For Quick Alerts
ALLOW NOTIFICATIONS  
For Daily Alerts

ಸಸ್ಯಾಹಾರಿಗಳಿಗೂ ಸಹ ಪ್ರೋಟೀನ್‌ಯುಕ್ತ ಆಹಾರಗಳಿವೆ...

By CM prasad
|

ಪ್ರಪಂಚದಲ್ಲಿ ಇರುವ ಆಹಾರ ಪದ್ಧತಿಗಳಲ್ಲಿ ಸಾಮಾನ್ಯವಾಗಿ ಇರುವುದೇ ಎರಡು ವಿಧ. ಸಸ್ಯಾಹಾರಿ ಮತ್ತು ಮಾಂಸಹಾರಿ. ಕೆಲವರಿಗೆ ಸಸ್ಯಹಾರಿ ಹಿಡಿಸಿದರೆ ಇನ್ನು ಕೆಲವರಿಗೆ ಮಾಂಸಹಾರಿಯೇ ಬೇಕು. ಹೌದು! ಈ ಗೊಂದಲಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರದ ಸೇವನೆಯ ಕಡೆ ಅನೇಕರು ಗಮನಹರಿಸುವುದಿಲ್ಲ. ಮಾಂಸಯುಕ್ತ ಆಹಾರಗಳಲ್ಲಿ ಸಹಜವಾಗಿ ಪೌಷ್ಠಿಕಾಂಶ ಸತ್ವಗಳು ಹೇರಳವಾಗಿರುತ್ತವೆ. ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ಮಾಂಸಹಾರಿ ಪದಾರ್ಥಗಳನ್ನು ಸೇವಿಸಲು ಇಚ್ಛಿಸದ ಸಸ್ಯಹಾರಿಗಳಿಗೂ ಸಹ ಸಸ್ಯಯುಕ್ತ ಕೆಲವು ಆಹಾರಗಳಲ್ಲಿ ಪೌಷ್ಠಿಕಾಂಶಗಳಿರುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಈ ಸಸ್ಯ ಆಹಾರಗಳಲ್ಲಿ ಪೌಷ್ಠಿಕಾಂಶ ಸತ್ವಗಳು ಹೇರಳವಾಗಿದ್ದು, ಮಾಂಸಹಾರಿಗಳಿಗೆ ಸೆಡ್ಡು ಹೊಡೆಯುವ ಗುಣಲಕ್ಷಣಗಳನ್ನು ಹೊಂದಿವೆ. ಪೌಷ್ಠಿಕಾಂಶಗಳಲ್ಲಿ ಪ್ರಮುಖವಾದದ್ದು ಪ್ರೋಟೀನ್ ಸತ್ವ. ಹೌದು, ನಿಮ್ಮ ದೇಹದ ಕೇಶದಿಂದ ಹಿಡಿದು ನಿಮ್ಮ ಉಗುರುಗಳ ತನಕ ಪ್ರೋಟೀನ್ ಸತ್ವದ ಅವಶ್ಯಕತೆ ಇದೆ. ಇದರಿಂದ ನಿಮ್ಮ ದೇಹವು ಸದೃಢಗೊಂಡು ಸ್ನಾಯುಗಳು ಗಟ್ಟಿಮುಟ್ಟಾಗುತ್ತವೆ. ಈ ನಿಟ್ಟಿನಲ್ಲಿ ಮಾಂಸ ಮತ್ತು ಮೊಟ್ಟೆಯಲ್ಲಿ ಪ್ರೋಟೀನ್ ಸತ್ವಗಳು ಹೇರಳವಾಗಿದೆ. ಇದರ ಹೊರತಾಗಿ ಸಸ್ಯಾಹಾರಿಗಳಿಗೂ ಸಹ ಕೆಲವು ಪರ್ಯಾಯ ಆಹಾರ ಪದಾರ್ಥಗಳಿದ್ದು, ಊಟದಲ್ಲಿ ಮತ್ತು ಲಘು ಉಪಹಾರದಲ್ಲಿ ಈ ಆಹಾರಗಳನ್ನು ಬಳಸಬಹುದಾಗಿದೆ. ಅವುಗಳ ಕೆಲ ವಿವರವನ್ನು ನಿಮಗಾಗಿ ನೀಡಲಾಗಿದೆ. ಆಹಾರ ಮತ್ತು ಶಕ್ತಿಯ ಲೆಕ್ಕಾಚಾರ

Best Vegan and Vegetarian Protein Sources

ಹಸಿರು ಬಟಾಣಿ
ಚಳಿಗಾಲದಲ್ಲಿ ಹೇರಳವಾಗಿ ಸಿಗಲಿದ್ದು, ಹಸಿರು ಬಟಾಣಿಯು ಅಗ್ಗದ ದರದಲ್ಲಿ ಲಭ್ಯವಿದ್ದು, ಇತರೆ ತರಕಾರಿಗಳೊಂದಿಗೆ ಬೆರೆಸಿ ಸೇವಿಸಬಹುದು. ಅವನ್ನು ತಾಜಾ ಸ್ಥಿತಿಯಲ್ಲಿ ಖರೀದಿಸಿ ಮೇಥಿಮಟ್ಟರ್, ಆಲೂ ಮಟ್ಟರ್, ಮಟ್ಟರ್ ಪನ್ನೀರ್ ನಂತಹ ಜನಪ್ರಿಯ ತಿನಿಸುಗಳನ್ನು ತಯಾರಿಸಿ ಸೇವಿಸಿ.

