ಬೀಟ್‌ರೂಟ್-ಕಿತ್ತಳೆ ಹಣ್ಣಿನ ಜ್ಯೂಸ್‌‌ನಲ್ಲಿರುವ ಪವರ್....

By: Deepu
Subscribe to Boldsky

ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ, ಟೀ ಸೇವಿಸುವುದು ಸಾಮಾನ್ಯ. ಡಾಕ್ಟರ್ ಬಳಿ ಹೋಗಿ ನಮಗೆ ಇರುವ ಒಂದು ಐದು ಸಮಸ್ಯೆಯನ್ನು ಹೇಳಿಕೊಂಡರೆ, ಅವರು ಹೇಳುವ ಪರಿಹಾರಗಳಲ್ಲಿ ಐದರಲ್ಲಿ ಒಂದು ಕಾಫಿ-ಟೀ ಸೇವಿಸಬೇಡಿ ಎಂದಿರುತ್ತದೆ. ಆ ಮಟ್ಟಿಗೆ ನಮ್ಮ ಅನಾರೋಗ್ಯಕ್ಕೆ ಈ ಕಾಫಿ-ಟೀಗೆ ಅಷ್ಟು ಮಟ್ಟಿಗಿನ ನಂಟು. ಹಿಂದಿನ ಕಾಲದಲ್ಲಿ ನಮ್ಮವರು ಈ ಕಾಫಿ-ಟೀ ಗಳನ್ನು ಸೇವಿಸುತ್ತಿರಲಿಲ್ಲ.

ಇವೆಲ್ಲಾ ಇತ್ತೀಚಿನ ಶತಮಾನಗಳಲ್ಲಿ ಭಾರತಕ್ಕೆ ಬಂದವು. ಇತ್ತೀಚಿನ ದಶಕಗಳಲ್ಲಿ ನಮ್ಮ ಮನೆಗಳಿಗೆ ಕಾಲಿಟ್ಟವು. ಆದರೆ ಈಗ ನಮ್ಮ ಪಾಲಿಗೆ ಬಿಟ್ಟು ಹೋಗದ ಚಟಗಳಾಗಿ ಪರಿಣಮಿಸಿವೆ. ಸರಿ ಇವುಗಳನ್ನು ಬಿಟ್ಟು ಆರೋಗ್ಯಕರವಾಗಿರುವುದು ಯಾವುದನ್ನಾದರು ಸೇವಿಸಬೇಕು ಬೆಳ್ಳಂಬೆಳಗ್ಗೆ ಎಂದುಕೊಳ್ಳುವವರಿಗೆ ನಮ್ಮ ಆಯ್ಕೆ ಯಾವುದೆಂದರೆ ಕಿತ್ತಳೆ ಮತ್ತು ಬೀಟ್ ರೂಟ್ ರಸ.

Health benefits a Glass of Beetroot and Orange Juice Every Day
  

ಹೌದು ಕಿತ್ತಳೆ ಮತ್ತು ಬೀಟ್‌ರೂಟ್ ರಸವು ನಮ್ಮ ಆರೋಗ್ಯವನ್ನು ಸುಧಾರಿಸುವ ಅಂಶಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಬೆಳಗ್ಗೆಯೇ ಸೇವಿಸುವುದರಿಂದ ನಿಮ್ಮ ಇಡೀ ದಿನ ಉಲ್ಲಾಸಕಾರಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಬನ್ನಿ ಇನ್ನು ತಡ ಮಾಡದೆ ಈ ಜ್ಯೂಸ್ ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ.     ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

ಅಗತ್ಯವಾಗಿರುವು ಪದಾರ್ಥಗಳು

*ಬೀಟ್‌ರೂಟ್ - ½

*ಕಿತ್ತಳೆ ರಸ- ½ ಕಪ್

Health benefits a Glass of Beetroot and Orange Juice Every Day
 

½ ಕಪ್ ಕಿತ್ತಳೆ ರಸಕ್ಕೆ ಕೆಲವು ಬೀಟ್‌ರೂಟ್‌ಗಳನ್ನು ಬೆರೆಸಿಕೊಂಡು ಬ್ಲೆಂಡರಿನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಈ ರಸವನ್ನು ಶೋಧಿಸಿಕೊಳ್ಳಿ. ಬೆಳಗ್ಗೆಯೇ ಇದನ್ನು ಸೇವಿಸಿ. ಇದರಿಂದ ನಿಮಗೆ ಹಲವಾರು ಡಿಸಾರ್ಡರ್‌ಗಳು ಬರುವುದು ತಪ್ಪುತ್ತದೆ. ಬನ್ನಿ ಯಾವ ಯಾವ ಆರೋಗ್ಯಕಾರಿ ಪ್ರಯೋಜನಗಳು ಇದನ್ನು ಸೇವಿಸುವುದರಿಂದ ಬರುತ್ತದೆ ಎಂದು ನೋಡೋಣ.

