For Quick Alerts
ALLOW NOTIFICATIONS  
For Daily Alerts

ಅಸಹಜವಾದ ರಕ್ತಹೆಪ್ಪುಗಟ್ಟುವಿಕೆಯ ಬಗ್ಗೆ ಎಚ್ಚರವಿರಲಿ

By Arshad
|

ಯಾವುದು ನಿಂತರೂ ಉಸಿರು, ಹೃದಯ ನಿಲ್ಲಬಾದರಂತೆ. ಏಕೆಂದರೆ ಜೀವವಿರುವಷ್ಟೂ ಹೊತ್ತು ನಮ್ಮ ದೇಹದ ಎಲ್ಲಾ ಅಂಗಗಳು ಕಾರ್ಯನಿರ್ವಹಿಸುತ್ತಲೇ ಇರಬೇಕಾಗಿದ್ದು ಅದರಲ್ಲಿ ಉಸಿರಾಟ ಮತ್ತು ರಕ್ತಪರಿಚಲನೆ ಒಂದು ಕ್ಷಣವೂ ನಿಲ್ಲಲಾಗದ ಕಾರ್ಯಗಳಾಗಿವೆ. ರಕ್ತ ನಮ್ಮ ಹೃದಯದ ಒತ್ತಡದ ಮೂಲಕ ಕೇಂದ್ರದಿಂದ ಪ್ರತಿ ಜೀವಕೋಶಕ್ಕೂ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸಿ ಅಲ್ಲಿಂದ ತ್ಯಾಜ್ಯವನ್ನು ಹಿಂದಿರುಗಿ ತಂದು ಶುದ್ಧೀಕರಣಗೊಂಡು ಮತ್ತೆ ಮರುಬಳಕೆಯಾಗುತ್ತಿರುತ್ತದೆ. ಒಂದು ವೇಳೆ ಯಾವುದೇ ಗಾಯವಾದರೆ ಇದನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ. ನಿಸರ್ಗ ಇದನ್ನು ನಿಲ್ಲಿಸಲು ಒಂದು ರಕ್ಷಣಾ ವ್ಯವಸ್ಥೆಯನ್ನು ಹಮ್ಮಿಕೊಂಡಿದೆ. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎನ್ನುತ್ತಾರೆ. ರಕ್ತ ಹೆಪ್ಪುಗಟ್ಟಲು ಇವುಗಳೂ ಕೂಡ ಕಾರಣವಾಗಿರಬಹುದು..

