For Quick Alerts
ALLOW NOTIFICATIONS  
For Daily Alerts

ಜ್ವರ ಬಂದ್ರೆ ಮಾತ್ರೆ ಬೇಕಿಲ್ಲ, ಸರಿಯಾದ 'ಆಹಾರ ಪಥ್ಯವೇ' ಸಾಕು

ಜ್ವರ ಬಂದಾಗ ಯಾವ ಆಹಾರವೂ ಬಾಯಿಗೆ ರುಚಿ ಅನಿಸುವುದಿಲ್ಲ. ಹಾಗಂತ ಏನೂ ತಿನ್ನದೆ ಇದ್ದರೆ ಮತ್ತಷ್ಟು ಸುಸ್ತು ಬೀಳುತ್ತೇವೆ. ಕೆಲವೊಂದು ಆಹಾರಗಳು ನಮ್ಮ ಸುಸ್ತನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.

By Manu
|

ಜ್ವರ ಕಾಣಿಸಿಕೊಂಡಾಗ ಬಾಯಿಗೆ ರುಚಿ ಕೂಡ ಇರುವುದಿಲ್ಲ ಮತ್ತು ಏನೂ ತಿನ್ನುವುದು ಬೇಡ ಎನ್ನುವಂತೆ ಆಗುತ್ತದೆ. ಆದರೆ ಜ್ವರ ಬಂದಾಗ ದೇಹವು ಕೂಡ ನಿಶ್ಯಕ್ತಿಗೆ ಒಳಗಾಗುವ ಕಾರಣದಿಂದಾಗಿ ಏನಾದರೂ ತಿನ್ನುವುದು ಇಲ್ಲವಾದರೆ ಮಾತ್ರೆಗಳ ಪ್ರಭಾವದಿಂದ ದೇಹವು ಮತ್ತಷ್ಟು ಬಳಲಿಕೆ ಅನುಭವಿಸುತ್ತದೆ. ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ಜ್ವರ ಬಂದ ಸಂದರ್ಭದಲ್ಲಿ ಯಾವ ಆಹಾರಗಳನ್ನು ಸೇವಿಸುಬಹುದು ಎನ್ನುವ ಬಗ್ಗೆ ನಾವು ಇಲ್ಲಿ ಕೆಲವೊಂದು ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಅದನ್ನು ನೀವು ತಿಳಿದುಕೊಳ್ಳಿ.

ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ಹಣ್ಣಿನ ಜ್ಯೂಸ್

ಜ್ವರದಿಂದ ದೇಹ ಬಳಲಿದ್ದಾಗ ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಜಾಣತನ. ಈಗತಾನೇ ಹಿಂಡಿ ತೆಗೆದ ತಾಜಾ ಕಿತ್ತಳೆ ರಸವನ್ನು ಕುಡಿಯುವ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಶೀಘ್ರವೇ ವೈರಸ್ಸುಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ.

ಚಿಕನ್ ಸೂಪ್

ಚಿಕನ್ ಸೂಪ್

ಗಂಟಲಿನ ಕೆರೆತ ಹಾಗೂ ಜ್ವರವಿದ್ದರೆ ಒಂದು ಬೌಲ್ ಕೋಳಿ ಸೂಪ್ ನ್ನು ಕುಡಿಯಿರಿ. ಕೋಳಿಯಲ್ಲಿ ಪ್ರೋಟೀನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸೂಪ್‌ನಲ್ಲಿರುವ ಸಾಂಬಾರ ಪದಾರ್ಥಗಳು ಜ್ವರದ ಲಕ್ಷಣಗಳನ್ನು ಕಡಿಮೆ ಮಾಡುವುದು. ಆರೋಗ್ಯಕರ ಡಯಟ್ -ಚಿಕನ್ ಸೂಪ್

ಶುಂಠಿಯ ಕಷಾಯ

ಶುಂಠಿಯ ಕಷಾಯ

ಒಂದು ಕಪ್ ಕಪ್ಪು ಚಹಾ ತಯಾರಿಸಿ. ಇದಕ್ಕೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸೇರಿಸಿ ಒಂದು ದೊಡ್ಡಚಮಚ ಜೇನುತುಪ್ಪ ಸೇರಿಸಿ. ಬಿಸಿಬಿಸಿಯಿರುವಂತೆಯೇ ಈ ಕಷಾಯವನ್ನು ಕುಡಿಯಿರಿ. ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶೀಘ್ರವೇ ಕಡಿಮೆಯಾಗುತ್ತದೆ. ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ

