For Quick Alerts
ALLOW NOTIFICATIONS  
For Daily Alerts

ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

By Deepu
|

ಚಳಿಗಾಲ ಬಂದೇ ಬಿಟ್ಟಿತು, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾಗುತ್ತದೆ. ಅದರಲ್ಲಿ ಶೀತ, ಗಂಟಲು ನೋವು, ಕೆಮ್ಮು ಮತ್ತು ಒಮ್ಮೊಮ್ಮೆ ಜ್ವರವು ಸಹ ನಮ್ಮನ್ನು ಭಾದಿಸಬಹುದು. ಅದರಲ್ಲಿ ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಏನಾದರು ಆಹಾರ ಸೇವಿಸಲು ಸಹ ಕಷ್ಟವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ ಆ ಮಟ್ಟಿಗೆ ನಮ್ಮ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ. ಇದಕ್ಕೆ ಪ್ರಮುಖ ಕಾರಣ ಫ್ಯಾರಿಂಕ್ಸ್ ಎಂಬ ಉರಿಬಾವು. ಇದು ನಮ್ಮ ಬಾಯಿಯಿಂದ ಹಿಡಿದು ಅನ್ನನಾಳದವರೆಗೆ ಹಬ್ಬಿ, ನಮ್ಮ ಗಂಟಲಿನಲ್ಲಿ ನೋವನ್ನು ತರುತ್ತದೆ.

ಇದಕ್ಕೆ ಮುಖ್ಯ ಕಾರಣ ವೈರಸ್, ಬ್ಯಾಕ್ಟೀರಿಯಾ ಮತ್ತು ಫಂಗಸ್‌ನಿಂದ ಬರುವ ಇನ್‌ಫೆಕ್ಷನ್‌ಗಳು; ಇವುಗಳಿಗೆ ಮುಖ್ಯ ಕಾರಣ ಪರಿಸರ ಮಾಲಿನ್ಯ, ಧೂಮಪಾನ ಮತ್ತು ಆಸಿಡ್ ರಿಫ್ಲಕ್ಸ್ ಅಥವಾ ಒಣ ಹವೆಯಾಗಿರುತ್ತದೆ. ವಿಪರೀತವಾಗಿ ಕಿರುಚುವುದು ಅಥವಾ ಕೆಲವೊಂದು ಅಲರ್ಜಿಯನ್ನುಂಟು ಮಾಡುವ ಅಂಶಗಳು ಸಹ ಗಂಟಲು ನೋವಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಗಂಟಲು ನೋವಿನ ಜೊತೆಗೆ ತಲೆ ನೋವು, ಹೊಟ್ಟೆನೋವು, ಸಾಮಾನ್ಯ ಶೀತ ಮತ್ತು ಗಂಟಲು ಭಾಗದಲ್ಲಿ ಊತಗಳು ಸಹ ಕಾಣಿಸಿಕೊಳ್ಳುತ್ತವೆ. ಗಂಟಲು ನೋವೇ? ಈ ಆಹಾರಗಳನ್ನು ದೂರವಿಡಿ!

ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿರುವುದರಿಂದಾಗಿ ಅದರ ಕುರಿತು ಭಯಪಡುವ ಅಗತ್ಯವಿರುವುದಿಲ್ಲ. ಆದರೂ ಇದರ ನೋವನ್ನು ಮತ್ತು ಇದು ಉಂಟು ಮಾಡುವ ಅಸೌಕರ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯರ ಬಳಿ ಹೋಗುವ ಬದಲಿಗೆ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ನಿವಾರಿಸಿಕೊಳ್ಳಿ. ಬನ್ನಿ ಇದನ್ನು ಪರಿಹರಿಸಿಕೊಳ್ಳಲು ಇರುವ ಕೆಲವೊಂದು ಸ್ವಾಭಾವಿಕ ಮನೆ ಮದ್ದುಗಳ ಕುರಿತು ನಿಮಗೆ ಇಂದು ಮಾಹಿತಿಯನ್ನು ನೀಡುತ್ತೇವೆ. ಅವುಗಳು ಯಾವುವು ಮತ್ತು ಅವುಗಳನ್ನು ಬಳಸುವ ಬಗೆ ಹೇಗೆ ಎಂದು ತಿಳಿದುಕೊಂಡು ಬರೋಣ.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಗಂಟಲು ನೋವಿನಿಂದ ಗುಣಮುಖರಾಗಲು ಲಿಂಬೆ ಹಣ್ಣನ್ನು ಬಳಸಬಹುದು. ಇದು ನಿಮ್ಮ ಗಂಟಲಿನಲ್ಲಿರುವ ಸಿಂಬಳವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲಿಂಬೆರಸವನ್ನು ಬಿಸಿ ನೀರಿಗೆ ಬೆರೆಸಿ, ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸಿ. ಒಂದು ಕಪ್ ಬಿಸಿ ನೀರಿಗೆ ಒಂದು ಟೀ ಸ್ಪೂನ್ ಜೇನು ತುಪ್ಪ ಮತ್ತು ಅದಕ್ಕೆ ಅರ್ಧ ಹೋಳು ಲಿಂಬೆಹಣ್ಣಿನ ರಸದ ಅನುಪಾತದಲ್ಲಿ ಇದನ್ನು ತಯಾರಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆ ಹಣ್ಣು

ಲಿಂಬೆ ಹಣ್ಣು

ಈ ಮಿಶ್ರಣವನ್ನು ನಿಧಾನವಾಗಿ ಸೇವಿಸಿ, ಗಂಟಲು ನೋವಿರುವ ಭಾಗದ ಮೇಲೆ ಈ ರಸವು ಸರಿದು ಹೋಗುವಂತೆ ಇದನ್ನು ಸೇವಿಸಿ. ಇದರ ಜೊತೆಗೆ ಒಂದು ಅರ್ಧ ಭಾಗ ಲಿಂಬೆ ಹಣ್ಣನ್ನು ತೆಗೆದುಕೊಂಡು, ಅದರ ಮೇಲೆ ಉಪ್ಪನ್ನು ಮತ್ತು ಮೆಣಸನ್ನು ಚಿಮುಕಿಸಿ. ನಿಧಾನವಾಗಿ ಈ ಲಿಂಬೆ ಹಣ್ಣನ್ನು ನೆಕ್ಕುತ್ತ ಇರಿ, ಇದರ ರಸವು ಸಹ ಗಂಟಲು ನೋವನ್ನು ನಿವಾರಿಸುತ್ತದೆ.

