For Quick Alerts
ALLOW NOTIFICATIONS  
For Daily Alerts

ಸುಹಾಗ್ ರಾತ್ ದಿನ ಹಾಲು ಕುಡಿಯುವುದರ ಮಹತ್ವ

By Super
|

ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ಸಂತೋಷಕರವಾದ ಕ್ಷಣವೆಂದರೆ ವಿವಾಹವಾಗುವ ಕ್ಷಣ. ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಶಾಸ್ತ್ರೋಕ್ತ ವಿಧಿಗಳಿಗನುಸಾರವಾಗಿ ಮದುವೆಯ ಪವಿತ್ರ ಬಂಧನಕ್ಕೆ ಒಳಪಟ್ಟ ದಂಪತಿಗಳನ್ನು ದೇವತೆಗಳೂ ಹರಸುತ್ತಾರಂತೆ. ಭಾರತದಲ್ಲಿ ಮದುವೆ ಎಂದರೆ ಕೇವಲ ಇಬ್ಬರು ವ್ಯಕ್ತಿಗಳ ನಡುವೆಯಲ್ಲ, ಎರಡು ಕುಟುಂಬಗಳ ನಡುವೆ ಒಡಪಡುವ ಒಂದು ಬಾಂಧವ್ಯಸೇತುವೆಯಾಗಿದೆ. ಪ್ರತಿ ಧರ್ಮದಲ್ಲಿಯೂ ತನ್ನದೇ ಆದ ಸಂಸ್ಕಾರ, ವಿಧಿಗಳಿದ್ದು ವಿವಾಹದ ಬಳಿಕ ದಂಪತಿಗಳು ಪ್ರಥಮವಾಗಿ ಸಮಾಗಮಗೊಳ್ಳುವ ಕ್ಷಣವನ್ನೇ ಪ್ರಸ್ತ ಎಂದು ಕರೆಯುತ್ತಾರೆ.

ವಾಸ್ತವವಾಗಿ ವಿವಾಹವೆಂದರೆ ಇಬ್ಬರು ವ್ಯಕ್ತಿಗಳು ಸತಿಪತಿಗಳಾಗಿ ಮುಂದಿನ ಜೀವನವನ್ನು ಜೊತೆಯಾಗಿ ಕಳೆಯಲು ಸಮಾಜ ನೀಡುವ ಒಪ್ಪಿಗೆ. ಆದ್ದರಿಂದಲೇ ಮದುವೆಗೆ ನೆಂಟರಿಷ್ಟರನ್ನು, ಬಂಧು ಬಳಗ, ಊರಿನ ಜನರನ್ನು ಆಹ್ವಾನಿಸಿ ಊಟ ಹಾಕಿಸಿ ಮದುವೆಯ ಸಂಭ್ರಮವನ್ನು ಹೆಚ್ಚಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲೂ ಪ್ರಸ್ತದ ದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಹಿಂದಿಯಲ್ಲಿ ಸುಹಾಗ್ ರಾತ್ ಎಂದು ಕರೆಯಲ್ಪಡುವ ಈ ಪ್ರಥಮ ರಾತ್ರಿ ಸತಿಪತಿಯರ ಪಾಲಿಗೆ ಜೀವನವಿಡೀ ನೆನಪಿಡಬೇಕಾದ ದಿನವಾಗಿದೆ. ಈ ದಿನವನ್ನು ಇನ್ನಷ್ಟು ರಂಗೇರಿಸಲು ದಂಪತಿಗಳ ಕೋಣೆಯನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಸುಗಂಧದ್ರವ್ಯಗಳಿಂದ ಸುವಾಸನೆ ಯುಕ್ತವಾಗಿಸಲಾಗುತ್ತದೆ. ಈ ಶುಭಸಂದರ್ಭದಲ್ಲಿ ಊಟದ ಬಳಿಕ ಕೋಣೆ ಸೇರುವ ಪತಿಯನ್ನು ಸತಿಯು ಒಂದು ದೊಡ್ಡ ಲೋಟ ಹಾಲು ನೀಡುವ ಮೂಲಕ ಸ್ವಾಗತಿಸುತ್ತಾಳೆ. ಈ ಸಂದರ್ಭದಲ್ಲಿ ಹಾಲು ನೀಡುವುದು ಕೇವಲ ಕಾಟಾಚಾರದ ವಿಧಿಯಲ್ಲ, ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಈ ವಿಧಿಯ ಹಿಂದಿರುವ ಮಹತ್ವದ ಹತ್ತು ಸಂಗತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಸಾಂಪ್ರಾದಾಯಿಕ ಸಂಬಿಕೆ

