For Quick Alerts
ALLOW NOTIFICATIONS  
For Daily Alerts

'ಮೊಳಕೆಯೊಡೆದ ಬೆಳ್ಳುಳ್ಳಿಯ' ಜಬರ್ದಸ್ತ್ ಪವರ್‍‌ಗೆ ನಮ್ಮದೊಂದು ಸಲಾಂ!

ಸಾಮಾನ್ಯವಾಗಿ ಮೊಳಕೆಯೊಡೆದ ಧಾನ್ಯಗಳನ್ನು ಇವುಗಳ ಆರೋಗ್ಯಕರ ಗುಣಗಳಿಗಾಗಿ ನಾವೆಲ್ಲಾ ಸೇವಿಸುತ್ತೇವೆ. ಆದರೆ ಕೆಲವು ತರಕಾರಿಗಳು ಮೊಳಕೆಯೊಡೆದರೆ ಎಸೆದುಬಿಡುತ್ತೇವೆ. ಈರುಳ್ಳಿ, ಆಲೂಗಡ್ಡೆ ಇತ್ಯಾದಿ. ಈ ಪಟ್ಟಿಗೆ ಬೆಳ್ಳುಳ್ಳಿಯೂ ಸೇರುತ್ತದೆ.

By Manu
|

ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ನಾವೆಲ್ಲಾ ಈಗಾಗಲೇ ತಿಳಿದಿದ್ದೇವೆ. ಆದರೆ ಮೊಳಕೆ ಬಂದ ಬೆಳ್ಳುಳ್ಳಿಯನ್ನು ಮಾತ್ರ ಎಸೆದುಬಿಡುತ್ತೇವೆ. ಈ ಬೆಳ್ಳುಳ್ಳಿ ರುಚಿಯಲ್ಲಿ ಕಹಿ ಎಂಬ ಕಾರಣಕ್ಕೆ ನಾವು ಬಳಸುವುದಿಲ್ಲ. ಆದರೆ ಮೊಳಕೆ ಬಂದ ಬಳಿಕ ಬೆಳ್ಳುಳ್ಳಿಯ ಆರೋಗ್ಯಕರ ಗುಣಗಳು ಇನ್ನಷ್ಟು ಹೆಚ್ಚಿರುವ ಕಾರಣಕ್ಕೇ ಇದು ಕಹಿ ಬಂದಿರುವುದನ್ನು ನಾವು ಗಮನಿಸುವುದೇ ಇಲ್ಲ..! ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಸಾಮಾನ್ಯವಾಗಿ ಮೊಳಕೆಯೊಡೆದ ಧಾನ್ಯಗಳನ್ನು ಇವುಗಳ ಆರೋಗ್ಯಕರ ಗುಣಗಳಿಗಾಗಿ ನಾವೆಲ್ಲಾ ಸೇವಿಸುತ್ತೇವೆ. ಆದರೆ ಕೆಲವು ತರಕಾರಿಗಳು ಮತ್ತು ಹಣ್ಣುಗಳು ಮೊಳಕೆಯೊಡೆದರೆ ಎಸೆದುಬಿಡುತ್ತೇವೆ. ಈರುಳ್ಳಿ, ಆಲೂಗಡ್ಡೆ ಇತ್ಯಾದಿ. ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ

ಈ ಪಟ್ಟಿಗೆ ಬೆಳ್ಳುಳ್ಳಿಯೂ ಸೇರುತ್ತದೆ. ಆದರೆ ಇತ್ತಿಚಿನ ಸಂಶೋಧನೆಯಲ್ಲಿ ಮೊಳಕೆಯೊಡೆದ ತರಕಾರಿಗಳೂ ಹಲವು ಪೋಷಕಾಂಶಗಳಿಂದ ತುಂಬಿರುವ ಆಗರಗಳಾಗಿದ್ದು ಆರೋಗ್ಯವನ್ನು ವೃದ್ಧಿಸುತ್ತವೆ. ಬನ್ನಿ, ಇಂದು ಮೊಳಕೆಯೊಡೆದ ಬೆಳ್ಳುಳ್ಳಿಯ ಆರೋಗ್ಯಕರ ಲಾಭಗಳ ಬಗ್ಗೆ ಅರಿಯೋಣ....

