For Quick Alerts
ALLOW NOTIFICATIONS  
For Daily Alerts

ಸರಿಯಾಗಿ ನೀರು ಕುಡಿಯದೇ ಇದ್ದರೆ-ಅಪಾಯಕ್ಕೆ ಮುಕ್ತ ಆಹ್ವಾನ!

By Super Admin
|

ನಮ್ಮ ಭೂಮಿಯಂತೆಯೇ ನಮ್ಮ ದೇಹವೂ ಸರಿಸುಮಾರು ಎಪ್ಪತ್ತು ಶೇಖಡಾ ನೀರಿನಿಂದ ಕೂಡಿದೆ. ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಆಹಾರವಿಲ್ಲದೇ ಹೆಚ್ಚು ದಿನ ಕಳೆಯಲು ಸಾಧ್ಯವಾದರೂ ನೀರಿಲ್ಲದೇ ಸಾಧ್ಯವಿಲ್ಲ. ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ

ಬದುಕಿರಲು ಮಾತ್ರವಲ್ಲ, ಉತ್ತಮ ಆರೋಗ್ಯ ಹೊಂದಿರಬೇಕಾದರೆ ನಿತ್ಯವೂ ಸತತವಾಗಿ ನೀರು ಕುಡಿಯುತ್ತಲೇ ಇರಬೇಕು. ನೀರಿನ ಪ್ರಮಾಣ ಕಡಿಮೆಯಾದರೆ ದೇಹದ ಹಲವು ಚಟುವಟಿಕೆಗಳು ಏರುಪೇರಾಗುತ್ತವೆ.

ನಮ್ಮ ದೇಹದ ಪ್ರತಿ ಅಂಗ, ಪ್ರತಿ ಜೀವಕೋಶಕ್ಕೂ ನೀರಿನ ಅಗತ್ಯವಿದೆ. ಆದರೆ ಕೆಲವರು ಮೂತ್ರಕ್ಕೆ ಸೂಕ್ತ ಸೌಲಭ್ಯ ಇಲ್ಲದಿರುವ ಮೊದಲಾದ ಕಾರಣಗಳನ್ನು ಮುಂದಿಟ್ಟುಕೊಂಡು ಅಗತ್ಯಪ್ರಮಾಣದಲ್ಲಿ ನೀರು ಕುಡಿಯುವುದೇ ಇಲ್ಲ. ಈ ಮನಃಸ್ಥಿತಿಯಿಂದ ಯಾವ ರೀತಿಯ ಪರಿಣಾಮಗಳು ಎದುರಾಗುತ್ತವೆ ಎಂಬುದನ್ನು ಮುಂದೆ ಓದಿ..... ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಪರಿಣಾಮ #1

ಪರಿಣಾಮ #1

ಅಗತ್ಯಕ್ಕೆ ತಕ್ಕಷ್ಟು ನೀರು ಕುಡಿಯುತ್ತಿದ್ದರೆ ನಮ್ಮ ರಕ್ತದಲ್ಲಿ 92% ರಷ್ಟು ಪ್ರಮಾಣ ನೀರು ತುಂಬಿರುತ್ತದೆ. ನೀರಿಯ ಪ್ರಮಾಣ ಕಡಿಮೆಯಾಗುತ್ತಾ ಹೋದಂತೆ ರಕ್ತ ಹೆಚ್ಚು ಹೆಚ್ಚು ಗಟ್ಟಿಯಾಗುತ್ತಾ ಹೋಗುತ್ತದೆ....

ಪರಿಣಾಮ #1

ಪರಿಣಾಮ #1

ಅಂದರೆ ರಕ್ತದ ಸಾಂದ್ರತೆ ಹೆಚ್ಚುತ್ತದೆ. ಈ ಹೆಚ್ಚು ಸಾಂದ್ರ ರಕ್ತವನ್ನು ದೇಹದ ಮೂಲೆ ಮೂಲೆಗಳಿಗೆ ತಲುಪಿಸಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಇದನ್ನು ಆಧರಿಸಿ ಹಲವು ಹೃದ್ರೋಗಗಳಿಗೆ ಕಾರಣವಾಗುತ್ತದೆ.

ಪರಿಣಾಮ #2

ಪರಿಣಾಮ #2

ನೀರು ಕಡಿಮೆಯಾದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವೂ ಹೆಚ್ಚುತ್ತದೆ. ಏಕೆಂದರೆ ನೀರು ಕಡಿಮೆಯಾದಾಗ ಜೀವಕೋಶಗಳಲ್ಲಿನ ನೀರು ಕಡಿಮೆಯಾಗಬಾರದೆಂದು ದೇಹ ಕೈಗೊಳ್ಳುವ ಕ್ರಮದ ಕಾರಣ ಕೊಲೆಸ್ಟ್ರಾಲ್ ಅನ್ನು ದೂಡಲು ಅಗತ್ಯವಾದ ನೀರನ್ನು ಬಳಸಿಕೊಳ್ಳುತ್ತದೆ. ಪರಿಣಾಮವಾಗಿ ಕೊಲೆಸ್ಟ್ರಾಲ್ ಕಣಗಳು ರಕ್ತನಾಳಗಳ ಒಳಗೆ ಉಳಿದುಕೊಂಡು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ.

