For Quick Alerts
ALLOW NOTIFICATIONS  
For Daily Alerts

ಗ್ರಾಮೀಣ ಭಾಗದ 'ನೀಲಿ' ಸುಂದರಿ 'ನೇರಳೆ ಹಣ್ಣಿನ' ಪ್ರಯೋಜನಗಳು

By Su.Ra
|

ನೇರಳೆ ಹಣ್ಣು, ಸೀಸನಲ್ ಫ್ರೂಟ್ ಎಲ್ಲಾ ಟೈಮಲ್ಲೂ ಸಿಗಲ್ಲ....ಸಿಗೋ ಟೈಮಲ್ಲಿ ದುಬಾರಿ ಬೆಲೆ ಬೇರೆ. ದುಬಾರಿ ಅಂತ ತಿನ್ನದೇ ಇದ್ರೆ ನಿಮಗೇ ಲಾಸ್.. ಯಾಕೆ ಅಂತ ಕೇಳುತ್ತಾ ಇದ್ದೀರಾ. ಅದಕ್ಕೆ ಖಂಡಿತ ಹಲವು ಕಾರಣಗಳಿವೆ. ನೇರಳೆ ಹಣ್ಣು ಸೌಂದರ್ಯ ವರ್ಧಕ. ಆರೋಗ್ಯಕಾರಕ.

ವರ್ಷಕ್ಕೊಮ್ಮೆ ಒಂದೆರಡು ತಿಂಗಳು ಮಾತ್ರ ಲಭ್ಯವಿರುವ, ಕಪ್ಪುಕಪ್ಪಾಗಿರುವ ಈ ಬ್ಯೂಟಿಫುಲ್ ಫ್ರೂಟ್ ಸವಿಯದೇ ಇದ್ದವರು ಮತ್ತೆ ಮಾರುಕಟ್ಟೆಯಲ್ಲಿ ನೋಡಿದಾಗ ಸವಿಯುವುದನ್ನು ಮರೀಬೇಡಿ.ನಾವು ಹಿಗೆ ಹೇಳೋದಕ್ಕೆ ಖಂಡಿತ ಹಲವು ಕಾರಣಗಳಿವೆ. ನೇರಳೆ ಬಣ್ಣದ ಈ ಹಣ್ಣು ನಮ್ಮ ಆರೋಗ್ಯಕ್ಕೆ ಮತ್ತು ನಮ್ಮ ಸೌಂದರ್ಯಕ್ಕೆ ನೀಡುವ ಬೆನಿಫಿಟ್‌ಗಳು ಹತ್ತು ಹಲವು. ಅವು ಯಾವುದು ಎಂಬುದನ್ನು ಮುಂದೆ ಓದಿ...

ಮೊಡವೆ ಕಲೆಗಳ ನಿಯಂತ್ರಣ

ಮೊಡವೆ ಕಲೆಗಳ ನಿಯಂತ್ರಣ

ಮ್ಯಾಜಿಕ್‌ ಮಿಕ್ಸ್‌ ಒಂದರ ಬಗ್ಗೆ ಹೇಳ್ತೀವಿ ಕೇಳಿ.. ನೇರಳೆ ಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಕ್ಸ್ ಮಾಡಿ ಅದನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಮುಖಕ್ಕೆ ಹಚ್ಚಿಕೊಳ್ತಾ ಬಂದ್ರೆ ಮೊಡವೆ ಕಲೆಗಳು ನಿಯಂತ್ರಣಕ್ಕೆ ಬರುತ್ತೆ. ಒಂದೇ ರಾತ್ರಿ ಹಚ್ಚಿದ್ರೆ ಕೆಲಸ ನಡೆಯಲ್ಲಾ... ದಿನಾ ಹಚ್ಚಬೇಕು.

ಬಾಯಿಯ ದುರ್ವಾಸನೆ ನಿಯಂತ್ರಣ

ಬಾಯಿಯ ದುರ್ವಾಸನೆ ನಿಯಂತ್ರಣ

ನೇರಳೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯ ಗುಣಗಳಿವೆ. ಅದೇ ಕಾರಣಕ್ಕೆ ಇದನ್ನು ಹಲ್ಲಿಗೆ ಸಂಬಂಧಿಸಿದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತೆ. ನೇರಳೆ ಎಲೆಗಳನ್ನು ತಿನ್ನೋದ್ರಿಂದ ಬಾಯಿಯ ದುರ್ವಾಸನೆಯಂತ ಸಮಸ್ಯೆಗಳು ದೂರವಾಗುತ್ತೆ. ಬೇಕಿದ್ರೆ ಟ್ರೈ ಮಾಡಿ ನೋಡಿ..

