For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಸೇಬು ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?

|

ಪ್ರತಿದಿನದ ಸೇಬು ಸೇವನೆಯಿಂದ ಹೃದಯ ಬಲಗೊಳ್ಳುವುದು, ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವ ಕಾಯಿಲೆ, ಕ್ಯಾನ್ಸರ್, ಮಧುಮೇಹ ಮೊದಲಾದ ಕಾಯಿಲೆಗಳನ್ನು ದೂರವಿಡುವುದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಅಗತ್ಯ.

ಏಕೆಂದರೆ ಸೇಬಿನ ಹೆಚ್ಚಿನ ಪೋಷಕಾಂಶಗಳು ತಿರುಳಿಗಿಂತ ಸಿಪ್ಪೆಯಲ್ಲಿಯೇ ಹೆಚ್ಚಾಗಿರುತ್ತವೆ. ಸೇಬು ಹಣ್ಣನ್ನು ಹಸಿಯಾಗಿಯೂ, ಹಾಲಿನೊಂದಿಗೆ ಜ್ಯೂಸ್ ಮಾಡಿಕೊಂಡು ಅಥವಾ ಬೇರೆ ಹಣ್ಣುಗಳೊಂದಿಗೆ ಮತ್ತು ರಸಾಯನದೊಂದಿಗೂ ಸೇವಿಸಬಹುದು. ಸೇಬುಹಣ್ಣಿಸ ಸೇವನೆಯ ಅದ್ಭುತ ಪ್ರಯೋಜನಗಳನ್ನು ನೋಡೋಣ

ಮೆದುಳಿಗೆ ಒಳ್ಳೆಯದು

What Are the Amazing Health Benefits of Apples?

ಉತ್ತಮ ಸ್ಮರಣಶಕ್ತಿಗೆ acetylcholine ಎಂಬ ಪೋಷಕಾಂಶ ಅಗತ್ಯವಾಗಿದೆ. ನಿಯಮಿತ ಸೇಬು ಹಣ್ಣಿನ ಸೇವನೆ ಈ ಪೋಷಕಾಂಶವನ್ನು ಹೆಚ್ಚಿಸುವುದರಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ ಹಾಗೂ ಸ್ಮರಣಶಕ್ತಿಯೂ ಹೆಚ್ಚುತ್ತದೆ.

ಮೂಳೆಗಳನ್ನು ರಕ್ಷಿಸುತ್ತದೆ


ಮಹಿಳೆಯರ ರಜೋ ನಿವೃತ್ತಿ ಕಾಲದ ಬಳಿಕ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅದರಲ್ಲಿ ಅಸ್ಥಿರಂಧ್ರತೆ (osteoporosis)ಯೂ ಒಂದು. ಈ ಸಮಯದಲ್ಲಿ ಮೂಳೆಗಳಲ್ಲಿ ಹಲವು ಸೂಕ್ಷ್ಮರಂಧ್ರಗಳು ಕಾಣಿಸಿಕೊಂಡು ದುರ್ಬಲವಾಗುತ್ತವೆ. ಸೇಬಿನಲ್ಲಿರುವ phloridzin ಎಂಬ ಪೋಷಕಾಂಶ ಅಸ್ಥಿರಂಧ್ರತೆಯ ವಿರುದ್ಧ ಹೋರಾಡಿ ಮೂಳೆಗಳು ಮತ್ತೆ ಸಬಲವಾಗಲು ನೆರವಾಗುತ್ತದೆ. ಸೇಬಿನಲ್ಲಿರುವ ಬೋರಾನ್ ಎಂಬ ಖನಿಜ ಮೂಳೆಗಳು ಹೆಚ್ಚು ಧೃಢಗೊಳ್ಳಲು ಸಹಕರಿಸುತ್ತದೆ.

