For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಮೊದಲು ಮದ್ಯಪಾನದ ಸಹವಾಸ ಬಿಟ್ಟು ಬಿಡಿ....

By vani nayak
|

ಬಹುತೇಕ ಮಹಿಳೆಯರು ಒಂದಲ್ಲ ಒಂದು ಸಂದರ್ಭದಲ್ಲಿ ಮದ್ಯ ಸೇವನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಕಾರಣಗಳು ಹಲವಾರಿರಬಹುದು. ತಮಗಿರುವ ಕುತೂಹಲ ತೀರಿಸಿಕೊಳ್ಳಲು, ಗೆಳೆಯರ ಒತ್ತಡಕ್ಕಿರಬಹುದು, 21 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿರಬಹುದು ಅಥವಾ ಇನ್ಯಾವುದೇ ಆಚರಣೆಯ ಸಂರ್ಭದಲ್ಲಿರಬಹುದು.

Alcohol Women

ಆದರೆ ಮದ್ಯದ ಬಗ್ಗೆ ಕೆಲವು ಸತ್ಯಾಂಶಗಳನ್ನು ಹೆಂಗಸರು ತಿಳಿದುಕೊಳ್ಳಬೇಕು. ಮದ್ಯ ಸೇವನೆ ಆ ಕ್ಷಣಕ್ಕೆ ಸಂತೋಷ ಕೊಡಬಹುದು. ಆದರೆ ಯಾವ ಹೆಂಗಸರು, ಹೆಚ್ಚಾಗಿ ಹಾಗು ಮೇಲಿಂದ ಮೇಲೆ ಮದ್ಯ ಸೇವಿಸುತ್ತಾರೋ ಅಂತಹವರಿಗೆ, ಅವರ ಜೀವಕ್ಕೆ ಹಾಗು ಆರೋಗ್ಯಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಅತಿಯಾದ ಮದ್ಯ ಸೇವನೆಯಿಂದ ಹೆಂಗಸರಲ್ಲಿ ಕ್ಯಾನ್ಸರ್, ಮದುಮೇಹ ಹಾಗು ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಮದ್ಯ ಸೇವನೆ, ದೇಹಕ್ಕೆ ಬೇಕಾಗಿರುವ ಅಗತ್ಯವಾದ ಪೋಷಕಾಂಶವನ್ನು ನಾಶ ಮಾಡುತ್ತದೆ. ಮದ್ಯ ಸೇವನೆಯನ್ನು ರೂಢಿಸಿಕೊಂಡ ಮಹಿಳೆಯರು ಒಳ್ಳೆಯ ಆಹಾರವನ್ನೂ ಸೇವಿಸುವುದಿಲ್ಲ. ಮಿತಿ ಮೀರಿ ಕುಡಿದ ಮದ್ಯ ರಕ್ತನಾಳದಲ್ಲಿ ಉಳಿದುಕೊಂಡುಬಿಡುತ್ತದೆ. ಇದು ಇಡೀ ದೇಹದ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ.

ಮದ್ಯದ ಬಗ್ಗೆ ಕೆಲವು ಅಂಶಗಳನ್ನು ಹೆಂಗಸರು ತಿಳಿದುಕೊಳ್ಳಬೇಕು. ದಿನ ನಿತ್ಯ ಮದ್ಯವನ್ನು ಸೇವಿಸುವ ಮಹಿಳೆಯರಿಗೆ ಮತ್ತು ಉಳಿದ ಮಹಿಳೆಯರಿಗೆ ಹೋಲಿಸಿದಾಗ, ದಿನಂಪ್ರತಿ ಮದ್ಯ ಸೇವಿಸುವ ಮಹಿಳೆಯರಿಗೆ ಬ್ರೆಸ್ಚ್ ಕ್ಯಾನ್ಸರ್ ಆಗುವ ಸಂಭವ ಹೆಚ್ಚಾಗಿರುತ್ತದೆ.

