For Quick Alerts
ALLOW NOTIFICATIONS  
For Daily Alerts

ಎಚ್ಚರ, ಇಂತಹ ಪಾತ್ರೆಗಳು ಕೂಡ ಆರೋಗ್ಯಕ್ಕೆ ಮಾರಕ

By Su.Ra
|

ಅಡುಗೆ ಮನೆ ಅಂದ್ರೆ ಅಲ್ಲಿ ಸುಂದರ ಪಾತ್ರೆಗಳಿಗೆ ಮೊದಲ ಪ್ರಾಶಸ್ತ್ಯ. ಒಂದಾನೊಂದು ಕಾಲದಲ್ಲಿ ಇಷ್ಟೆಲ್ಲ ವೆರೈಟಿ ಪಾತ್ರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಲೇ ಇರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಸಿಕ್ಕಾಪಟ್ಟೆ ಆಯ್ಕೆಗಳು ಮಹಿಳೆಯರನ್ನು ಕೈ ಬೀಸಿ ಕರೆಯುತ್ತೆ. ಶಾಪಿಂಗ್ ಅಂತ ಹೋಗುವ ಮಹಿಳೆಯರು ತಮ್ಮ ಅಡುಗೆ ಮನೆಗೆಂದೇ ಖರೀದಿಸುವ ಪಾತ್ರೆಗಳು ಅನೇಕ. ಒಂದು ಇದ್ರೆ ಇನ್ನೊಂದು ಬೇಕು ಅನ್ನಿಸುತ್ತೆ. ಇನ್ನೊಂದು ಇದ್ರೆ ಮತ್ತೊಂದು ಬೇಕು ಅನ್ನಿಸುತ್ತೆ. ಅಷ್ಟೊಂದು ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ತುಂಬಿಸಿಕೊಳ್ತಲೇ ಹೋಗುವ ಮಹಿಳೆಯರಿಗೇನು ಕಡಿಮೆ ಇಲ್ಲ. ಅಲ್ಯುಮಿನಿಯಂ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ

ಪ್ರತಿ ಪಾತ್ರೆಯಲ್ಲೂ ಮಹಿಳೆಯರನ್ನು ಆಕರ್ಷಿಸುವ ಏನಾದರೊಂದು ಗುಣ ಇದ್ದೇ ಇರುತ್ತೆ. ಹಾಗಾಗಿ ಮಹಿಳೆಯರ ಮನಸೆಳೆಯರು ಹಲವಾರು ಪಾತ್ರೆ ತಯಾರಿಕಾ ಕಂಪೆನಿಗಳೂ ಕೂಡ ಈಗ ಮುಗಿಬಿದ್ದಿವೆ. ಪಾತ್ರೆಗಳ ಜಾಹೀರಾತುಗಳಿಗೇನೂ ಕಡಿಮೆ ಇಲ್ಲ. ಜಸ್ಟ್ ಒಂದೇ ಒಂದು ಫೋನ್ ಕಾಲ್ ನಿಂದ ಕೂಡ ಪಾತ್ರೆಗಳನ್ನು ಖರೀದಿಸಬಹುದು. ಆದ್ರೆ ಎಂತಹ ಪಾತ್ರೆಗಳನ್ನು ಖರೀದಿಸಬೇಕು.

ಯಾವ ಪಾತ್ರೆ ಎಷ್ಟು ಸುರಕ್ಷಿತ ಅನ್ನುವ ಅರಿವು ಎಷ್ಟು ಮಹಿಳೆಯರಿಗಿದೆ ಹೇಳಿ. ನೀವು ಅಡುಗೆ ಮನೆಯಲ್ಲಿ ಬಳಸುವ ಪಾತ್ರೆಗಳೇ ನಿಮ್ಮ ಆರೋಗ್ಯಕ್ಕೆ ಮಾರಕವಾಗಿರಬಹುದು ಅನ್ನುವ ಸತ್ಯ ನಿಮಗೆ ತಿಳಿದಿದೆಯಾ.. ಇಲ್ಲ ಅಂದ್ರೆ ನೀವು ಈ ಲೇಖನ ಓದಲೇಬೇಕು. ನೀವು ಬಳಸುವ ಕೆಲವು ಪಾತ್ರೆಗಳು ನಿಮ್ಮ ಮನೆಮಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿರಬಹುದು. ಎಚ್ಚರ..