ಹೆಚ್ಚಿನ ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ


ರಕ್ತದಲ್ಲಿ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾದಾಗ ಹೃದಯದ ಒತ್ತಡವೂ ಹೆಚ್ಚುತ್ತದೆ. ಸೇಬುಹಣ್ಣಿನಲ್ಲಿ ಶೇ 3 ರಷ್ಟು ಪೊಟ್ಯಾಶಿಯಂ ಇರುವುದರಿಂದ ಹೆಚ್ಚಿನ ರಕ್ತದೊತ್ತಡದ ಸಂಭವ ಕಡಿಮೆಯಾಗುತ್ತದೆ.

ಅಸ್ತಮಾ ರೋಗದ ಸಂಭವನ್ನು ಕಡಿಮೆಗೊಳಿಸುತ್ತದೆ


flavanoids ಮತ್ತು phenolic acid ಎಂಬ ಪೋಷಕಾಂಶಗಳು ಶ್ವಾಸಕೋಶದ ವಾಯುನಾಳಗಳು ಸಂಕುಚಿತವಾಗುವುದನ್ನು ತಡೆದು ಅಸ್ತಮಾ ರೋಗವನ್ನು ತಡೆಯುತ್ತವೆ.

ಹೃದಯಕ್ಕೂ ರಕ್ಷಣೆ ಒದಗಿಸುತ್ತದೆ


ಹೃದಯ ಸ್ಥಂಬನಕ್ಕೆ ಕೆಟ್ಟ ಕೊಲೆಸ್ಟ್ರಾಲ್ ನೇರವಾಗಿ ಕಾರಣವಲ್ಲ. ಕೆಟ್ಟ ಕೊಲೆಸ್ಟ್ರಾಲ್ ಆಮ್ಲಜನಕದೊಂದಿಗೆ ರಸಾಯನಿಕವಾಗಿ ಸಂಯೋಜನೆಗೊಂಡಾಗ (oxidation) ರಕ್ತನಾಳಗಳು ಗಟ್ಟಿಯಾಗತೊಡಗುತ್ತವೆ (atherosclerosis). ಇದು ಹೃದಯ ಸ್ಥಂಭನಕ್ಕೆ ಕಾರಣವಾಗುತ್ತದೆ. ಸೇಬು ಹಣ್ಣಿನಲ್ಲಿರುವ Polyphenols ಈ ಕ್ರಿಯೆಯನ್ನು ನಿಧಾನಗೊಳಿಸಿ ಹೃದಯಕ್ಕೆ ರಕ್ಷಣೆ ಒದಗಿಸುತ್ತದೆ.

ತ್ವಚೆಯ ಹೊಳಪು ಹೆಚ್ಚುತ್ತದೆ


ವಯಸ್ಸಾದಂತೆ ಚರ್ಮ ಹೊಳಪು ಕಳೆದುಕೊಂಡು ನೆರಿಗೆಗಳು ಮೂಡುತ್ತಾ ಬರುತ್ತವೆ. ಇದನ್ನು ತಡೆಯಲು ಸಾಧ್ಯವಿಲ್ಲವಾದರೂ ಪರಿಣಾಮವನ್ನು ನಿಧಾನಗೊಳಿಸಲು ಸಾಧ್ಯವಿದೆ. ಸೇಬಿನಲ್ಲಿರುವ ಹಲವು ಆಂಟಿ ಆಕ್ಸೆಡೆಂಟುಗಳ ಪರಿಣಾಮವಾಗಿ ಚರ್ಮದ ಜೀವಕೋಶಗಳು ನಾಶವಾಗಿ ನೆರಿಗೆ ಮೂಡುವುದು ನಿಧಾನವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ


ಸೇಬಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ (7%). ಈ ಪ್ರಮಾಣದ ವಿಟಮಿನ್ ಸೇವನೆಯ ಕಾರಣ ಪ್ರತಿದಿನ ಅಗತ್ಯಕ್ಕೆ ಸೂಚಿಸಲಾದ 14% ರಷ್ಟು ವಿಟಮಿನ್ ಲಭ್ಯವಾಗುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತದೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
English summary

What Are the Amazing Health Benefits of Apples?

Delicious and crunchy apple fruit is one of the popular fruits containing an impressive list of antioxidants and essential nutrients required for good health… have a look
Story first published: Tuesday, December 16, 2014, 19:00 [IST]
X
Desktop Bottom Promotion