For Quick Alerts
ALLOW NOTIFICATIONS  
For Daily Alerts

ಪ್ರಪಂಚದಲ್ಲೇ ಅತ್ಯಂತ ನ್ಯೂಟ್ರೀಷಿಯಸ್ ಆಹಾರ 'ಇಡ್ಲಿ'..

By Su.Ra
|

ಇಡ್ಲಿ...ಭಾರತದಲ್ಲಿ ಅದ್ರಲ್ಲೂ ದಕ್ಷಿಣ ಭಾರತದವ್ರಿಗೆ ಇಡ್ಲಿ ಗೊತ್ತಿಲ್ಲದೇ ಇರೋ ತಿಂಡಿಯೇನಲ್ಲ ಬಿಡಿ. ಆದ್ರೆ ವಿದೇಶಿಗರಿಗೆ ಭಾರತೀಯರ ಈ ಇಡ್ಲಿ ಅಷ್ಟಾಗಿ ಪರಿಚಯವಿರಲಿಲ್ಲ. ಆದ್ರೆ ಇತ್ತೀಚಿಗೆ ಇಡ್ಲಿಯ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಇಡ್ಲಿ ತಿನ್ನೋದ್ರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಸಂಶೋಧಕರು ಹಲವು ಅಂಶಗಳನ್ನು ತಿಳಿಯಪಡಿಸಿದ್ದಾರೆ.

ಅದೇ ಕಾರಣಕ್ಕಾಗಿ ಇಡ್ಲಿ ಈಗ ವಿಶ್ವದಾದ್ಯಂತ ಹೆಚ್ಚು ಪಾಪ್ಯುಲರ್ ಆಗುತ್ತಿರುವ ಭಾರತೀಯ ತಿಂಡಿಗಳಲ್ಲಿ ಒಂದು ಅಂತ ಹೇಳಿಕೊಳ್ಳೋದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡಬೇಕು. ನಮ್ಮ ದೇಶದ ಆಹಾರ ಕ್ರಮವೇ ಅಂತದ್ದು. ಇಲ್ಲಿ ವಿಭಿನ್ನತೆಗೆ ಅವಕಾಶವಿದೆ. ಇಡ್ಲಿಯಲ್ಲೂ ನಾವು ಹಲವು ವಿಶೇಷ ಇಡ್ಲಿಗಳನ್ನು ತಯಾರಿಸ್ತೀವಿ. ಆದ್ರೆ ನಾವೀಗ ಒಂದು ನಾರ್ಮಲ್ ಇಡ್ಲಿಯ ಬಗ್ಗೆ ಮಾತನಾಡೋಣ.

Idli

ನಿಮಗೆ ಮೊದಲನೆಯದಾಗಿ ತಿಳಿಯ ಬಯಸುವ ವಿಷಯ ಅಂದ್ರೆ ಇಡ್ಲಿ ಪ್ರಪಂಚದಲ್ಲೇ ಅತ್ಯಂತ ನ್ಯೂಟ್ರೀಷಿಯಸ್ ಫುಡ್ ಅನ್ನೋ ಖ್ಯಾತಿ ಗಳಿಸಿದೆ. ಫೀಝಾ, ಬರ್ಗರ್ ಅಂತ ತಿನ್ನುತ್ತಿದ್ದ ವಿದೇಶಿ ಮಂದಿ ಒಮ್ಮೆ ಇಡ್ಲಿ ಸೇವಿಸಿ ಫಿದಾ ಆಗಿ ಪದೇ ಪದೇ ಅದನ್ನು ತಯಾರಿಸಿ ತಿನ್ನುತ್ತಿದ್ದಾರಂತೆ.. ನೀವು ನಂಬಲಿಕ್ಕಿಲ್ಲ ಯಾರ ದೇಹದಲ್ಲಿ ನ್ಯೂಟ್ರೀಷಿಯಸ್ ಪ್ರಮಾಣ ಕಡಿಮೆ ಇರುತ್ತೋ ಅಂತವರು ಇಡ್ಲಿ ಸೇವಿಸೋದ್ರಿಂದ ಅವರ ದೇಹದ ನ್ಯೂಟ್ರೀಷಿಯಸ್ ಪ್ರಮಾಣ ಹೆಚ್ಚಾಗುತ್ತೆ ಅನ್ನೋದನ್ನು ಪ್ರಪಂಚದ ಹಲವು ಆಹಾರ ಸಂಶೋಧನಾ ಸಂಸ್ಥೆಗಳು ಬಹಿರಂಗ ಪಡಿಸಿವೆ. ಅದರಲ್ಲಿ W.H.O( World Health Organization)... ಬಗೆಬಗೆಯ ಇಡ್ಲಿ ರೆಸಿಪಿ-ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