ಸ್ಕ್ರಾಚ್ ಆದ ನಾನ್ ಸ್ಟಿಕ್ ಪಾತ್ರೆಗಳು

ಸ್ಕ್ರಾಚ್ ಆದ ನಾನ್ ಸ್ಟಿಕ್ ಪಾತ್ರೆಗಳು

ನಿಮ್ಮ ಅಡುಗೆ ಮನೆಯಲ್ಲಿ ಸ್ಕ್ರಾಚ್ ಆದ ನಾನ್ ಸ್ಟಿಕ್ ಪಾತ್ರೆಗಳಿದ್ದಲ್ಲಿ ಅವುಗಳನ್ನು ಇನ್ನು ಮುಂದೆ ಬಳಸಲು ಹೋಗಲೇಬೇಡಿ. ಈಗಾಗಲೇ ನಡೆದಿರುವ ಅಧ್ಯಯನದ ಪ್ರಕಾರ ಸ್ಕ್ರಾಚ್ ಆಗಿರುವ ನಾನ್ ಸ್ಟಿಕ್ ಪಾತ್ರೆಗಳಿಂದ ಕಾನ್ಸರ್ ನಂತ ಮಹಾಮಾರಿ ಕಾಯಿಲೆ ಕೂಡ ನಿಮ್ಮನ್ನು ಆಕ್ರಮಿಸಿಬಿಡಬಹುದು ಎಂದು ಹೇಳಲಾಗುತ್ತಿದೆ. ನಾನ್ ಸ್ಟಿಕ್ ಪಾತ್ರೆಗಳು ಅತೀ ಹೆಚ್ಚು ದಿನ ಬಳಕೆ ಮಾಡಿದರೆ ಕೂಡ ಇಂತಹ ನಿಮಗೇ ತಿಳಿಯದಂತೆ ಕಾಯಿಲೆಗಳಿಗೆ ಆಹ್ವಾನ ನೀಡಬಹುದು ಅನ್ನೋದನ್ನು ಸಂಶೋಧಕರು ಈಗಾಗಲೇ ಬಹಿರಂಗ ಪಡಿಸಿದ್ದಾರೆ.

ಸ್ಟಿಕ್ಕರ್ ತೆಗೆಯದೆ ಇರುವ ಪಾತ್ರೆಗಳು

ಸ್ಟಿಕ್ಕರ್ ತೆಗೆಯದೆ ಇರುವ ಪಾತ್ರೆಗಳು

ಪಾತ್ರೆಗಳ ಬೆಲೆಯನ್ನು ಮತ್ತು ಕಂಪೆನಿಯ ಮಾಹಿತಿಯನ್ನು ಹೆಚ್ಚಿನ ಪಾತ್ರೆಗಳಲ್ಲಿ ಸ್ಟಿಕ್ಕರ್ ನಂತೆ ಅಂಟಿಸಿರುತ್ತಾರೆ. ಕೆಲವು ಸ್ಟಿಕ್ಕರ್ ಗಳು ಎಷ್ಟೇ ಎಳೆದು ತೆಗೆದರೂ ಸ್ವಲ್ಪ ಅಂಟು ಹಾಗೆಯೇ ಉಳಿದು ಬಿಡುತ್ತೆ. ನೀವು ಯಾವುದೇ ಕಾರಣಕ್ಕೂ ಖರೀದಿಸಿದ ಹೊಸ ಪಾತ್ರೆಯಲ್ಲಿನ ಸ್ಟಿಕ್ಕರ್ ತೆಗೆಯದೆ ಬಳಸಲು ಹೋಗಲೇ ಬೇಡಿ.. ಸ್ಟಿಕ್ಕರ್ ತೆಗೆಯಲು ಪಾತ್ರೆಯನ್ನು ಸ್ವಲ್ಪ ಬಿಸಿ ಮಾಡಿ. ತಾನಾಗೇ ಸ್ಟಿಕ್ಕರ್ ಬಿಟ್ಟುಕೊಳ್ಳುತ್ತೆ. ನಂತರ ಒಮ್ಮೆ ಆ ಪಾತ್ರೆಯನ್ನು ತೊಳೆದು ಕ್ಲೀನ್ ಮಾಡಿ ಬಳಸಿ..

