For Quick Alerts
ALLOW NOTIFICATIONS  
For Daily Alerts

ಆರೋಗ್ಯ ವೃದ್ಧಿಗೆ ಬೇಕು, ಕರಿಬೇವು ಎಂಬ ಸಂಜೀವಿನಿ

By Manu
|

ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ 'ಒಗ್ಗರಣೆ' ಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ. ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ

ಒಗ್ಗರಣೆಯಲ್ಲಿ ಕರಿಬೇವಿನ ಎಲೆ ಪ್ರಮುಖ ಪಾತ್ರ ವಹಿಸುತ್ತದೆ. ಬೇವಿನಲ್ಲಿ ಎರಡು ವಿಧಗಳಿವೆ. ಕಹಿಬೇವು ಮತ್ತು ಕರಿಬೇವು. ಕಹಿಬೇವಿನ ಎಲೆಗಳ ಅಂಚು ಗರಗಸದಂತಿದ್ದರೆ ಕರಿಬೇವಿನ ಎಲೆ ಹೆಚ್ಚು ಗಾಢವಾಗಿದ್ದು ಅಂಚು ನಯವಾಗಿರುತ್ತದೆ. ಅಡುಗೆಯಲ್ಲಿ ಕಹಿಬೇವಿಗಿಂತಲೂ ಕರಿಬೇವನ್ನೇ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಕಹಿಬೇವು ನಿಸರ್ಗದ ಅತ್ಯುತ್ತಮ ವಾಯುಶೋಧಕವಾಗಿದೆ.

ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆ, ಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿ ಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಅದಲ್ಲದೆ ವಾಂತಿ ಬರುವಂತಾಗುವಿಕೆ ಮತ್ತು ಅಜೀರ್ಣವನ್ನು ಸಹ ನಿವಾರಿಸುತ್ತದೆ. ಏಕೆಂದರೆ ಪಿತ್ತ ಹೆಚ್ಚಾಗಿದ್ದಲ್ಲಿ ನಾಸಿಯಾ ಮತ್ತು ಅಜೀರ್ಣ ಉಂಟಾಗುತ್ತದೆ. ಇದರಲ್ಲಿ ಅಲ್ಕಾಲಾಯ್ಡ್ ಕಾರ್ಬಾಜೋಲ್ ಇದ್ದು, ಅದು ಉರಿಬಾವು ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಹೊಟ್ಟೆ ತೊಳೆಸುವಿಕೆಯಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಬನ್ನಿ ಕರಿಬೇವಿನ ಎಲೆಯ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ನೋಡೋಣ..

ಮಧುಮೇಹ ನಿಯಂತ್ರಣಕ್ಕೆ ಕರಿಬೇವಿನ ಎಲೆ

ಮಧುಮೇಹ ನಿಯಂತ್ರಣಕ್ಕೆ ಕರಿಬೇವಿನ ಎಲೆ

ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಅಜೀರ್ಣದ ಸಮಸ್ಯೆಗೆ

ಅಜೀರ್ಣದ ಸಮಸ್ಯೆಗೆ

ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿ ತರಿಸುತ್ತವೆ. ಇಂತಹ ಸಮಯದಲ್ಲಿ ಕರಿಬೇವುಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ತಯಾರಿಸಿದ ಒಂದು ಲೋಟ ಜ್ಯೂಸ್ ಕುಡಿದರೆ ತಕ್ಷಣ ಆರಾಮವಾಗುತ್ತದೆ. ಅಜೀರ್ಣವಾಗಿದ್ದ ಆಹಾರ ಜೀರ್ಣವಾಗಿ ಪಚನಕ್ರಿಯೆ ಸರಾಗವಾಗುತ್ತದೆ.