ಭಾರತೀಯರ ಆಹಾರಗಳಲ್ಲೇ ಅತ್ಯಂತ ಉತ್ತಮ ಆಹಾರ

ಭಾರತೀಯರು ಕಂಡು ಹಿಡಿದಿರುವ ಆಹಾರಗಳಲ್ಲೇ ಅತ್ಯಂತ ಉತ್ತಮ ಆಹಾರ ಇಡ್ಲಿ ಅಂತ ಪರಿಗಣಿಸಲಾಗಿದೆ. ಎರಡರಿಂದ ಮೂರು ಇಂಚು ಅಗಲವಿರುವ ಇಡ್ಲಿಯನ್ನು ಎಲ್ಲರಿಗೂ ಗೊತ್ತಿರೋ ಹಾಗೆ ಸಾಮಾನ್ಯವಾಗಿ ಉದ್ದು ಮತ್ತು ಅಕ್ಕಿಯಿಂದ ತಯಾರಿಸ್ತೀವಿ. ನಾವು ಬಿಡಿ ಭಾರತದವ್ರೇ ಆಗಿರೋದ್ರಿಂದ ಇನ್ನೂ ವೆರೈಟಿ ವೆರೈಟಿ ಇಡ್ಲಿಗಳನ್ನು ತಯಾರಿಸುವ ಬಗೆ ಗೊತ್ತು. ಆದ್ರೆ ಒಂದು ಸಾಮಾನ್ಯ ಇಡ್ಲಿಯಲ್ಲಿ ಏನೇನಿರುತ್ತೆ. ಅದು ಆರೋಗ್ಯಕ್ಕೆ ಉಪಕಾರಿ ಅನ್ನೋ ಅಂಶದ ನಿಜಕ್ಕೂ ಹುಬ್ಬೇರಿಸುವಂತದ್ದು

ಇಡ್ಲಿಯಲ್ಲಿ ಏನೇನಿರುತ್ತೆ?

ಇಡ್ಲಿಯು ಕಾರ್ಬೋಹೈಡ್ರೇಟ್ಸ್,ಪ್ರೋಟೀನ್ಸ್, ಎನ್ಝೈಮ್ಸ್,ಫ್ಯಾಟ್ಸ್,ಅಮೈನೋ ಆಸಿಡ್ ಮತ್ತು ಫೈಬರ್ ಅಂಶಗಳನ್ನು ಒಳಗೊಂಡಿರುತ್ತೆ. ಆಶ್ಚರ್ಯ ಅಂದ್ರೆ ಇಡ್ಲಿ ತಿನ್ನುವವರು ದಪ್ಪ ಆಗಿ ಊದಿಕೊಳ್ಳೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಇಡ್ಲಿಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅಂಶ ಇರೋದೆ ಇಲ್ಲ. ಹಾಗಾಗಿ ಯಾರು ಡಯಟ್ ಮಾಡಿ ತೆಳು ಆಗ್ಬೇಕು, ಫಿಟ್ ಆಗಿ ಇರಬೇಕು ಅಂತ ಬಯಸ್ತಾರೋ ಅಂತವರು ಇಡ್ಲಿಯ ಸೇವನೆಯನ್ನು ಮಾಡಬಹುದು. ಆದ್ರೆ ನೀವು ಇಡ್ಲಿಯ ಜೊತೆಗೆ ಯಾವ ಸೈಡ್ ಡಿಶ್ ಬಳಸ್ತೀರಿ ಅನ್ನೋದು ಕೂಡ ತುಂಬಾ ಮಹತ್ವ ಪಡೆಯುತ್ತೆ ಅನ್ನೋದು ನೆನಪಿರಲಿ.. ಅತ್ಯಂತ ಫ್ಯಾಟ್ ಅಂಶಗಳನ್ನು ಒಳಗೊಂಡಿರುವ ಸೈಡ್ ಡಿಶ್ ಬಳಸಿದ್ರೆ ತೂಕ ಹೆಚ್ಚಳವಾಗಬಹುದು. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿಯಿಂದ ತಯಾರಿಸುವ ಚಟ್ನಿ ಮತ್ತು ಸಾಂಬಾರ್ ಬಳಕೆ ಮಾಡಲಾಗುತ್ತೆ. ಅದು ಅಷ್ಟೇನು ತೂಕ ಹೆಚ್ಚಳಕ್ಕೆ ಕಾರಣವಾಗದೇ ನಿಮ್ಮ ದೇಹಕ್ಕೆ ಇಷ್ಟನ್ನು ನ್ಯೂಟ್ರೀಷಿಯಸ್ ಆಹಾರವಾಗಿರುತ್ತೆ. ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

