ಶ್! ಇದು ಕೊಬ್ಬು ಕರಗಿಸುವ ಸಿಂಪಲ್ ಟ್ರಿಕ್ಸ್-ಪ್ರಯತ್ನಿಸಿ ನೋಡಿ....

By: manu
Subscribe to Boldsky

ನಮ್ಮ ದೇಹದ ಕೊಬ್ಬು ಸಂಗ್ರಹ ಸೊಂಟದ ಸುತ್ತ ಮೊದಲಾಗಿ ಪ್ರಾರಂಭಗೊಂಡರೂ ಕರಗುವ ವಿಷಯದಲ್ಲಿ ಮಾತ್ರ ಅತ್ಯಂತ ಕಡೆಯದಾಗಿ ಬಳಸಲ್ಪಡುವ ಕಾರಣ ಇದನ್ನು ಕರಗಿಸುವುದು ಭಾರೀ ಕಷ್ಟದ ಕೆಲಸ. ಇದಕ್ಕಾಗಿ ಸೂಕ್ತ ಮತ್ತು ಸತತವಾದ ವ್ಯಾಯಮ, ಸರಿಯಾದ ಆಹಾರ ಸೇವನೆ, ಕೊಬ್ಬು ಹೆಚ್ಚಿಸುವ ಆಹಾರಗಳಿಗೆ ಒಲವು ತೋರದೇ ಇರುವುದು ಮತ್ತು ಕೊಬ್ಬು ಹೆಚ್ಚಿಸದೇ ಇರುವ ಆಹಾರಗಳನ್ನು ನಮ್ಮ ನಿತ್ಯದ ಆಹಾರಗಳಾಗಿ ಬದಲಿಸಿಕೊಳ್ಳುವುದು ಜಾಣತನದ ಕ್ರಮವಾಗಿವೆ.    ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!  

ಇದರಲ್ಲಿ ಕಡೆಯ ಭಾಗ ಹೆಚ್ಚಿನ ಶ್ರಮವಿಲ್ಲದ ಆಯ್ಕೆಯಾಗಿದ್ದು ಸೊಂಟದ ಕೊಬ್ಬನ್ನು ಶೀಘ್ರವಾಗಿ ಇಳಿಸಲು ಸಮರ್ಥವಾಗಿವೆ. ಆದರೆ ಕೊಬ್ಬು ಹೆಚ್ಚಿಸದೇ ನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರಗಳು ಯಾವುವು ಎಂಬ ಪ್ರಶ್ನೆಗೆ ಹಲವು ಉತ್ತರಗಳು ದೊರಕಬಹುದು. ರಾಗಿ, ನವಣೆ, ಜೋಳ ಮೊದಲಾದವುಗಳ ರೊಟ್ಟಿ ಇತ್ಯಾದಿ. ಆದರೆ ಇಂದಿನ ಧಾವಂತದ ದಿನಗಳಲ್ಲಿ ರಾಗಿ ರೊಟ್ಟಿಯನ್ನು ತಟ್ಟುತ್ತಾ ಕೂರಲು ಯಾರಿಗೆ ಸಮಯವಿದೆ?   ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?

ಇದರ ಬದಲಿಗೆ ಬೇರೇನೂ ಇಲ್ಲವೇ ಎಂದು ಇಂದಿನ ಜನಾಂಗ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ಈ ಆಹಾರಗಳಷ್ಟೇ ಸಮರ್ಥವಾದ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪೇಯಗಳ ಬಗ್ಗೆ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳುತ್ತಿದೆ.....

ಹೆಚ್ಚಿನ ನೀರು

ಹೆಚ್ಚಿನ ನೀರು

ನಮ್ಮ ನಿತ್ಯದ ಕಾರ್ಯಗಳಿಗೆ ಸುಮಾರು ಎಂಟು ಲೋಟಗಳಷ್ಟು ನೀರು ಅವಶ್ಯವಾಗಿ ಬೇಕು. ಆದರೆ ಸೊಂಟದ ಕೊಬ್ಬು ಕರಗಿಸಬೇಕೆಂದರೆ ಇದಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು, ಅಂದರೆ ದಿನಕ್ಕೆ ಹದಿನಾರು ಇಪ್ಪತ್ತು ಲೋಟಗಳಷ್ಟು ಕುಡಿಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಹೊಟ್ಟೆ ತುಂಬಿದಂತಾಗಿದ್ದು ಅವಶ್ಯವಿಲ್ಲದೇ ಆಹಾರ ಸೇವಿಸುವ ಪ್ರಮೇಯ ಕಡಿಮೆಯಾಗುತ್ತದೆ. ನಡು ನಡುವೆ ಹಸಿವಾಗಿ ತಿನ್ನುವ ಅಭ್ಯಾಸವೂ ನಿಂತುಹೋಗುತ್ತದೆ.