ರಕ್ತದಲ್ಲಿರುವ ಕಿರುಬಿಲ್ಲೆ ಅಥವಾ ಪ್ಲೇಟ್ಲೆಟ್ (platelet) ಎಂಬ ಕಣಗಳೇ ಇದರ ಜವಾಬ್ದಾರಿ ಹೊರುತ್ತವೆ. ರಕ್ತದಲ್ಲಿ ಯಾವುದೇ ಕೆಲಸವಿಲ್ಲದೇ ಸುಮ್ಮನೆ ತಿರುಗಾಡಿಕೊಂಡಿರುವ ಈ ಕಣಗಳು ಯಾವಾಗ ಗಾಳಿಯ ಸಂಪರ್ಕ ಪಡೆಯಿತೋ ಈ ಕಣಗಳ ಒಂದಕ್ಕೊಂದು ಒಂದು ಅಂಟಿಕೊಂಡು, ಅಂದರೆ ಪರಸ್ಪರ ಕೈ ಕೈ ಹಿಡಿದುಕೊಂಡು ತೆಳುವಾದ ಪದರವನ್ನು ನಿರ್ಮಿಸಿ ಇನ್ನಷ್ಟು ರಕ್ತಹರಿದಂತೆ ಗಾಯದ ಅಷ್ಟೂ ಅಗಲಕ್ಕೂ ಗೋಡೆಯೊಂದನ್ನು ಕಟ್ಟಿಬಿಡುತ್ತವೆ. ರಕ್ತ ಹರಿಯುವುದು ನಿಂತ ಬಳಿಕ ಅಲ್ಲೇ ಒಣಗಿ ಗಟ್ಟಿಯಾಗಿ ಈ ಭಾಗದಲ್ಲಿ ಹೊಸ ಚರ್ಮ ಬೆಳೆಯುವವರೆಗೂ ಒಣಗಿಯೇ ಇದ್ದು ಬಳಿಕ ಪೊರೆಯಂತೆ ಕಳಚಿಕೊಳ್ಳುತ್ತದೆ. ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಆದರೆ ಈ ಹೆಪ್ಪುಗಟ್ಟುವಿಕೆಯಲ್ಲಿ ಕೆಲವು ಕ್ರಮವಿದೆ. ಇದು ದೇಹದಿಂದ ಹೊರಭಾಗದಲ್ಲಿಯೇ ಆಗಬೇಕೇ ವಿನಃ ದೇಹದ ಒಳಗಲ್ಲ. ಅದರಲ್ಲೂ ಮೆದುಳಿನಲ್ಲಿರುವ ಯಾವುದಾದರೂ ನರ ಒಡೆದು ರಕ್ತ ಹೆಪ್ಪುಗಟ್ಟಿದರೆ ತಕ್ಷಣ ಸಾವು ನಿಶ್ಚಿತ ಇದನ್ನೇ ಮೆದುಳಿನ ರಕ್ತಸ್ರಾವ ಅಥವಾ (brain hemorrhage) ಎನ್ನುತ್ತಾರೆ. ಅದೇ ಒಂದು ವೇಳೆ ದೇಹದೊಳಗಣ ರಕ್ತನಾಳ ಬಿರಿದು ಅಥವಾ ಮಡಚಿರುವ ನರ ತೆರೆದುಕೊಳ್ಳುವಾಗ ಒಳಭಾಗ ತುಂಡಾಗಿ ರಕ್ತ ಹೊರಬಂದರೆ? ಇದಕ್ಕೆ Deep vein thrombosis ಎನ್ನುತ್ತಾರೆ. ಇದೂ ಸಹಾ ಮಾರಣಾಂತಿಕವಾಗಿದ್ದು ಒಂದು ವೇಳೆ ಹೃದಯದ ಸಮೀಪವಿರುವ ರಕ್ತನಾಳದಲ್ಲೇನಾದರೂ ಇದು ಕಂಡುಬಂದರೆ ಪ್ರಾಣಕ್ಕೇ ಅಪಾಯವಿದೆ. ಮಹಿಳೆಯರಿಗೆ ಸಿಹಿ ಸುದ್ದಿ: ರಕ್ತ ಪರಿಚಲನೆ ಹೆಚ್ಚಿಸಲು ಸೂಕ್ತ ಸಲಹೆ

ಸಾಮಾನ್ಯ ಮೈಕಟ್ಟಿನ ಜನರಿಗೆ ಇದರ ಸಂಭವ ಕಡಿಮೆ ಇದ್ದರೂ ಸ್ಥೂಲದೇಹಿಗಳು, ಧೂಮಪಾನಿಗಳು, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಶ್ವಾಸಕೋಶದ ರೋಗವಿರುವವರು, ಸಂಧಿವಾತ ಮತ್ತು ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಮತ್ತು ಕ್ಯಾನ್ಸರ್ ಗೆ ಪಡೆಯುವ ಖೀಮೋಥೆರಪಿ ಚಿಕಿತ್ಸೆಯಲ್ಲಿಯೂ ಕಂಡುಬರುತ್ತದೆ. ಇನ್ನೂ ಕೆಲವೊಮ್ಮೆ ಇದು ಅನುವಂಶಿಕವಾಗಿ ಬರುವಂತಹದ್ದಾಗಿದೆ. ಎಲ್ಲಾ ಸರಿ ಇದ್ದರೂ ಚಲನೆಯಿಲ್ಲದೇ ತಟಸ್ಥರಾಗಿರುವ ದೇಹದಲ್ಲಿಯೂ ಈ ತೊಂದರೆ ಕಂಡುಬರಬಹುದು.

ಒಂದು ವೇಳೆ ಶ್ವಾಸಕೋಶದಲ್ಲಿರುವ ನರಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ಮೈಯೆಲ್ಲಾ ನೀಲಿಗಟ್ಟಿ ಸಾವು ಸಂಭವಿಸಬಹುದು. ಸಾಮಾನ್ಯವಾಗಿ ಈ ತೊಂದರೆ ಇರುವವರಿಗೆ ಈ ತೊಂದರೆ ಇರುವುದೇ ಗೊತ್ತಿರುವುದಿಲ್ಲ. ಗೊತ್ತಾಗುವ ವೇಳೆಗೆ ತಡವಾಗಿರುತ್ತದೆ. ಆದರೆ ದೇಹ ಈ ತೊಂದರೆ ಇದೆ ಎಂಬುದನ್ನು ಕೆಲವು ಲಕ್ಷಣಗಳ ಮೂಲಕ ಸೂಚನೆ ನೀಡುತ್ತದೆ. ಆ ಲಕ್ಷಣಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಒಂದು ವೇಳೆ ಇವುಗಳನ್ನು ನೀವು ಅನುಭವಿಸುತ್ತಿದ್ದೀರಾದರೆ ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಗಾಗುವುದು ಅವಶ್ಯಕ....

