For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಕಾಫಿ ಪ್ರಿಯರಿಗೆ ಕಾದಿದೆ ಒಂದು ಕಹಿ ಸುದ್ದಿ!

By Vani nayak
|

ಯಾವ ಕಾಫಿ ಪ್ರಿಯರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೋ, ರಾಕ್ ಸಂಗೀತ ಕಾರ್ಯಕ್ರಮಕ್ಕೆ ಹೋಗಲು ಇಚ್ಛಿಸುತ್ತಾರೋ ಅವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇತ್ತೀಚಿನ ಅಧ್ಯಾಯನದ ಪ್ರಕಾರ ಕಾಫಿಯಲ್ಲಿರುವ ಕೆಫೀನ್ ಎಂಬ ಅಂಶವು ಕಿವಿಯ ಶ್ರವಣ ಶಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

ಕೆನಡಾದಲ್ಲಿರುವ ಮ್ಯಾಕ್ ಗಿಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಪ್ರಕಾರ, ಜೋರಾದ ಗದ್ದಲದ ಪರಿಣಾಮದಿಂದಾದ ಶ್ರವಣ ದೋಷ ಸಮಸ್ಯೆಯನ್ನು ಎದುರಿಸುತ್ತಿರುವವರು ನಿಯಮಿತವಾದ ಕೆಫೀನ್ ಸೇವನೆ ಮಾಡಿದರೆ, ಸಮಸ್ಯೆಯಿಂದ ಚೇತರಿಸಿಕೊಳ್ಳುವುದಕ್ಕೂ ಕಂಟಕವಾಗಿ, ಶ್ರವಣ ಸಮಸ್ಯೆಯನ್ನು ಶಾಶ್ವತ ಮಾಡಿಬಿಡುತ್ತದೆ. ಹೀಗೆಂದು ಜಿನ್ಹುವಾ (xinhua)ಸುದ್ದಿ ಸಂಸ್ಥೆ ವರದಿ ಮಾಡಿತ್ತು.

Coffee Can Cause A Serious Impact On Hearing: Study

ಒಂದು ವೇಳೆ ನಮ್ಮ ಕಿವಿಗಳ ಮೇಲೆ ಒಮ್ಮೆಲೆ ಜೋರಾದ ಶಬ್ಧ ಬಿದ್ದರೆ, ತಾತ್ಕಾಲಿಕವಾಗಿ ಶ್ರವಣ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ ಆಡಿಟರಿ ಟೆಂಪೊರರಿ ತ್ರೆಶ್ ಹೋಲ್ಡ್ ಶಿಫ್ಟ್ (auditory temporary threshold shift) ಎಂದು ಕರೆಯುತ್ತಾರೆ. ಸಾಧಾರಣವಾಗಿ ಈ ರೀತಿಯಾಗಿ ಆದ ಏರುಪೇರನ್ನು ಶಬ್ಧ ಬಿದ್ದ ಮೊದಲ 72 ಗಂಟೆಗಳಲ್ಲಿ ಸರಿ ಮಾಡಬಹುದು. ಕಾಫಿ ಕೆಫಿನ್ ಸಾವಿಗೆ ಆಹ್ವಾನ ನೀಡಿದಂತೆ !

ಆದರೆ ಶ್ರವಣ ದೋಷದ ಲಕ್ಷಣಗಳು ಉಳಿದುಕೊಂಡುಬಿಟ್ಟರೆ ಸಮಸ್ಯೆಯು ಶಾಶ್ವತವಾಗಿ ಉಳಿದುಬಿಡುತ್ತದೆ. ಹೀಗೆಂದು ಕಿವಿ ಗಂಟಲು ತಜ್ಞ ವೈದ್ಯರಾದ ಡಾ.ಫೈಜಲ್ ಜವಾವಿ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಸಂಶೋಧಕರು ಇದನ್ನು ಪ್ರಯೋಗಪ್ರಾಣಿಗಳ ಎರಡು ಗುಂಪುಗಳನ್ನು ಮಾಡಿ ಹೆಚ್ಚು ಶಬ್ಧವಿರುವ ಕಡೆ ಕಾಫಿ ಕೊಟ್ಟು ಮತ್ತೊಂದು ಕಡೆ ಕಾಫಿ ಕೊಡದೇ ಪ್ರಯೋಗಿಸಿದರು.

ಪ್ರತಿ ದಿವಸ ಒಂದು ಗಂಟೆಯ ಕಾಲ ಜೋರಾದ ಶಬ್ಧ ಆ ಪ್ರಯೋಗ ಪ್ರಾಣಿಗಳ ಮೇಲೆ ಬೀಳುವಂತೆ ಮಾಡುತ್ತಿದ್ದರು. ಇದು ಒಂದು ಗಂಟೆ ರಾಕ್ ಸಂಗೀತ ಕೇಳಿದಷ್ಟಕ್ಕೆ ಸಮಾನ. 8 ದಿನಗಳ ನಂತರ, ಸಂಶೋಧಕರ ತಂಡದ ಪ್ರಕಾರ ಎರಡೂ ಗುಂಪಿನ ಪ್ರಯೋಗ ಪ್ರಾಣಿಗಳ ಶ್ರವಣ ದೋಷ ವಿಭಿನ್ನವಾಗಿ ದಾಖಲಾಗಿತ್ತು. ಮಕ್ಕಳ ಕಾಫಿ ಸೇವನೆಗೆ ಈಗಲೇ ಬ್ರೇಕ್ ಹಾಕಿ

2015ರಲ್ಲಿ ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ಪ್ರಕಟಿಸಿದ ಸಲಹೆಯ ಪ್ರಕಾರ ಕೆಫೈನ್ ಬಳಕೆ ಪ್ರತಿ ದಿವಸ ಒಟ್ಟು ಸೇರಿ 400mg ಅಥವಾ ಪ್ರತ್ಯೇಕವಾಗಿ 200mg ರಷ್ಟು ಪ್ರಮಾಣ ಸೇವನೆಯಾದರೆ ಜನ ಸಾಮಾನ್ಯರಿಗೆ ಸುರಕ್ಷಿತವಾಗಿರುತ್ತದೆ. ಆದರೆ, ಮ್ಯಾಕ್ ಗಿಲ್ ಸಂಶೋಧನೆ ಪ್ರಕಾರ ಜೋರಾದ ಗದ್ದಲದ ವಾತಾವರಣದಲ್ಲಿದ್ದುಕೊಂಡು ನಿತ್ಯ 25mg ರಷ್ಟು ಕೆಫೈನ್ ಸೇವನೆ ಮಾಡಿದರೆ, ಕುಂದಿದ ಶ್ರವಣಾ ಶಕ್ತಿ ಚೇತರಿಸಿಕೊಳ್ಳುವುದರಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಮೂಲ- ಐಎ‍ಎನ್‍ಎ

English summary

Coffee Can Cause A Serious Impact On Hearing: Study

Coffee lovers who like to attend rock music concerts or work at the airports should be cautious, as a recent study indicated that caffeine has a serious impact on hearing. According to a research by the McGill University in Canada, regular caffeine consumption can greatly impede hearing recovery from a loud noise, even making the damage permanent, the Xinhua news agency reported.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more