For Quick Alerts
ALLOW NOTIFICATIONS  
For Daily Alerts

ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು

By Manu
|

ಕ್ಯಾನ್ಸರ್ ಎನ್ನುವ ರೋಗಕ್ಕೆ ಮದ್ದಿಲ್ಲ ಎನ್ನುವ ಕಾಲವೊಂದಿತ್ತು. ಆದರೆ ಬೆಳೆಯುತ್ತಿರುವ ವೈದ್ಯಕೀಯ ಲೋಕದಲ್ಲಿ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಅದನ್ನು ಗುಣಪಡಿಸಬಹುದಾಗಿದೆ. ಹಲವಾರು ರೀತಿಯ ಕ್ಯಾನ್ಸರ್ ಗಳು ಇತ್ತೀಚೆಗೆ ಪತ್ತೆಯಾಗುತ್ತಿದೆ. ಅದರಲ್ಲೂ ಶ್ವಾಸಕೋಶ, ಸ್ತನ, ಕರುಳು ಮತ್ತು ಗುದನಾಳದ ಕ್ಯಾನ್ಸರ್‌ಗಳು ಇತ್ತೀಚೆಗೆ ವೈದ್ಯಕೀಯ ಲೋಕಕ್ಕೆ ತಿಳಿದುಬಂದಂತಹ ಕ್ಯಾನ್ಸರ್ ಆಗಿದೆ.

Breast Cancer: Every Woman's Nightmare

ಸ್ತನದಲ್ಲಿ ಗಡ್ಡೆ ಕಂಡುಬರುವುದು, ಸ್ತನದ ತೊಟ್ಟಿನಿಂದ ರಕ್ತ ಬರುವುದು, ತೊಟ್ಟು ಕುಗ್ಗುವುದು, ತೊಟ್ಟುಗಳು ಒಳಕ್ಕೆಳೆದುಕೊಳ್ಳುವುದು, ತೊಟ್ಟುಗಳ ಮೇಲೆ ದದ್ದುಗಳು ಬೀಳುವುದು ಇತ್ಯಾದಿ ಸ್ತನದ ಕ್ಯಾನ್ಸರ್‌ ಲಕ್ಷಣಗಳಾಗಿವೆ. ಸ್ತನದಲ್ಲಿ ಗಡ್ಡೆ ಕಂಡುಬರುವುದು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ.

ಪ್ರತಿಯೊಂದು ಗಡ್ಡೆ ಕೂಡ ಅಪಾಯಕಾರಿಯಲ್ಲ. ಸ್ತನದಲ್ಲಿ ಕಂಡುಬರುವಂತಹ ಶೇ.10ರಷ್ಟು ಗಡ್ಡೆಗಳು ಮಾತ್ರ ಕ್ಯಾನ್ಸರ್ ಗಡ್ಡೆಗಳಾಗಿರುತ್ತದೆ. ಸ್ತನದಲ್ಲಿ ಕೋಶಗಳು ಕಂಡುಬರುತ್ತಿದ್ದರೆ ಆಗ ಅದು ಕ್ಯಾನ್ಸರ್ ಎಂದೇ ಹೇಳಬಹುದಾಗಿದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಸ್ತನದಲ್ಲಿ ಮೂರು ರೀತಿಯ ಗಡ್ಡೆಗಳು ಕಂಡುಬರುತ್ತದೆ. ನಿಮ್ಮ ಶಸ್ತ್ರಚಿಕಿತ್ಸಕರು ಮೂರು ರೀತಿಯ ಗಡ್ಡೆಗಳನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಯಾವ ಗಡ್ಡೆ ಇದೆ ಎಂದು ತಿಳಿದುಕೊಳ್ಳಲು ಸ್ತನ ಬಯೋಸ್ಪಿ ಮಾಡಬೇಕಾಗಿದೆ.

ತೊಟ್ಟಿನಿಂದ ರಕ್ತ ಸುರಿಯುವುದು ಸ್ತನದ ತೊಟ್ಟಿನ ಅಹಿತಕರ ಪ್ರಾಣಾಂತಕ ಜೀವಕೋಶಗಳಿಂದ ಆಗಿರಬಹುದು. ಸ್ತನದ ತೊಟ್ಟಿನಿಂದ ರಕ್ತ ಸುರಿಯುವ ಲಕ್ಷಣ ಕಂಡುಬರುವುದು ತುಂಬಾ ಅಪರೂಪವಾಗಿದೆ. ಶೇಕಡಾ ಎಂಟರಷ್ಟು ಅಥವಾ ಅದಕ್ಕಿಂತ ಕಡಿಮೆ ಮಹಿಳೆಯರು ಸ್ತನದ ತೊಟ್ಟಿನಿಂದ ರಕ್ತ ಸೋರುವಾಗ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಸ್ತನ ಕ್ಯಾನ್ಸರ್ ಗೆ ಸ್ವಯಂ ತಪಾಸಣೆ ಹೇಗೆ?

ಸ್ತನ ಕ್ಯಾನ್ಸರ್‌ನ ಮುಂದಿನ ಲಕ್ಷಣವೆಂದರೆ ಗಡ್ಡೆಗಳು ಕಂಡುಬರುವುದು. ಇದು ಹೆಚ್ಚಾಗಿ ಕಂಡುಬರುವಂತಹ ಸ್ತನದ ಕ್ಯಾನ್ಸರ್‌ನ ಲಕ್ಷಣವಾಗಿದೆ. ನಿಮಗೆ 50ಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಸ್ತನದ ಗಡ್ಡೆಗಳು ಕಂಡುಬರುತ್ತಿದ್ದರೆ ಚರ್ಮದ ಆ ಭಾಗದಲ್ಲಿ ಕೈಯಾಡಿಸಿ ಅದು ವೇಗವಾಗಿ ಚಲಿಸದೆ ಇದ್ದರೆ ಆಗ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಗರ್ಭಿಣಿಯರಿಗೆ ಒಂದಿಷ್ಟು ಕಿವಿಮಾತು

ಯಾವುದೇ ವಿಕಿರಣವು ಸ್ತನದ ಕ್ಯಾನ್ಸರ್‌ನ್ನು ಗುಣಪಡಿಲಾರದು. ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದೇ ಅದಕ್ಕೆ ಚಿಕಿತ್ಸೆಯಾಗಿದೆ. ಇದಕ್ಕಾಗಿ ಯಾವಾಗಲೂ ಸ್ತನವನ್ನು ಪರೀಕ್ಷಿಸುತ್ತಾ ಇರಬೇಕು ಮತ್ತು ಈ ಮೇಲಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.

English summary

Breast Cancer: Every Woman's Nightmare

The most frequently diagnosed cancers globally are lung, breast and colorectal cancers. Signs of breast cancer are by and large, fairly non specific. The vagueness of the signs makes it difficult to be diagnosed. A lump in your breast, bleeding from the nipple, dimpling of the nipple, retraction of the nipple, alteration of the contour of the chest, a rash on the nipple, all these signs are causes of concern. The most typical of the signs is just a lump in the breast, which is why this specific symptom is in the top position.
X
Desktop Bottom Promotion