಿಶುಂಠಿಯಂತಹ ಸಾಮಾನ್ಯ ಸಾಮಾಗ್ರಿಗಳೇ ಸಾಕು. ಈ ಎರಡೂ ಸಾಮಾಗ್ರಿಗಳು ತೂಕ ಇಳಿಸಲು ನೆರವಾಗುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತವೆ. ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ಈ ಪೇಯದಲ್ಲಿ ಹಲವು ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಮೆದುಳಿನ ಕ್ಷಮತೆ ಹೆಚ್ಚಿಸಲು, ದಿನವಿಡೀ ಚಟುವಟಿಕೆಯಿಂದಿರಲು ಸಹಾ ನೆರವಾಗುತ್ತದೆ. ಈ ಪೇಯವನ್ನು ತಯಾರಿಸುವುದೇನೂ ಕಷ್ಟವಲ್ಲ. ಹೆಚ್ಚು ಸಮಯವೂ ಬೇಕಿಲ್ಲ, ಗರಿಷ್ಟ ಅರ್ಧ ಗಂಟೆ ಸಾಕು. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಅಲ್ಲದೇ ಇದು ಅಗ್ಗವೂ ನಿರಾಪಾಯಕಾರಿಯೂ ಆಗಿರುವ ಕಾರಣ ಯಾವುದೇ ವಯಸ್ಸಿನವರು ಸುರಕ್ಷಿತವಾಗಿ ಸೇವಿಸಬಹುದು. ಈ ಪೇಯವನ್ನು ಸೇವಿಸುವ ಮೂಲಕ ದೇಹದ ಕಲ್ಮಶಗಳು ನಿವಾರಣೆಯಾಗುವ ಜೊತೆಗೇ ಕೊಬ್ಬು ಕರಗುವ ಕ್ರಿಯೆ ಉತ್ತಮಗೊಳ್ಳುತ್ತದೆ. ವಾಸ್ತವವಾಗಿ ಹೊಟ್ಟೆ ಕರಗಲು ಇದೇ ಕಾರಣ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ:

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಹಸಿರು ಟೀ ಬ್ಯಾಗ್

*ಒಂದು ಚಿಕ್ಕ ತುಂಡು ಹಸಿಶುಂಠಿ

*ಒಂದು ಚಿಕ್ಕಚಮಚ ಜೇನು (ಅಗತ್ಯವೆನಿಸಿದರೆ ಮಾತ್ರ)

ತಯಾರಿಕಾ ವಿಧಾನ

ತಯಾರಿಕಾ ವಿಧಾನ

1) ಮೊದಲು ಒಂದು ಕಪ್ ನೀರನ್ನು ಕುದಿಸಿ

2) ಇದಕ್ಕೆ ಹಸಿಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ತುಂಡುಮಾಡಿ ಹಾಕಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ.

3) ಬಳಿಕ ಈ ನೀರಿಗೆ ಹಸಿರು ಟೀ ಬ್ಯಾಗ್ ಹಾಕಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

4) ಐದು ನಿಮಿಷದ ಬಳಿಕ ಟೀ ಬ್ಯಾಗ್ ಹೊರತೆಗೆದು ಹಿಂಡಿ ನಿವಾರಿಸಿ.

5) ಇದು ಕೊಂಚ ಕಹಿ-ಖಾರ ರುಚಿ ಹೊಂದಿರುವ ಕಾರಣ ಕೆಲವರಿಗೆ ಇಷ್ಟವಾಗಲಿಕ್ಕಿಲ್ಲ. ಹೀಗಿದ್ದರೆ ಒಂದು ಚಿಕ್ಕ ಚಮಚ ಜೇನು ಸೇರಿಸಿ ರುಚಿಯನ್ನು ಹೆಚ್ಚಿಸಬಹುದು.

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆ ಹಣ್ಣಿನ ಜ್ಯೂಸ್

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಬೆಳ್ಳುಳ್ಳಿ ಎಸಳು

ಬೆಳ್ಳುಳ್ಳಿ ಎಸಳು

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಆಗಾಗ ಲೋಟ ಲೋಟ ನೀರು ಕುಡಿಯಿರಿ

ಆಗಾಗ ಲೋಟ ಲೋಟ ನೀರು ಕುಡಿಯಿರಿ

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

ಸಲಹೆ

ಸಲಹೆ

ಈ ಎಲ್ಲಾ ಜ್ಯೂಸ್ ಅನ್ನು ನಿತ್ಯವೂ ಒಂದು ನಿಯಮಿತ ಸಮಯದಲ್ಲಿ ಕುಡಿಯುತ್ತಾ ಹೋಗಬೇಕು. ಆದರೆ ಇದರ ಪರಿಣಾಮ ಭಿನ್ನ ವ್ಯಕ್ತಿಗಳಲ್ಲಿ ಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತದೆ. ಒಂದು ವೇಳೆ ನಿಮಗೆ ಬೇರೇನಾದರು ಆರೋಗ್ಯ ಸಂಬಂಧಿತ ತೊಂದರೆ ಇದ್ದರೆ ಈ ವಿಧಾನವನ್ನು ಅನುಸರಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರ ಅಥವಾ ಡಯಟೀಶಿಯನ್ ರವರ ಸಲಹೆಯನ್ನು ಪಡೆಯುವುದು ಸೂಕ್ತ.

ಸಲಹೆ

ಸಲಹೆ

ಹೊಟ್ಟೆ ಕರಗಿಸುವ ಯಾವುದೇ ವಿಧಾನದ ಪರಿಣಾಮ ಕಂಡುಬರಲು ಸುಮಾರು ಮೂರು ತಿಂಗಳಾದರೂ ಬೇಕು. ಏಕೆಂದರೆ ಹೊಟ್ಟೆಯ ಕೊಬ್ಬು ಅತಿ ಕಡೆಯದಾಗಿ ಕರಗಲು ಪ್ರಾರಂಭವಾಗುತ್ತದೆ. ಆದ್ದರಿಂದ ಕೊಂಚ ತಾಳ್ಮೆ ಅಗತ್ಯ.

English summary

Homemade Drink For A Flat Belly

Have you ever wanted to get a flat belly that you can flaunt without hesitation? If yes, then you must read on, as we've got just the thing for you. Today, at Boldsky, we will be letting you know about an incredible homemade drink that can help you get a flat tummy. Yes, you read that right! So, read on to know more about the ingredients required and the method of preparing this homemade drink.
Story first published: Saturday, May 28, 2016, 10:37 [IST]
X
Desktop Bottom Promotion