ಸ್ಟಿಕ್ಕರ್ ತೆಗೆಯದೆ ಇರುವ ಪಾತ್ರೆಗಳು

ಸ್ಟಿಕ್ಕರ್ ತೆಗೆಯದೆ ಇರುವ ಪಾತ್ರೆಗಳು

ಇಲ್ಲದೇ ಇದ್ರೆ ಅಂಟಿನಲ್ಲಿರುವ ಕೆಮಿಕಲ್ ಅಂಶ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತೆ. ಇಂತಹದ್ದೇ ಕಾಯಿಲೆಗೆ ಕಾರಣವಾಗುತ್ತೆ ಅಂತ ಹೇಳಲಾಗದು. ವಾಂತಿ, ಬೇದಿಯಿಂದ ಹಿಡಿದು ದೊಡ್ಡ ಮಟ್ಟದ ಕಾಯಿಲೆಗಳಿಗೂ ಕೂಡ ಇದು ಕಾರಣವಾಗಬಹುದು. ಕೆಮಿಕಲ್ ಮಯ ಅಂಟಿನ ಅಂಶ ನಿಮ್ಮ ಹೊಟ್ಟೆ ಸೇರಿಸಿ ಉದರ ಸಂಬಂಧಿ ಕಾಯಿಲೆ, ಚರ್ಮರೋಗ, ಇತ್ಯಾದಿ ಸಮಸ್ಯೆಗೆ ಮುನ್ನುಡಿ ಬರೆಯುವ ಸಾಧ್ಯತೆ ಇರುತ್ತೆ.

ಕರಕಲು ಪಾತ್ರೆಗಳು

ಕರಕಲು ಪಾತ್ರೆಗಳು

ಕೆಲವು ಪಾತ್ರೆಗಳನ್ನು ನೀವು ಯಾವುದೋ ಅಡುಗೆ ಮಾಡುವಾಗ ಕರಟಿಸಿ ಇಡ್ತೀರ. ಆ ಕರಕಲು ಪಾತ್ರೆಯನ್ನು ಎಷ್ಟೇ ತಿಕ್ಕಿ ತೊಳೆದರೂ ಕೂಡ ಅಸಾಧ್ಯವಾಗಿರುತ್ತೆ. ಸರಿ ಹಾಗೆಯೇ ಇರಲಿ ಅಂತ ಬಿಟ್ಟು ಬಿಡ್ತೀರಿ. ದೋಸೆ ಕಾವಲಿ, ತವಾ , ಒಗ್ಗರಣೆ ಸೌಟು ಇಂತಹ ಪಾತ್ರೆಗಳ ವಿಚಾರದಲ್ಲಿ ಈ ನೆಗ್ಲಿಜೆನ್ಸಿ ಹೆಚ್ಚಿನ ಮಹಿಳೆಯರಲ್ಲಿ ಕಾಮನ್ ಆಗಿ ಇದ್ದೇ ಇರುತ್ತೆ. ಆದ್ರೆ ಇವು ಮುಂದಿನ ಬಾರಿ ಬಳಕೆ ಮಾಡುವಾಗ ಅಷ್ಟು ಯೋಗ್ಯವಲ್ಲ ಅನ್ನೋದು ಮನದಲ್ಲಿರಲಿ. ಪ್ರತಿ ಬಾರಿಯೂ ಪಾತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವತ್ತ ಗಮನವಿರಿಸಿ. ಕರಗಲು ಪಾತ್ರೆಯನ್ನು ಬಳಸೋದ್ರಿಂದ ದೇಹದಲ್ಲಿ ಕಾರ್ಬನ್ ಅಂಶ ಅಧಿಕವಾಗುತ್ತೆ.