ಪರಿಣಾಮ #3

ಪರಿಣಾಮ #3

ನೀರಿನ ಕೊರತೆಯಿಂದ ಚರ್ಮ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಚರ್ಮದ ಮೂಲಕ ಹೊರಹೋಗಬೇಕಾದ ವಿಷಕಾರಿ ವಸ್ತುಗಳು ನೀರಿನ ಕೊರತೆಯಿಂದ ಚರ್ಮದ ಅಡಿಯಲ್ಲಿಯೇ ಉಳಿದುಕೊಳ್ಳುತ್ತವೆ. ಇವು ನೆರಿಗೆ, ಕಪ್ಪು ಚುಕ್ಕೆ, ಕಲೆ, ಒಣಚರ್ಮ ಮೊದಲಾದವುಗಳಿಗೆ ಕಾರಣವಾಗುತ್ತವೆ.

ಪರಿಣಾಮ #4

ಪರಿಣಾಮ #4

ನೀರಿನ ಕೊರತೆಯಿಂದ ಮಲಬದ್ಧತೆ ಹೆಚ್ಚುತ್ತದೆ. ತ್ಯಾಜ್ಯದಿಂದ ದೊಡ್ಡಕರುಳು ಹೆಚ್ಚು ನೀರನ್ನು ಹೀರಿಬಿಡುವ ಕಾರಣ ತ್ಯಾಜ್ಯ ವಿಪರೀತವಾಗಿ ಗಟ್ಟಿಯಾಗುತ್ತದೆ. ಇದನ್ನು ಹೊರದೂಡಲು ಹೆಚ್ಚಿನ ಬಲಪ್ರಯೋಗಮಾಡಬೇಕಾಗುತ್ತದೆ.

ಪರಿಣಾಮ #4

ಪರಿಣಾಮ #4

ಇದರ ಪರಿಣಾಮವಾಗಿ ಆಸನ ನಳಿಕೆಯ ಒಳಭಾಗದ ಗೋಡೆ ಉಜ್ಜಿಕೊಂಡು ಕೊಂಚ ಭಾಗ ನೆರಿಗೆಯಾಗಿ ಹೊರಬಂದು ಪೈಲ್ಸ್ ಅಥವಾ ಮೂಲವ್ಯಾಧಿಗೂ ಕಾರಣವಾಗಬಹುದು. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು

ಪರಿಣಾಮ #5

ಪರಿಣಾಮ #5

ನೀರಿಲ್ಲದೇ ಇದ್ದರೆ ನಮ್ಮ ದೇಹದಲ್ಲಿ ಕಿಣ್ವಗಳ ಪರಿಣಾಮವೂ ಅಗತ್ಯಕ್ಕಿಂತ ನಿಧಾನವಾಗಿ ಆಗುತ್ತದೆ. ಇದು ಸುಸ್ತು, ನಿರಾಸಕ್ತಿ, ಬಳಲಿಕೆ, ನಿಃಶಕ್ತಿ ಆವರಿಸುವಂತೆ ಮಾಡುತ್ತದೆ. ಆದ್ದರಿಂದ ಚಟುವಟಿಕೆಯಿಂದಿರಲು ಸತತವಾಗಿ ನೀರು ಕುಡಿಯುತ್ತಲೇ ಇರಬೇಕು.

ಪರಿಣಾಮ #6

ಪರಿಣಾಮ #6

ನೀರಿನ ಕೊರತೆಯಿಂದ ನಿತ್ಯದ ಚಟುವಟಿಕೆಗೆ ಅಗತ್ಯವಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮೊದಲಾದ ಖನಿಜಗಳೂ ಸಿಗದಾಗಿ ಇದರ ಕೊರತೆಯಿಂದ ಕರುಳಿನ ಹುಣ್ಣು ಅಥವಾ ಅಲ್ಸರ್, ಹುಳಿತೇಗು, ಹೊಟ್ಟೆಯುರಿ, ಗ್ಯಾಸ್ಟ್ರೈಟಿಸ್ ಮೊದಲಾದ ತೊಂದರೆಗಳು ಎದುರಾಗುವ ಸಂಭವ ಹೆಚ್ಚುತ್ತದೆ.

ಪರಿಣಾಮ #7

ಪರಿಣಾಮ #7

ನೀರಿನ ಕೊರತೆಯಿಂದ ಶ್ವಾಸನಾಳಗಳು ಕಿರಿದಾಗುತ್ತವೆ. ಇದರಿಂದ ಉಸಿರಾಟ ಕಷ್ಟಕರವಾಗತೊಡಗುತ್ತದೆ. ಅಲ್ಲದೇ ಹಲವು ಅಲರ್ಜಿಕಾರಕ ತೊಂದರೆಗಳೂ ಎದುರಾಗಬಹುದು.

English summary

Harmful Symptoms of Not Drinking Enough Water

We are more of water than anything else. Yes, the human body is predominantly water. Without water, we can't even survive. Not only for survival, we need water for maintaining good health too. Many functions of your body go for a toss when you don't drink enough water.
X
Desktop Bottom Promotion