For Quick Alerts
ALLOW NOTIFICATIONS  
For Daily Alerts

ತೆಂಗಿನಕಾಯಿ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ

ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುವಂತಹ ತೆಂಗಿನಕಾಯಿಯ ಬಗ್ಗೆ ಕೆಲವೊಂದು ಸಂಶೋಧನೆಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹೇಳಿವೆ. ತೆಂಗಿನ ಕಾಯಿ ಎಣ್ಣೆಯು ದೇಹಕ್ಕೆ ತುಂಬಾ ಒಳ್ಳೆಯದು.

By Hemanth
|

ಕಲ್ಪವೃಕ್ಷವೆಂದು ಕರೆಯಲ್ಪಡುವ ತೆಂಗಿನಕಾಯಿ ಮರವನ್ನು ವಿವಿಧ ರೀತಿಯಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ತೆಂಗಿನಕಾಯಿ ಹಾಗೂ ಎಳೆ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಭಾರತೀಯರು ಕಂಡುಕೊಂಡಿದ್ದಾರೆ. ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುವಂತಹ ತೆಂಗಿನಕಾಯಿಯ ಬಗ್ಗೆ ಕೆಲವೊಂದು ಸಂಶೋಧನೆಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹೇಳಿವೆ.

ತೆಂಗಿನ ಕಾಯಿ ಎಣ್ಣೆಯು ದೇಹಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಹಲವಾರು ಕಾಯಿಲೆಗಳನ್ನು ನಿವಾರಣೆ ಮಾಡುವುದು. ಇದರಲ್ಲಿನ ಕೆಲವೊಂದು ಕೊಬ್ಬಿನ ಆಮ್ಲಗಳು ಅದ್ಭುತ ಲಾಭವನ್ನು ನೀಡುವುದು. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದೆ. ಇದರಲ್ಲಿನ ಏಕಪರ್ಯಾಪ್ತ, ಬಹುಪರ್ಯಾಪ್ತ ಮತ್ತು ಪರಿಷ್ಕರಿಸಿದ ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಂಡು ತೂಕ ಕಳೆದುಕೊಳ್ಳಲು ನೆರವಾಗುವುದು. ತೆಂಗಿನ ಕಾಯಿಯಿಂದ ಆರೋಗ್ಯವೃದ್ಧಿ ಹೇಗೆ?

ಇದು ವಿಟಮಿನ್ ಕೆ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿದೆ. ಖನಿಜಾಂಶಗಳಾದ ಕಬ್ಬಿಣವು ಇದರಲ್ಲಿದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗುವ ಶೇ. 18ರಷ್ಟು ಆಹಾರದ ನಾರಿನಾಂಶವು ತೆಂಗಿನಕಾಯಿಯಲ್ಲಿದೆ. ಚರ್ಮ, ಮೂಳೆ, ಅಸ್ಥಿರಜ್ಜು, ಸ್ನಾಯುಗಳನ್ನು ಜೋಡಿಸುವಂತಹ ಅಂಗಾಂಶಗಳನ್ನು ಇದು ಬಲಪಡಿಸುವುದು. ಇಷ್ಟು ಮಾತ್ರವಲ್ಲದೆ ತೆಂಗಿನಕಾಯಿಯ ಇತರ ಲಾಭಗಳ ಬಗ್ಗೆ ತಿಳಿದುಕೊಳ್ಳಿ.....


