For Quick Alerts
ALLOW NOTIFICATIONS  
For Daily Alerts

ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!

By Manu
|

ನಮ್ಮ ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ (ಅಂದರೆ ಹುಬ್ಬು ಪ್ರಾರಂಭವಾಗುವ ಕೆಳಗೆ) ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸ್ (ಸೈನಸೈಟಿಸ್). ಈ ಟೊಳ್ಳಿನಲ್ಲಿ ಸೋಂಕು ಉಂಟಾದರೆ ಇದರ ಅಕ್ಕಪಕ್ಕ ಹಾದು ಹೋಗುವ ನರಗಳಲ್ಲಿ ಭಾರೀ ಸಂವೇದನೆಯುಂಟಾಗಿ ತಲೆನೋವು, ಮುಖದ ಸ್ನಾಯುಗಳಲ್ಲಿ ನೋವು, ಮೂಗಿನ ಒಳಗಿನಿಂದ ಗಂಟಲವರೆಗೆ ಭಾರೀ ಉರಿ, ನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ.

ಅದರಲ್ಲೂ ಸೈನಸ್ ಬ್ಲಾಕ್ ಆದಾಗ ಅಲ್ಲಿ ನೀರು ತುಂಬಿಕೊಂಡು ಬ್ಯಾಕ್ಟೀರಿಯಾ ಬೆಳೆದು ಸೋಂಕು ಕಾಣಿಸಿಕೊಳ್ಳಬಹುದು. ಸೈನಸ್‌ನ ಸೋಂಕು ಶೀತ, ಅಲರ್ಜಿ, ಮೂಗಿನ ಸಂಯುಕ್ತಗಳಿಂದ ಕಾಣಿಸಿಕೊಳ್ಳಬಹುದು. ಸೈನಸ್‌‌ನಿಂದ ತಲೆನೋವು, ಮುಖದಲ್ಲಿ ನೋವು ಅಥವಾ ಭಾದಿತ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದು ಸೈನಸ್‌ಗೆ ಸಂಬಂಧಿಸಿದ ನೋವಾಗಿರಬಹುದು. ಅದರಲ್ಲೂ ಸೈನಸ್‌ನಿಂದ ಪೀಡಿತರಾಗಿರುವವರು ಬಗ್ಗಿದಾಗ ಅಥವಾ ಕೆಳಗಡೆ ನೋಡಿದಾಗ ಇದು ಮತ್ತಷ್ಟು ಹೆಚ್ಚಾಗಬಹುದು.

 Best Treatment For Sinusitis

ಅಷ್ಟೇ ಅಲ್ಲದೆ ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡು ಬಳಿಕ ಇತರ ಭಾಗಗಳಿಗೆ ಹರಡಬಹುದು. ಕೆಲವೊಮ್ಮೆ ದಪ್ಪಗಿನ ಹಳದಿ ಬಣ್ಣದ ತುಂಬಾ ವಾಸನೆಯ ದ್ರವವು ಮೂಗಿನಿಂದ ಹೊರಬರಬಹುದು. ಮೂಗು ಕಟ್ಟುವುದು ಕೆಲವೊಮ್ಮೆ ಬಿಟ್ಟುಹೋಗಲು ಕೇಳುವುದೇ ಇಲ್ಲ. ಇದು ಕಫ ಅಥವಾ ವಾತಾವರಣದಿಂದ ಆಗಿರಲೂಬಹುದು. ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಸೈನಸ್‌ ಕೆಲವೊಮ್ಮೆ ತುಂಬಾ ನೋವುಂಟು ಮಾಡಬಹುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ನಿಮಗೆ ಸಾಧ್ಯವಾಗದೆ ಇರಬಹುದು. ಹಾಗಾಗಿ ಸೈನಸ್‌‌ಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸುವುದು ಹೇಗೆಂದು ತಿಳಿದುಕೊಳ್ಳಿ.

