ಬೊಜ್ಜು ನಿಯಂತ್ರಿಸುವ ಶಕ್ತಿ- ಹಸಿರು ತರಕಾರಿಗಳಲ್ಲಿದೆ

By: manu
Subscribe to Boldsky

ಸೊಂಟದ ವಿಷ್ಯ ಬೇಡವೋ ಶಿಷ್ಯ ಎನ್ನುವ ಹಾಡೊಂದನ್ನು ನಾವು ಕೇಳಿದ್ದೇವೆ. ಆದರೆ ಸೊಂಟದ ವಿಷ್ಯವನ್ನು ಹಾಗೆ ಬಿಟ್ಟುಬಿಡಲು ಆಗುವುದಿಲ್ಲ. ಯಾಕೆಂದರೆ ಸೊಂಟದ ಬೊಜ್ಜು ದೇಹದಲ್ಲಿ ತುಂಬಾ ತೊಂದರೆಯನ್ನು ಉಂಟುಮಾಡುತ್ತಿರುತ್ತದೆ. ಸೊಂಟದ ಬೊಜ್ಜಿನಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ನಾವು ಉಪಯೋಗಿಸುವಂತಹ ಹಸಿರು ತರಕಾರಿಗಳನ್ನು ಬಳಸಿಕೊಂಡು ಸೊಂಟದ ಬೊಜ್ಜನ್ನು ಕರಗಿಸಬಹುದು. ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?

ಹಸಿರು ತರಕಾರಿಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಶೇ. 90ರಷ್ಟು ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ. ಶೇ.93ರಷ್ಟು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇಂತಹ ಹಸಿರು ತರಕಾರಿಗಳಲ್ಲಿ ಯಾವುದೇ ಕ್ಯಾಲರಿಗಳು ಇಲ್ಲದೆ ಇರುವ ಕಾರಣ ಇದು ತೂಕ ಕಳೆದುಕೊಳ್ಳಲು ಪ್ರಮುಖ ಆಹಾರ. ತೂಕ ಹೆಚ್ಚಿರುವವರು ಹಸಿರು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಪ್ರತಿನಿತ್ಯ ತೆಗೆದುಕೊಂಡರೆ ಅವರ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ದೇಹಕ್ಕೆ ಬೇಕಿರುವ ಪೋಷಕಾಂಶಗಳು ಮತ್ತು ಶಕ್ತಿ ಲಭ್ಯವಾಗುತ್ತದೆ. ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ

ದೇಹದಲ್ಲಿನ ಕ್ಯಾಲರಿ ದಹಿಸಿದಾಗ ಈ ತರಕಾರಿಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಸೊಂಟದ ಬೊಜ್ಜನ್ನು ಕಡಿಮೆ ಮಾಡಬಲ್ಲ ಏಳು ಹಸಿರು ತರಕಾರಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಹಸಿರು ತರಕಾರಿಗಳನ್ನು ತಿನ್ನುವುದರೊಂದಿಗೆ ದಿನದಲ್ಲಿ 20 ನಿಮಿಷ ಕಾಲ ನಡಿಗೆ, ಓಟ ಅಥವಾ ಹಗುರ ವ್ಯಾಯಾಮ ಮಾಡಿದರೆ ಸೊಂಟದ ಬೊಜ್ಜು ಕೆಲವೇ ವಾರಗಳಲ್ಲಿ ಮಾಯವಾಗಲಿದೆ.

ಹಸಿರು ಮೆಣಸು

ಹಸಿರು ಮೆಣಸು

ಹಸಿರು ಮೆಣಸು ಅಥವಾ ಕ್ಯಾಪ್ಸಿಕಂನಲ್ಲಿ ಉನ್ನತ ಮಟ್ಟದ ಆರೋಗ್ಯಕರ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿದ್ದು, ಇದು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಹಸಿರು ಸೇಬು

ಹಸಿರು ಸೇಬು

ಆರೋಗ್ಯಕ್ಕೆ ಕೆಂಪು ಸೇಬು ಮಾತ್ರ ಒಳ್ಳೆಯದು ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು. ಹಸಿರು ಸೇಬಿನಲ್ಲಿ ಕ್ಯಾಲರಿ ಕಡಿಮೆಯಿದೆ ಮತ್ತು ನಾರಿನಾಂಶ ಜಾಸ್ತಿಯಿರುವ ಕಾರಣ ತೂಕ ಕಳೆದುಕೊಳ್ಳಲು ಇದು ನೆರವಾಗುತ್ತದೆ.

