ತಂಬಾಕು ಜಗಿಯುವ ಮೊದಲು ಎರಡೆರಡು ಬಾರಿ ಯೋಚಿಸಿ!

By: manu
Subscribe to Boldsky

ಇಂದಿನ ದಿನಗಳಲ್ಲಿ ತಂಬಾಕು ಅಥವಾ ಗುಟ್ಕಾ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ಯಾಕೆಟ್ಟಿನ ಮೇಲೆಯೇ ರೋಗಗ್ರಸ್ತ ಮುಖದ ಫೋಟೋ ಮುದ್ರಿಸಿದ್ದರೂ ಮಾರಾಟ ಭರ್ಜರಿಯಾಗಿದೆ. ಸಾಮಾನ್ಯವಾಗಿ ಧೂಮಪಾನ ಬಿಡಲು ಬಯಸುವವರು ಗುಟ್ಕಾ ತಂಬಾಕಿಗೆ ಮರುಳಾಗಿ ಕ್ರಮೇಣ ಇದಕ್ಕೇ ದಾಸರಾಗಿಬಿಟ್ಟಿರುತ್ತಾರೆ.

ಸಾಮಾನ್ಯ ತಿನ್ನುವ ತಂಬಾಕು, ಪಾನ್ ಮಸಾಲಾ, ಜರ್ದಾ ಗುಟ್ಕಾ ಮೊದಲಾದವುಗಳೆಲ್ಲಾ ತಂಬಾಕನ್ನು ಪ್ರಮುಖ ಪರಿಕರವಾಗಿ ಬಳಸಿರುವ ಮಾದಕಪದಾರ್ಥಗಳಾಗಿವೆ.

Bacteria In Chewable Tobacco Increases Cancer Risk
  

ಈ ಉತ್ಪನ್ನಗಳನ್ನು ಬಾಯಿಗೆ ಹಾಕಿಕೊಂಡಾಗ ಹಲವು ರೀತಿಯ ಬ್ಯಾಕ್ಟೀರಿಯಾಗಳು ತಂಬಾಕಿನಲ್ಲಿ ತಣ್ಣಗೆ ನಿದ್ದೆ ಮಾಡುತ್ತಿದ್ದ ಬ್ಯಾಕ್ಟೀರಿಯಾಗಳೆಲ್ಲಾ ನಿದ್ದೆಯಿಂದೆದ್ದು ಸುಖನಿದ್ದೆ ಕೆಡಿಸಿದವ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸತೊಡಗುತ್ತವೆ.ಪರಿಣಾಮವಾಗಿ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಆಮಶಂಕೆ ಮತ್ತು ವಾಂತಿ ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತವೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್  

Bacteria In Chewable Tobacco Increases Cancer Risk
 

ತಂಬಾಕಿನ ವ್ಯಸನದ ಬಗ್ಗೆ ನಡೆಯ ಅಧ್ಯಯನಗಳಲ್ಲಿ ಆಘಾತಕಾರಿಯಾದ ಹಲವು ಮಾಹಿತಿಗಳು ಹೊರಬಂದಿವೆ. ಪ್ರಮುಖವಾಗಿ ಬ್ಯಾಸಿಲಸ್ ಲಿಚೆನಿಫಾರ್ಮಿಸ್ ಮತ್ತು ಬ್ಯಾಸಿಲಸ್ ಪ್ಯೂಮಿಲಸ್ ಎಂಬ ಎರಡು ಬ್ಯಾಕ್ಟೀರಿಯಾಗಳು ತಂಬಾಕಿನಲ್ಲಿ ಇರುವುದು ಪತ್ತೆಯಾಗಿದ್ದು ಇವೆರಡರ ಕಿಲಾಡಿ ಜೋಡಿ ಶ್ವಾಸಕೋಶದ ಸೋಂಕು ಮತ್ತು ಇತರ ಸೊಂಕುಗಳನ್ನು ಉಂಟುಮಾಡಲು ಸಮರ್ಥವಾಗಿವೆ.

ಅಮೇರಿಕಾದ ಆಹಾರ ಮತ್ತು ಔಷಧಿ ಸಚಿವಾಲಯದ National Centre for Toxicological Research ಎಂಬ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸ್ಟೀವನ್ ಫೋಲೆಯವರು ನೀಡಿರುವ ಮಾಹಿತಿಯಂತೆ ಕೆಲವು ವಿಧದ ತಂಬಾಕಿನಲ್ಲಿ ಹಲವು ಕಾಯಿಲೆಗಳಿಗೆ ಪ್ರಚೋದನೆ ನೀಡುವ ಕಣಗಳಿದ್ದು ಇವುಗಳ ಪ್ರಭಾವದಿಂದ ಆಮಶಂಕೆ ಮತ್ತು ವಾಂತಿಯ ತೊಂದರೆ ಎದುರಾಗುತ್ತದೆ.  

Bacteria In Chewable Tobacco Increases Cancer Risk
 

ಪ್ರತಿಬಾರಿಯ ತಂಬಾಕಿನ ಸೇವನೆಯಿಂದ ಕೊಂಚವೇ ವಿಷಕಾರಿ ವಸ್ತುಗಳು ಉತ್ಪತ್ತಿಯಾಗುತ್ತವೆ. ಇದು ದೇಹದಲ್ಲಿ ಕೊಂಚಕೊಂಚವಾಗಿ ಸಂಗ್ರಹವಾಗುತ್ತಾ ಕೊನೆಗೊಂದು ದಿನ ಭಾರಿ ಆಘಾತ ನೀಡುತ್ತದೆ.