ಹಾಲಿನ ಟೀ ಬದಲಿಗೆ ಪೆಪ್ಪರ್ ಮಿಂಟ್ ಟೀ

ಹಾಲಿನ ಟೀ ಬದಲಿಗೆ ಪೆಪ್ಪರ್ ಮಿಂಟ್ ಟೀ

ಪುದೀನಾ ಬೆರೆಸಿದ ಹಾಲಿಲ್ಲದ ಟೀ ಸಹಾ ತೂಕ ಇಳಿಕೆಗೆ ಸಹಕಾರಿ. ಅಲ್ಲದೇ ಇದು ಹೊಟ್ಟೆಯುಬ್ಬರವನ್ನು ತಡೆಯುವ ಸಮರ್ಥ ಔಷಧಿಯೂ ಆಗಿದೆ. ನಿತ್ಯವೂ ಕೆಲವಾರು ಕಪ್ ಪುದೀನಾ ಎಲೆ ಹಾಕಿ ಕುದಿಸಿದ ಅಥವಾ ಪುದೀನಾ ಒಣಪುಡಿಯನ್ನು ಬೆರೆಸಿ ತಯಾರಿಸಿದ ಟೀ ಕುಡಿಯುವ ಮೂಲಕ ಹಾಲಿರುವ ಟೀ ಕುಡಿಯುವ ಸಂಭವವನ್ನು ಕಡಿಮೆ ಮಾಡಿ ಈ ಮೂಲಕ ತೂಕ ಇಳಿಸಲು ನೆರವಾಗಬಹುದು. ಅಲ್ಲದೇ ಇದರ ರುಚಿ ಹಾಲಿನ ಟೀ ತ್ಯಜಿಸಿದ್ದನ್ನೂ ಮರೆಯಲು ಸಾಧ್ಯವಾಗಿಸುತ್ತದೆ. ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಹಸಿರು ಟೀ

ಹಸಿರು ಟೀ

ಹಸಿರು ಟೀ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲೂಂದು ಪ್ರಯೋಜನವೆಂದರೆ ಕೊಬ್ಬಿನ ಕರಗಿಸುವಿದೆ. ದಿನಕ್ಕೊಂದು ಕಪ್ ಆದರೂ ಹಸಿರು ಟೀ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹಾಗೂ ಸ್ಥೂಲಕಾಯದಿಂದ ಬಿಡುಗಡೆಯನ್ನು ಪಡೆಯಬಹುದು. ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಕಲ್ಲಂಗಡಿ ಸ್ಮೂಥಿ

ಕಲ್ಲಂಗಡಿ ಸ್ಮೂಥಿ

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದು ನೀರಿನ ಪೂರೈಕೆ. ಈ ಹಣ್ಣಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ನೀರು ಮತ್ತು ತೂಕ ಇಳಿಸಲು ನೆರವಾಗುವ ಹಲವಾರು ಪೋಷಕಾಂಶಗಳಿವೆ. ಪ್ರತಿದಿನ ಕಲ್ಲಂಗಡಿ ಹಣ್ಣಿನ ತಿರುಳಿನಿಂದ ಬೀಜಗಳನ್ನು ನಿವಾರಿಸಿ, ಸಕ್ಕರೆ ಬೆರೆಸದೇ ತಯಾರಿಸಿದ ಸ್ಮೂಥಿಯನ್ನು ಕುಡಿಯುವ ಮೂಲಕ ತೂಕ ಇಳಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.