ಡಯಾಬಿಟಿಸ್ ನಿಯಂತ್ರಣ

ಡಯಾಬಿಟಿಸ್ ನಿಯಂತ್ರಣ

ಡಯಾಬಿಟಿಸ್ ಇರುವವರು ಕೂಡಾ ನೇರಳೆ ಹಣ್ಣನ್ನ ಸ್ವೀಕರಿಸ್ಬಹುದು. ಈ ಹಣ್ಣಲ್ಲಿ ಜಾಂಬೋಲಿನ್ ಅನ್ನುವ ವಿಶೇಷ ಗ್ಲುಕೋಸ್ ಅಂಶವಿರುತ್ತೆ. ಇದು ಆರೋಗ್ಯಕ್ಕೆ ಉತ್ತಮವಾದದ್ದು..

ಅಜೀರ್ಣ ಸಮಸ್ಯೆ ನಿವಾರಣೆ

ಅಜೀರ್ಣ ಸಮಸ್ಯೆ ನಿವಾರಣೆ

ಒಂದು ವೇಳೆ ನಿಮ್ಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದಲ್ಲಿ ಅದರ ನಿವಾರಣೆಗೆ ನೇರಳೆ ಹಣ್ಣಿನ ಜ್ಯೂಸ್ ಕುಡಿಯೋದು ಒಳಿತು. ಇಲ್ಲವೇ ಜಾಮೂನ್ ಹಣ್ಣಿನ ತಿರುಳು ಮತ್ತು ಮೊಸರನ್ನು ಮಿಕ್ಸ್ ಮಾಡಿ ಸೇವಿಸ್ಬಹುದು.

ಆಯಿಲಿ ಸ್ಕಿನ್ ಗೆ ಮುಕ್ತಿ ನೀಡುತ್ತೆ

ಆಯಿಲಿ ಸ್ಕಿನ್ ಗೆ ಮುಕ್ತಿ ನೀಡುತ್ತೆ

ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಖಂಡಿತ ಜಾಮೂನ್ ಫ್ರೂಟ್ ಬಳಕೆ ಮಾಡ್ಬಹುದು. ಈ ನೇರಳೆ ಹಣ್ಣಿನಲ್ಲಿ ನಿಮ್ಮ ತ್ವಚೆಯ ಎಣ್ಣೆಯನ್ನು ನಿಯಂತ್ರಣಕ್ಕೆ ತರುವ ಶಕ್ತಿಯಿದೆ. ನೇರಳೆ ಹಣ್ಣಿನ ಸಿಪ್ಪೆ, ಬಾರ್ಲಿ ಪೌಡರ್,ರೋಸ್ ವಾಟರ್ ಮತ್ತು ನೆಲ್ಲಿಕಾಯಿ ರಸವನ್ನು ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು.

 ಡಾರ್ಕ್ ಸ್ಪಾಟ್‌ಗಳನ್ನು ಹೋಗಲಾಡಿಸುತ್ತೆ

ಡಾರ್ಕ್ ಸ್ಪಾಟ್‌ಗಳನ್ನು ಹೋಗಲಾಡಿಸುತ್ತೆ

ನಿಮ್ಮ ಮುಖದಲ್ಲಿ ಡಾರ್ಕ್ ಸ್ಪಾಟ್‌ಗಳಿದ್ದಲ್ಲಿ ಅದಕ್ಕೂ ರಾಮಬಾಣದಂತೆ ನೇರಳೆಹಣ್ಣು. ರೋಸ್ ವಾಟರ್ ಮತ್ತು ಅಲ್‌ಮಂಡ್ ಆಯಿಲ್ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು.

ಸುಂದರ ತ್ವಚೆ

ಸುಂದರ ತ್ವಚೆ

ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತೆ. ನಿಮ್ಮ ರಕ್ತ ಶುದ್ದೀಕರಿಸುವ ಶಕ್ತಿ ಇದೆ. ಚರ್ಮವನ್ನು ಕ್ಲೀನ್ ಎಂಡ್ ಕ್ಲಿಯರ್ ಮಾಡೋದಕ್ಕೆ ಇದು ಸಹಕಾರಿಯಾಗಿರುತ್ತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಇದು ಹೆಲ್ಪ್ ಮಾಡುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸುಂದರ ತ್ವಚೆ

ಸುಂದರ ತ್ವಚೆ

ಅಷ್ಟೇ ಅಲ್ಲ ನಿಮ್ಮ ಋತುಚಕ್ರ ಸಮಸ್ಯೆಯನ್ನು ಸರಿಪಡಿಸಲು ಉಪಯೋಗಕಾರಿಯಾಗಿದೆ.ಒಟ್ಟಿನಲ್ಲಿ ನೇರಳೆಹಣ್ಣು ನಮ್ಮ ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

English summary

Health benefits of Jamun fruits

Jamun is also known as Jambul in the Indian sub-continent, and you would find these two names being used across many websites, portals and blogs that speak about the benefits of the dark fruit. The names talk about the fruit and the tree and how beneficial it would be for the human body too. The English call it
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more