ಗರ್ಭವನ್ನು ಧರಿಸಲು ಪ್ರಯತ್ನಿಸುತ್ತಿರುವವರು, ಅಥವಾ ಗರ್ಭಾವಸ್ತೆಯಲ್ಲಿರುವವರು ಮದ್ಯವನ್ನು ಸೇವಿಸಿದರೆ ಬ್ರೂಣಕ್ಕೆ ಅಪಾಯವಾಗುವ ಸಂಭವ ಹೆಚ್ಚಿರುತ್ತದೆ. ಮದ್ಯವನ್ನು ಸೇವಿಸುವ ತಾಯಂದಿರ ಮಕ್ಕಳು ಕಲಿಯುವ ಅಥವಾ ನಡುವಳಿಕೆಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಅಸಹಜವಾಗಿ ಅಂದರೆ ಅಬ್ನಾರ್ಮಲ್ ಆಗಿ ಮಗು ಜನ್ಮತಾಳಬಹುದು. ಆಲ್ಕೋಹಾಲ್ ಸೇವನೆ ಗರ್ಭಿಣಿಯರಿಗೆ ಒಳ್ಳೆಯದಲ್ಲ

ಗಂಡಸರಷ್ಟು ಸುಲಭವಾಗಿ ಹೆಂಗಸರು ಮದ್ಯದ ಸೇವನೆಯನ್ನು ಬಿಡುವುದಿಲ್ಲ. ಹೆಂಗಸರಲ್ಲಿ ಮದ್ಯ ಸೇವನೆಯಿಂದ ಋತುಚಕ್ರದ ಸಮಸ್ಯೆಗಳಾಗಬಹುದು. ಇದರಿಂದ, ನಿರ್ಜೀವ ಶಿಶು ಜನನ, ಅಕಾಲಿಕ ಪ್ರಸವ, ಗರ್ಭಪಾತ ಮತ್ತು ಬಂಜೆತನದ ಸಮಸ್ಯೆಗಳು ಎದುರಾಗಬಹುದು. ಕೆಲವು ಗರ್ಭಿಣಿಯರ ಅತಿಯಾದ ಮದ್ಯಸೇವನೆಯಿಂದ ಅವರ ಶಿಶುಗಳಿಗೆ ಮದ್ಯ ಸೇವನೆ ಒಂದು ಚಟವಾಗಿಬಿಟ್ಟಿರುತ್ತದೆ.

ಗಂಡಸರಿಗಿಂತ ಹೆಂಗಸರಲ್ಲಿ ಅತಿಯಾದ ಮದ್ಯ ಸೇವನೆಯಿಂದ ಮೆದುಳು ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಲಿವರ್‌ಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಂಗಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಇದು ಮನೆಮಂದಿಯರಿಗಲ್ಲಾ ಚಟವಾಗಿ ಪರಿಣಮಿಸುತ್ತದೆ ಎಂದು ತಿಳಿದು ಬಂದಿದೆ.

ಸಂಶೋಧನೆಯ ಪ್ರಕಾರ, ಗಂಡಸರಿಗಿಂತ ಹೆಂಗಸರೇ ಮದ್ಯದ ಮೇಲೆ ಅತಿಯಾಗಿ ಅವಲಂಬಿತರಾಗಿರುತ್ತಾರೆ. ದಿನನಿತ್ಯವೂ ಮದ್ಯವನ್ನು ಸೇವಿಸುವ ಗಂಡಸರನ್ನೂ ಹಾಗೂ ಹೆಂಗಸರನ್ನು ಹೋಲಿಸಿದಾಗ, ಹೆಂಗಸರೇ ಹೆಚ್ಚು ಮದ್ಯವ್ಯಸನಿಗಳಾಗುತ್ತಾರೆ ಎಂದು ತಿಳಿದು ಬಂದಿದೆ.

English summary

Facts About Alcohol Women Should Know

Most women have engaged in alcohol consumption at some point of time. It might happen to be to satisfy their curiosity, from peer pressure, on their twenty first birthday bash, or simply as part of a celebration. But there are certain facts about alcohol that women must know.
X
Desktop Bottom Promotion