ಪನ್ನೀರ್

ಕಾಟೇಜ್ ಚೀಸ್ ಎಂದೇ ಖ್ಯಾತಿ ಹೊಂದಿರುವ ಪನ್ನೀರ್ ಅನ್ನು ನಿಮ್ಮ ದಿನನಿತ್ಯದ ಆಹಾರದೊಂದಿಗೆ ಸೇವಿಸಿ. ಇದರಲ್ಲಿ ಪ್ರೊಟೀನ್ ಸತ್ವವು ಹೇರಳವಾಗಿದ್ದು, ನಿಮ್ಮ ಆಹಾರಕ್ಕೆ ಹೆಚ್ಚು ಸತ್ವವನ್ನು ನೀಡುತ್ತದೆ. ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ ಇದು ಹೆಚ್ಚು ಪ್ರಿಯವಾಗಿದ್ದು, ನಿಮ್ಮ ಆಹಾರದಲ್ಲಿ ಹೆಚ್ಚು ಪೌಷ್ಠಿಕಾಂಶ ಸತ್ವವನ್ನು ನೀಡಲಿದೆ.

ಗಟ್ಟಿಯಾದ ಮೊಸರು

ಸಹಜ ಮೊಸರಿನಲ್ಲಿರುವುದಕ್ಕಿಂತ ಗಟ್ಟಿಯಾದ ಕೆನೆಭರಿತ ನೀರಿನ ಅಂಶವಿಲ್ಲ ಮೊಸರಿನಲ್ಲಿ ಪ್ರೊಟೀನ್ ಸತ್ವವು ದುಪ್ಪಟ್ಟು ಇರುತ್ತದೆ. ಇದನ್ನು ಚಳಿಗಾಲದ ತರಕಾರಿಗಳೊಂದಿಗೆ ಬೆರೆಸಿ ಸಲಾಡ್ ರೂಪದಲ್ಲಿ ಅಥವಾ ಕ್ಯಾರೆಟ್ ಮತ್ತು ಸೌತೇಕಾಯಿಯೊಂದಿಗೆ ಬೆರೆಸಿ ಸೇವಿಸಬಹುದು. ಇದನ್ನು ಅದರ ಸಹಜ ರೂಪದಲ್ಲಿಯೇ ಸೇವಿಸಲೂಬಹುದು.

ಬೀನ್ಸ್
ಸಾಮಾನ್ಯವಾಗಿ ಪ್ರೋಟೀನುಗಳು ನಮಗೆ ಮಾಂಸಾಹಾರದ ಮೂಲಕ ಹೆಚ್ಚು ಪ್ರಮಾಣದಲ್ಲಿ ದೊರಕುತ್ತದೆ. ಆದರ ಜೊತೆಗೇ ಕೊಬ್ಬು ಮತ್ತು ಇತರ ಅನಗತ್ಯ ಪೋಷಕಾಂಶಗಳು ಆಗಾಧ ಪ್ರಮಾಣದಲ್ಲಿ ದೊರಕುವುದರಿಂದ ಮಾಂಸಾಹಾರ ಸೇವನೆಯಿಂದ ತೂಕ ಬೇಗನೇ ಕಡಿಮೆಯಾಗದು, ಬದಲಿಗೆ ಇನ್ನಷ್ಟು ಹೆಚ್ಚುವ ಅಪಾಯವಿದೆ.


ಇದರ ಬದಲಿಗೆ ಬೀನ್ಸ್ ಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಪ್ರೋಟೀನನ್ನೂ ಪಡೆಯಬಹುದು ಹಾಗೂ ಅನಗತ್ಯವಾದ ಕೊಬ್ಬು ಬೆಳೆಯುವುದನ್ನೂ ತಡೆಯಬಹುದು. ಇದರಿಂದಲೂ ದೇಹದ ತೂಕ ಕಡಿಮೆಯಾಗಲು ಸಾಧ್ಯವಾಗುತ್ತದೆ.
English summary

Best Vegan and Vegetarian Protein Sources

Protein is essential for everything from healthy hair to nails to a good body through muscle mass. Taking more time to digest than carbs, it keeps you feel full for a longer
Story first published: Friday, January 29, 2016, 13:21 [IST]
X
Desktop Bottom Promotion