ಅರಿಶಿನ ಹಾಲು

ಅರಿಶಿನ ಹಾಲು

ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಬಸಲೆ ಸೊಪ್ಪು

ಬಸಲೆ ಸೊಪ್ಪು

ಹೆಚ್ಚಿನವರಿಗೆ ಹಸಿರು ತರಕಾರಿ ಎಂದರೆ ಅಲರ್ಜಿ. ಇದರಿಂದ ದೂರ ಹೋಗುತ್ತಾರೆ. ಆದರೆ ಟೊಮೊಟೋ ಹಾಗೂ ಬಸಲೆಯಂತಹ ಆ್ಯಂಟಿಆಕ್ಸಿಡೆಂಟ್‌ಗಳು ವೈರಲ್ ಜ್ವರನ್ನು ಕಡಿಮೆ ಮಾಡುತ್ತದೆ.

ಗಂಜಿ ಊಟ

ಗಂಜಿ ಊಟ

ಜ್ವರವಿದ್ದಾಗ ಸೇವಿಸಲು ಅನ್ನದ ಗಂಜಿ ಉತ್ತಮ ಆಯ್ಕೆಯಾಗಿದೆ. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವುದು ಹಾಗೂ ಜ್ವರವನ್ನು ಕಡಿಮೆಗೊಳಿಸಲು ಅಗತ್ಯವಿರುವ ಶಕ್ತಿಯನ್ನೂ ಪಡೆದಂತಾಗುವುದು. ಇದಕ್ಕಾಗಿ ಕುಚ್ಚಿಗೆ ಅಕ್ಕಿಯ ಗಂಜಿ ಊಟ ಉತ್ತಮವಾಗಿದೆ.

ಸಿಪ್ಪೆ ಸುಲಿದ ಹಣ್ಣುಗಳು

ಸಿಪ್ಪೆ ಸುಲಿದ ಹಣ್ಣುಗಳು

ಒಂದು ವೇಳೆ ಜ್ವರ ಅತಿಯಾಗಿದ್ದರೆ ಸಿಪ್ಪೆ ಸುಲಿಯಬಹುದಾದ ಹಣ್ಣುಗಳನ್ನು ಸಿಪ್ಪೆ ಸುಲಿದು ಸೇವಿಸಿ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ಸೇವಿಸಿ. ಇದರಿಂದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಂಡು ಜ್ವರ ಶೀಘ್ರವೇ ಇಳಿಯುತ್ತದೆ.

ತುಳಸಿ ಎಲೆಗಳನ್ನು ಸೇವಿಸಿ

ತುಳಸಿ ಎಲೆಗಳನ್ನು ಸೇವಿಸಿ

ಸಾಮಾನ್ಯವಾಗಿ ಜ್ವರ ಕಾಣಿಸಿಕೊಂಡಾಗ ಅದರಲ್ಲೂ ವೈರಲ್ ಜ್ವರಕ್ಕೆ ತುಳಸಿ ಗಿಡದ ಎಲ್ಲಾ ಭಾಗಗಳು ಉಪಯುಕ್ತವಾಗಿವೆ. ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಕುದಿಯುವ ನೀರಿಗೆ ಹತ್ತರಿಂದ ಹನ್ನೆರಡು ತುಳಸಿ ಎಲೆಗಳನ್ನು ಕಿವುಚಿ ಹಾಕಿ ಕೊಂಚಕಾಲ ಬೇಯಿಸಿ. ಬಳಿಕ ಇದನ್ನು ಸೋಸಿ ಉಗುರುಬೆಚ್ಚಗಿರುವಾಗ ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸಿ. ಸಾಧ್ಯವಾದರೆ ಬಿಸಿನೀರಿಗೆ ತುಳಸಿ ಎಲೆಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸೋಸಿ ಕೊಂಚವೇ ಬಿಸಿಮಾಡಿ ಕುಡಿಯಿರಿ. ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು.

English summary

Foods to Eat When You Have the Flu

If you are already down with the flu and wondering what to eat, here's a quick-list from health expert, have a look...
Story first published: Monday, October 17, 2016, 19:56 [IST]
X
Desktop Bottom Promotion