ಉಪ್ಪು ಚಿಕಿತ್ಸೆಯು ಸೈನಸ್‌‪ನಿಂದ ನೈಸರ್ಗಿಕ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಹಾರ ನೀಡುವುದು. ಉಪ್ಪಿನ ಕೋಣೆಯಲ್ಲಿ ಕುಳಿತುಕೊಂಡರೆ ಉಪ್ಪಿನ ಕಣಗಳು ಉಸಿರಾಟದ ವ್ಯವಸ್ಥೆಯನ್ನು ಸ್ವಚ್ಛ ಮಾಡುವುದು ಮತ್ತು ವಿಷಕಾರಿ ಅಂಶಗಳನ್ನು ದೂರ ಮಾಡುವುದು. ಉಪ್ಪಿನ ಕಣಗಳು ಉಸಿರಾಟದ ವ್ಯವಸ್ಥೆಯ ಮೇಲ್ಭಾಗ ಮತ್ತು ಕೆಲಭಾಗವನ್ನು ತಲುಪುವುದು.

ಉಪ್ಪು ವೇಗವಾಗಿ ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಉರಿಯೂತ ಶಮನಕಾರಿ ಗುಣಗಳಿವೆ. ಇದು ಕಿರಿಕಿರಿ ಮತ್ತು ಲೋಳೆ ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದರಿಂದ ಸೈನಸ್‌ನಿಂದ ಹೆಚ್ಚುವರಿ ಲೋಳೆಯು ದೂರವಾಗಿ ಕೀಟಾಣು ಮತ್ತು ಸೂಕ್ಷ್ಮಜೀವಿಗಳಿಂದ ಸೈನಸ್‌ನ್ನು ರಕ್ಷಿಸುತ್ತದೆ.

ಆವಿಗೆ ಮುಖವನ್ನು ಒಡ್ಡುವುದು ಮತ್ತೊಂದು ರೀತಿಯ ಚಿಕಿತ್ಸೆಯಾಗಿದೆ. ಇದು ಮೂಗು ಕಟ್ಟುವುದನ್ನು ನಿವಾರಿಸಿ ವಿಶ್ರಾಂತಿ ನೀಡುವುದು. ಬಿಸಿಯಾದ ಪಾನೀಯ ಮತ್ತು ಸೂಪ್ ಕುಡಿಯುವುದರಿಂದಲೂ ನೆರವಾಗಬಹುದು. ವೈದ್ಯರು ಸೂಚಿಸಿದ ಮೂಗಿನ ಸ್ಪ್ರೇಯನ್ನು ಬಳಸಬಹುದಾಗಿದೆ. ಉರಿಯೂತ ಶಮನಕಾರಿಯಾಗಿರುವ ಆಹಾರವನ್ನು ಸೇವಿಸಿದರೆ ಉತ್ತಮ.

ಗೋಧಿ ಮತ್ತು ಹಾಲಿನ ಉತ್ಪನ್ನಗಳಿಂದ ಆದಷ್ಟು ದೂರವಿರಿ. ಇದರ ಬದಲಿಗೆ ಮೀನು, ಮಾಂಸ, ಕೋಳಿಮಾಂಸ, ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಇದರಿಂದ ಸೈನಸೈಟಿಸ್ ನಿಂದ ಪರಿಹಾರ ಸಿಗುವುದು. ಯಾವುದೇ ಪರಿಹಾರ ಸಿಗದೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಕೆಲವೊಂದು ಸಂದರ್ಭಗಳಲ್ಲಿ ಸೈನಸೈಟಿಸ್‌ಗೆ ಆ್ಯಂಟಿಬಯೋಟಿಕ್ ನೀಡಬೇಕಾಗುತ್ತದೆ.

English summary

Best Treatment For Sinus

Sinusitis is caused by the inflammation or swelling of the sinuses. When the sinuses are blocked and are full of fluid or mucous, bacteria could grow there and cause infection. A sinus infection may be because of a cold, allergies or nasal polyps. Sinusitis causes headaches, facial pain or a continuous pain in the areas affected. This pain is usually localized to the associated sinus and might worsen when the affected individual bends over or while lying down.
X
Desktop Bottom Promotion