For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕೆ ಒಂದು ಗ್ಲಾಸ್ ಕ್ಯಾರೆಟ್ ಶುಂಠಿ ಜ್ಯೂಸ್!

ಕ್ಯಾರೆಟ್ ಹಾಗೂ ಶುಂಠಿಯಲ್ಲಿ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಕಾರಣದಿಂದ ದೇಹಕ್ಕೆ ತುಂಬಾ ಒಳ್ಳೆಯದು. ತಾಜಾ ಕ್ಯಾರೆಟ್-ಶುಂಠಿಯ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಯಾವೆಲ್ಲಾ ಲಾಭಗಳು ಸಿಗುತ್ತದೆ ಎಂದು ಇಲ್ಲಿ ತಿಳಿಯುವ....

By Manu
|

ಬೆಳಗ್ಗಿನ ಆಹಾರವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳಗ್ಗಿನ ಉಪಹಾರ ಮಾಡದೆ ಇದ್ದರೆ ದೇಹಕ್ಕೆ ತನ್ನ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ. ನಗರಗಳಲ್ಲಿ ಹೆಚ್ಚಾಗಿ ಹೋಟೆಲ್ ಅಥವಾ ಕಚೇರಿಯ ಕ್ಯಾಂಟೀನ್ ನಲ್ಲಿ ಬೆಳಗ್ಗಿನ ಉಪಹಾರ ಮಾಡುವ ಹವ್ಯಾಸ ಬೆಳೆದಿರುತ್ತದೆ.

ಈ ವೇಳೆ ತಂಪುಪಾನೀಯಗಳನ್ನು ಸೇವನೆ ಮಾಡುವುದು ಸಾಮಾನ್ಯವಾಗಿದೆ. ತಂಪು ಪಾನೀಯಗಳು ನಮ್ಮ ದೇಹಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ ಇದನ್ನು ಸೇವಿಸುತ್ತೇವೆ. ಹೀಗೀಗ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿರುವಾಗ ಆರೋಗ್ಯಕರ ಪೇಯದ ಹುಡುಕಾಟ ಆರಂಭವಾಗಿದೆ. ಲವಲವಿಕೆಯ ಆರೋಗ್ಯಕ್ಕೆ ದಿನಕ್ಕೊಂದು ಕಪ್ ಶುಂಠಿ ಜ್ಯೂಸ್!

ಇಂತಹ ಆರೋಗ್ಯಕರ ಪೇಯವೆಂದರೆ ಅದು ತಾಜಾ ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್. ಇದನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯಬಹುದು. ಕ್ಯಾರೆಟ್ ಹಾಗೂ ಶುಂಠಿಯಲ್ಲಿ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಕಾರಣದಿಂದ ದೇಹಕ್ಕೆ ತುಂಬಾ ಒಳ್ಳೆಯದು. ತಾಜಾ ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಯಾವೆಲ್ಲಾ ಲಾಭಗಳು ಸಿಗುತ್ತದೆ ಎಂದು ಇಲ್ಲಿ ತಿಳಿಯುವ.....

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಕ್ಯಾರೆಟ್ ಹಾಗೂ ಶುಂಠಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಹಾಗೂ ಸ್ವಚ್ಛಗೊಳಿಸುವ ಗುಣವು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಕ್ಯಾರೆಟ್‌ನಲ್ಲಿ ಇರುವಂತಹ ಬೆಟ್ ಕ್ಯಾರೋಟಿನ್, ಅಲ್ಪಾ ಕ್ಯಾರೋಟಿನ್ ಮತ್ತು ಲುಟೈನ್ ಹೃದಯಾಘಾತವಾಗದಂತೆ ತಡೆಯುತ್ತದೆ.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಇವುಗಳಲ್ಲಿ ಇರುವಂತಹ ಪೊಟಾಶಿಯಂ ಅಂಶವು ರಕ್ತದ ಒತ್ತಡವನ್ನು ಕಡಿಮೆ ಮಾಡುವುದು. ಶುಂಠಿಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಪ್ರತಿರೋಧಕ ಶಕ್ತಿ ಸುಧಾರಣೆ

ಪ್ರತಿರೋಧಕ ಶಕ್ತಿ ಸುಧಾರಣೆ

ಮನೆಯಲ್ಲಿ ತಯಾರಿಸಲ್ಪಡುವಂತಹ ಈ ಜ್ಯೂಸ್ ಮಕ್ಕಳು ಹಾಗೂ ದೊಡ್ಡವರಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್‌ನಲ್ಲಿ ಇರುವಂತಹ ವಿಟಮಿನ್ ಸಿ ಹಾಗೂ ವಿಟಮಿನ್ ಎ ರಕ್ತನಾಳಗಳಿಗೆ ಒಳ್ಳೆಯದು.

ಪ್ರತಿರೋಧಕ ಶಕ್ತಿ ಸುಧಾರಣೆ

ಪ್ರತಿರೋಧಕ ಶಕ್ತಿ ಸುಧಾರಣೆ

ಶುಂಠಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚುವುದು.

