For Quick Alerts
ALLOW NOTIFICATIONS  
For Daily Alerts

ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

By Manu
|

ಆಹಾರದಲ್ಲಿಯೂ ಲೆಕ್ಕಾಚಾರವೇ? ಎಂಥಾ ಕಾಲ ಬಂತಪ್ಪಾ ಎಂದು ಅಚ್ಚರಿಗೊಳ್ಳಬೇಡಿ. ಇಂದು ಕೆಲವರು ತಮ್ಮ ಆಹಾರವನ್ನು ಕ್ಯಾಲೋರಿಗಳ ಲೆಕ್ಕದಲ್ಲಿ, ತೂಕದ ಲೆಕ್ಕದಲ್ಲಿ ಸೇವಿಸುತ್ತಾರೆ. ಇದು ಅಂತಹ ಲೆಕ್ಕವಲ್ಲ. ನಮ್ಮ ದೇಹದಲ್ಲಿ ಜೀರ್ಣಗೊಂಡ ಬಳಿಕ ತ್ಯಾಜ್ಯವನ್ನು ವಿಸರ್ಜಿಸುವ ಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುವ ಲೆಕ್ಕಾಚಾರ. ಶುಂಠಿಯ ಆರೋಗ್ಯಕರ ಗುಣಗಳ ಬಗ್ಗೆ ನಾವು ಅರಿತೇ ಇದ್ದೇವೆ. ಆದರೆ ಈ ಶುಂಠಿಯ ರಸವನ್ನು ಸೇವಿಸುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿದ್ದೀರಾ? ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಜೀರ್ಣಕ್ರಿಯೆಯಲ್ಲಿ ಶುಂಠಿ ಅಪಾರವಾಗಿ ನೆರವಾಗುವ ಜೊತೆಗೇ ವಿಸರ್ಜನೆಯೂ ಸುಲಭವಾಗುವಂತೆ ಮಾಡುತ್ತದೆ. ವಿಶೇಷವಾಗಿ ವಿಷಕಾರಕ ತ್ಯಾಜ್ಯಗಳು ಹೆಚ್ಚಿದ್ದಾಗ ಇವನ್ನು ಹೊರಹಾಕಲು ಶುಂಠಿಯ ರಸ ಅತ್ಯುತ್ತಮವಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ? ತುಂಬಾ ಸುಲಭ. ಸುಮಾರು ಒಂದಿಂಚಿನ ಶುಂಠಿಯ ತುಂಡನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!

ಒಂದು ಚಿಕ್ಕ ಪಾತ್ರೆಯಲ್ಲಿ ಈ ತುಂಡುಗಳನ್ನು (ಅಥವಾ ಜಜ್ಜಿಯೂ ಹಾಕಬಹುದು) ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದೊಡನೆ ಉರಿಯನ್ನು ತೀರಾ ಚಿಕ್ಕದಾಗಿಸಿ ಇಪ್ಪತ್ತು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಐದರಿಂದ ಹತ್ತು ನಿಮಿಷ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ. ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಿರಿ. ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಈ ನೀರನ್ನು ಕುಡಿಯುವುದರಿಂದ ಇನ್ನೂ ಕೆಲವು ಪ್ರಯೋಜನಗಳಿವೆ, ಮುಂದೆ ಓದಿ....

ಪ್ರಯೋಜನ #1

ಪ್ರಯೋಜನ #1

ಒಂದು ವೇಳೆ ಚಿಕ್ಕ ಪುಟ್ಟ ಕಾಯಿಲೆ ಆವರಿಸಿದ್ದರೆ ಈ ನೀರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡಿ ಶೀಘ್ರವೇ ಗುಣವಾಗಲು ನೆರವಾಗುತ್ತದೆ.

ಪ್ರಯೋಜನ #2

ಪ್ರಯೋಜನ #2

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಹಲವು ವಿಧದ ರೋಗಗಳ ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಲು ನೆರವಾಗುತ್ತದೆ.

ಪ್ರಯೋಜನ #3

ಪ್ರಯೋಜನ #3

ಈ ನೀರು ರಕ್ತಪರಿಚಲನೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ರಕ್ತಪರಿಚಲನೆ ಉತ್ತಮವಿದ್ದಾಗ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಪ್ರಯೋಜನ#4

ಪ್ರಯೋಜನ#4

ಒಂದು ವೇಳೆ ಚಳಿಜ್ವರ ಅಥವಾ ಇನ್ನಾವುದೋ ಕಾರಣದಿಂದ ನಡುಗುತ್ತಿದ್ದರೆ ತಕ್ಷಣ ಒಂದು ಲೋಟ ಬಿಸಿಬಿಸಿಯಾದ ಶುಂಠಿನೀರನ್ನು ಕುಡಿದರೆ ತಕ್ಷಣವೇ ದೇಹದ ತಾಪಮಾನ ಏರಿ ನಡುಕ ಇಲ್ಲವಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಈ ನೀರಿನ ಸೇವನೆಯಿಂದ ನರವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ. ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಿದವರಲ್ಲಿ ನರವ್ಯವಸ್ಥೆ ಅತ್ಯುತ್ತಮವಾಗಿರುವುದು ಕಂಡುಬಂದಿದೆ. ವಿಶೇಷವಾಗಿ ನರಪ್ರಚೋದನೆಯ ಪ್ರತಿಕ್ರಿಯೆ ಉತ್ತಮಗೊಳ್ಳುವ ಮೂಲಕ ನಿತ್ಯದ ಚಟುವಟಿಕೆಯ ಜೊತೆಗೇ ಕ್ರೀಡೆಯಲ್ಲಿ ಚುರುಕುತನ ನೀಡಿದರೆ, ಕಲಿಯುವಿಕೆಯಲ್ಲಿ ಹೆಚ್ಚುವ ಏಕಾಗ್ರತೆ ಬುದ್ದಿವಂತಿಕೆಯನ್ನು ಹೆಚ್ಚಿಸುತ್ತದೆ.

ಪ್ರಯೋಜನ #6

ಪ್ರಯೋಜನ #6

ನಿತ್ಯವೂ ಒಂದು ಲೋಟ ಶುಂಠಿನೀರು ಕುಡಿಯುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ತನ್ಮೂಲಕ ಅಪಾಯವಾಯು, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ ಹಾಗೂ ಕರುಳುಗಳಲ್ಲಿದ್ದ ತ್ಯಾಜ್ಯ ಹೊರಹೋಗಿರುವ ಮೂಲಕ ಹೊಟ್ಟೆ ಖಾಲಿಯಾದಂತನ್ನಿಸುತ್ತದೆ.

ಪ್ರಯೋಜನ #7

ಪ್ರಯೋಜನ #7

ಒಂದು ವೇಳೆ ಹೊಟ್ಟೆಯಲ್ಲಿ ಗುಳುಗುಳು ಅನ್ನಿಸುತ್ತಿದ್ದರೆ ಒಂದು ಲೋಟ ಶುಂಠಿಯ ನೀರನ್ನು ಕುಡಿಯುವ ಮೂಲಕ ಇದನ್ನು ಕಡಿಮೆಗೊಳಿಸಬಹುದು.

English summary

Ginger+Water= Cleansing Drink

Refresh your system and feel cleansed in the morning with ginger water. We all know about the medicinal properties of ginger. But have you started your day with it? The strong taste of ginger and its aroma will make you feel cleansed especially if you have a body full of toxins. Well, how to prepare ginger water? Its simple. Take a piece of ginger and slice it into small pieces. Fill a small pot with water and boil it.
X
Desktop Bottom Promotion