ಇದು ಕ್ಯಾನ್ಸರ್ ಸಹಿತ ಹಲವು ಪ್ರಾಣಾಂತಿಕ ತೊಂದರೆಗಳನ್ನು ತಂದೊಡ್ಡುತ್ತದೆ. ಇದೇ ಕಾರಣಕ್ಕೆ ತಂಬಾಕು ತಿನ್ನುವವರಿಗೆ ಎಷ್ಟೋ ಕಾಲದವರೆಗೆ ಯಾವುದೇ ತೊಂದರೆಯಾಗದೇ ಒಮ್ಮೆಲೇ ಮುಖದ ಚರ್ಮವೇ ಹರಿದುಬರುವಷ್ಟು ಮಟ್ಟಿಗೆ ಕ್ಯಾನ್ಸರ್ ಆವರಿಸಿಬಿಡುತ್ತದೆ. ಮೌನ ಕೊಲೆಗಾರ ಮೇದೋಜೀರಕ ಕ್ಯಾನ್ಸರ್‌‌ನ ಲಕ್ಷಣಗಳು

ತಂಬಾಕಿನಲ್ಲಿರುವ ಕೆಲವು ಬಗೆಯ ಬ್ಯಾಸಿಲಸ್ ಬ್ಯಾಕ್ಟೀರಿಯಾ, stapphylococcus epidermidis ಮತ್ತು staphylococcus hominis ಎಂಬ ಕ್ರಿಮಿಗಳು ನಮ್ಮ ದೇಹದಲ್ಲಿರುವ ನೈಟ್ರೇಟುಗಳನ್ನು ನೈಟ್ರೈಟುಗಳನ್ನಾಗಿ ಬದಲಿಸುತ್ತವೆ. ಇದು ಕ್ಯಾನ್ಸರ್‌ಗೆ ಮೂಲ ಕಾರಣವಾಗಿದೆ. ತಂಬಾಕಿನಲ್ಲಿರುವ ನಿಕೋಟಿನ್ ರಕ್ತಕ್ಕೆ ಸೇರಿಸಲು ತಂಬಾಕು ವ್ಯಸನಿಗಳು ತಂಬಾಕು ಉತ್ಪನ್ನಗಳನ್ನು ಬಾಯಿಯಲ್ಲಿಯೇ ಇರಿಸಿ ಪೂರ್ಣವಾಗಿ ನೀರಾದ ಬಳಿಕ ಉಗಿಯುತ್ತಾರೆ.

ಆದರೆ ಜೊಲ್ಲಿನ ಮೂಲಕ ನಿಕೋಟಿನ್ ರಕ್ತ ಪ್ರವೇಶಿಸುತ್ತದೆ. ಅಲ್ಲದೇ ಬಾಯಿ, ಒಸಡು, ಹಲ್ಲು, ನಾಲಿಗೆ, ಗಂಟಲುಗಳಲ್ಲಿಯೂ ಕ್ಯಾನ್ಸರ್ ಉಂಟುಮಾಡಲು ಕಾರಣವಾಗುತ್ತದೆ. ತಂಬಾಕಿನ ಪ್ರಭಾವ ಅತಿ ಹೆಚ್ಚಾಗಿ ಒಸಡುಗಳ ಮೇಲೆ ಬೀಳುತ್ತದೆ.

ಒಸಡುಗಳು ಶಿಥಿಲವಾಗಿ ರಕ್ತ ಸುರಿಯುವುದು, ಹಲ್ಲುಗಳು ಉದುರುವುದು, ಖಾರ, ಹುಳಿಗಳನ್ನು ತಿನ್ನಲು ಸಾಧ್ಯವಾಗದಿರುವುದು ಮೊದಲಾದ ತೊಂದರೆ ಪ್ರಾರಂಭವಾಗುತ್ತದೆ.

Bacteria In Chewable Tobacco Increases Cancer Risk
  

ಹಿಂದಿನ ಸಂಶೋಧನೆಗಳಲ್ಲಿ ತಂಬಾಕಿನಲ್ಲಿರುವ Staphylococci ಎಂಬ ಬ್ಯಾಕ್ಟೀರಿಯಾ ನೇರವಾಗಿ ಹೃದಯದ ಕವಾಟಗಳಿಗೇ ಸೋಂಕು ಉಂಟು ಮಾಡುತ್ತದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಒಸಡುಗಳು ಶಿಥಿಲವಾಗುತ್ತಿದ್ದಂತೆಯೇ ಇತರ ಬಾಯಿಯ ಒಳಭಾಗ ಮತ್ತು ನಾಲಿಗೆ, ಕಿರುನಾಲಿಗೆ ಮೊದಲಾದ ಅಂಗಗಳೂ ರೋಗಗ್ರಸ್ತವಾಗುತ್ತವೆ. ಮಲಿನಗೊಂಡ ರಕ್ತ ಹತ್ತು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಒಂದು ವೇಳೆ ನಿಮಗೆ ತಂಬಾಕಿನ ಸೇವನೆಯ ಅಭ್ಯಾಸವಿದ್ದರೆ ತಕ್ಷಣ ತ್ಯಜಿಸುವ ನಿರ್ಧಾರಕ್ಕೆ ಬನ್ನಿ. ಇದರಿಂದ ಕೇವಲ ಅನಾರೋಗ್ಯವೇ ಹೊರತು ಮತ್ತೇನೂ ದೊರಕಲಾರದು.

English summary

Bacteria In Chewable Tobacco Increases Cancer Risk

Are you addicted to smokeless tobacco products like plain chewable tobacco leaves, khaini, pan masala, zarda and gutka? Be warned, as researchers have identified several species of bacteria in these products that can increase the risk of cancer, lung infections, diarrhoea and vomiting.
Please Wait while comments are loading...
Subscribe Newsletter