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ನಿಯಮಿತವಾಗಿ ಕ್ಯಾರೆಟ್ ಹಾಗೂ ಶುಂಠಿ ಜ್ಯೂಸ್ ಅನ್ನು ಕುಡಿದರೆ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮಧುಮೇಹವನ್ನು ತಡೆಯುವುದು. ಶುಂಠಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಇನ್ಸುಲಿನ್ ನ ತೀವ್ರತೆಯನ್ನು ಹೆಚ್ಚಿಸಿ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ಕ್ಯಾರೆಟ್‌ನಲ್ಲಿ ಕಡಿಮೆ ಗ್ಲೈಸೆಮಿಕ್ ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದು. ಇದರಲ್ಲಿರುವ ಕ್ಯಾರೋಟನಾಯ್ಡ್ ಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುವುದು.

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕೆಂದರೆ ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್ ಅನ್ನು ಕುಡಿಯಬೇಕು. ಕ್ಯಾರೆಟ್ ನಲ್ಲಿರುವ ಬೆಟಾ ಕ್ಯಾರೋಟಿನ್ ಚರ್ಮದ ಆರೋಗ್ಯವನ್ನು ಕಾಪಾಡುವುದು. ಶುಂಠಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಾಂಶಗಳು ಚರ್ಮದ ವಿನ್ಯಾಸವನ್ನು ಸುಧಾರಣೆ ಮಾಡುವುದು. ಆ್ಯಂಟಿಆಕ್ಸಿಡೆಂಟ್ ಹಾನಿಗೊಂಡಿರುವ ಚರ್ಮವನ್ನು ಸರಿಪಡಿಸುವುದು.

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು

ಕ್ಯಾರೆಟ್ ಹಾಗೂ ಶುಂಠಿಯ ಜ್ಯೂಸ್ ನಮ್ಮನ್ನು ಹಲವಾರು ರೀತಿಯ ಕ್ಯಾನ್ಸರ್ ನ ಅಪಾಯದಿಂದ ತಡೆಯುವುದು. ಕ್ಯಾರೆಟ್ ಅಂಡಾಶಯ, ಕರುಳು ಮತ್ತು ಗುದನಾಳ, ಶ್ವಾಸಕೋಶ, ಸ್ತನ ಮತ್ತು ಇತರ ವಿಧದ ಕ್ಯಾನ್ಸರ್ ಅನ್ನು ತಡೆಯುವುದು. ಶುಂಠಿಯು ಕ್ಯಾನ್ಸರ್‌ನ ಕೋಶಗಳು ಬೆಳೆಯದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

ಕ್ಯಾರೆಟ್ ಮತ್ತು ಶುಂಠಿಯ ಜ್ಯೂಸ್ ತಯಾರಿಸುವುದು ಹೇಗೆ?

ಕ್ಯಾರೆಟ್ ಮತ್ತು ಶುಂಠಿಯ ಜ್ಯೂಸ್ ತಯಾರಿಸುವುದು ಹೇಗೆ?

ನಾಲ್ಕರಿಂದ ಐದು ಕ್ಯಾರೆಟ್ ಹಾಗೂ ಅರ್ಧ ಇಂಚಿನ ಶುಂಠಿ ತೆಗೆದುಕೊಳ್ಳಿ. ಅರ್ಥ ನಿಂಬೆ, ಸ್ವಲ್ಪ ದಾಲ್ಚಿನಿ ಮತ್ತು ಕಲ್ಲು ಉಪ್ಪು.

*ಕ್ಯಾರೆಟ್ ಅನ್ನು ತುಂಡು ಮಾಡಿ ಅದನ್ನು ತೊಳೆದು ಒಣಗಿಸಿ.

*ಶುಂಠಿಯನ್ನು ಸರಿಯಾಗಿ ತೊಳೆದು ಅದರ ಸಿಪ್ಪೆ ತೆಗೆಯಿರಿ.

ಕ್ಯಾರೆಟ್ ಮತ್ತು ಶುಂಠಿಯ ಜ್ಯೂಸ್ ತಯಾರಿಸುವುದು ಹೇಗೆ?

ಕ್ಯಾರೆಟ್ ಮತ್ತು ಶುಂಠಿಯ ಜ್ಯೂಸ್ ತಯಾರಿಸುವುದು ಹೇಗೆ?

*ಇವೆರಡನ್ನು ಜ್ಯೂಸರ್‌ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿ.

*ಒಂದು ಲೋಟಕ್ಕೆ ಜ್ಯೂಸ್ ನ್ನು ಗಾಳಿಸಿಕೊಳ್ಳಿ ಮತ್ತು ಅರ್ಧ ನಿಂಬೆರಸವನ್ನು ಅದಕ್ಕೆ ಹಿಂಡಿಕೊಳ್ಳಿ.

*ಸ್ವಲ್ಪ ಕಲ್ಲುಉಪ್ಪು, ದಾಲ್ಚಿನಿ ಹುಡಿ ಹಾಕಿಕೊಂಡು ಜ್ಯೂಸ್ ಅನ್ನು ದಿನಾಲೂ ಬೆಳಿಗ್ಗೆ ಕುಡಿಯಿರಿ.

English summary

Benefits of drinking carrot ginger juice for breakfast

However, there are healthy alternatives to these drinks; and a lot of people are now preferring to have healthy drinks to have a healthy body and mind. One such health drink is fresh ginger and carrot juice, which can be prepared at home with readily available ingredients. Both ginger and carrots are loaded with nutrients and antioxidants that act as perfect allies for our body. Here are five benefits of drinking fresh carrot and ginger juice daily:
X
Desktop Bottom Promotion