ಕಿಡ್ನಿಯ ಆರೋಗ್ಯಕ್ಕೆ ಸರಳ ಟಿಪ್ಸ್, ಮರೆಯದೇ ಅನುಸರಿಸಿ

By: Hemanth
Subscribe to Boldsky

ದೇಹದ ಆರೋಗ್ಯ ಕಾಪಾಡುವಲ್ಲಿ ಅಂಗಾಂಗಗಳ ಪಾತ್ರ ಪ್ರಮುಖವಾಗಿದೆ. ದೇಹದ ಹೊರಗೆ ಅಥವಾ ಒಳಗಡೆ ಇರುವ ಅಂಗಾಂಗಗಳೇ ಆಗಿರಲಿ. ಇವುಗಳು ಸರಿಯಾಗಿ ಕಾರ್ಯನಿರ್ವಹಿಸುವುದು ತುಂಬಾ ಮುಖ್ಯ. ಇಂತಹ ಅಂಗಾಂಗಗಳಲ್ಲಿ ಪ್ರಮುಖವಾಗಿ ಹೃದಯ, ಶ್ವಾಸಕೋಶ, ಯಕೃತ್ ಮತ್ತು ಕಿಡ್ನಿ ನಮ್ಮ ಕಣ್ಣಿಗೆ ಕಾಣದಿದ್ದರೂ ಅವುಗಳ ಕೆಲಸ ಮಾತ್ರ ಅಪಾರ. ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಒಂದು ವೇಳೆ ಇವುಗಳಲ್ಲಿ ಯಾವುದೇ ಒಂದು ಅಂಗವು ಕೆಲಸ ನಿಲ್ಲಿಸಿದರೆ ಆಗ ನಮ್ಮ ಪ್ರಾಣವೇ ಹೋಗಬಹುದು ಅಥವಾ ಅನಾರೋಗ್ಯ ಕಾಡಬಹುದು. ಇದರಲ್ಲಿ ರಕ್ತವನ್ನು ಶುದ್ದೀಕರಿಸುವಂತಹ ಕಿಡ್ನಿ. ಇದು ದೇಹದಲ್ಲಿರುವ ವಿಷಕಾರಿ ಅಂಶ ಮತ್ತು ಕಲ್ಮಶವನ್ನು ಹೊರಗೆ ಹಾಕುತ್ತದೆ. ಆದರೆ ದೇಹದೊಳಗೆ ಅತಿಯಾದ ವಿಷಕಾರಿ ಅಂಶಗಳು ಸೇರಿಕೊಂಡಾಗ ಕಿಡ್ನಿ ಕೆಲಸ ತ್ರಾಸದಾಯಕವಾಗುವುದು. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು 

ಕಳಪೆ ಆಹಾರ ಮತ್ತು ಕುಡಿಯುವ ನೀರು ಶುಚಿಯಾಗದೆ ಇದ್ದರೆ ವಿಷಕಾರಿ ಅಂಶಗಳು ಹೆಚ್ಚಾಗಿ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ಕಿಡ್ನಿ ಹಾಗೂ ಯಕೃತ್‌ಗೆ ಅಪಾಯಕಾರಿ. ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ನಾವು ಸಾವಿರಾರು ರೂಪಾಯಿ ವ್ಯಯಿಸಬೇಕಿಲ್ಲ. ನೈಸರ್ಗಿಕ ಆಹಾರಗಳಿಂದಲೇ ನಾವು ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಅದು ಹೇಗೆಂದು ತಿಳಿದುಕೊಳ್ಳಿ...

ಟಿಪ್ಸ್ #1

ಟಿಪ್ಸ್ #1

ಕೋಸುಗಡ್ಡೆ, ಪಾಲಕ್, ಕ್ಯಾರೆಟ್, ಲೆಟಿಸ್, ಸೌತೆಕಾಯಿ ಮತ್ತು ಗುಡ್ಡಸೋಂಪು ತರಕಾರಿಗಳಲ್ಲಿರುವ ಪೋಷಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಟಿಪ್ಸ್ #2

ಟಿಪ್ಸ್ #2

ಲಿಂಬೆ ಜ್ಯೂಸ್ ನ್ನು ನಿಯಮಿತವಾಗಿ ಕುಡಿಯುವುದರಿಂದ ಕಿಡ್ನಿಯ ಕಲ್ಲು ಮೂಡುವುದಿಲ್ಲ ಎಂದು ಅಧ್ಯಯನಗಳು ಹೇಳಿವೆ.

ಟಿಪ್ಸ್ #3

ಟಿಪ್ಸ್ #3

ನಿಮಗೆ ತರಕಾರಿಗಳು ಇಷ್ಟವಿಲ್ಲವೆಂದಾದರೆ ಹಣ್ಣುಗಳಾದ ಆ್ಯಪಲ್, ಪೀಚ್, ಅನಾನಸ್, ಪೇರಳೆ ಮತ್ತು ಕಿತ್ತಳೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

ಟಿಪ್ಸ್ #4

ಟಿಪ್ಸ್ #4

ಕ್ರ್ಯಾನ್ಬೆರಿ ಜ್ಯೂಸ್ ಮೂತ್ರದ ಕೆಲವೊಂದು ಸೋಂಕುಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಸಾವಯದ ಕ್ರ್ಯಾನ್ಬೆರಿ ಬಳಸಿಕೊಂಡು ಜ್ಯೂಸ್ ಮಾಡಿ ಕುಡಿಯಿರಿ.

ಟಿಪ್ಸ್ #5

ಟಿಪ್ಸ್ #5

ಲಿಂಬೆ ರಸ, ಆ್ಯಪಲ್ ಸೀಡರ್ ವಿನೆಗರ್ ಮತ್ತು ಒಂದು ಕಪ್ ನೀರು ಹಾಕಿ ಕಲಸಿ ಕುಡಿಯಿರಿ. ನಿಯಮಿತವಾಗಿ ಇದನ್ನು ಕುಡಿಯುತ್ತಾ ಇರಿ. ಇದು ಕಿಡ್ನಿಗೆ ಒಳ್ಳೆಯದು.

ಟಿಪ್ಸ್ #6

ಟಿಪ್ಸ್ #6

ಬೀಟ್ ರೂಟ್ ನಲ್ಲಿ ಕೆಲವೊಂದು ರೀತಿಯ ಸಸ್ಯಜನ್ಯ ರಾಸಾಯನಿಕಗಳಿವೆ. ಇದು ಮೂತ್ರದಲ್ಲಿ ಆ್ಯಸಿಡ್ ಮಟ್ಟವನ್ನು ಕಡಿಮೆ ಮಾಡುವುದು. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ಬೀಟ್ ರೂಟ್ ಜ್ಯೂಸ್ ಕುಡಿಯಿರಿ.

ಟಿಪ್ಸ್ #7

ಟಿಪ್ಸ್ #7

ಅಂತಿಮವಾಗಿ ನಿಯಮಿತವಾಗಿ ಸರಿಯಾಗಿ ನೀರು ಕುಡಿಯಿರಿ. ನೀರಿನ ಹೊರತಾಗಿ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಸಾಧ್ಯವಿಲ್ಲ.

 
English summary

7 Ways To Cleanse Your Kidneys

Your kidneys cleanse your blood. They eliminate toxins and waste products from your body. Your kidneys may sometimes feel burdened when the incoming toxins are too much. Sometimes, it is good to help your kidneys do their job more efficiently. Read on to know more.
Subscribe Newsletter