ಶರೀರದ ಒಂದು ಭಾಗ ಮಾತ್ರ ಬೆಚ್ಚಗಾಗುವುದು

ಶರೀರದ ಒಂದು ಭಾಗ ಮಾತ್ರ ಬೆಚ್ಚಗಾಗುವುದು

ಒಂದು ವೇಳೆ ಶರೀರದ ಒಂದು ಭಾಗ ಮಾತ್ರ ಇತರ ಭಾಗಗಳಿಗಿಂತ ಹೆಚ್ಚು ಬಿಸಿಯಾಗಿದ್ದರೆ, ವಿಶೇಷವಾಗಿ ನಡೆಯುವಾಗ ಆ ಭಾಗದಲ್ಲಿ ನೋವು ಕಂಡುಬರುತ್ತಿದ್ದರೆ ಒಳಗೆ ರಕ್ತ ಹೆಪ್ಪುಗಟ್ಟಿರಬಹುದು.

ಚರ್ಮದ ಬಣ್ಣ ಬದಲಾಗುವುದು

ಚರ್ಮದ ಬಣ್ಣ ಬದಲಾಗುವುದು

ರಕ್ತ ಹೆಪ್ಪುಗಟ್ಟಿದ ಭಾಗ ಒಂದು ವೇಳೆ ಚರ್ಮಕ್ಕೆ ಹತ್ತಿರವಿದ್ದರೆ ಆ ಭಾಗದ ಚರ್ಮದ ಆಳದಲ್ಲಿ ನೀಲಿ ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಬಹುದು. ಆದರೆ ಈ ಭಾಗವನ್ನು ಕೆರೆದು ನೋಡುವುದಾಗಲೀ, ಒತ್ತುವುದಾಗಲೀ ಮಾಡಬಾರದು, ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಇನ್ನಷ್ಟು ಹೆಚ್ಚುತ್ತದೆ.

ಜ್ವರ ಕಾಣಿಸಿಕೊಳ್ಳುವುದು

ಜ್ವರ ಕಾಣಿಸಿಕೊಳ್ಳುವುದು

ಒಂದು ವೇಳೆ ನರ ಬಿರಿದು ಕಾಣಿಸಿಕೊಳ್ಳುವ Deep vein thrombosis ಸ್ಥಿತಿಗೆ ಒಳಗಾಗಿದ್ದರೆ ವ್ಯಕ್ತಿ ನಿಗದಿತವಾಗಿ ಜ್ವರವನ್ನು ಅನುಭವಿಸುತ್ತಾನೆ. ಇದಕ್ಕೆ ರಕ್ತಪರಿಚಲನೆಯ ಪ್ರಮಾಣ ದಿನದ ವಿವಿಧ ಅವಧಿಗಳಲ್ಲಿ ಹೆಚ್ಚು ಕಡಿಮೆಯಾಗುವುದೇ ಕಾರಣ. ಯಾವಾಗ ಆ ನರದ ಭಾಗದ ರಕ್ತಪರಿಚಲನೆ ಹೆಚ್ಚಿನ ಮಹತ್ವದ್ದಾಗಿರುತ್ತದೆಯೋ ಆಗ ಹೆಚ್ಚು ಜ್ವರ ಮತ್ತು ಕಡಿಮೆ ಪ್ರಮಾಣದಲ್ಲಿದ್ದಾಗ ಕಡಿಮೆ ಜ್ವರ ಇರುತ್ತದೆ. ಇದು ತೊಂದರೆ ವಿಷಮಸ್ಥಿತಿಗೆ ತಲುಪಿರುವುದನ್ನು ತಿಳಿಸುವ ಸಂಕೇತವಾಗಿದೆ. ಇದಕ್ಕೆ ತಕ್ಷಣ ವೈದ್ಯಕೀಯ ನೆರವು ಅತ್ಯಗತ್ಯ.