Health benefits a Glass of Beetroot and Orange Juice Every Day
 

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ನೈಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶಗಳು ಈ ಜ್ಯೂಸಿನಲ್ಲಿ ಸ್ವಾಭಾವಿಕವಾಗಿ ದೊರೆಯುತ್ತದೆ. ಇವು ರಕ್ತನಾಳಗಳನ್ನು ಹಿಗ್ಗಿಸಲು ನೆರವಾಗುತ್ತವೆ. ಆ ಮೂಲಕ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.

ಕ್ಯಾನ್ಸರ್ ನಿಯಂತ್ರಿಸುತ್ತದೆ

ಅಧ್ಯಯನಗಳ ಪ್ರಕಾರ ಕಿತ್ತಳೆ ಮತ್ತು ಬೀಟ್‌ರೂಟ್ ರಸದಲ್ಲಿ ಫೈಟೋನ್ಯೂಟ್ರಿಯೆಂಟ್‌ಗಳು ಲಭ್ಯವಿರುತ್ತವೆ. ಇವು ಪ್ರೋಸ್ಟೇಟ್, ಸ್ತನ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮೇಲೆ ಪರಿಣಾಮಕಾರಿಯಾಗಿ ಹೋರಾಡುತ್ತವೆಯಂತೆ.

ಜನನ ಕಾಲದ ನ್ಯೂನತೆಗಳನ್ನು ನಿವಾರಿಸುತ್ತದೆ

ಕಿತ್ತಳೆ ಮತ್ತು ಬೀಟ್‌ರೂಟ್ ರಸವನ್ನು ಗರ್ಭಿಣಿಯರು ಪ್ರತಿ ನಿತ್ಯ ಸೇವಿಸಿದರೆ ಮಗುವಿನ ಜನನ ಕಾಲದ ನ್ಯೂನತೆಗಳನ್ನು ನಿವಾರಿಸಬಹುದಂತೆ. ಇದರಿಂದ ಮಗುವಿಗೆ ಹುಟ್ಟುವ ಮೊದಲೆ ವಿಟಮಿನ್ ಬಿ, ಸಿ, ಮತ್ತು ಫೋಲೆಟ್ ಲಭಿಸುತ್ತದೆ.

Health benefits a Glass of Beetroot and Orange Juice Every Day
 

ಅಲ್ಸರ್‌ಗಳನ್ನು ನಿವಾರಿಸುತ್ತದೆ

ಈ ಸ್ವಾಭಾವಿಕ್ ಜ್ಯೂಸಿನಲ್ಲಿ ಆಂಟಿ-ಇನ್‌ಫ್ಲಮ್ಮೇಟರಿ ಅಂಶಗಳು ಇದ್ದು, ಇವು ಅಲ್ಸರ್‌ಗಳನ್ನು ನಿವಾರಿಸುತ್ತದೆ ಎಂದು ತಿಳಿದು ಬಂದಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಮನೆ ಮದ್ದಿನಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಇತರೆ ಪೋಷಕಾಂಶಗಳು ಅಧಿಕವಾಗಿ ಇರುತ್ತವೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನೀವು ಆರೋಗ್ಯಕರವಾಗುತ್ತೀರಿ.

Health benefits a Glass of Beetroot and Orange Juice Every Day
 

ಅನಿಮಿಯಾಗೆ ಒಳ್ಳೆಯ ಮದ್ದು

ಕಿತ್ತಳೆ ಮತ್ತು ಬೀಟ್‌ರೂಟ್ ರಸವನ್ನು ಸೇವಿಸುವುದರಿಂದ ಅನಿಮಿಯಾ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಂತೆ. ಏಕೆಂದರೆ ಈ ಜ್ಯೂಸ್ ನಿಮ್ಮ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

Health benefits a Glass of Beetroot and Orange Juice Every Day
  

ಹೃದ್ರೋಗ ಬರದಂತೆ ತಡೆಯುತ್ತದೆ

ಕಿತ್ತಳೆ ಮತ್ತು ಬೀಟ್‌ರೂಟ್ ರಸವು ನಿಮ್ಮ ರಕ್ತ ನಾಳಗಳಲ್ಲಿ ಕೊಲೆಸ್ಟ್ರಾಲ್ ಕಟ್ಟಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.

English summary

Health benefits a Glass of Beetroot and Orange Juice Every Day

Have you ever wondered what people of the ancient eras did when they were affected by ailments? Well, they depended on herbal medication which were made from vegetable and fruit extracts! Did you know that the juice made from beetroot and orange can treat a number of ailments? Well, learn how to prepare the juice, here.
Please Wait while comments are loading...
Subscribe Newsletter