ಸಾಂಪ್ರಾದಾಯಿಕ ಸಂಬಿಕೆ

ಭೂಮಿಯ ಮೇಲಿರುವ ಧರ್ಮಗಳಲ್ಲಿ ಅತಿ ಪುರಾತನ ಎಂದು ನಂಬಲಾಗಿರುವ ಹಿಂದೂ ಧರ್ಮ ಸುಮಾರು ಕ್ರಿ.ಪೂ 3000 ಇಸವಿಯಿಂದಲೇ ಆಚರಣೆಯಲ್ಲಿತ್ತು ಎಂದು ಇತಿಹಾಸತಜ್ಞರು ಅಭಿಪ್ರಾಯ ಪಡುತ್ತಾರೆ. ಹಿಂದೂ ಧರ್ಮದಲ್ಲಿಯೂ ವಿವಾಹವನ್ನು ಅತಿ ಪವಿತ್ರವಾದ ಬಂಧನವೆಂದು ಪರಿಗಣಿಸಿರುವ ಕಾರಣ ವಿವಾಹದ ವಿಧಿಗಳಿಗೂ ಹೆಚ್ಚಿನ ಮಹತ್ವವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಸಾಂಪ್ರಾದಾಯಿಕ ಸಂಬಿಕೆ

ಸಾಂಪ್ರಾದಾಯಿಕ ಸಂಬಿಕೆ

ಅಂದಿನಿಂದಲೇ ವಿವಾಹದ ಬಳಿಕ ಪ್ರಥಮ ರಾತ್ರಿಯಂದು ಹಾಲು ನೀಡುವ ಪದ್ಧತಿಯಿದ್ದು ಆ ಸಂಪ್ರದಾಯವನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಈ ವಿಧಿಯನ್ನು ಒಂದು ಸಂಭ್ರಮದ ಕ್ಷಣವಾಗಿ ಪ್ರತಿ ಟೀವಿ ಧಾರಾವಾಹಿಯಲ್ಲಿ ಮತ್ತು ಹಿಂದಿ, ಕನ್ನಡ ಚಲನಚಿತ್ರಗಳಲ್ಲಿ ವಿಜೃಂಭಿಸಿ ತೋರಿಸಲಾಗುತ್ತದೆ.

ಸ್ನಾಯುಗಳಿಗೆ ದೃಢತೆ ನೀಡುತ್ತದೆ

ಸ್ನಾಯುಗಳಿಗೆ ದೃಢತೆ ನೀಡುತ್ತದೆ

ಬರೆಯ ಹಾಲನ್ನು ಕುಡಿಯುವ ಮೂಲಕ ಸ್ನಾಯುಗಳಿಗೆ ಉತ್ತಮ ಪೋಷಕಾಂಶಗಳು ದೊರೆತು ಅಗತ್ಯವಾದ ಶಕ್ತಿಯನ್ನು ಹೊಮ್ಮಲು ಸಮರ್ಥವಾಗುತ್ತವೆ. ಈ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ಪುಡಿಮಾಡಿದ ಬಾದಾಮಿ ಮತ್ತು ಕೆಲವು ಕಾಳುಮೆಣಸುಗಳನ್ನು ಹುಡಿಗಟ್ಟಿ ಆ ಹಾಲಿಗೆ ಸೇರಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ನಾಯುಗಳಿಗೆ ದೃಢತೆ ನೀಡುತ್ತದೆ