Idli sambar

ಇಡ್ಲಿಯ ಲಾಭಗಳು

ಇಡ್ಲಿಯನ್ನು ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾರೂ ಬೇಕಾದ್ರೂ ಸೇವಿಸ್ಬಹುದು. ಅದ್ರಲ್ಲೂ ಪ್ರಮುಖವಾಗಿ ಯಾರಿಗೆ ಹಲ್ಲು ಇರೋದಿಲ್ವೋ ಅಂತವರೂ ಕೂಡ ಇಡ್ಲಿಯನ್ನು ಆರಾಮಾಗಿ ಜಗಿದು ತಿಂದು ಜೀರ್ಣಿಸಿಕೊಳ್ಳಬಹುದು. ಇಡ್ಲಿ ಅತ್ಯಂತ ಬೇಗನೆ ನಿಮ್ಮ ದೇಹದಲ್ಲಿ ಜೀರ್ಣವಾಗುತ್ತೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಕೂಡ ಇಡ್ಲಿಯ ಸೇವನೆಯಿಂದ ಆರಾಮಾಗಿ ತಿಂದಿದನ್ನು ಜೀರ್ಣಿಸಿಕೊಂಡು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು.

ಅದೇ ಕಾರಣಕ್ಕೆ ಹುಷಾರಿಲ್ಲದೇ ಇದ್ದಾಗ ಇಡ್ಲಿಯ ಸೇವನೆಯನ್ನು ವೈದ್ಯರು ಸೂಚಿಸೋದು. ಅಷ್ಟೇ ಅಲ್ಲ ಆಹಾರವನ್ನು ಕೇವಲ ಟೇಸ್ಟ್ ಗಾಗಿ ಮಾತ್ರ ಸೇವಿಸದೇ, ರುಚಿಯ ಜೊತೆಗೆ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಅನ್ನುವ ಥಿಯರಿಯವ್ರು ನೀವಾಗಿದ್ರೆ ಖಂಡಿತ ನಿಮ್ಮ ಲಾಭಕ್ಕಾಗಿ ಅತ್ಯಂತ ಬೆಸ್ಟ್ ಆಹಾರ ಇಡ್ಲಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ವಾರಕ್ಕೊಮ್ಮೆಯಾದ್ರೂ ರುಚಿರುಚಿ ಇಡ್ಲಿ ಮಾಡಿ ಸವಿದು ನಿಮ್ಮ ಮನೆಮಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ...

English summary

Health benefits of nutrition calories in Idli

Idli, also known as iddly, is a steamed cake made from rice and black lentils originating from Southern India. Idlis are made in a specialized mold and eaten with chutney, vegetable stew or other flavorful toppings for breakfast or as a snack. These small treats are good for you and, as a bonus, convenient for those on the go. To make your diet a bit healthier, swap a donut or muffin for an 
 idli.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more