ಕ್ಯಾಲರಿ ದಹಿಸುವುದು

ಕ್ಯಾಲರಿ ದಹಿಸುವುದು

ತೆಂಗಿನಕಾಯಿಯಂತಹ ಆಹಾರವು ತೂಕ ಕಳೆದುಕೊಳ್ಳಲು ನೆರವಾಗುವುದು ಎಂದು ನಿಮಗೆ ತಿಳಿದಿದೆಯಾ? ಇದು ತೆಂಗಿನಕಾಯಿಯ ಅತೀ ಉತ್ತಮ ಲಾಭವಾಗಿದೆ. ದೇಹದ ಶಕ್ತಿ ಬಿಡುಗಡೆಯನ್ನು ಉತ್ತೇಜಿಸಿ ತೂಕ ಕಳೆದುಕೊಳ್ಳಲು ತೆಂಗಿನಕಾಯಿ ನೆರವಾಗುವುದು. ಹೊಟ್ಟೆಯ ಸುತ್ತಲು ಅಂಟಿಕೊಂಡಿರುವ ಕೊಬ್ಬನ್ನು ನಿವಾರಿಸಲು ಇದು ಸಹಕಾರಿಯಾಗಲಿದೆ.

ಸೋಂಕು ನಿವಾರಕ

ಸೋಂಕು ನಿವಾರಕ

ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ನಿಂದ ಉಂಟಾಗುವಂತಹ ಸೋಂಕನ್ನು ತೆಂಗಿನಕಾಯಿಯು ನಿವಾರಣೆ ಮಾಡುವುದು. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿ ಹರ್ಪಿಸ್, ಎಚ್ ಐವಿ ಮುಂತಾದ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ತುಂಬುವುದು.

ಅತಿಯಾಗಿ ತಿನ್ನುವುದನ್ನು ತಡೆಯುವುದು

ಅತಿಯಾಗಿ ತಿನ್ನುವುದನ್ನು ತಡೆಯುವುದು

ತೆಂಗಿನಕಾಯಿಯು ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಗಾಗ ಹಸಿವು ಆಗುವುದನ್ನು ತಡೆಯುತ್ತದೆ. ಇದರಿಂದ ಹೊಟ್ಟೆ ತುಂಬಿದಂತೆ ಆಗಿ ಪದೇ ಪದೇ ತಿನ್ನುವುದು ಕಡಿಮೆಯಾಗುತ್ತದೆ. ಇದು ತೆಂಗಿನಕಾಯಿಯ ಬಹುದೊಡ್ಡ ಲಾಭವಾಗಿದೆ.

ಹೃದಯದ ಆರೋಗ್ಯ ಹೆಚ್ಚಿಸುವುದು

ಹೃದಯದ ಆರೋಗ್ಯ ಹೆಚ್ಚಿಸುವುದು

ತೆಂಗಿನಕಾಯಿಯಲ್ಲಿರುವ ಪರಿಷ್ಕರಿಸಿದ ಕೊಬ್ಬಿನ ಅಂಶವು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು. ಇದರಿಂದ ಅಪಧಮನಿಗಳಲ್ಲಿ ಯಾವುದೇ ಹಾನಿಯಾಗುವುದು ತಪ್ಪುತ್ತದೆ.

ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ

ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ

ತೆಂಗಿನ ಕಾಯಿಯ ಮತ್ತೊಂದು ಅತ್ಯುತ್ತಮ ಲಾಭವೆಂದರೆ ಇದು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಲ್ಜಿಮರ್ ನಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಜೀರ್ಣಕ್ರಿಯೆ ಹೆಚ್ಚಳ

ಜೀರ್ಣಕ್ರಿಯೆ ಹೆಚ್ಚಳ

ತೆಂಗಿನಕಾಯಿಯು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ನಿವಾರಿಸುವುದು. ತೆಂಗಿನ ಎಣ್ಣೆಯು ಕರುಳಿನ ಕ್ರಿಯೆ ಸರಾಗವಾಗುವಂತೆ ನೋಡಿಕೊಳ್ಳುವುದು.

English summary

Did You Know That Coconuts Are Healthy? If Not, Then Check This Out!

The health benefits of coconut are abundant and all that you need to do is to read this article to find out more about them and use it in your diet for sure.
Story first published: Wednesday, December 14, 2016, 18:56 [IST]
X
Desktop Bottom Promotion