ಸ್ನಾಯುಗಳಿಗೆ ದೃಢತೆ ನೀಡುತ್ತದೆ

ಭಾರತೀಯ ಪುರಾತನ ಕಾಮಸೂತ್ರದಲ್ಲಿ ವಿವರಿಸಿದಂತೆ ಬಿಸಿಹಾಲಿನಲ್ಲಿ ದೊಡ್ಡಜೀರಿಗೆಯನ್ನು ಕಡೆದು ತೆಗೆದ ಹಾಲು, ಜೇನು, ಯಷ್ಠಿಮಧು(licorice) ಮತ್ತು ಸಕ್ಕರೆಯನ್ನು ಸೇರಿಸಿ ಕುಡಿಯುವ ಮೂಲಕ ಅಗತ್ಯವಾದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ಹಾರ್ಮೋನುಗಳ ಬಿಡುಗಡೆಗೆ ಸಹಾಯ ಮಾಡುತ್ತದೆ

ಹಾರ್ಮೋನುಗಳ ಬಿಡುಗಡೆಗೆ ಸಹಾಯ ಮಾಡುತ್ತದೆ

ಹಾಲಿನಲ್ಲಿ ಉತ್ತಮ ಪ್ರಮಾಣದ ಅಮೈನೋ ಆಮ್ಲಗಳಿದ್ದು ದೇಹದ ದೃಢತೆಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಪ್ರಥಮ ಸಮಾಗಮದಲ್ಲಿ ಮುಖ್ಯ ಪಾತ್ರ ವಹಿಸುವ ಪುರುಷರ ಟೆಸ್ಟ್ರೋಸ್ಟೆರೋನ್ ಮತ್ತು ಮಹಿಳೆಯರ ಈಸ್ಟ್ರೋಜನ್ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಹೊರಸೂಸಲು ಈ ಅಮೈನೋ ಆಮ್ಲಗಳು ನೆರವಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಾರ್ಮೋನುಗಳ ಬಿಡುಗಡೆಗೆ ಸಹಾಯ ಮಾಡುತ್ತದೆ

ಹಾರ್ಮೋನುಗಳ ಬಿಡುಗಡೆಗೆ ಸಹಾಯ ಮಾಡುತ್ತದೆ

ಹಾಲಿನಲ್ಲಿ ಬಾದಾಮಿಯನ್ನು ಸೇರಿಸುವ ಮೂಲಕ ಇದರ ಶಕ್ತಿ ಇನ್ನಷ್ಟು ಹೆಚ್ಚುತ್ತದೆ ಹಾಗೂ ಅಗತ್ಯಪ್ರಮಾಣದಲ್ಲಿ ಪ್ರೋಟೀನುಗಳನ್ನೂ ನೀಡುತ್ತದೆ. ಇದು ದಂಪತಿಗಳ ನಡುವಣ ಪ್ರಣಯ ಚಟುವಟಿಕೆಯನ್ನು ಇನ್ನಷ್ಟು ಫಲಪ್ರದವಾಗಿಸುತ್ತದೆ.

ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಆಯುರ್ವೇದದಲ್ಲಿ ಹಾಲಿಗೆ ಪ್ರಮುಖ ಸ್ಥಾನವಿದ್ದು ಜನನಾಂಗಗಳ ಸಾಮರ್ಥ ಹೆಚ್ಚಿಸಲು ಉತ್ತಮ ಎಂದು ಹೇಳಲಾಗಿದೆ. ಹಾಲಿನಲ್ಲಿ ದೇಹದ ಹಲವು ಅಂಗಗಳಿಗೆ ಪುನರ್ಶಕ್ತಿ ನೀಡುವ ಸಾಮರ್ಥ್ಯವಿದ್ದು ಬಳಲಿದ ಅಂಗಗಳು ಶೀಘ್ರವೇ ತಮ್ಮ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ.

ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಹಾಲಿನ ಸೇವನೆಯಿಂದ ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಜೀರ್ಣಶಕ್ತಿಯೂ ಹೆಚ್ಚುತ್ತದೆ. ಇದರಿಂದ ಆಹಾರದ ಪೋಷಕಾಂಶಗಳು ದೇಹವನ್ನು ಸುಲಭವಾಗಿ ಸೇರಲು ಸಾಧ್ಯವಾಗುತ್ತದೆ, ತನ್ಮೂಲಕ ದೇಹದ ಚಟುವಟಿಕೆಗಳು ಸಾಂಗವಾಗುತ್ತವೆ.

ಜನನಾಂಗಗಳ ಜೀವಕೋಶಳಿಗೆ ಪೋಷಣೆ ನೀಡುತ್ತದೆ

ಜನನಾಂಗಗಳ ಜೀವಕೋಶಳಿಗೆ ಪೋಷಣೆ ನೀಡುತ್ತದೆ

ಆಯುರ್ವೇದದಲ್ಲಿ ವಾತ ಮತ್ತು ಪಿತ್ತಗಳ ನಡುವಣ ಸಮತೋಲನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಲು ಈ ಸಮತೋಲನವನ್ನು ಕಾಪಾಡಲು ಅತ್ಯುತ್ತಮವಾದ ದ್ರವ್ಯವಾಗಿದ್ದು ಎಲ್ಲಾ ವಯಸ್ಸಿನವರಿಗೂ ಉತ್ತಮವಾದ ಆಹಾರವಾಗಿದೆ. ಹಾಲು ಒಂದು ಉತ್ತಮ ಕಾಮೋತ್ತೇಜಕ ಹಾಗೂ ಜನನಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಆಹಾರವಾಗಿದ್ದು ಉತ್ತಮ ಲೈಂಗಿಕ ಚಟುವಟಿಕೆ ಮತ್ತು ತನ್ಮೂಲಕ ಆರೋಗ್ಯಕರ ಸಂತಾನವನ್ನು ಪಡೆಯಲು ನೆರವಾಗುತ್ತದೆ.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಾಲಿನಲ್ಲಿ ಕೇಸರಿ, ಶಿಲಾಜಿತ್ (Asphaltum ಅಥವಾ Mineral Pitch) ಮೊದಲಾದ ನೈಸರ್ಗಿಕ ವಸ್ತುಗಳನ್ನು ಸೇರಿಸುವ ಮೂಲಕ ವಿಶೇಷವಾಗಿ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ನಿಯಮಿತವಾಗಿ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಪುರುಷರು ಆರೋಗ್ಯವಂತರೂ, ದೃಢಕಾಯರೂ ಆಗಿರುವುದು ಮಾತ್ರವಲ್ಲ, ಲೈಂಗಿಕವಾಗಿ ಹೆಚ್ಚು ಸಮರ್ಥರೂ, ಹೆಚ್ಚಿನ ವೀರ್ಯಾಣುಗಳ ಸಂಖ್ಯೆಯನ್ನು ಹೊಂದಿರುವವರೂ, ಅದರಲ್ಲೂ ಹೆಚ್ಚಿನ ಪ್ರಮಾಣದ ವೀರ್ಯಾಣುಗಳು ಸಕ್ಷಮವಾಗಿರುವವರೂ ಆಗಿರುತ್ತಾರೆ.

 ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ

ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ

ಹಾಲಿನಲ್ಲಿ ಉತ್ತಮ ಪ್ರಮಾಣದ ನೀರಿನ ಕಣಗಳಿವೆ. ಆದರೆ ಹಾಲಿನ ಬದಲಿಗೆ ನೀರನ್ನೇ ಕುಡಿಯಬಹುದಲ್ಲಾ, ಆದರೆ ರಾತ್ರಿ ಹೊತ್ತು ನೀರು ತಕ್ಷಣವೇ ಕರುಳುಗಳಿಂದ ಹೀರಲ್ಪಟ್ಟು ಬಳಿಕ ನೀರಿನ ಅಗತ್ಯಬಿದ್ದರೆ ನೀರಡಿಕೆಯ ಮೂಲಕ ಹೆಚ್ಚಿನ ನೀರನ್ನು ಕುಡಿಯಲು ಮೆದುಳು ಎಚ್ಚರಿಸಿ ಸೂಚನೆ ನೀಡುತ್ತದೆ. ಆದರೆ ಹಾಲು ಕುಡಿದು ಮಲಗಿದರೆ ಈ ಹಾಲಿನಲ್ಲಿನ ನೀರು ನಿಧಾನವಾಗಿ ಹೀರಲ್ಪಟ್ಟು ರಾತ್ರಿಯಿಡೀ ಯಾವುದೇ ತೊಂದರೆ ಕೊಡದೇ ದೇಹಕ್ಕೆ ನೀರಿನ ಸೌಲಭ್ಯವನ್ನು ಒದಗಿಸುತ್ತದೆ. ಆರೋಗ್ಯವಂತ ವ್ಯಕ್ತಿಗೆ ಪ್ರತಿನಿತ್ಯ ಕನಿಷ್ಟ ಆರು ಲೋಟ ನೀರಿನ ಅಗತ್ಯವಿದೆ. ಆದರೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ನೀರು ಕುಡಿಯುವುದಕ್ಕಿಂತ ಉತ್ತಮ.

ದೇಹದ ವಿವಿಧ ಅಂಗಗಳಿಗೆ ಶಕ್ತಿ ಒದಗಿಸುತ್ತದೆ

ದೇಹದ ವಿವಿಧ ಅಂಗಗಳಿಗೆ ಶಕ್ತಿ ಒದಗಿಸುತ್ತದೆ

ಹಾಲಿನಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳಿದ್ದು ಇದನ್ನು ದಹಿಸಿ ಪಡೆದ ಸಕ್ಕರೆಯನ್ನು ದೇಹದ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಅಲ್ಲದೇ ಇದರಲ್ಲಿರುವ ಕೊಬ್ಬು ಹೆಚ್ಚಿನ ಶಕ್ತಿಯನ್ನುನೀಡುತ್ತದೆ. ಇದು ವಿಶೇಷವಾಗಿ ಮೆದುಳು, ಮೂತ್ರಪಿಂಡಗಳ ಮತ್ತು ಜನನಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಭಾವಪರವಶತೆಯನ್ನು ಹೆಚ್ಚಿಸುತ್ತದೆ. ಹಸಿವು ಮತ್ತು ಸುಖನಿದ್ದೆಗೂ ಉತ್ತಮ