ವಾಕರಿಕೆ ಸಮಸ್ಯೆಗೆ

ವಾಕರಿಕೆ ಸಮಸ್ಯೆಗೆ

ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಅಥವಾ ಬೆಳಗಿನ ಜಾವ ಎದ್ದಾಕ್ಷಣ ವಾಕರಿಕೆ, ಅಥವಾ ವಾಂತಿಯ ತೊಂದರೆ ಕಂಡುಬರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿ ದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ

ದೇಹದ ಕೆಂಪುರಕ್ತ ಕಣಗಳಿಗೆ ಸಹಕಾರಿ

ದೇಹದ ಕೆಂಪುರಕ್ತ ಕಣಗಳಿಗೆ ಸಹಕಾರಿ

ದೇಹದ ಕೆಂಪುರಕ್ತಕಣಗಳಿಗೆ ಅಗತ್ಯವಿರುವ ಕಬ್ಬಿಣವನ್ನು ಸಿದ್ಧರೂಪದಲ್ಲಿ ಕರಿಬೇವು ನೀಡುವುದರಿಂದ ರಕ್ತಹೀನತೆ ಶೀಘ್ರ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿದಿನ ಆಹಾರ ಕ್ರಮದಲ್ಲಿ ಕೆಲವು ಕರಿಬೇವುಗಳನ್ನು ಸೇವಿಸುವುದರಿಂದ ಉತ್ತಮ ಪರಿಣಾಮ ಕಂಡುಬರುತ್ತದೆ.

ಕಿಡ್ನಿ ಕಲ್ಲು

ಕಿಡ್ನಿ ಕಲ್ಲು

ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇರು ಇರುವಂತೆ ನೋಡಿಕೊಳ್ಳುವ ಮೂಲಕ ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯಬಹುದು. ಹೆಚ್ಚಿನ ತೊಂದರೆ ಕಂಡುಬಂದಲ್ಲಿ ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

ಇನ್ನಷ್ಟು ಸಲಹೆ

ಇನ್ನಷ್ಟು ಸಲಹೆ

*ಕರಿಬೇವು ಸೊಪ್ಪನ್ನು ಹಸಿ ಮೆಣಸಿನ ಕಾಯಿ, ಪುದಿನಾ ಮತ್ತು ಟೊಮೇಟೊಗಳ ಜೊತೆಗೆ ಸೇರಿಸಿ ಚಟ್ನಿ ಮಾಡುವ ಮೂಲಕ ಸೇವಿಸಬಹುದು ( ಒಂದು ವೇಳೆ ನೀವು ಖಾರವನ್ನು ಇಷ್ಟಪಟ್ಟಲ್ಲಿ)

*ನುಣ್ಣಗೆ ಕತ್ತರಿಸಿದ ಕರಿಬೇವು ಸೊಪ್ಪನ್ನು ಪರೋಟಾಗಳಲ್ಲಿ ಸಹ ಬಳಸಬಹುದು

*ದಾಲ್‌ನಲ್ಲಿ ಕರಿಬೇವು ಸೊಪ್ಪು (ಇತರೆ ಸೊಪ್ಪುಗಳ ಜೊತೆಗೆ ಸಹ ಬಳಸಬಹುದು)

*ಮಜ್ಜಿಗೆ ಜೊತೆ ಜಜ್ಜಿದ ಕರಿಬೇವು ಸೊಪ್ಪು, ಪ್ರತಿದಿನ 2-3 ಬಾರಿ ಸೇವಿಸಿದರೆ, ಆರೋಗ್ಯಕ್ಕೆ ಉತ್ತಮ.

*ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರಿಗೆ ಕರಿಬೇವು ಸೊಪ್ಪು ಇಷ್ಟವಾಗದಿದ್ದಲ್ಲಿ, ನೀವು ಕರಿಬೇವನ್ನು ರುಬ್ಬಿ, ಕರಿ ಮತ್ತು ಚಟ್ನಿಯಲ್ಲಿ ಬೆರೆಸಬಹುದು.

Story first published: Tuesday, December 1, 2015, 13:24 [IST]
X
Desktop Bottom Promotion