ಊದಿಕೊಳ್ಳುವುದು ಅಥವಾ ಬಾವು

ಊದಿಕೊಳ್ಳುವುದು ಅಥವಾ ಬಾವು

ಒಂದು ವೇಳೆ ಪಾದಗಳ ಮೇಲಿನ ಭಾಗ, ಮೊಣಕಾಲಿಗಿಂತ ಕೆಳಗಿನ ಭಾಗ ಊದಿಕೊಂಡಿದ್ದರೆ ಇದು Deep vein thrombosis ನ ಲಕ್ಷಣವಾಗಿದೆ. ಈ ತೊಂದರೆ ಇರುವ ಕಾಲು ಇನ್ನೊಂದು ಕಾಲಿಗಿಂತಲೂ ಹೆಚ್ಚು ಭಾರವಾಗಿದ್ದು ನೀರು ತುಂಬಿಕೊಂಡಂತೆ ಅನ್ನಿಸುತ್ತದೆ. ಆದರೆ ಕಾಲು ಊದಿಕೊಳ್ಳಲು ಇದೊಂದೇ ಕಾರಣವಾಗಿರದೇ ಬೇರೆ ಕಾರಣಗಳೂ ಇರಬಹುದು. ಆದ್ದರಿಂದ ವೈದ್ಯರಿಂದ ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯುವುದೇ ಉತ್ತಮ ಮಾರ್ಗ.

ಉಸಿರಾಟದಲ್ಲಿ ತೊಂದರೆ

ಉಸಿರಾಟದಲ್ಲಿ ತೊಂದರೆ

ಒಂದು ವೇಳೆ ಶ್ವಾಸಕೋಶದ ಯಾವುದೋ ನರದಲ್ಲಿ ರಕ್ತಹೆಪ್ಪುಗಟ್ಟಿರುವ ತೊಂದರೆ ಇದ್ದರೆ ಈ ವ್ಯಕ್ತಿಗಳು ಉಸಿರಾಡಲು ಕೊಂಚ ಕಷ್ಟಪಡುತ್ತಾರೆ. ಇದು ಅಪಾಯಕಾರಿಯಾಗಿದ್ದು ತುರ್ತು ಚಿಕಿತ್ಸೆಯ ಅಗತ್ಯವಿದೆ.

ಸತತ ಕೆಮ್ಮು

ಸತತ ಕೆಮ್ಮು

Deep vein thrombosis ನ ಇನ್ನೊಂದು ಲಕ್ಷಣವೆಂದರೆ ಸತತ ಕೆಮ್ಮು ಹಾಗೂ ಕೆಮ್ಮಿನಲ್ಲಿ ಹೆಪ್ಪುಗಟ್ಟಿದ ರಕ್ತ ಹೊರಬರುವುದು. ಇದು ಹೆಪ್ಪುಗಟ್ಟಿದ ರಕ್ತ ಶ್ವಾಸಕೋಶಕ್ಕೆ ಬಂದಿರುವ ಲಕ್ಷಣವಾಗಿದೆ.

ಅತೀವ ಸುಸ್ತು

ಅತೀವ ಸುಸ್ತು

ಈ ತೊಂದರೆ ಇರುವವರು ಅತೀವ ಸುಸ್ತು, ತಲೆ ತಿರುಗುವುದು, ನಡೆಯಲು ಕಷ್ಟಪಡುವುದು, ನಿಲ್ಲಲೂ ಸಾಧ್ಯವಾಗದೇ ಇರುವುದು ಮೊದಲಾದವು ಇತರ ಲಕ್ಷಣಗಳನ್ನು ಪ್ರಕಟಿಸುತ್ತಾರೆ.

ಎದೆಯಲ್ಲಿ ನೋವು

ಎದೆಯಲ್ಲಿ ನೋವು

ಒಂದು ವೇಳೆ ಈ ತೊಂದರೆ ಶ್ವಾಸಕೋಶಗಳಲ್ಲಿದ್ದರೆ ಎದೆಯ ಭಾಗದಲ್ಲಿ ಅತಿ ಹೆಚ್ಚಿನ ನೋವನ್ನು ರೋಗಿ ಅನುಭವಿಸುತ್ತಾನೆ ಹಾಗೂ ಉಸಿರಾಟವೂ ಬಲು ಕಷ್ಟಕರವಾಗುತ್ತದೆ.

English summary

Beware Of Abnormal Blood Clots!

If your body has to stay healthy, your blood needs to reach all parts of the body and supply oxygen and nutrients. When anything goes wrong with the quality, quantity or flow of blood in your body, your health goes for a toss. Apart from regular functions, there is another function of your blood known as clotting. When your skin is cut, your blood tends to clot in order to stop the flow.
X
Desktop Bottom Promotion