For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ-ಈರುಳ್ಳಿ ಮಿಶ್ರಿತ ಜ್ಯೂಸ್‌ನಲ್ಲಿದೆ ಆರೋಗ್ಯದ ಪವರ್

By Manu
|

ಆರೋಗ್ಯಕ್ಕಾಗಿ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಲು ತೊಡಗಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜನರಿಗೆ ತಮ್ಮ ಆರೋಗ್ಯದ ಮೇಲೆ ತರಕಾರಿ ಮತ್ತು ಹಣ್ಣುಗಳು ಬೀರುವ ಪರಿಣಾಮದ ಮಹತ್ವ ತಿಳಿಯತೊಡಗಿದೆ.

ಥಟ್ಟನೇ ಕಾಯಿಲೆಯನ್ನು ವಾಸಿ ಮಾಡಿದರೂ ತನ್ನ ಅಡ್ಡಪರಿಣಾಮಗಳಿಂದ ಇತರೇ ತೊಂದರೆಗಳನ್ನು ಹುಟ್ಟುಹಾಕುವ ಅಪಾಯಕಾರಿ ರಾಸಾಯನಿಕ ಔಷಧಿಗಳಿಗಿಂತಲೂ, ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಆಹಾರಗಳೇ ಉತ್ತಮ ಎಂದು ಹಲವು ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

ಹಣ್ಣು ಮತ್ತು ತರಕಾರಿಗಳನ್ನು ಔಷಧದ ರೂಪದಲ್ಲಿ ಸೇವಿಸಿದಾಗ ಇವು ಆಹಾರಕ್ಕೆ ಆಹಾರ, ಔಷಧಕ್ಕೆ ಔಷಧ ಎಂಬಂತೆ ಕಾರ್ಯನಿರ್ವಹಿಸಿ ದೇಹಕ್ಕೆ ಅಗತ್ಯ ಪೋಷಣೆ ಮತ್ತು ಆರೈಕೆಯನ್ನು ನೀಡುತ್ತವೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನೂ ವೃದ್ಧಿಸುತ್ತವೆ. ಈ ನಿಟ್ಟಿನಲ್ಲಿ ಹಾಗಲಕಾಯಿ ಮತ್ತು ಈರುಳ್ಳಿಯ ಮಿಶ್ರಣವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಇದರಿಂದ ಕನಿಷ್ಠ

ಏಳು ವಿಧದ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳಿಂದ ಸಾಬೀತುಪಡಿಸಲಾಗಿದೆ. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ಹಾಗಲಕಾಯಿ ಕಹಿ, ಈರುಳ್ಳಿ ಒಗರು ಎಂಬ ಒಂದೇ ಕಾರಣದಿಂದ ಇದನ್ನು ಸೇವಿಸಲು ಕೊಂಚ ಹಿಂದೇಟು ಹಾಕಬಹುದೇ ಹೊರತು, ಇದರ ಆರೋಗ್ಯಕರ ಪ್ರಯೋಜನವನ್ನು ಕಂಡರೆ ಮಾತ್ರ ಈ ಕಹಿಯನ್ನೂ ಇಷ್ಟಪಟ್ಟೇ ಸೇವಿಸಲು ಸಾಧ್ಯ. ಇದನ್ನು ಸಾಧ್ಯವಾಗಿಸಲು ಕೊಂಚ ಜೇನು ಸೇರಿಸಿದರೆ ಆಯಿತು. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಹಾಗಲಕಾಯಿ - 1

*ಈರುಳ್ಳಿ (ಮಧ್ಯಮ ಗಾತ್ರ) - ½

*ಜೇನು - 1 ದೊಡ್ಡಚಮಚ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೊದಲು ಈರುಳ್ಳಿ ಮತ್ತು ಹಾಗಲ ಕಾಯಿಯ ಸಿಪ್ಪೆಗಳನ್ನು ಸುಲಿದು ತಿರುಳನ್ನು ಚಿಕ್ಕಚಿಕ್ಕ ತುಂಡುಗಳನ್ನಾಗಿಸಿ. ಹಾಗಲಕಾಯಿಯ ಬೀಜ ನಿವಾರಿಸಿ.

*ತದನಂತರ ತುಂಡುಗಳನ್ನು ಕೊಂಚ ನೀರು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಅರೆಯಿರಿ.

*ಈ ಮಿಶ್ರಣವನ್ನು ಸೋಸಬೇಡಿ, ಹಾಗೇ ಇರಲಿ. ಇದಕ್ಕೆ ಜೇನು ಸೇರಿಸಿ ಕಲಕಿ.

*ಈ ನೀರನ್ನು ಪ್ರತಿದಿನ ಮುಂಜಾನೆ ಉಪಾಹಾರಕ್ಕೂ ಕನಿಷ್ಠ ಇಪ್ಪತ್ತು ನಿಮಿಷ ಮುನ್ನ ಕುಡಿಯಿರಿ.

