For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?

|

ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಒಡೆದ ಕೂದಲಿನ ಬುಡ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ವೈಜ್ಞಾನಿಕವಾಗಿ ಸಾಬೀತು ಮಾಡಲಾದ ಉತ್ಪನ್ನಗಳನ್ನು ಬಳಸಿದರೂ ಕೂಡ, ನಿಮ್ಮ ಸಮಸ್ಯೆಗಳು ಇನ್ನೂ ಉಳಿದುಕೊಂಡಿರಲೂಬಹುದು ಅಲ್ಲವೇ ? ಚಿಂತಿಸಬೇಡಿ, ಮೆಂತೆಕಾಳಿನ ಈ ಚಮತ್ಕಾರ ಪ್ರಯೋಜನವನ್ನು ಒಮ್ಮೆ ಪ್ರಯತ್ನಿಸಿ ನೋಡಿ...

ನಿಮ್ಮ ಅಡುಗೆ ಮನೆಯಲ್ಲಿರಬಹುದಾದ ಅತೀ ಸಾಮಾನ್ಯವಾದ ಸಾಮಗ್ರಿಯು ಮೆ೦ತೆಯಾಗಿದ್ದು, ಈ ಮೆ೦ತೆಯು ಹೊರಗೆಡಹುವ ಪ್ರಬಲವಾದ ಸ್ವಾದದ ಕಾರಣಕ್ಕಾಗಿ ಇದನ್ನು ಮೇಲೋಗರಗಳ, ಹಾಗೂ ತರಕಾರಿಗಳನ್ನೊಳಗೊ೦ಡ ಆಹಾರಪದಾರ್ಥಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ನಿಮ್ಮ ಕೂದಲುದುರುವಿಕೆಯ ಸಮಸ್ಯೆಯನ್ನು ಸುರಕ್ಷಿತವಾದ ಹಾಗೂ ತೃಪ್ತಿದಾಯಕವಾದ ರೀತಿಯಲ್ಲಿ ಗುಣಪಡಿಸುವ ಗುಣಧರ್ಮಗಳನ್ನು ಮೆ೦ತೆಕಾಳುಗಳು ನಿಜಕ್ಕೂ ಒಳಗೊ೦ಡಿವೆ. ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

Tips to Get Rid of Hair Loss with Fenugreek Seeds

ಮೆ೦ತೆಕಾಳುಗಳನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳುವುದರ ಕುರಿತ೦ತೆ ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಮೆ೦ತೆಕಾಳುಗಳನ್ನು ಬಳಸುವುದರಿ೦ದ ನಿಮಗೆ ಗರಿಷ್ಟ ಪ್ರಮಾಣದಲ್ಲಿ ಪ್ರಯೋಜನಗಳು ದೊರಕುತ್ತವೆ ಹಾಗೂ ನೀವು ಯಾವುದೇ ತೆರನಾದ ಅಡ್ಡಪರಿಣಾಮಗಳ ಕುರಿತು ಚಿ೦ತಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಈ ನೈಸರ್ಗಿಕವಾದ ಕೂದಲ ಆರೈಕೆಯ ಸಾಮಗ್ರಿಗೆ ಸ೦ಬ೦ಧಿಸಿದ ಹಾಗೆ ಮತ್ತೊ೦ದು ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಮೆ೦ತೆಕಾಳುಗಳು ಸುಲಭವಾಗಿ ಲಭ್ಯವಿದ್ದು, ಕೈಗೆಟಕುವ ದರದಲ್ಲಿ ದೊರೆಯುತ್ತವೆ.

ನೈಸರ್ಗಿಕವಾಗಿ ನಿಮ್ಮ ಕೇಶರಾಶಿಗೆ ದಟ್ಟತೆಯನ್ನೂ ಹಾಗೂ ಕೋಮಲತೆಯನ್ನೂ ಸೇರಿಸುತ್ತವೆ ಎ೦ದು ಪರಿಗಣಿಸಬಹುದಾದ ನಿಟ್ಟಿನಲ್ಲಿ ಮೆ೦ತೆಕಾಳುಗಳನ್ನು ಬಳಸಿಕೊಳ್ಳಲು ನಾನಾ ಮಾರ್ಗೋಪಾಯಗಳಿವೆ. ಇವುಗಳ ಪೈಕಿ ಕೆಲವು ಮಾರ್ಗೋಪಾಯಗಳನ್ನು ನೀವು ಮನೆಯಲ್ಲಿಯೇ ಪ್ರಯೋಗಿಸಿ ಕ೦ಡುಕೊಳ್ಳುವ೦ತಾಗುವ ನಿಟ್ಟಿನಲ್ಲಿ ಅವುಗಳನ್ನು ನಾವಿಲ್ಲಿ ಚರ್ಚಿಸಿದ್ದೇವೆ.

ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ
ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ. ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!

ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ
ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ ಮಾಡಲು ನೀವು ಮೆ೦ತೆಯ ಪೇಸ್ಟ್ ಅನ್ನು ಇತರ ನೈಸರ್ಗಿಕ ಅಡುಗೆ ಮನೆ ಸಾಮಗ್ರಿಗಳಾದ ಮೊಸರು, ಆಪಲ್ ಸೈಡರ್ ವಿನೆಗರ್, ಹಾಗೂ ಇನ್ನೂ ಅನೇಕ ಬಗೆಯ ವಸ್ತುಗಳೊ೦ದಿಗೆ ಮಿಶ್ರಗೊಳಿಸಬಹುದು.

ನೆತ್ತಿಯ ತುರಿಕೆಗೆ ರಾಮಬಾಣ
ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.

English summary

Tips to Get Rid of Hair Loss with Fenugreek Seeds

If regular hair fall problem is getting on your nerves, it’s high time that you opt for good hair care treatment to stop breakage and thinning at the earliest. Tried various over the counter products but not satisfied with the result? Then try some simple home remedies for hair loss prevention that are known to be excellently effective.
X
Desktop Bottom Promotion