For Quick Alerts
ALLOW NOTIFICATIONS  
For Daily Alerts

ಗೊರಕೆಯ ಕಿರಿಕಿರಿಗೆ, ಇಲ್ಲಿದೆ ಪವರ್‌ ಫುಲ್ ಮನೆ ಔಷಧಿ...

ಗೊರಕೆಯಿಂದ ನಿದ್ರಿಸುವ ವ್ಯಕ್ತಿಗೆ ತೊಂದರೆ ಇಲ್ಲದಿದ್ದರೂ ಇದರ ಸದ್ದಿನ ಪ್ರಮಾಣ ಇವರ ಜೊತೆಗೆ ಇರುವವರ ನಿದ್ದೆ ಭಂಗಗೊಳಿಸಬಲ್ಲುದು. ಕೆಲವರ ಗೊರಕೆ ಭಾರೀ ಸದ್ದಿನಿಂದ ಕೂಡಿದ್ದು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಆರೋಗ್ಯ ಏರುಪೇರಾಗಬಹುದು....

By Arshad
|

ಸವಿನಿದ್ದೆಯಲ್ಲಿ ಗೊರಕೆಯ ಸದ್ದು ಇಂದು ಪ್ರತಿ ಮನೆಯಲ್ಲಿ ಕಂಡುಬರುವ ಕ್ರಿಯೆಯಾಗಿದೆ. ಇಂದು ಗೊರಕೆ ಹೊಡೆಯುವವರ ಸಂಖ್ಯೆ ಗೊರಕೆ ಹೊಡೆಯದವರಿಗಿಂತ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಪುರುಷರು, ಅದರಲ್ಲೂ ಸ್ಥೂಲದೇಹಿಗಳು ಹೆಚ್ಚು ಗೊರಕೆ ಹೊಡೆಯುತ್ತಾರೆ. ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು

ಗೊರಕೆಯಿಂದ ನಿದ್ರಿಸುವ ವ್ಯಕ್ತಿಗೆ ತೊಂದರೆ ಇಲ್ಲದಿದ್ದರೂ ಇದರ ಸದ್ದಿನ ಪ್ರಮಾಣ ಇವರ ಜೊತೆಗೆ ಇರುವವರ ನಿದ್ದೆ ಭಂಗಗೊಳಿಸಬಲ್ಲುದು. ಕೆಲವರ ಗೊರಕೆ ಭಾರೀ ಸದ್ದಿನಿಂದ ಕೂಡಿದ್ದು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಆರೋಗ್ಯ ಏರುಪೇರಾಗಬಹುದು. ಇದರೊಂದಿಗೆ ನಿದ್ದೆಯೂ ಭಂಗಗೊಂಡು ಆರೋಗ್ಯವೂ ಏರುಪೇರಾಗಬಹುದು. ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

ಸ್ಥೂಲಕಾಯದ ಹೊರತಾಗಿ ಧೂಮಪಾನ, ಮದ್ಯಪಾನ, ಪೌಷ್ಟಿಕ ಆಹಾರದ ಕೊರತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಗೊರಕೆಯನ್ನು ಉಲ್ಬಣಿಸಬಹುದು. ಬನ್ನಿ, ಗೊರಕೆಯನ್ನು ಯಾವ ಆಹಾರಗಳ ಮೂಲಕ ಕಡಿಮೆಗೊಳಿಸಬಹುದು ಎಂಬುದನ್ನು ನೋಡೋಣ....


ಜೇನು

ಜೇನು

ಒಂದು ವೇಳೆ ಗಂಟಲಿನ ಒಳಭಾಗದಲ್ಲಿ ಸೋಂಕಿನ ಕಾರಣದಿಂದ ಕೊಂಚ ಊದಿಕೊಂಡಿದ್ದು ಇದೇ ಕಾರಣಕ್ಕೆ ಗೊರಕೆ ಉಂಟಾಗಿದ್ದರೆ ಜೇನಿನ ಸೇವನೆಯಿಂದ ಈ ಗೊರಕೆ ಇಲ್ಲವಾಗುತ್ತದೆ. ಜೇನಿನಲ್ಲಿರುವ ಉರಿಯೂತ ನಿವಾರಕ ಗುಣ ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ನಿಮ್ಮ ನಿತ್ಯದ ಟೀಯಲ್ಲಿ ಕೊಂಚ ಜೇನನ್ನು ಬೆರೆಸಿ ರಾತ್ರಿ ಮಲಗುವ ಕೊಂಚ ಹೊತ್ತಿನ ಮುನ್ನ ಕುಡಿದರೆ ಉತ್ತಮ ಪರಿಣಾಮ ಪಡೆಯಬಹುದು.