ಪ್ಲಾಸ್ಟಿಕ್ ಪಾತ್ರೆಗಳು

ಪ್ಲಾಸ್ಟಿಕ್ ಪಾತ್ರೆಗಳು

ಪ್ಲಾಸ್ಟಿಕ್ ಪಾತ್ರೆಗಳು, ಪ್ರಮುಖವಾಗಿ ಟಿಫಿನ್ ಬಾಕ್ಸ್, ವಾಟರ್ ಬಾಟಲ್, ಕಾಫಿ ಕಪ್, ಟೀ ಕಪ್ ಇವುಗಳು ಹೆಚ್ಚಾಗಿ ಪ್ಲಾಸ್ಟಿಕ್ ಪಾತ್ರೆಗಳಾಗಿರುತ್ತೆ. ಪ್ಲಾಸ್ಟಿಕ್ ಮಾಡುವ ಅಪಾಯ ಎಂತದ್ದು ಅನ್ನೊದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಪ್ಲಾಸ್ಟಿಕ್ ಕ್ಯಾನ್ಸರ್ ಕಾರಕ ಅಂಶಗಳನ್ನು ಒಳಗೊಂಡಿರುತ್ತೆ. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಎಷ್ಟೇ ಉತ್ತಮ ಕ್ವಾಲಿಟಿಯದ್ದು ಅಂತ ನೀವು ಅಂದುಕೊಂಡಿದ್ರೂ ಕೂಡ ಅವುಗಳು ನಿಮ್ಗೆ ಅಪಾಯ ತಂದೊಡ್ಡುವ ವಸ್ತುಗಳು ಅನ್ನೋದನ್ನು ಮರೀಬೇಡಿ. ಈ ಸತ್ಯವನ್ನು ಅಮೇರಿಕಾದ ಡಾಕ್ಟರ್ ಅಸೋಶಿಯೇಷನ್ನೇ ಬಹಿರಂಗಪಡಿಸಿದ್ದು ಸುಮಾರು 52 ರೀತಿಯ ಕ್ಯಾನ್ಸರ್ ಗಳು ಇದ್ರಿಂದ ಬರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಕಾಗದದ ಲೋಟ, ತಟ್ಟೆಗಳು

ಕಾಗದದ ಲೋಟ, ತಟ್ಟೆಗಳು

ಇತ್ತೀಚೆಗೆ ಪಾತ್ರೆ ತೊಳೆಯುವ ಗೋಜಲು ಬೇಡ ಅಂತ ತುಂಬಾ ಜನ ಅತಿಥಿಗಳು ಬಂದಾಗ ಮನೆಯಲ್ಲಿ ಕಾಗದದ ತಟ್ಟೆ, ಲೋಟಗಳನ್ನು ಬಳಸೋದು ಮಾಮೂಲಾಗಿ ಬಿಟ್ಟಿದೆ. ಇವುಗಳು ಕೂಡ ಸೇಫ್ ಆಗಿರುವ ವಸ್ತುಗಳಲ್ಲ. ಅಡುಗೆ ಮನೆಯಲ್ಲಿ ಬಳಸಲು ಯೋಗ್ಯವಲ್ಲ. ಕೆಲವು ಫಂಕ್ಷನ್ ಗಳಲ್ಲೂ ಕೂಡ, ಟೀ ಅಂಗಡಿಗಳಲ್ಲಿ ಕೂಡ ಕಾಗದದ ಲೋಟದಲ್ಲಿ ಟೀ, ಕಾಫಿ ಸರ್ವ್ ಮಾಡ್ತಾರೆ. ಬಿಸಿಬಿಸಿ ಕಾಫಿ, ಟೀ , ಕಷಾಯ, ಹಾಲು ಯಾವುದೇ ಆಗಲಿ, ಅದನ್ನು ಕಾಗದದ ಲೋಟಕ್ಕೆ ಹಾಕಿದಾಗ ಕೆಮಿಕಲ್ ಮಿಶ್ರಿತ ವಸ್ತುಗಳು ನಿಮ್ಮ ಆಹಾರ ಪದಾರ್ಥಗಳನ್ನು ಸೇರುವ ಸಂದರ್ಭ ಹೆಚ್ಚಿರುತ್ತೆ. ಇವು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಮೊದಮೊದಲು ಇದರ ಪರಿಣಾಮ ನೇರವಾಗಿ ನಿಮಗೆ ತಿಳಿಯದೇ ಇರುವ ಸಾಧ್ಯತೆಗಳೇ ಹೆಚ್ಚು.