ಮೆಣಸು

ಮೆಣಸು

ಖಾರ ದೇಹಕ್ಕೆ ಒಳ್ಳೆಯದು. ಹೆಚ್ಚು ಹೆಚ್ಚು ಖಾರ ಸೇವಿಸಿದಷ್ಟು ನೀವು ಹೆಚ್ಚು ತೂಕ ಕಳೆದುಕೊಳ್ಳಲಿದ್ದೀರಿ. ಮೆಣಸನ್ನು ಒಳಗೊಂಡಿರುವ ಖಾರದ ಆಹಾರಗಳಿಂದ ನಿಮ್ಮ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ಸೊಂಟದಲ್ಲಿ ಜಮೆಯಾಗಿರುವ ಕೊಬ್ಬನ್ನು ಕರಗಿಸಲು ತುಂಬಾ ನೆರವಾಗಲಿದೆ.

ಬೀನ್ಸ್

ಬೀನ್ಸ್

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ನಾರಿನಾಂಶವನ್ನು ಹೊಂದಿರುವ ಬೀನ್ಸ್ ಗಳನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಬಹುದು. ಬೇಯಿಸಿದ ಕಾಳುಗಳು ತೂಕ ಕಳೆದುಕೊಳ್ಳಲು ಮತ್ತಷ್ಟು ಒಳ್ಳೆಯದು.

ಬ್ರೂಕೋಲಿ

ಬ್ರೂಕೋಲಿ

ವಿಟಮಿನ್ ಕೆ ಯನ್ನು ಹೊಂದಿರುವ ಬ್ರಾಕೋಲಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕರ ಮತ್ತು ವೇಗದ ತರಕಾರಿಯಾಗಿದೆ. ಬ್ರಾಕೋಲಿ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕ್ಯಾನ್ಸರ್ ನ್ನು ದೂರವಿರಿಸುತ್ತದೆ.

ಬಸಳೆ

ಬಸಳೆ

ಇದು ಪ್ರೋಟೀನ್ ಮತ್ತು ವಿಟಮಿನ್ ನಿಂದ ಸಮೃದ್ಧವಾಗಿರುವ ತರಕಾರಿ. ಇದರಲ್ಲಿ ಕಡಿಮೆ ಕ್ಯಾಲರಿ ಮತ್ತು ಉನ್ನತ ಮಟ್ಟದ ನಾರಿನಾಂಶ ಮತ್ತು ಶಕ್ತಿ ಒಳಗೊಂಡಿದೆ. ಇದು ತೂಕ ಕಳೆದುಕೊಳ್ಳಲು ಪ್ರಮುಖ ಆಹಾರವಾಗಿದೆ.

ಕ್ಯಾಬೇಜ್

ಕ್ಯಾಬೇಜ್

ನಿಮಗೆ ಆದಷ್ಟು ಬೇಗೆ ತೂಕ ಕಳೆದುಕೊಳ್ಳಬೇಕು ಎಂದಿದೆಯಾ? ಹಾಗಾದರೆ ನೀವು ವಾರದಲ್ಲಿ ಎರಡು ಬಾರಿ ಕ್ಯಾಬೇಜ್ ಸೂಪ್ ಮಾಡಿ ಕುಡಿಯಿರಿ. ಈ ಸೂಪ್ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಆರೋಗ್ಯವನ್ನು ಕಾಪಾಡುವುದು. ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ

 
English summary

Green Treats That Burn Lower Belly Fat

Belly fat is like a disease, well almost! If you don't get rid of it, that extra fat around your waist will lead to a lot of health complications which you might regret later on. Green foods have always been the best when it comes to weight loss. Experts state that when you add green foods to your every day diet, there is a 90 per cent increase in your metabolism. have a look of these green foods benefits
Subscribe Newsletter