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೊಳಕೆಯೊಡೆದ ಬಳಿಕ ಬೆಳ್ಳುಳ್ಳಿಯಲ್ಲಿ ಕೆಲವು ಆಂಟಿ ಆಕ್ಸಿಡೆಂಟುಗಳು ಉತ್ಪತ್ತಿಯಾಗುತ್ತವೆ. ಇವು ರಕ್ತದ ಸಂಚಾರವನ್ನು ಸುಗಮಗೊಳಿಸುತ್ತದೆ. ತನ್ಮೂಲಕ ಹೃದಯದ ಕೆಲಸವನ್ನು ಸುಲಭವಾಗಿಸಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋ ನ್ಯೂಟ್ರಿಯೆಂಟುಗಳು ಮೊಳಕೆಯೊಡೆದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ನಿಯಮಿತವಾಗಿ ಮೊಳಕೆಯೊಡೆದ ಬೆಳ್ಳುಳ್ಳಿಯ ಸೇವನೆಯಿಂದ ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು.

ಜೀವಕೋಶಗಳ ಸವೆತವನ್ನು ತಡೆಯುತ್ತದೆ

ಜೀವಕೋಶಗಳ ಸವೆತವನ್ನು ತಡೆಯುತ್ತದೆ

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಅವಧಿಗೂ ಮುನ್ನ ಜೀವಕೋಶಗಳು ನಾಶವಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ಚರ್ಮದಲ್ಲಿ ನೆರಿಗೆ ಬೀಳುವ ಸಾಧ್ಯತೆ ತಡವಾಗುತ್ತಾ ಹೋಗುತ್ತದೆ.

ಹೃದಯ ಸ್ತಂಭನವನ್ನು ತಡೆಗಟ್ಟುತ್ತದೆ

ಹೃದಯ ಸ್ತಂಭನವನ್ನು ತಡೆಗಟ್ಟುತ್ತದೆ

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಆಂಜ್ಯೋಯಿನ್ ಎಂಬ ಪೋಷಕಾಂಶವಿದ್ದು ರಕ್ತನಾಳಗಳಲ್ಲಿ ರಕ್ತ ಗಡ್ಡೆಗಟ್ಟದಂತೆ ತಡೆಯುತ್ತದೆ. ಪರಿಣಾಮವಾಗಿ ಹೃದಯ ಸ್ತಂಭನದ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಮ್ಮ ನಿತ್ಯದ ಅಡುಗೆಯಲ್ಲಿ ಸಾಮಾನ್ಯ ಬೆಳ್ಳುಳ್ಳಿಯ ಬದಲು ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ದೇಹದ ಪ್ರತಿ ಜೀವಕೋಶವನ್ನು ಉತ್ತಮಗೊಳಿಸುವ ಗುಣವಿರುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವಿವಿಧ ಸೋಂಕುಗಳಿಂದ ರಕ್ಷಣೆ ಪಡೆಯಲು ನೆರವಾಗುತ್ತದೆ.

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮೊಳಕೆಯೊಡೆದ ಬೆಳ್ಳುಳ್ಳಿಯ ಸೇವನೆಯಿಂದ ಗಾಢವಾಗಿದ್ದ ರಕ್ತ ತೆಳ್ಳಗಾಗಿ ರಕ್ತನಾಳಗಳ ಒಳಗೆ ಸುಲಭವಾಗಿ ಹರಿಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ಅಗತ್ಯವಿಲ್ಲದೇ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.

ಮರೆಗುಳಿತನವನ್ನು ತಡೆಯುತ್ತದೆ

ಮರೆಗುಳಿತನವನ್ನು ತಡೆಯುತ್ತದೆ

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪೋಷಕಾಂಶವಿದ್ದು ಇದು ಮೆದುಳಿನ ಜೇವಕೋಶಗಳಿಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಇದರಿಂದ ಮೆದುಳಿನ ಜೀವಕೋಶಗಳು ಸಾಯುವ ಸಂಖ್ಯೆ ಕಡಿಮೆಯಾಗಿ ಸ್ಮರಣಶಕ್ತಿ ಕುಂದುವ (dimentia) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತಾರ್ಕಿಕ ಶಕ್ತಿ ಕುಂದುವ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

English summary

Health benefits of sprouted garlic

Most of us may already be aware of the health benefits of garlic by now, right? Well, did you know that sprouted garlic can also be extremely healthy for the human body?
X
Desktop Bottom Promotion