ಲಿಂಬೆಯ ನೀರು

ಲಿಂಬೆಯ ನೀರು

ತೂಕ ಇಳಿಸಲು ಇನ್ನೊಂದು ಅತ್ಯುತ್ತಮ ಪೇಯವೆಂದರೆ ಕೆಲವು ಹನಿ ಜೇನು ಬೆರೆಸಿದ ಲಿಂಬೆರಸದ ನೀರಿನ ಸೇವನೆ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿದರೆ ಇದರ ಪರಿಣಾಮ ಗರಿಷ್ಟವಿರುತ್ತದೆ. ಲಿಂಬೆನೀರು - ಇದು ಶರಬತ್ತೇ, ಔಷಧಿಯೇ?

ಅನಾನಸ್ ಹಣ್ಣಿನ ರಸ

ಅನಾನಸ್ ಹಣ್ಣಿನ ರಸ

ಅನಾನಸ್ ಹಣ್ಣಿನಲ್ಲಿರುವ ಬ್ರೋಮೆಲೈನ್ ಎಂಬ ಕಿಣ್ವ ಜೀರ್ಣಕ್ರಿಯೆಗೆ ಪೂರಕವಾಗಿದ್ದು ಈ ಕಾರ್ಯಕ್ಕಾಗಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಇದೇ ಕೊಬ್ಬಿನ ಕರಗುವಿಕೆಗೆ ಕಾರಣವಾಗುವುದರಿಂದ ಸೊಂಟದ ಸುತ್ತಳತೆ ಕರಗಿಸಲು ಸಮರ್ಥವಾಗಿದೆ.

ಪಾಲಕ್ ಸೊಪ್ಪು ಮತ್ತು ಲಿಂಬೆ ಜ್ಯೂಸ್

ಪಾಲಕ್ ಸೊಪ್ಪು ಮತ್ತು ಲಿಂಬೆ ಜ್ಯೂಸ್

ಈ ರಸದಲ್ಲಿ ದಪ್ಪನೆಯ ಪಾಲಕ್ ಸೊಪ್ಪು ಮತ್ತು ಲಿಂಬೆಯನ್ನು ಪ್ರಮುಖವಾಗಿ ಬಳಸಲಾಗಿದೆ. ಒಂದು ಪ್ರಮಾಣಕ್ಕೆ ನಾಲ್ಕು ಪಾಲಕ್ ಸೊಪ್ಪು ಮತ್ತು ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ. ಕೊಂಚ ನೀರು ಸೇರಿಸಿ ನಿಮಗೆ ಅಗತ್ಯವಿದ್ದಷ್ಟು ಗಾಢವಾಗಿಸಿಕೊಳ್ಳಿ. ರುಚಿಯಲ್ಲಿ ಹುಳಿ,ಒಗರು ಇರುವ ಈ ಜ್ಯೂಸ್ ಕೊಬ್ಬು ಕರಗಿಸಲು ಅತ್ಯುತ್ತಮವಾಗಿದೆ. ಆದರೆ ಕ್ರೀಡಾಪಟುಗಳಿಗೆ ಇದು ಸೂಕ್ತವಲ್ಲ, ಏಕೆಂದರೆ ಇದರಲ್ಲಿ ತಕ್ಷಣವೇ ರಕ್ತಕ್ಕೆ ಬಿಡುಗಡೆಯಾಗುವಂತಹ ಪೋಷಕಾಂಶಗಳಿಲ್ಲ. ಆದ್ದರಿಂದ ಕೇವಲ ಸ್ಥೂಲಕಾಯ ಕರಗಿಸಲು ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ. ಲಿಂಬೆ ಹಣ್ಣು ಸಿಗದಿದ್ದರೆ ಸಿದ್ಧರೂಪದಲ್ಲಿ ದೊರಕುವ ಲಿಂಬೆಯ ಗಾಢರಸವನ್ನೂ ಬಳಸಬಹುದು.

English summary

Drinks That Cut Belly Fat

Getting rid of belly fat is really tough. But sometimes, you can speed up the process by working out and eating right. Some foods help burn fat fast. In the same way, some drinks refresh you and also help you in getting rid of belly fat. But of course, only drinking them wouldn't help because your activity levels should also support your weight loss process. Also, your calorie intake should be restricted when you wish to lose belly fat. Now, here are some refreshing drinks that help in losing belly fat.
Subscribe Newsletter