ಮೀನು ಮತ್ತು ಮೀನೆಣ್ಣೆ

ಮೀನು ಮತ್ತು ಮೀನೆಣ್ಣೆ

ಗೊರಕೆಯಿಂದ ಹೊರಬರಲು ಮೀನು ಒಂದು ಉತ್ತಮ ಆಹಾರವಾಗಿದೆ. ಇದರೊಂದಿಗೆ ಮೀನೆಣ್ಣೆ ಅಥವಾ ಕಾಡ್ ಲಿವರ್ ಆಯಿಲ್ ನ ಸೇವನೆಯೂ ಗೊರಕೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಒಮೆಗಾ-೬ ಮತ್ತು ಒಮೆಗಾ-೩ ಕೊಬ್ಬಿನ ಆಮ್ಲಗಳು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.

ಮೀನು ಮತ್ತು ಮೀನೆಣ್ಣೆ

ಮೀನು ಮತ್ತು ಮೀನೆಣ್ಣೆ

ಇದರಿಂದ ಗಂಟಲ ಒಳಭಾಗದಲ್ಲಿ ಹಾಗೂ ಮೂಗಿನ ಒಳಭಾಗಗಳಲ್ಲಿ ತುಂಬಿಕೊಂಡಿದ್ದ ಕೊಬ್ಬು ಕರಗುತ್ತದೆ, ಇದರಿಂದ ವಾಯು ಸರಾಗವಾಗಿ ಸಾಗಲು ನೆರವಾಗುತ್ತದೆ ಹಾಗೂ ಗೊರಕೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಮೀನಿನೆಣ್ಣೆ ಆರೋಗ್ಯ ವೃದ್ಧಿಸುವ ಅದ್ಭುತ ಎಣ್ಣೆ

ಸೋಯಾ ಹಾಲು

ಸೋಯಾ ಹಾಲು

ನಿಮ್ಮ ನಿತ್ಯದ ಆಹಾರದಲ್ಲಿ ಹಸುವಿನ ಹಾಲಿನ ಬದಲು ಸೋಯಾ ಅವರೆಯ ಬಳಕೆಯಿಂದ ಗೊರಕೆ ಕಡಿಮೆಯಾಗುತ್ತದೆ. ಹಸುವಿನ ಹಾಲಿನಲ್ಲಿರುವ ಒಂದು ವಿಶೇಷ ಕಿಣ್ವ ಮೂಗಿನ ಒಳಭಾಗದ ಕೊಳವೆಗಳನ್ನು ಸಂಕುಚಿಸಲು ಕಾರಣವಾಗಿದ್ದು ಇದರಿಂದ ಗೊರಕೆಯುಂಟಾಗುತ್ತಿದೆ. ಈ ಹಾಲನ್ನು ಬದಲಿಸುವ ಮೂಲಕ ಗೊರಕೆಯೂ ಕಡಿಮೆಯಾಗುತ್ತದೆ. ಹಾಲಿಗೂ, ಸೋಯಾಗೂ ಬಿಪಿಗೂ ಏನು ಸಂಬಂಧ?

ಅರಿಶಿನ

ಅರಿಶಿನ

ಅರಿಶಿನದ ಉರಿಯೂತ ನಿವಾರಕ ಗುಣ, ಗುಣಪಡಿಸುವ ಮತ್ತು ಸೂಕ್ಷ್ಮಜೀವಿ ನಿವಾರಕ ಗುಣ ಮೂಗಿನ ಒಳಭಾಗದಲ್ಲಿ ಸೋಂಕು ಉಂಟಾಗದಂತೆ ತಡೆದು ಮೂಗಿನ ಒಳಭಾಗದ ಕೊಳವೆ ಸಂಕುಚಿತಗೊಳ್ಳುವುದನ್ನು ತಡೆಯುತ್ತದೆ. ಇದರಿಂದ ಗೊರಕೆಯೂ ಇಲ್ಲವಾಗುತ್ತದೆ.

ಕಡಿಮೆ ಕಾರ್ಬೋಹೈಡ್ರೇಟುಗಳಿರುವ ಆಹಾರಗಳು

ಕಡಿಮೆ ಕಾರ್ಬೋಹೈಡ್ರೇಟುಗಳಿರುವ ಆಹಾರಗಳು

ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುವ ಮೂಲಕವೂ ಗೊರಕೆಯನ್ನು ಕಡಿಮೆಗೊಳಿಸಬಹುದು. ಇನ್ಸುಲಿನ್ ಪ್ರಮಾಣ ಏರುಪೇರಾದಾಗ Sleep apnoea ಎಂಬ ಸ್ಥಿತಿ ಎದುರಾಗುತ್ತದೆ. ಈ ಸ್ಥಿತಿಯಲ್ಲಿ ಗೊರಕೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಕಾರ್ಬೋಹೈಡ್ರೇಟುಗಳು ಕಡಿಮೆ ಇರುವ ಆಹಾರಗಳನ್ನು ಸೇವಿಸುವುದೇ ಉತ್ತಮ.

English summary

Home remedies to stop snoring that really work!

Snoring is not a rare problem, but fairly common affliction in modern society. Snoring is debilitating to daily life. As you know, snoring can disrupt sleep, annoy sleep partners and might pose serious health consequences. This article is about foods and tips to stop snoring that you should make use to control your problem and have peaceful sleep for good. Keep reading it to discover how you can stop snoring at its source:
X
Desktop Bottom Promotion