ಕುಡಿದಾಯಿತು, ಈಗೇನಾಗುತ್ತದೆ ಎಂದು ಕೇಳಿದವರಿಗೆ ಕೆಳಗಿನ ಮಾಹಿತಿಗಳು ಉತ್ತರ ನೀಡುತ್ತವೆ:

ಟೈಪ್ 2 ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಟೈಪ್ 2 ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಈ ಅದ್ಭುತ ರಸದಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳ ಜೊತೆಗೆ ಪಾಲಿಪೆಪ್ಟೈಡ್-ಪಿ (polypeptide-P) ಎಂಬ ಪೋಷಕಾಂಶ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಿ ಟೈಪ್ 2 ಮಧುಮೇಹವನ್ನು ಕಡಿಮೆಗೊಳಿಸುತ್ತದೆ.

ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಪೂರಕವಾಗಿದೆ

ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಪೂರಕವಾಗಿದೆ

ಗರ್ಭಿಣಿಯರು ಈ ರಸವನ್ನು ಕ್ಡಿಯುವ ಮೂಲಕ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಆರೋಗ್ಯಕರವಾಗಿರಲು ನೆರವಾಗುತ್ತದೆ. ಈ ರಸದಲ್ಲಿರುವ ಫೋಲೇಟ್ ಎಂಬ ಪೋಷಕಾಂಶ ಗರ್ಭಕೋಶಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಇದು ಸಾಧ್ಯವಾಗುತ್ತದೆ.

ಜೀವಕೋಶಗಳು ವೃದ್ಧಾಪ್ಯಕ್ಕೆ ಜಾರುವ ಕ್ರಿಯೆಯನ್ನು ತಡವಾಗಿಸುತ್ತದೆ

ಜೀವಕೋಶಗಳು ವೃದ್ಧಾಪ್ಯಕ್ಕೆ ಜಾರುವ ಕ್ರಿಯೆಯನ್ನು ತಡವಾಗಿಸುತ್ತದೆ

ಈ ರಸದಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು, ಮತ್ತು ವಿಶೇಷವಾಗಿ ವಿಟಮಿನ್ ಎ ಜೀವಕೋಶಗಳ ಸವೆತ ಮತ್ತು ಫ್ರೀ ರ್‍ಯಾಡಿಕಲ್ ಎಂಬ ವಿಷಕಾರಿ ಕಣಗಳ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಇದರಿಂದ ವೃದ್ಧಾಪ್ಯದ ಚಿಹ್ನೆಗಳು ದೇಹದ ಮೇಲೆ ಮೂಡುವ ಸಂಭವ ದೂರಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಈ ಮಿಶ್ರಣದಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಹೆಚ್ಚಿನ ಬೆಂಬಲ ನೀಡುತ್ತವೆ ಹಾಗೂ ಜಠರದಲ್ಲಿ ಆಮ್ಲೀಯತೆಯಾಗದಂತೆ ನೋಡಿಕೊಳ್ಳುತ್ತವೆ. ಇದರಿಂದ ಉಂಟಾಗಬಹುದಾದ ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದವು ಇಲ್ಲವಾಗುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಮಲಬದ್ಧತೆ ಯಾಗದಂತೆಯೂ ಕಾಪಾಡುತ್ತದೆ.

ಸೋಂಕುಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ

ಸೋಂಕುಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ

ಈ ಅದ್ಭುತ ರಸ ಒಂದು ಉತ್ತಮ ಪ್ರತಿಜೀವಕವಾಗಿದ್ದು ಹಲವು ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೇ ಈಗಾಗಲೇ ಸೋಂಕಿನಿಂದ ದೇಹದಲ್ಲಿ ಉರಿಯೂತ ಉಂಟಾಗಿದ್ದರೆ ಇದನ್ನು ಶಮನಗೊಳಿಸುವುದನ್ನು ಇನ್ನಷ್ಟು ಶೀಘ್ರವಾಗಿಸಲು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಈ ಅದ್ಭುತ ನೈಸರ್ಗಿಕ ಪೇಯದಲ್ಲಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಗುಣವಿದೆ. ಇದರಲ್ಲಿರುವ ಕೆಲವು ಪೋಷಕಾಂಶಗಳು ರಕ್ತನಾಳಗಳ ಒಳಭಾಗದಲ್ಲಿ ಅಂಟಿಕೊಂಡಿದ್ದ ಜಿಡ್ಡನ್ನು ಸಡಿಲಿಸಿ ತೊಲಗಿಸಲು ಸಮರ್ಥವಾಗಿವೆ.

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ಈ ಅದ್ಭುತ ಮಿಶ್ರಣದಲ್ಲಿರುವ ಪೋಷಕಾಂಶಗಳು, ವಿಟಮಿನ್ನುಗಳು ಮತ್ತು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತವೆ.ತನ್ಮೂಲಕ ದೇಹವನ್ನು ಹಲವು ಸೋಂಕು ಮತ್ತು ವೈರಸ್ಸುಗಳ ಧಾಳಿಯಿಂದ ರಕ್ಷಿಸುತ್ತದೆ.

English summary

Drink Karela And Onion Juice, Watch What Happens To Your Body!

Lately, natural or herbal remedies for various diseases and ailments are becoming more and more popular, as people are realising that vegetables and fruits come with health benefits that are actually effective.. Did you know that the mixture of karela (bitter gourd) and onion can treat up to 7 disorders? Well, here's a look at how you can prepare and consume this health drink.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more