ಉಪ್ಪು ನೀರು

ಉಪ್ಪು ನೀರು

ಗಂಟಲು ನೋವಿಗೆ ರಾಮಬಾಣ ಎನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಹೌದು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಹೇಳಿ ಕೇಳಿ ಉಪ್ಪು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಉತ್ಪನ್ನವಾಗಿದ್ದು, ಅದು ನಿಮ್ಮ ಗಂಟಲಿನಲ್ಲಿರುವ ಸಿಂಬಳದ ಪೊರೆಯು ನಿವಾರಣೆಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಗಂಟಲಿನಲ್ಲಿರುವ ಕಫವು ಸಹ ನಿವಾರಣೆಯಾಗುವಂತೆ ಮಾಡುತ್ತದೆ ಮತ್ತು ಉರಿಬಾವು ನಿಮ್ಮನ್ನು ಕಾಡದಂತೆ ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಪ್ಪು ನೀರು

ಉಪ್ಪು ನೀರು

ಇಷ್ಟೇ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಒಂದು ಆಂಟಿ ಬ್ಯಾಕ್ಟೀರಿಯಾ ಅಂಶಗಳು ಇರುವ ಪದಾರ್ಥವಾಗಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳು ಮತ್ತು ಔಷಧೀಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಆರಾಮವನ್ನು ನೀಡುತ್ತವೆ. ಅಲ್ಲದೆ ಇದು ಈ ನೋವನ್ನು ಬೇಗ ನಿವಾರಿಸುವ ಮನೆ ಮದ್ದು ಸಹ ಆಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕಚ್ಛಾ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಅಲ್ಲಿಸಿನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದು ಗಂಟಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡಿ, ಗಂಟಲು ನೋವು ಬರದಂತೆ ತಡೆಯುತ್ತದೆ.ಬದಲಿಯಾಗಿ, ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಒಂದು ಲೋಟ ನೀರಿಗೆ ನಾಲ್ಕನೇ ಒಂದು ಭಾಗ ಬೆಳ್ಳುಳ್ಳಿ ರಸವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಲು ಬಳಸಿ. ಅಲ್ಲದೆ ಇದರ ಜೊತೆಗೆ ಆಹಾರದಲ್ಲಿ ದೊರೆಯುವ ಬೆಳ್ಳುಳ್ಳಿಯನ್ನು ಸಹ ಸೇವಿಸಿ. ಒಂದು ವೇಳೆ ನಿಮಗೆ ಇದರ ರುಚಿ ಹಿಡಿಸಲಿಲ್ಲವಾದಲ್ಲಿ, ಬೆಳ್ಳುಳ್ಳಿಯ ಮಾತ್ರೆಗಳನ್ನು ಸೇವಿಸಿ.

ಚಕ್ಕೆ

ಚಕ್ಕೆ

ಚಕ್ಕೆಯನ್ನು ಸಹ ಗಂಟಲು ನೋವು ನಿವಾರಿಸಿಕೊಳ್ಳಲು ಬಳಸಬಹುದು. ಒಂದು ಟೀ ಸ್ಪೂನ್ ಚಕ್ಕೆಯ ಪುಡಿಗೆ, ಕರಿಮೆಣಸಿನ ಪುಡಿಯನ್ನು ಸೇರಿಸಿ, ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿಕೊಳ್ಳಿ. ಇದಕ್ಕೆ ನಿಮಗೆ ಅಗತ್ಯವಾದಲ್ಲಿ ಏಲಕ್ಕಿಯನ್ನು ಸಹ ಬೆರೆಸಿಕೊಳ್ಳಿ. ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಬೆರೆಸಿ, ನಂತರ ಶೋಧಿಸಿಕೊಳ್ಳಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಮೂರು ಬಾರಿ ಬಾಯಿ ಮುಕ್ಕಳಿಸಲು ಬಳಸಿ.

ಚಕ್ಕೆ

ಚಕ್ಕೆ

ಮತ್ತೊಂದು ಆಯ್ಕೆ ಎಂದರೆ ಕೆಲವೊಂದು ಹನಿ ಚಕ್ಕೆ ಎಣ್ಣೆಯನ್ನು ಮತ್ತು ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಬೆರೆಸಿಕೊಳ್ಳಿ ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ, ಗಂಟಲು ನೋವು ಮತ್ತು ಉರಿಬಾವುನಿಂದ ವಿಮುಕ್ತಿಯನ್ನು ಪಡೆಯಿರಿ.

English summary

Top Home Remedies for Sore Throat during winter

sore throat is the result of an inflammation of the pharynx, the tube that extends from the back of the mouth to the esophagus.Some of the major causes of this condition are viral, bacterial, or fungal infections; irritants like pollution, smoking, acid reflux, or dry air; excessive shouting; or some kind of allergic reaction. A sore throat is often accompanied by a headache, stomach ache, the common cold and swollen glands in the neck.
Story first published: Saturday, December 19, 2015, 11:11 [IST]
X
Desktop Bottom Promotion