ಭಾವಪರವಶತೆಯನ್ನು ಹೆಚ್ಚಿಸುತ್ತದೆ. ಹಸಿವು ಮತ್ತು ಸುಖನಿದ್ದೆಗೂ ಉತ್ತಮ

ಹಾಲಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದ್ದು ಇದರ ಬಳಕೆಯಿಂದ ದೇಹದಲ್ಲಿ ಅಗತ್ಯ ಪ್ರಮಾಣದ ಸೆರೋಟೋನಿನ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದು ಭಾವಪರವಶತೆ, ಹಸಿವು ಮತ್ತು ನಿದ್ದೆಗೆ ಅಗತ್ಯವಾಗಿದೆ. ಹಾಲು ಕುಡಿಯುವ ಮೂಲಕ ಉತ್ತಮ ಪ್ರಮಾಣದ ಸೆರೋಟೋನಿನ್ ಲಭ್ಯವಾಗಿ ದೇಹದ ಜೀವರಾಸಾಯನಿಕ ಕ್ರಿಯೆಗಳು ಉತ್ತಮಗೊಳ್ಳುತ್ತವೆ. ಅಲ್ಲದೇ ಈ ಹಾರ್ಮೋನು ಮಹಿಳೆಯರ ತಿಂಗಳ ದಿನಗಳ ಮುನ್ನಾ ಅವಧಿಯಲ್ಲಿ ಅನುಭವಿಸುದ ದುಗುಡ (Premenstrual syndrome (PMS)), ಸುಸ್ತು ಮತ್ತು ಖಿನ್ನತೆಗಳನ್ನು ನಿವಾರಿಸುತ್ತದೆ.

ವಾಯುಪ್ರಕೋಪವನ್ನು ತಡೆಯುತ್ತದೆ

ವಾಯುಪ್ರಕೋಪವನ್ನು ತಡೆಯುತ್ತದೆ

ರಾತ್ರಿ ಮಲಗುವ ಮುನ್ನ ಕುಡಿದ ಒಂದು ಲೋಟ ಹಾಲು ಜಠರದಲ್ಲಿ ಉರಿಯೂತವಾಗುವುದರಿಂದ ರಕ್ಷಿಸುತ್ತದೆ. ನಿಯಮಿತವಾಗಿ ಸೇವಿಸುವ ಮೂಲಕ ಆಹಾರ ಅರೆಜೀರ್ಣವಾಗುವುದು ಅಥವಾ ಇತರ ಕಾರಣಗಳಿಂದ ಉದ್ಭವವಾಗುವ ಹೊಟ್ಟೆಯುರಿ, ಹೊಟ್ಟೆಯುಬ್ಬರ, ಹುಳಿತೇಗು, ಅಪಾನವಾಯು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಅಲ್ಲದೇ ಹಸಿವನ್ನು ಹೆಚ್ಚಿಸುವ ಮೂಲಕ ಉತ್ತಮ ಪ್ರಮಾಣದಲ್ಲಿ ಆಹಾರವನ್ನು ಸೇವಿಸಲು ಸಹಾ ಹಾಲು ನೆರವಾಗುತ್ತದೆ.

ವಾಯುಪ್ರಕೋಪವನ್ನು ತಡೆಯುತ್ತದೆ

ವಾಯುಪ್ರಕೋಪವನ್ನು ತಡೆಯುತ್ತದೆ

ಕೇವಲ ಪ್ರಸ್ತದ ಸಮಯದಲ್ಲಿ ಮಾತ್ರವಲ್ಲ, ಎಲ್ಲಾ ದಿನಗಳಲ್ಲಿಯೂ ಹಾಲು ಕುಡಿಯುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದು. ಹಾಲು ಕುಡಿಯುವ ಮಹತ್ವವನ್ನು ಅರಿತು ಇದನ್ನೊಂದು ವಿಧಿಯಂತೆ ಕಡ್ಡಾಯಗೊಳಿಸಿ ನಮ್ಮೆಲ್ಲರ ಆರೋಗ್ಯವನ್ನು ವೃದ್ಧಿಸಲು ನೆರವಾದ ನಮ್ಮ ಹಿರಿಯರ ಕ್ರಮವನ್ನು ಎಷ್ಟು ಕೊಂಡಾಡಿದರೂ ಸಾಲದು.

English summary

Facts behind serving of milk on Suhagraat (wedding night)

Marriages are considered as an auspicious event to every human life, where two souls are known to get united over the ritual spelt on this event. In India the first night of the marriage is referred to as the maiden night where a man and woman come together as husband and wife and they go intimate with physical relationship for first time with acceptance to the society.
Story first published: Monday, January 4, 2016, 16:39 [IST]
X
Desktop Bottom Promotion