ಮಣ್ಣಿನ ಪಾತ್ರೆ

ಮಣ್ಣಿನ ಪಾತ್ರೆ

ಒಂದಾನೊಂದು ಕಾಲದಲ್ಲಿ ಮನುಷ್ಯ ಅಡುಗೆಗೆ ಬಳಸುತ್ತಾ ಇದ್ದದ್ದೇ ಮಣ್ಣಿನ ಪಾತ್ರೆಗಳನ್ನು. ಹಾಗಿರುವಾಗ ಮಣ್ಣಿನ ಪಾತ್ರೆಗಳ್ಯಾಕೆ ಡೇಂಜರ್ ಅನ್ನುವ ಪ್ರಶ್ನೆ ಸಹಜ. ಆದ್ರೆ ಇತ್ತೀಚಿಗೆ ಮಣ್ಣಿನ ಪಾತ್ರೆಗಳನ್ನು ಬಳಕೆ ಮಾಡುವವರು ಕಡಿಮೆ ಮಂದಿಯೇ. ಹೆಚ್ಚಂದ್ರೆ ನೀರು ಶೇಖರಣೆಗೆ ಬಳಸುತ್ತಾರೆ ಅಷ್ಟೇ. ಆದ್ರೆ ಸತ್ಯ ವಿಚಾರ ಏನು ಅಂದ್ರೆ ಮಣ್ಣಿನ ಪಾತ್ರೆಗಳನ್ನು ಸರಿಯಾದ ಕ್ರಮದಲ್ಲಿ ತಯಾರು ಮಾಡ್ತಿಲ್ಲ ಅನ್ನೋದು ಈಗಿನ ನೈಜ ಸತ್ಯ.

ಮಣ್ಣಿನ ಪಾತ್ರೆ

ಮಣ್ಣಿನ ಪಾತ್ರೆ

ಮಣ್ಣಿನ ಮಡಿಕೆಯಲ್ಲಿ ಮೊದಲೆಲ್ಲ ಆಹಾರ ಪದಾರ್ಥಗಳನ್ನು ಬೇಯಿಸಿದ್ರೆ ಅದರ ಮಣ್ಣು ಬಿಟ್ಟುಕೊಳ್ತಾ ಇರಲಿಲ್ಲ,. ಈಗ ಹಾಗಲ್ಲ. ಕೇವಲ ನೀರು ಇಟ್ರೆ ಸಾಕು, ಮಣ್ಣಿನ ಪಾತ್ರೆಯ ಮಣ್ಣು ನೀರನ್ನು ಸೇರಿರುತ್ತೆ ಮತ್ತು ಅದು ಇನ್ಫೆಕ್ಷನ್ ಗೆ ಕಾರಣವಾಗಬಹುದು. ಜ್ವರ, ನೆಗಡಿ, ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಸೋ ಮಣ್ಣಿನ ಗಡಿಗೆಗಳನ್ನು ಖರೀದಿಸುವಾಗಲೂ ಜಾಗೃತೆ ವಹಿಸಿ.

English summary

Hidden Dangers in Cookware, which should surprise you

Most people are aware of air pollution, water pollution and the dangers of household chemicals. Studies are now showing that certain cookware can also be polluting our bodies. Below are just some examples of how "traditional" cookware can be hazardous to you and you and your family's health.
X
Desktop Bottom Promotion